Idgah Ground: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ, ನಾಳೆ ಹೈಕೋರ್ಟ್​ನಲ್ಲಿ ವಿಚಾರಣೆ!

ಚಾಮರಾಜಪೇಟೆಯ ಈದ್ಗಾ ಮೈದಾನ ವಿವಾದ ನಿಲ್ಲುತ್ತಿಲ್ಲ. ಈಗ ಚಾಮರಾಜಪೇಟೆ ಈದ್ಗಾ ಮೈದಾನದ ಮಾಲೀಕತ್ವ ವಿಚಾರವಾಗಿ ಬಿಬಿಎಂಪಿ ಆದೇಶ ಪ್ರಶ್ನಿಸಿ ವಕ್ಫ್ ಬೋರ್ಡ್, ಹೈಕೋರ್ಟ್ ಮೆಟ್ಟಿಲೇರಿದೆ. ಪಾಲಿಕೆ ಜಂಟಿ ಆಯುಕ್ತರು ಮಾಡಿದ ಆದೇಶವನ್ನು ಪ್ರಶ್ನಿಸಿದೆ. ನಾಳೆ ವಿಚಾರಣೆ ನಡೆಯಲಿದೆ.

ಈದ್ಗಾ ಮೈದಾನ

ಈದ್ಗಾ ಮೈದಾನ

  • Share this:
ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ, ನಾಳೆ ಹೈಕೋರ್ಟ್​ನಲ್ಲಿ ವಿಚಾರಣೆ!

 ಚಾಮರಾಜಪೇಟೆ ಈದ್ಗಾ ಮೈದಾನ (Chamrajpet Idgah Maidan) ವಿವಾದ ಮುಗಿಯುವಂತೆ ಕಾಣಿಸುತ್ತಿಲ್ಲ. ಮುಸ್ಲಿಂ ಸಮುದಾಯ ಈದ್ಗಾ ಮೈದಾನ ನಮ್ಮದು ಎಂದು ಹೇಳುತ್ತಿದ್ದರೆ, ಬಿಬಿಎಂಪಿ ಶ್ರೀ(BBMP) ಇದು ಆಟದ ಮೈದಾನ (Ground), ಬಿಬಿಎಂಪಿಗೆ ಸೇರಿದ್ದು ಅಂತ ಹೇಳಿದೆ. ಕೊನೆಗೆ ಎಲ್ಲಾ ವಾದ-ವಿವಾದ ಮುಗಿದು ಸರ್ಕಾರದ ಸುಪರ್ದಿಗೆ ಈದ್ಗಾ ಮೈದಾನ ಸಿಕ್ಕಿದೆ. ಸ್ವಾತಂತ್ರ್ಯ ದಿನದಂದು (Independence Day) ಸರ್ಕಾರದಿಂದ ಇಲ್ಲಿ ಧ್ವಜಾರೋಹಣ (Flag Hoisting) ಕೂಡ ನೆರೆವೇರಿದೆ. ಹೀಗಿರೋವಾಗ ಗಣೇಶ ಹಬ್ಬದ ಸಂಬಂಧ ಜಟಾಪಟಿ ನಡೆಯುತ್ತಿದೆ. ಆದರೆ ಈಗ ಒಮ್ಮೆ ತಣ್ಣಗಾಗಿದ್ದ ವಿವಾದ ಮತ್ತೆ ಬುಗಿಲೆದ್ದಿದೆ. ನಾಳೆ ಹೈಕೋರ್ಟ್​ (Khight) ನಲ್ಲಿ ಚಾಮರಾಜಪೇಟೆ ಮೈದಾನ ಸಂಬಂಧ ವಾದ-ವಿವಾದ ನಡೆಯಲಿದೆ.

ಚಾಮರಾಜಪೇಟೆಯ ಈದ್ಗಾ ಮೈದಾನ ವಿವಾದ ನಿಲ್ಲುತ್ತಿಲ್ಲ. ಈಗ ಚಾಮರಾಜಪೇಟೆ ಈದ್ಗಾ ಮೈದಾನದ ಮಾಲೀಕತ್ವ ವಿಚಾರವಾಗಿ ಬಿಬಿಎಂಪಿ ಆದೇಶ ಪ್ರಶ್ನಿಸಿ ವಕ್ಫ್ ಬೋರ್ಡ್, ಹೈಕೋರ್ಟ್ ಮೆಟ್ಟಿಲೇರಿದೆ. ಪಾಲಿಕೆ ಜಂಟಿ ಆಯುಕ್ತರು ಮಾಡಿದ ಆದೇಶವನ್ನು ಪ್ರಶ್ನಿಸಿದೆ.

ಸರ್ಕಾರದ ಆದೇಶ ರದ್ದು ಮಾಡಲು ಮನವಿ

ಹೈಕೋರ್ಟ್​ ಮೆಟ್ಟಿಲೇರಿರುವ ವಕ್ಫ್ ಬೋರ್ಡ್, ಜಂಟಿ ಆಯುಕ್ತರಿಗೆ ಮಾಲೀಕತ್ವ ಕುರಿತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇಲ್ಲ. ಈವರೆಗೂ ಈದ್ಗಾ ಮೈದಾನ ನಮ್ಮ ಅನುಬೋಗದಲ್ಲಿ ಇತ್ತು. ಜಂಟಿ ಆಯುಕ್ತರ ಆದೇಶ ರದ್ದು ಮಾಡುವಂತೆ ಅರ್ಜಿಯಲ್ಲಿ ಕೇಳಲಾಗಿದೆ. ಈ ಸಂಬಂಧ ನಾಳೆ ಮಧ್ಯಾಹ್ನ 2.30ಕ್ಕೆ ಹೈಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ.

Chamarajpete Idgah Maidan Controversy Hearing in High Court tomorrow
ಈದ್ಗಾ ಮೈದಾನ


ಕಂದಾಯ ಇಲಾಖೆಗೆ ನೀಡಿದ್ದ ಡೆಡ್​ಲೈನ್ ನಾಳೆಗೆ ಅಂತ್ಯ

ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರವಾಗಿ ಕಂದಾಯ ಇಲಾಖೆಗೆ ನೀಡಿದ್ದ ಡೆಡ್​ಲೈನ್ ನಾಳೆಗೆ ಅಂತ್ಯವಾಗಲಿದೆ. ಆ.25ರವರೆಗೆ ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ ಡೆಡ್​​ಲೈನ್ ನೀಡಿದ್ದು, ಈ ಬಗ್ಗೆ ಕಂದಾಯ ಇಲಾಖೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಇದರ ನಡುವೆ ನಾಳೆ ಹೈಕೋರ್ಟ್​ನಲ್ಲಿ ವಿಚಾರಣೆ ನಡೆಯಲಿದೆ.

ಇದನ್ನೂ ಓದಿ: ಬೆಂಗಳೂರು ರಸ್ತೆಗುಂಡಿ ಮುಚ್ಚಲು ಇಷ್ಟೊಂದು ಖರ್ಚಾ? ಕಳೆದ 5 ವರ್ಷದಿಂದ ಬಿಬಿಎಂಪಿ ವ್ಯಯಿಸಿದ್ದು ಕೇಳಿದ್ರೆ ಶಾಕ್!

ಏನು ನಿಮ್ಮಪ್ಪನ ಜಾಗನಾ ಇದು?- ಜಮೀರ್​​ಗೆ ರೇಣುಕಾಚಾರ್ಯ ಪ್ರಶ್ನೆ

ಶಾಸಕ ಜಮೀರ್ ವಿರುದ್ಧ ರೇಣುಕಾಚಾರ್ಯ ವಾಗ್ಧಾಳಿ ನಡೆಸಿದ್ದಾರೆ.. ವಕ್ಫ್ ಬೋರ್ಡ್ ಎಲ್ಲಾ ಕಡೆ ಇದೇ ತರ ಕಬಳಿಕೆ ಮಾಡ್ತಾ ಇದ್ದಾರೆ. ಶಿವಪ್ಪ ನಾಯಕ ಸರ್ಕಲ್ ನ್ನು ಅಮೀರ್ ಅಹ್ಮದ್ ಸರ್ಕಲ್ ಅಂತಾ ನಾಮಕರಣ ಮಾಡಿದ್ರು. ಜಾಗ ಏನು ಇವರಪ್ಪನಂದಾ ಅಂತಾ ಪ್ರಶ್ನೆ ಮಾಡಿದ್ದಾರೆ.

ಇನ್ನು ಶಾಸಕ ರೇಣುಕಾಚಾರ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಸ್ಲಿಂ ಸಮುದಾಯದ ಹಬ್ಬಕ್ಕೆ ಒಂದೇ ಒಂದು ಕಂಡಿಷನ್ ಹಾಕಲ್ಲ. ಆದ್ರೇ ಗಣೇಶೋತ್ಸವ ಹಬ್ಬಕ್ಕೆ ಯಾಕೆ ಬೇಕು ಕಂಡಿಷನ್ ಅಂತಾ ಪ್ರಶ್ನೆ ಮಾಡಿದ್ದಾರೆ.

ಹಬ್ಬದ ಹಿನ್ನೆಲೆ ಆರಗ ಜ್ಞಾನೇಂದ್ರ ಸಭೆ

ಚಾಮರಾಜಪೇಟೆಯಲ್ಲಿ ಗಣೇಶೋತ್ಸವ ಆಚರಣೆ ವಿಚಾರವಾಗಿ ಮಾತನಾಡಿದ ರವಿಕುಮಾರ್, ಸರ್ಕಾರ ನಿರ್ಧಾರ ತೆಗೆದುಕೊಳ್ಳಲು ಇನ್ನೂ ಸಮಯ ಇದೆ. ಸರ್ಕಾರ ಗಣೇಶೋತ್ಸವಕ್ಕೆ ಅನುಮತಿ‌ ಕೊಡುವ ವಿಶ್ವಾಸ ಇದೆ ಅಂದ್ರು. ಇತ್ತ ಗೃಹ ಸಚಿವ ಆರಗ ಜ್ಞಾನೇಂದ್ರ ಗಣೇಶೋತ್ಸವ ಸಂಭ್ರಮಕ್ಕೆ   ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಕುರಿತು ಸಭೆ ನಡೆಸಿದರು.

ಹುಬ್ಬಳ್ಳಿಯಲ್ಲೂ ಈದ್ಗಾ ಮೈದಾನ ಸಂಬಂಧ ಚರ್ಚೆ

ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿ ಎಂದು ಹು-ಧಾ ಮಹಾನಗರ ಪಾಲಿಕೆ ಕಚೇರಿ ಎದುರು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ್ರು. ಶ್ರೀರಾಮ ಸೇನೆ, ವಿಹೆಚ್ಪಿ, ಬಜರಂಗದಳ, ರಾಣಿ ಚೆನ್ನಮ್ಮ ಮೈದಾನ ಗಜಾನನೋತ್ಸವ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಧಿಡೀರ್ ಪ್ರತಿಭಟನೆ ನಡೆಸುತ್ತಿವೆ.

ಇದನ್ನೂ ಓದಿ: ಓಟರ್ ಐಡಿ-ಆಧಾರ್ ಲಿಂಕ್ ಮಾಡಿಸುವಲ್ಲಿ ಬೆಂಗಳೂರಿಗರು ಲಾಸ್ಟ್​! ಯಾರು ಫಸ್ಟ್​?

ನಾಳೆ ನಡೆಯಲಿರುವ ಪಾಲಿಕೆ ಸಾಮಾನ್ಯ ಸಭೆಯಲ್ಲಿ, ಗಣೇಶೋತ್ಸವ ಆಚರಣೆಗೆ ಅನುಮತಿ‌ ನೀಡಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿವೆ. ಈಗಾಗಲೇ ಪಾಲಿಕೆಗೆ ಮೂರು ಬಾರಿ ಮನವಿ ಮಾಡಲಾಗಿದೆ. ಒಂದು ವೇಳೆ ಅನುಮತಿ ನೀಡದಿದ್ದಲ್ಲಿ ಉಗ್ರ ಹೋರಾಟಕ್ಕೆ ಸಿದ್ಧ ಎಂದು ಎಚ್ಚರಿಕೆ ನೀಡಿವೆ.
Published by:Thara Kemmara
First published: