Chamrajnagar: ಶಾಲೆಗೆ ಮಕ್ಕಳು ಚಕ್ಕರ್ ಹೊಡೆದ್ರೆ ಮನೆ ಮುಂದೆ ಕುದುರೆ ಮಾಮ ಹಾಜರ್, ಸ್ಕೂಲ್​​ಗೆ ಉಚಿತ ಕುದುರೆ ಸವಾರಿ!

ಕುದುರೆ ಮೇಲೆ ಕೂರುವ ಆಸೆಯಿಂದ ಮಕ್ಕಳು ಬರುತ್ತಾರೆ, ಕುದುರೆ ಸವಾರಿ ಮಾಡುತ್ತಾ ಖುಷಿಯಿಂದಲೇ ಶಾಲೆಗೆ ಹೋಗುತ್ತಾರೆ. ಕುದುರೆ ಸವಾರಿ ಆಸೆಯಿಂದಾದರು ಮಕ್ಕಳು ಶಾಲೆಗೆ ಹೋಗುತ್ತಾರಲ್ಲ  ಎಂಬುದೇ ನನಗು ಖುಷಿಯಾಗುತ್ತದೆ ಎನ್ನುತ್ತಾರೆ ಕುದುರೆ ನಾಗೇಂದ್ರ.

ಕುದುರೆ ಸವಾರಿ

ಕುದುರೆ ಸವಾರಿ

  • Share this:
 ಚಾಮರಾಜನಗರ ಜೂ.16. ಮಕ್ಕಳು ಶಾಲೆಗೆ (School Children) ಹೋಗುವುದಿಲ್ಲ ಎಂದು ಹಠ ಮಾಡಿದರೆ ಪೋಷಕರು (Parents) ಚಾಕೊಲೇಟ್, ಸಿಹಿ ತಿನಿಸು, ಗೊಂಬೆ ಹೀಗೆ ನಾನಾ ತರದ  ಆಮಿಷವೊಡ್ಡಿ ಮಕ್ಕಳನ್ನು ಶಾಲೆಗೆ  ಬಿಟ್ಟು ಬರೋದು ಸಾಮಾನ್ಯ. ಆದರೆ ಈ ಊರಿನಲ್ಲಿ  ಯಾವುದಾದರು ಮಗು ಶಾಲೆಗೆ ಹೋಗಲ್ಲ ಎಂದು  ಹಠ ಹಿಡಿದರೆ ವ್ಯಕ್ತಿಯೊಬ್ಬರು ತಮ್ಮ ಕುದುರೆಯೊಂದಿಗೆ ಹಾಜರಾಗುತ್ತಾರೆ. ಆ ಮಗುವನ್ನು ಕುದುರೆ ಸವಾರಿ (Horse Raiding) ಮೂಲಕ ಶಾಲೆಗೆ ಕರೆದೊಯ್ಯುತ್ತಾರೆ. ಆ ಮಗು ಹಠ ಬಿಟ್ಟು ಖುಷಿಯಿಂದ ಶಾಲೆಗೆ ಹೋಗುತ್ತದೆ. ಹೀಗೆ ಕುದುರೆ ಸವಾರಿ ಮಾಡುವ ಆಸೆಯಿಂದ ಅನೇಕ ಮಕ್ಕಳು ಶಾಲೆಯತ್ತ ಮುಖ ಮಾಡಿದ್ದಾರೆ. 

ಚಕ್ಕರ್​ ಹೊಡೆದ್ರೆ ಮನೆ ಮುಂದೆ ಕುದುರೆ ಮಾಮ ಹಾಜರ್​​ 

ಹೌದು, ಇಂತಹ ಒಂದು ಅಪರೂಪದ ವಿದ್ಯಾಮಾನ ಚಾಮರಾಜನಗರ ಜಿಲ್ಲೆಯಲ್ಲಿ ನಡೆಯುತ್ತಿದೆ. ಯಳಂದೂರು ತಾಲೋಕಿನ ಕಂದಹಳ್ಳಿಯ ಕುದುರೆ ನಾಗೇಂದ್ರ ಅವರು ಪ್ರತಿದಿನ ತಮ್ಮ ಹಾಗು ಸಂಬಂಧಿಕರ ಮಕ್ಕಳನ್ನು ಸಮೀಪದ ಕಾರಾಪುರ ವಿರಕ್ತ ಮಠದ ನಿರಂಂಜನ ವಿದ್ಯಾಸಂಸ್ಥೆಗೆ ಕುದುರೆ ಮೂಲಕ ಕರೆದೊಯ್ಯುತ್ತಾರೆ. ಮತ್ತೆ ಶಾಲೆ ಮುಗಿದ ಮೇಲೆ ಕುದುರೆ ಮೂಲಕವೇ  ಕರೆತರುತ್ತಾರೆ.  ಗ್ರಾಮದಲ್ಲಿ ಶಾಲೆಗೆ ಹೋಗುವುದಿಲ್ಲ ಎಂದು ಹಠ ಮಾಡುವ ಅಥವಾ ಶಾಲೆಗೆ ಹೋಗದ ಮಕ್ಕಳ ಮಾಹಿತಿ ಸಿಕ್ಕರೆ ತಕ್ಷಣ ಅಂತಹ ಮಕ್ಕಳ  ಮನೆ ಬಳಿ ಹಾಜರಾಗುತ್ತಾರೆ.  ಕುದುರೆ ಸವಾರಿ ಮಾಡಿಸಿಕೊಂಡು ಶಾಲೆಗೆ ಕರೆದೊಯ್ಯವುದಾಗಿ ಮಗುವಿಗೆ ಆಸೆ ತುಂಬುತ್ತಾರೆ. ಕುದುರೆ ಸವಾರಿ ಮಾಡುವ ಆಸೆಯಿಂದ ಮಗು ಶಾಲೆಗೆ ಹೋಗಲು ಮುಂದಾಗುತ್ತದೆ.

ಇದನ್ನೂ ಓದಿ: Agriculture: ಅಕ್ಕಿಗೆ ಭಾರೀ ಡಿಮ್ಯಾಂಡ್; ಭತ್ತದ ಬೆಳೆಯತ್ತ ದಕ್ಷಿಣ ಕನ್ನಡ ರೈತರ ಚಿತ್ತ

ಕುದುರೆ ನಾಗೇಂದ್ರರ ಮನದಾಳ 

ಹೀಗೆ ಶಾಲೆಗೆ ಅನೇಕ ಮಕ್ಕಳು ಖುಷಿಯಿಂದ ಶಾಲೆಯತ್ತ ಮುಖ ಮಾಡಲು ಕುದುರೆ ನಾಗೇಂದ್ರ ಕಾರಣರಾಗಿದ್ದಾರೆ ಕುದುರೆ ಮೇಲೆ ಕೂರುವ ಆಸೆಯಿಂದ ಮಕ್ಕಳು ಬರುತ್ತಾರೆ. ಕುದುರೆ ಸವಾರಿ ಮಾಡುತ್ತಾ ಖುಷಿಯಿಂದಲೇ ಶಾಲೆಗೆ ಹೋಗುತ್ತಾರೆ ಕುದುರೆ ಸವಾರಿ ಆಸೆಯಿಂದಾದರು ಮಕ್ಕಳು ಶಾಲೆಗೆ ಹೋಗುತ್ತಾರಲ್ಲ  ಎಂಬುದೇ ನನಗು ಖುಷಿಯಾಗುತ್ತದೆ ಎನ್ನುತ್ತಾರೆ ಕುದುರೆ ನಾಗೇಂದ್ರ.

ಶಾಲೆಗೆ ಬರಲು ಇಷ್ಟವಿಲ್ಲದ ಮಕ್ಕಳನ್ನು ಪೋಷಕರು ಬೈಕ್ ನಲ್ಲಿ, ಇಲ್ಲವೆ ಕಾರಿನಲ್ಲಿ ಬಲವಂತವಾಗಿ ಕೂರಿಸಿಕೊಂಡು ಬರುತ್ತಿದ್ದರು. ಆದರೆ ನಾಗೇಂದ್ರ ವರು ಅಂತಹ ಮಕ್ಕಳನ್ನು ಕುದುರೆ ಸವಾರಿ ಮಾಡಿಸಿಕೊಂಡು ಕರೆದುಕೊಂಡು ಬರುವುದರಿಂದ ಖುಷಿಯಾಗಿ ಶಾಲೆಗೆ ಬರುತ್ತಿವೆ , ಇದೇ ಖುಷಿಯಲ್ಲಿ ಮಕ್ಕಳು ಪಾಠ ಪ್ರವಚನಗಳನ್ನು ಆಸಕ್ತಿಯಿಂದ ಕೇಳುತ್ತಿದ್ದಾರೆ ಎನ್ನುತ್ತಾರೆ ಶಾಲಾ ಶಿಕ್ಷಕಿ ಶಮಂತಮಣಿ.

ಕುದುರೆ ನಾಗೇಂದ್ರ ಎಂದೇ ಹೆಸರುವಾಸಿ

ಕುದುರೆ ನಾಗೇಂದ್ರ ಅವರಿಗೆ ಪ್ರಾಣಿಪಕ್ಷಿಗಳೆಂದರೆ ಬಲುಪ್ರೀತಿ. ಕುದುರೆ ಎಂದರಂತೂ ಅಚ್ಚುಮೆಚ್ಚು. ಹಾಗಾಗಿಯೇ ಕಳೆದ ಎಂಟು ವರ್ಷಗಳ ಹಿಂದೆ ಮೈಸೂರಿನ ರೇಸ್ ಕೋರ್ಸ್ ನಿಂದ ಕುದುರೆಯೊಂದನ್ನು ಖರೀದಿಸಿ ತಂದು ಸಾಕುತ್ತಿದ್ದಾರೆ. ಈ ಭಾಗರದಲ್ಲಿ ಇವರು ಕುದುರೆ ನಾಗೇಂದ್ರ ಎಂದೇ ಹೆಸರುವಾಸಿಯಾಗಿದ್ದಾರೆ ಇವರು ಕೇವಲ ಕುದುರೆಯಷ್ಟೇ ಅಲ್ಲ ನಾಯಿ, ಬಾತುಕೋಳಿ, ಮೊಲ, ಪಾರಿವಾಳ, ಲವ್ ಬರ್ಡ್ಸ್, ಗಿಳಿಗಳು, ಕುರಿಗಳು ಹಾಗು ಮೇಕೆಗಳನ್ನು ಸಾಕಿ ಸಲುಹುತ್ತಿದ್ದಾರೆ.

ಇದನ್ನೂ ಓದಿ: Bengaluru: ಬೆಂಗಳೂರಿನಲ್ಲಿ ತಿರುಪತಿ ರೀತಿಯದ್ದೇ ದೇವಸ್ಥಾನ ನಿರ್ಮಾಣ; ಫೋಟೋಗಳಲ್ಲಿ ನೋಡಿ

ತೆಂಗಿನ ಕಾಯಿ ವ್ಯಾಪಾರಿಯೂ ಆಗಿರುವ ನಾಗೇಂದ್ರ ವರು ತೆಂಗಿನ ತೋಟಗಳಿಗೆ ಸುತ್ತಮುತ್ತಲ ಹಳ್ಳಿಗಳಿಗೆ ಕುದುರೆಯ ಮೇಲೆಯೇ  ಹೋಗಿ ವ್ಯಾಪಾರ ಮಾಡುತ್ತಾರೆ. ಈ ನಡುವೆ ಪೆಟ್ರೋಲ್ ಬೆಲೆ ಏರಿಕೆಯಾಗಿರುವುದರಿಂದ ತಮ್ಮ ಸಂಚಾರಕ್ಕೆ ಹೆಚ್ಚಾಗಿ  ಕುದುರೆಯನ್ನೇ ಬಳುಸುತ್ತಾ ಗಮನ ಸೆಳೆಯುತ್ತಿದ್ದಾರೆ ನಾಗೇಂದ್ರ.
Published by:Kavya V
First published: