• Home
  • »
  • News
  • »
  • state
  • »
  • 'ಚೆಲುವ ಚಾಮರಾಜನಗರ' ಪ್ರಮೋಷನಲ್​ ವಿಡಿಯೋ ಬಿಡುಗಡೆ; ಜಿಲ್ಲಾಭಿವೃದ್ಧಿಗೆ ಕೈಜೋಡಿಸಲು ಸಿದ್ದ ಎಂದ ಪವರ್ ಸ್ಟಾರ್

'ಚೆಲುವ ಚಾಮರಾಜನಗರ' ಪ್ರಮೋಷನಲ್​ ವಿಡಿಯೋ ಬಿಡುಗಡೆ; ಜಿಲ್ಲಾಭಿವೃದ್ಧಿಗೆ ಕೈಜೋಡಿಸಲು ಸಿದ್ದ ಎಂದ ಪವರ್ ಸ್ಟಾರ್

ಪುನೀತ್ ರಾಜ್​​ಕುಮಾರ್

ಪುನೀತ್ ರಾಜ್​​ಕುಮಾರ್

ಜಿಲ್ಲೆಯ ಅಭಿವೃದ್ಧಿಯ ರಾಯಭಾರಿಯಾಗಲು ಹೆಮ್ಮೆಯಿಂದ ಒಪ್ಪಿಕೊಂಡಿದ್ದೆ, ನಮ್ಮ  ಜಿಲ್ಲೆ ಅದ್ಭುತ ಪ್ರವಾಸಿ ತಾಣಗಳನ್ನು ಹೊಂದಿದೆ. ನಮ್ಮ ಊರಿನ ಬಗ್ಗೆ ಎಲ್ಲರಿಗೆ ತಿಳಿಯಬೇಕು ಎಂಬುದು ನನ್ನ ಆಶಯವಾಗಿದೆ

  • Share this:

ಚಾಮರಾಜನಗರ (ನ. 13) ಅತ್ಯುತ್ತಮ ಪ್ರವಾಸಿ ತಾಣಗಳನ್ನು ಹೊಂದಿರುವ  ಜಿಲ್ಲೆಯ ಪ್ರವಾಸೋದ್ಯಮ ಉತ್ತೇಜಿಸಲು  ತಯಾರಿಸಿರುವ ಪ್ರಮೋಷನಲ್ ವಿಡಿಯೋ ವನ್ನು  ಜಿಲ್ಲಾ ಉಸ್ತುವಾರಿ  ಸಚಿವ ಸುರೇಶ್ ಕುಮಾರ್ ಬಿಡುಗಡೆ ಮಾಡಿದರು. ಪ್ರಮೋಷನಲ್ ವಿಡಿಯೋದಲ್ಲಿ ಸಂದೇಶ ನೀಡಿರುವ  'ಚಲುವ ಚಾಮರಾಜನಗರ' ರಾಯಭಾರಿ ಪವರ್  ಸ್ಟಾರ್ ಪುನೀತ್ ರಾಜಕುಮಾರ್ ವರ್ಚುವಲ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ತವರು ಜಿಲ್ಲೆಯ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದರು. ಕೇವಲ ಪ್ರವಾಸೋದ್ಯಮ  ಉತ್ತೇಜಿಸುವ ವಿಡಿಯೋ ಮಾತ್ರವಲ್ಲ ಅಲ್ಲ.  ಜಿಲ್ಲೆಯ ಇನ್ಯಾವುದೇ ಕೆಲಸಕ್ಕೂ ನನ್ನ ಸಹಕಾರ  ಬೆಂಬಲ ನೀಡುವುದಾಗಿ ಪವರ್​ಸ್ಟಾರ್​​ ತಿಳಿಸಿದರು. ಜಿಲ್ಲೆಯ ಅಭಿವೃದ್ಧಿಯ ರಾಯಭಾರಿಯಾಗಲು ಹೆಮ್ಮೆಯಿಂದ ಒಪ್ಪಿಕೊಂಡಿದ್ದೆ, ನಮ್ಮ  ಜಿಲ್ಲೆ ಅದ್ಭುತ ಪ್ರವಾಸಿ ತಾಣಗಳನ್ನು ಹೊಂದಿದೆ. ನಮ್ಮ ಊರಿನ ಬಗ್ಗೆ ಎಲ್ಲರಿಗೆ ತಿಳಿಯಬೇಕು ಎಂಬುದು ನನ್ನ ಆಶಯವಾಗಿದೆ. ನಮ್ಮ ಊರಷ್ಟೇ ಅಲ್ಲ, ಇಡೀ ರಾಜ್ಯ ಹಾಗೂ ದೇಶ ಬೆಳೆಯಬೇಕು ಎಂದು ಅವರು ಹೇಳಿದರು.




ಪ್ರಮೋಷನಲ್ ವಿಡಿಯೋ ಬಿಡುಗಡೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ , ಜಿಲ್ಲೆಯಲ್ಲಿ ಒಂದು ಕಡೆ ಪ್ರವಾಸೋದ್ಯಮ ಇದೆ.  ಅದರ ರಾಯಭಾರಿಯಾಗಿ ಪುನೀತ್ ರಾಜಕುಮಾರ್ ಇದ್ದಾರೆ. ಇಂತಹ ಕಾಂಬಿನೇಷನ್ ಬೇರೆ ಯಾವ ಜಿಲ್ಲೆಗೂ ಸಿಗುವುದಿಲ್ಲ ಎಂದರು


ಜಿಲ್ಲೆ ಇನ್ನು ಮುಂದೆ ಒಳ್ಳೆಯ ಕಾರಣಗಳಿಗೆ ಸುದ್ದಿಯಾಗಬೇಕು.  ಪ್ರವಾಸೋದ್ಯಮದಿಂದ ಜಿಲ್ಲೆಯ ಒಟ್ಟು ಆರ್ಥಿಕ ಸ್ಥಿತಿ ಉತ್ತಮವಾಗಬೇಕು, ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ತೆಗೆದುಹಾಕಲು ಎಲ್ಲರು ಸಂಕಲ್ಪ ಮಾಡಬೇಕು ಎಂದು ಅವರು ಹೇಳಿದರು. ಪ್ರಮೋಷನ್ ವಿಡಿಯೋ ಸೊಗಸಾಗಿ ಮೂಡಿ ಬಂದಿದೆ. ಇದನ್ನು ನೋಡಿದವರು ಒಮ್ಮೆ ಜಿಲ್ಲೆಗೆ ಹೋಗಬೇಕು ಎನ್ನುವಷ್ಟರ ಮಟ್ಟಿಗೆ ಈ ಪ್ರಮೋಷನಲ್ ವಿಡಿಯೋವನ್ನು ಜಿಲ್ಲಾಡಳಿತ ತಯಾರಿಸಿದೆ  ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.


ಇದನ್ನು ಓದಿ: ಚೆಲುವ ಚಾಮರಾಜನಗರಕ್ಕೆ ಮತ್ತಷ್ಟು ಪವರ್: ಜಿಲ್ಲೆಯ ಪ್ರವಾಸೋದ್ಯಮದ ಪ್ರಮೋಷನಲ್ ವಿಡಿಯೋ ಸಿದ್ದ


ಜಿಲ್ಲೆಯ ಪ್ರವಾಸೋಧ್ಯಮದ ಅಭಿವೃದ್ಧಿಗೆ  ಪವರ್ ಸ್ಟಾರ್ ಪುನೀತ್ ರಾಜಕುಮಾರ್  ವಿಡಿಯೋ ಸಂದೇಶ ನೀಡುವ ಮೂಲಕ ಒಂದು ರೀತಿಯಲ್ಲಿ ಓಪನ್ ಚೆಕ್ ಕೊಟ್ಟಿದ್ದಾರೆ ಎಂದು ಪುನೀತ್ ರಾಜಕುಮಾರ್ ಅವರ ಸಹಕಾರವನ್ನು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಶ್ಲಾಘಿಸಿದರು


ಜಿಲ್ಲಾಡಳಿತ ತಯಾರಿಸಿರುವ ಈ ಪ್ರಮೋಷನಲ್ ವಿಡಿಯೋದಲ್ಲಿ ಜಿಲ್ಲೆಯ ಪರಿಸರ ಪ್ರವಾಸೋದ್ಯಮ, ಧಾರ್ಮಿಕ ಹಾಗೂ ಆಧ್ಯಾತ್ಮ ಪ್ರವಾಸೋದ್ಯಮ, ಸಾಹಸ ಹಾಗೂ ಪಾರಂಪರಿಕ ಪ್ರವಾಸೋದ್ಯಮ ಕುರಿತ ಅದ್ಭುತ ದೃಶ್ಯಗಳನ್ನ ಒಳಗೊಂಡಿದ್ದು ಜಿಲ್ಲೆಯ ಪ್ರವಾಸಿ  ತಾಣಗಳ ಸೌಂದರ್ಯ ಅನಾವರಣಗೊಂಡಿದೆ


(ವರದಿ : ಎಸ್.ಎಂ.ನಂದೀಶ್​)

Published by:Seema R
First published: