• Home
  • »
  • News
  • »
  • state
  • »
  • Eidgah Maidan: ನನ್ನ ಪ್ರಾಣ ಇರೋವರೆಗೂ ಈದ್ಗಾ ಮೈದಾನ ತೆಗೆಯಲು ಸಾಧ್ಯವೇ ಇಲ್ಲ - ಜಮೀರ್ ಅಹ್ಮದ್​

Eidgah Maidan: ನನ್ನ ಪ್ರಾಣ ಇರೋವರೆಗೂ ಈದ್ಗಾ ಮೈದಾನ ತೆಗೆಯಲು ಸಾಧ್ಯವೇ ಇಲ್ಲ - ಜಮೀರ್ ಅಹ್ಮದ್​

ಈದ್ಗಾ ಮೈದಾನ

ಈದ್ಗಾ ಮೈದಾನ

Zameer Ahmed Khan: ನನ್ನ ಪ್ರಾಣ ಇರೋವರೆಗೂ ಮೈದಾನ ತೆಗೆಯಲು ಸಾಧ್ಯವೇ ಇಲ್ಲ.  ಆಟದ ಮೈದಾನವಾಗಿಯೇ ಉಳಿಯುತ್ತೆ ಎಂದು ಜಮೀರ್  ಹೇಳಿದ್ದಾರೆ.  ಇದು 1871 ರಿಂದ ಈದ್ಗಾ ಮೈದಾನವಾಗಿ ಇದೆ. 

  • Share this:

ಚಾಮರಾಜಪೇಟೆ (Chamarajapete) ಈದ್ಗಾ ಮೈದಾನ (Eidgah Ground) ಭೂವಿವಾದ ಕುರಿತು ಇಂದು ಸಭೆ (Meeting) ನಡೆಸಲಾಗಿದ್ದು, ವೆಂಕಟರಾಮ್‌ ಕಲಾಭವನದಲ್ಲಿ ಸೌಹಾರ್ದ ಸಭೆ ನಡೆದಿದ್ದು, ಸಭೆಯಲ್ಲಿ ಮಾಜಿ ಕಾರ್ಪೋರೇಟರ್ ಗಳು, ಶಾಸಕ ಜಮೀರ್ ಅಹ್ಮದ್ (Zameer Ahmed) ಸೇರಿದಂತೆ ಅನೇಕರು ಭಾಗವಹಿಸಿದ್ದರು.  ಆದರೆ ಸಭೆಯಲ್ಲಿ ಸಂಸದ ಪಿ ಸಿ ಮೋಹನ್, ಮಾಜಿ ಶಾಸಕರಾದ ಪ್ರಮೀಳಾ ನೇಸರ್ಗಿ ಸಭೆಗೆ ಗೈರಾಗಿದ್ದರು.  ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ್ದ ಮಾಜಿ ಕಾರ್ಪೊರೇಟರ್  ಚಂದ್ರಶೇಖರ್  ಸ್ಥಳೀಯ ಶಾಸಕರು ಆಟದ ಮೈದಾನವನ್ನು ಉಳಿಸಿಕೊಂಡು ಹೋಗ್ಬೇಕು ಅನ್ನೋದು ನಮ್ಮ ಆಸೆ.  ನಾವು ಇರುವವರೆಗೂ ಆಟದ ಮೈದಾನ ಉಳಿಸಿಕೊಂಡು ಹೋಗ್ತೀವಿ ಅಂತ ತಿಳಿಸಲಿ. ಹಾಗೆ ತಿಳಿಸಿದ್ರೆ, ನಾಗರೀಕ ವೇದಿಕೆಗೆ ಬಂದ್ ಕೈ ಬಿಡುವಂತೆ ಮನವಿ ಮಾಡುತ್ತೇವೆ ಎಂದಿದ್ದಾರೆ.


ಬಿಬಿಎಂಪಿ ಆಯುಕ್ತರ ಹೇಳಿಕೆಯಿಂದ ಗೊಂದಲ


ಬಿಬಿಎಂಪಿ ಆಯುಕ್ತರು ಹೇಳಿದ ಹೇಳಿಕೆಯಿಂದ ಈ ಗೊಂದಲ ಸೃಷ್ಟಿಯಾಗಿದೆ.  ಇದು 45 ವರ್ಷಗಳಿಂದ ಹೀಗೆ ಇದೆ.  ಅವರು ನಮಾಜ್ ಮಾಡಿಕೊಂಡು ಹೋಗ್ತಾ ಇದ್ದಾರೆ. ನಾವು ಆಟಾಡ್ಕೊಂಡು ಹೋಗ್ತಾ ಇದ್ದೀವಿ. ಇವಾಗ ಬಿಬಿಎಂಪಿ ಕಮಿಷಿನರ್ ನೀಡಿದ ಹೇಳಿಕೆಯಿಂದಲೇ ಇವೆಲ್ಲ ಸೃಷ್ಟಿ ಆಗಿದೆ ಎಂದು ಆರೋಪಿಸಿದ್ದಾರೆ. ಇನ್ನು ಚಾಮರಾಜಪೇಟೆ ಕ್ಷೇತ್ರದ ಗೆಲುವಿಗೆ ಕ್ಷೇತ್ರದ ಎಲ್ಲ ವರ್ಗದ ಸಹಕರಿಸಿದ್ದಾರೆ. ಕೇವಲ ಒಂದೇ ವರ್ಗದ ಪರ ನಾನು ನಿಲ್ಲೋಕೆ ಆಗೊಲ್ಲ. ಈ ಮೈದಾನವನ್ನ ಆಟದ ಮೈದಾನವಾಗಿ ಉಳಿಸುವುದಾಗಿ ಜಮೀರ್ ಸಾಹೇಬ್ರು ನಮಗೆ ಮಾತು ಕೊಟ್ಟಿದ್ದಾರೆ ಎಂದು ಚಂದ್ರಶೇಖರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಜಮೀರ್ ಅವರು ಶಾಸಕರಾಗಿನಿಂದ ಯಾವುದೇ ಹಿಂದೂ-ಮುಸ್ಲಿಂ ಗಲಾಟೆ ಆಗಿಲ್ಲ,  ಬಕ್ರೀದ್ ಹಬ್ಬದ ವೇಳೆ ಬೇಕೆಂತಲೇ ಕೆಲವರು ಹೀಗೆ ಮಾಡ್ತಿದ್ದಾರೆ. ಆಟದ ಮೈದಾನವನ್ನಾಗಿ ಉಳಿಸಿಕೊಳ್ಳಲು ಶಾಸಕರು ಸಹಕರಿಸುವ ವಿಶ್ವಾಸವಿದೆ ಎಂದು  ಮಾಜಿ ಪಾಲಿಕೆ ಸದಸ್ಯ ಬಿ.ಟಿ ಶ್ರೀನಿವಾಸ್ ಮೂರ್ತಿ ಹೇಳಿಕೆ ನೀಡಿದ್ದು, ಆಟದ ಮೈದಾನದ ಪರ ಸಭೆಯಲ್ಲಿ ಸಭಿಕರು ಧ್ವನಿ ಎತ್ತಿದ್ದು, ಎಲ್ಲರೂ ಕೈ ಎತ್ತುವ ಮೂಲಕ ಆಟದ ಮೈದಾನವಾಗಿ ಉಳಿಸಿಕೊಳ್ಳಲು ಸಭೆಯಲ್ಲಿ ಒಮ್ಮತದ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.


ಇನ್ನು ಸಭೆಯ ನಂತರ ಮಾತನಾಡಿದ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್​,  ಎಲ್ಲರೂ ಆಟದ ಮೈದಾನ ಉಳಿಸಿ ಅಂತ ಸಭೆ ಮಾಡಿದ್ರು.  ಆಟದ ಮೈದಾನ ಎಲ್ಲಿ ಹೋಗಿದೆ. ಆಟದ ಮೈದಾನವನ್ನ ಯಾರು ತೆಗೆದಿದ್ದಾರೆ? ಎಂಎಲ್ ಎ, ಬಿಬಿಎಂಪಿ, ವಕ್ಫ್ ಬೋರ್ಡ್ ಯಾರಾದ್ರೂ ಹೇಳಿಕೆ ಕೊಟ್ಟಿದ್ದರಾ? ಆಟ ಆಡೋಕೆ ಜಾಗ ಕೊಡೊಲ್ಲ ಅಂತ ಯಾರಾದ್ರೂ ಹೇಳಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.


ನನ್ನ ಪ್ರಾಣ ಇರೋವರೆಗೂ ಮೈದಾನ ತೆಗೆಯಲು ಸಾಧ್ಯವೇ ಇಲ್ಲ.  ಆಟದ ಮೈದಾನವಾಗಿಯೇ ಉಳಿಯುತ್ತೆ ಎಂದು ಜಮೀರ್  ಹೇಳಿದ್ದಾರೆ.  ಇದು 1871 ರಿಂದ ಈದ್ಗಾ ಮೈದಾನವಾಗಿ ಇದೆ.  ವಾಜೀದ್ ಅನ್ನೋರು 1954ರಲ್ಲಿ ಮುಸ್ನಿಲ್ ಕೋರ್ಟ್ ಫೈಲ್ ಮಾಡುತ್ತಾರೆ. ಆದರೆ ಈ ಕೇಸ್ ಡಿಸ್ಮಿಸ್ ಆಗುತ್ತದೆ. ಆಗ 1958 ರಲ್ಲಿ ಮೈಸೂರ್ ಕೋರ್ಟ್ಗೆ ಅಫೀಲ್ ಹೋಗುತ್ತಾರೆ. ಆಗ ಕೋರ್ಟ್ ನಿಮ್ಮ ದಾಖಲೆಗಳನ್ನ ಕೊಡಿ ಅಂತ ಕೇಳುತ್ತೆಸುಮಾರು ಒಂದೂವರೆ ವರ್ಷಗಳ ಕಾಲ ಈ ಕೇಸ್ ನಡೆಯುತ್ತೆ1959ರಲ್ಲಿ ಅಲ್ಲೂ ಕೇಸ್ ನ ಡಿಸ್ ಮಿಸ್ ಮಾಡುತ್ತಾರೆ. ನಾನಿನ್ನು ಹುಟ್ಟೇ ಇರಲಿಲ್ಲ, ಆಗ ಇದೆಲ್ಲ ನಡೆಯುತ್ತೆ ಎಂದು ಮೈದಾನದ ಇತಿಹಾಸದ ಬಗ್ಗೆ ಜಮೀರ್ ಮಾತನಾಡಿದ್ದಾರೆ.


ನನಗೆ ಯಾವುದೇ ಜಾತಿ, ಮತದ ಭೇದವಿಲ್ಲ


1965 ಗೆ ವಕ್ಫ್ ಬೋರ್ಡ್ ಗೆ ಇದೆ ಗೆಜೆಟ್ ಆಗಿಬಿಡುತ್ತದೆ. ಬಳಿಕ ಇದು ಹಾಗೇ ನಡೆದುಕೊಂಡು ಹೋಗುತ್ತದೆ. 1972ರಲ್ಲಿ ಕಾರ್ಪೊರೇಷನ್ ನವರು ಕೋರ್ಟ್ ಗೆ ಹೋಗ್ತಾರೆ. ಆದರೆ ಆಟದ ಮೈದಾನವನ್ನ ತೆಗೀತಿವಿ ಅಂತ ಯಾರೂ ಹೇಳಿಲ್ಲ. ಯಾರೂ ಹೇಳದೆ ಯಾಕಿಷ್ಟು ಗೊಂದಲ ಸೃಷ್ಟಿಸುತ್ತಾರೆ ಎಂಬುದು ಗೊತ್ತಿಲ್ಲ. ಜಮೀರ್ ಚಾಮರಾಜಪೇಟೆಯ ಮನೆ ಮಗನಾಗಿದ್ದಾನೆ. ಅದಕ್ಕಾಗಿಯೇ ಸತತ 4 ಬಾರಿಯೂ ನನ್ನನ್ನ ಗೆಲ್ಲಿಸಿದ್ದಾರೆ.  ನಾನು ಜಾತಿ, ಧರ್ಮದ ವಿಚಾರವಾಗಿ ಬೇಧಬಾವ ಮಾಡಿಲ್ಲ.  ಹೆಣ್ಣು-ಗಂಡು ಅಷ್ಟೇ ಜಾತಿ ಇರೋದು ಎಂದಿದ್ದಾರೆ.


ಅಲ್ಲದೇ, ಕೋವಿಡ್ ವೇಳೆ 580 ಶವಗಳನ್ನ ಅಂತ್ಯಸಂಸ್ಕಾರ ಮಾಡಿದ್ದೇನೆ. ಹಿಂದೂ, ಮುಸ್ಲಿಂ, ಕ್ರೈಸ್ತ ಅಂತ ಯಾವುದೇ ಬೇಧ ಭಾವ ಮಾಡಿಲ್ಲ. ಈಗ ನನ್ನನ್ನ ವಿರೋಧ ಮಾಡುವವರು ಆಗ ಎಲ್ಲೋಗಿದ್ರು?  ಪಿಸಿ ಮೋಹನ್ ನಮ್ಮ ಕ್ಷೇತ್ರದ ಎಂಪಿ ಯಾಕೆ ಬರ್ಲಿಲ್ಲ? ಈ ಬಗ್ಗೆ ಅವ್ರು ಯಾಕೆ ಮಾತಾಡ್ತಿಲ್ಲ? ಬಿಜೆಪಿ ಪಾಲಿಕೆ ಸದಸ್ಯರೂ ಸಭೆಗೆ ಆಹ್ವಾನಿಸಿದ್ರೂ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಹಾಗೆಯೇ, ಈ ವರ್ಷದಿಂದ ಚಾಮರಾಜಪೇಟೆ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸಿತ್ತೇವೆ. ಬೇರೆ ಯಾರೂ ಹಾರಿಸೋದು ಬೇಡ, ನಾವೇ  ಧ್ವಜ ಹಾರಿಸುತ್ತೇವೆ. ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಮಾಡೋಣ. ನಾನೇ ಧ್ವಜ ಹಾರಿಸ್ತೇನೆ ಎಂಎಲ್ ಎ ಅಂದ್ರೆ ದೊಡ್ಡವನಲ್ಲ, ನೀವು ಆಯ್ಕೆ ಮಾಡಿ ಕಳಿಸಿದ್ದೀರಿ. ಏನೇ ಇದ್ರೂ ಕೇಳಿ ನಾನೊಬ್ಬ ಗುಲಾಮ. ನಾನು ಕ್ಷೇತ್ರದ ಜನರ ಸೇವಕ, ಹೇ ಜಮೀರ್ ಈ ಕೆಲಸ ಮಾಡು ಅಂದ್ರೆ ನಾನು ಮಾಡ್ತೀನಿ ಎಂದು ಹೇಳಿದ್ದಾರೆ.  ಅಲ್ಲದೇ, ಜುಲೈ 12ರಂದು ಚಾಮರಾಜಪೇಟೆ ಬಂದ್ ಗೆ ಕರೆ ಕೊಟ್ಟಿದ್ದಾರೆ. ಆಟದ ಮೈದಾನ ಉಳಿಸಿ ಎಂದು ಹೋರಾಟ ಮಾಡ್ತಿದ್ದಾರೆ. ಇದಕ್ಕೆ ಯಾರೂ ಆಕ್ಷೇಪ ವ್ಯಕ್ತಪಡಿಸ್ತಿಲ್ಲ. ಆದರೆ ಯಾಕೆ ಬಂದ್ ಕರೆ ಕರೆದಿದ್ದಾರೆ ಎಂದು‌ ಗೊತ್ತಾಗುತ್ತಿಲ್ಲ. ಅವರನ್ನೆಲ್ಲ ಕರೆದು ಅವರಿಗೆ ತಿಳಿ ಹೇಳುವ ಕೆಲಸ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.


ಇನ್ನು ಚಾಮರಾಜಪೇಟೆ ಮನೆ ಮಗ ನಾನು.  ನನಗೆ ಗೊತ್ತಿರುವುದು ಎರಡೇ ಒಂದೇ ಹೆಣ್ಣು ಒಂದು ಗಂಡು ಅಷ್ಟೇ. ನಾನು ಮುಸ್ಲಿಂ ಅಂತ ಎಂದೂ ನೋಡಿಲ್ಲ. ಸುಮ್ಮನೇ ರಾಜಕೀಯ ವಿವಾದ ಸೃಷ್ಟಿ ಮಾಡ್ತಿದ್ದಾರೆ. ಇದೆಲ್ಲ ನನಗೆ ಗೊತ್ತಿದೆ. ಇದಕ್ಕೆ ಚಾಮರಾಜಪೇಟೆ ಮತದಾರರ ಉತ್ತರ ಕೊಡ್ತಾರೆ ಎಂದು ಟಾಂಗ್ ಕೊಟ್ಟಿದ್ದಾರೆ.


ಮಾಧ್ಯಮಗಳಿಂದ ವಿವಾದ ಸೃಷ್ಟಿ


ಈ ಮಧ್ಯೆ ಇಷ್ಟೆಲ್ಲ ಗೊಂದಲ ಸೃಷ್ಟಿ ಮಾಡ್ತಿರೋರು ನೀವೇನಿಮಗೆ ಕೈ ಮುಗಿತಿವಿ, ಮಾಧ್ಯಮಗಳಿಂದಲೇ ಗೊಂದಲ ಸೃಷ್ಟಿಯಾಗ್ತಿದೆ ಎಂದು ಮಾಧ್ಯಮಗಳ ಆರೋಪ ಮಾಡಿದ್ದು, ಕೈ ಮುಗಿದು ಮನವಿಮಾಡಿದ್ದಾರೆ.  ಇನ್ನು ಸಭೆಯಲ್ಲಿ ಮೈದಾನದಲ್ಲಿ ಕುರಿ ಮಾರಾಟ ಮಾಡುವುದನ್ನ ಸ್ಥಳಾಂತರಕ್ಕೆ ಜನರು ಮನವಿ ಮಾಡಿದ್ದು, ಒಂದೆಡೆ ಮೈಲೆಮಹದೇಶ್ವರ ದೇವಸ್ಥಾನ ಇದೆ. ಸುತ್ತಮುತ್ತ ಮನೆಗಳಿರುವ ಕಾರಣ ವಾಸನೆ ಬರ್ತಿದೆ.  ಮಕ್ಕಳು ಆಟವಾಡಲು ಸ್ವಲ್ಪ ಸಮಸ್ಯೆ ಆಗ್ತಿದೆ ಎಂದು ಜನರು ಸಮಸ್ಯೆ ತೋಡಿಕೊಂಡಿದ್ದು, ಸ್ಥಳೀಯರು ನೀವೆಲ್ಲ ಏನು ಹೇಳ್ತೀರೊ ಅದಕ್ಕೆ ನಾವು ಬದ್ದ ಎಂದು ಜಮೀರ್ ಹೇಳಿದ್ದಾರೆ.

Published by:Sandhya M
First published: