ಕಳೆದ ಹಲವು ದಿನಗಳಿಂದ ವಿವಾದದ ಕೇಂದ್ರಬಿಂದುವಾಗಿದ್ದು ಚಾಮರಾಜಪೇಟೆಯ (Chamarajapete) ಈದ್ಗಾ ಮೈದಾನ (Eidgah Maidan). ಇಷ್ಟು ದಿನ ಮೈದಾನ ನಮ್ಮದಲ್ಲ. ದಾಖಲೆ ಇದ್ದವರು ಬಂದರೆ ಖಾತಾ ಮಾಡಿಕೊಡ್ತೀವಿ ಅಂತ ಬಿಬಿಎಂಪಿ (BBMP) ಹೇಳ್ತಾ ಇತ್ತು. ಆದರೆ ಈಗ ಈ ಪ್ರಕರಣಕ್ಕೊಂದು ರೋಚಕ ಟ್ವಿಸ್ಟ್ ಸಿಕ್ಕಿದೆ. 2021ರಲ್ಲಿ ಈ ಮೈದಾನದ ಬಿಬಿಎಂಪಿ ಪಾಲಿಕೆಗೆ ಬಂದಿದೆ ಎಂಬುವುದು ಈಗಿನ ಹೊಸ ಸುದ್ದಿ.
ದಾಖಲೆಗಳಿದ್ರೂ ಮತ್ತೆ ಅಡ್ಡ ಗೋಡೆ ಮೇಲೆ ದೀಪವಿಟ್ಟ ಪಾಲಿಕೆ !
2021 ರಲ್ಲಿ ನಗರಾಭಿವೃದ್ಧಿ ಇಲಾಖೆ ಹೊರಡಿಸಿದ ಗೆಜೆಟ್ ನೋಟಿಫಿಕೇಷನ್ ನಲ್ಲಿ 9016.41 ಚದರ ಅಡಿ ವಿಸ್ತೀರ್ಣವಿರೋ ಆಟದ ಮೈದಾನ ಬಿಬಿಎಂಪಿ ಮಾಲೀಕತ್ವದಲ್ಲಿದೆ. ಇದರ ಉಸ್ತುವಾರಿ ಹಾಗೂ ಜವಾಬ್ದಾರಿ ಬಿಬಿಎಂಪಿಯದ್ದು ಅಂತ ಉಲ್ಲೇಖಮಾಡಿದೆ. ಆ ಮೂಲಕ ಇಷ್ಟು ದಿನ ಈ ಆಸ್ತಿ ನಮ್ಮದು, ನಮಗೇ ಖಾತೆ ಮಾಡಿಕೊಡ್ಬೇಕು ಅಂತ ಹೇಳ್ತಿದ್ದ ವಕ್ಫ್ ಬೋರ್ಡ್ ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಅನ್ನೋದು ಸ್ಪಷ್ಟವಾಗಿ ಉಲ್ಲೇಖವಾಗಿದೆ.
ಬಿಬಿಎಂಪಿಗೆ ಸೇರಿದೆ ಆಟದ ಮೈದಾನ
ನಗರಾಭಿವೃದ್ಧಿ ಇಲಾಖೆ 2018ರಲ್ಲಿ ಕರ್ನಾಟಕ ಪಾರ್ಕ್, ಆಟದ ಮೈದಾನ, ಖಾಲಿ ಜಾಗಗಳ ರಕ್ಷಣೆ ಮಾಡೋ ನಿಟ್ಟಿನಲ್ಲಿ ಸರ್ವೆ ಮಾಡೋಕೆ ಮುಂದಾಗಿತ್ತು. ಈ ವೇಳೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 99 ಉದ್ಯಾನವನಗಳು, 89 ಖಾಲಿ ಜಾಗಗಳು ಹಾಗೂ 41 ಆಟದ ಮೈದಾನಗಳಿದ್ದು, ಅವೆಲ್ಲವೂ ಬಿಬಿಎಂಪಿಗೆ ಸೇರಿದ ಆಸ್ತಿಗಳು ಅನ್ನೋದು ಗೊತ್ತಾಗಿದೆ. 41 ಆಟದ ಮೈದಾನದ ಪೈಕಿ ವಿವಾದದ ಕೇಂದ್ರ ಬಿಂದುವಾಗಿದ್ದ ಜಾಮರಾಜಪೇಟೆಯಲ್ಲಿದ್ದ 9016.41 ಚದರಡಿ ವಿಸ್ತೀರ್ಣವಿರೋ ಮೈದಾನವೂ ಸೇರಿಕೊಂಡಿದೆ.
ಇದನ್ನೂ ಓದಿ: Chamrajpet ಈದ್ಗಾ ಮೈದಾನದಲ್ಲಿ ಬಕ್ರೀದ್ಗೆ ಕುರಿ ಮಾರಾಟದಿಂದ ತ್ಯಾಜ್ಯ: ಕ್ಲೀನ್ ಮಾಡದಿರಲು BBMP ನಿರ್ಧಾರ
ಕಾನೂನು ಅಭಿಪ್ರಾಯ ಪಡೆದು ಮುಂದಿನ ನಡೆ ಅಂದ್ರು ಸ್ಪೆಷಲ್ ಕಮೀಷನರ್ !
ಒಂದ್ಕಡೆ ಬಿಬಿಎಂಪಿಯ ದ್ವಂದ್ವ ನೀತಿ ಹಾಗೂ ವ್ಯತಿರಿಕ್ತ ಹೇಳಿಕೆಗಳಿಗೆ ನಗರಾಭಿವೃದ್ಧಿ ಇಲಾಖೆ ಆದೇಶ ಬ್ರೇಕ್ ಹಾಕಿದಂತಾಗಿದೆ. ದಾಖಲೆಗಳಲ್ಲಿ ಬಿಬಿಎಂಪಿ ಸ್ವತ್ತು ಅಂತ ಇದೆ. ಹೀಗಿದ್ರೂ ಕಾನೂನು ತಜ್ಞರ ಅಭಿಪ್ರಾಯ ಪಡೆದು ಆನಂತರ ಮುಂದಿನ ತೀರ್ಮಾನ ಕೈಗೊಳ್ತೀವಿ. ಅಲ್ಲೀವರೆಗೂ ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ ಅಂತ ಮತ್ತೆ ಅಡ್ಡಗೋಡೆ ಮೇಲೆ ದೀಪವಿಡೋ ಕೆಲ್ಸವನ್ನ ಬಿಬಿಎಂಪಿ ಮಾಡಿದೆ.
2021ರಲ್ಲಿ ಪಾಲಿಕೆ ಹೆಸರಿಗೆ ಬರೆಯಲಾಗಿದೆ
ಸದ್ಯ 2021ರಲ್ಲಿ ಪಾಲಿಕೆ ಹೆಸರಿಗೆ ಬರೆಯಲಾಗಿದೆ ಎಂಬ ರಾಜ್ಯಪತ್ರವನ್ನು ಪಾಲಿಕೆ ಅಧಿಕಾರಿಗಳು ಕಾನೂನು ಕೋಶಕ್ಕೆ ವರ್ಗ ಮಾಡಿದೆ. ಅಲ್ಲಿಂದ ವರದಿ ಬಂದ ಬಳಿಕ ಮುಂದಿನ ತೀರ್ಮಾನ ಎಂದು ಕೈತೊಳೆದುಕೊಂಡಿದೆ. ಇದು ಹಿಂದೂ ಪರ ಸಂಘಟನೆಗಳ ಕಣ್ಣು ಕೆಂಪಾಗಿಸಿದೆ. ಇನ್ನಾದರೂ ಪಾಲಿಕೆ ಮೈದಾನವನ್ನು ಅಧೀನಕ್ಕೆ ತೆಗೆದುಕೊಂಡಿಲ್ಲವೆಂದರೆ ಬಂದ್ ಮಾಡುವುದು ಖಚಿತ ಎಂದು ಹೇಳಿದ್ದಾರೆ. ಒಟ್ಟಾರೆ ಕಳೆದೊಂದು ತಿಂಗಳಿನಿಂದ ಗೊಂದಲದ ಗೂಡಾಗಿದ್ದ ಚಾಮರಾಜಪೇಟೆಯ ಮೈದಾನದ ಮಾಲೀಕತ್ವಕ್ಕೆ ಸಂಬಂಧಪಟ್ಟಂತೆ ಮಹತ್ವದ ದಾಖಲೆ ಸಿಕ್ಕಿದೆ. ಇದು ಮೈದಾನದ ವಿವಾದಕ್ಕೆ ತೆರೆ ಎಳೆಯುತ್ತಾ ಕಾದು ನೋಡಬೇಕಿದೆ.
ಇದನ್ನೂ ಓದಿ: BBMP: ಬೀದಿ ಬದಿಯ ಆಹಾರಗಳೂ ಇನ್ಮುಂದೆ ಆನ್ಲೈನ್ನಲ್ಲಿ ಲಭ್ಯ: ಪಾಲಿಕೆ ಸಾಲವನ್ನೂ ನೀಡುತ್ತೆ
ಈದ್ಗಾ ಮೈದಾನವನ್ನು ನಾವು ಕ್ಲೀನ್ ಮಾಡಲ್ಲ
ಒಂದ್ಕಡೆ ಆಸ್ತಿ ನಮ್ಮದು ಅಂತಿದ್ದ ವಕ್ಫ್ ಬೋರ್ಡ್ (Waqf Board) ದಾಖಲೆ ಸಲ್ಲಿಸೋಕೆ ವಿಳಂಬಮಾಡ್ತಿದೆ. ಮತ್ತೊಂದ್ಕಡೆ ಬಕ್ರೀದ್ (Bakrid) ಆಚರಣೆ ದಿನ ಸಮೀಪಿಸುತ್ತಿದೆ. ಇದೆಲ್ಲಾದರ ನಡುವೆ ಬಕ್ರೀದ್ ಗೆ ಕುರಿಗಳ ಮಾರಾಟ ತಾಣವಾಗಿರೋ ಮೈದಾನವನ್ನ ಇನ್ಮುಂದೆ ಕ್ಲೀನ್ ಮಾಡೋದಿಲ್ಲ ಅಂತ ಪಾಲಿಕೆ (BBMP) ಕಡ್ಡಿ ತುಂಡು ಮಾಡಿದಂತೆ ಹೇಳಿದೆ. ಬಕ್ರೀದ್ ಹಬ್ಬ ಹತ್ರ ಬರ್ತಿದೆ. ಹೀಗಾಗಿ ವಿವಾದಿತ ಚಾಮರಾಜಪೇಟೆ ಮೈದಾನದ ವಿವಾದವೂ ಮತ್ತೆ ಮುನ್ನೆಲೆಗೆ ಬಂದಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಚಾಮರಾಜಪೇಟೆಯ ಮೈದಾನದಲ್ಲಿ ಭರ್ಜರಿ ಕುರಿಗಳ ವ್ಯಾಪಾರ ನಡೆಯುತ್ತಿದೆ. ಇಡೀ ಮೈದಾನದ ತುಂಬೆಲ್ಲಾ ಮಾರಾಟ ಮಾಡಲಾಗ್ತಿದ್ದು, ಬಿಬಿಎಂಪಿ ಕಣ್ಮುಚ್ಚಿ ಕುಳಿತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ