• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Chamarajanagar: ಹಿಂದೂ ಮಹಿಳೆಯ ಶವಕ್ಕೆ ಹೆಗಲು ಕೊಟ್ಟು, ಅಂತ್ಯಕ್ರಿಯೆ ನೆರವೇರಿಸಿದ ಮುಸ್ಲಿಂ ಯುವಕರು

Chamarajanagar: ಹಿಂದೂ ಮಹಿಳೆಯ ಶವಕ್ಕೆ ಹೆಗಲು ಕೊಟ್ಟು, ಅಂತ್ಯಕ್ರಿಯೆ ನೆರವೇರಿಸಿದ ಮುಸ್ಲಿಂ ಯುವಕರು

ಹಿಂದೂ ಮಹಿಳೆಯ ಅಂತ್ಯಕ್ರಿಯೆ ನೆರವೇರಿಸಿದ ಮುಸ್ಲಿಂ ಯುವಕರು

ಹಿಂದೂ ಮಹಿಳೆಯ ಅಂತ್ಯಕ್ರಿಯೆ ನೆರವೇರಿಸಿದ ಮುಸ್ಲಿಂ ಯುವಕರು

ಅಂತರ ಜಾತಿ ವಿವಾಹವಾಗಿದ್ದರು ಎಂಬ ಒಂದೇ ಕಾರಣಕ್ಕೆ ಮೊಮ್ಮಗಳ ಪತಿ ಹೊರತುಪಡಿಸಿ ನಂಜಮ್ಮನ ಅಂತ್ಯಸಂಸ್ಕಾರಕ್ಕೆ ಬೇರೆ ಯಾವ ನೆಂಟರಿಷ್ಟರು ಕೈ ಜೋಡಿಸಲಿಲ್ಲ.

  • Share this:

ಚಾಮರಾಜನಗರ: ಕೋಮು ಸೌಹಾರ್ದ ಕದಡುವ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇವೆ. ಆದರೆ ಇದಕ್ಕೆ ಅಪವಾದ ಎಂಬಂತೆ ಚಾಮರಾಜನಗರದಲ್ಲೊಂದು (Chamarajanagara) ಮಾನವೀಯ ಕಾರ್ಯ ನೆರವೇರಿದೆ. ಚಾಮರಾಜನಗರ ಅಹಮದ್ ನಗರದಲ್ಲಿ ನಂಜಮ್ಮ ಎಂಬ ವೃದ್ಧೆ ವಯೋಸಹಜ ಅನಾರೋಗ್ಯದಿಂದ (Death) ಮೃತಪಟ್ಟಿದ್ದರು. ಈ ವೇಳೆ ಹತ್ತಿರದ ಸಂಬಂಧಿಕರು ಬಂದು ಹೋದರಷ್ಟೆ. ಆದರೆ ಯಾರೂ ಸಹ ನಂಜಮ್ಮ ಅವರ ಶವ ಸಂಸ್ಕಾರಕ್ಕೆ (Funeral) ಮುಂದಾಗಲಿಲ್ಲ. ವಿಷಯ ತಿಳಿದ ಅಹಮದ್ ನಗರದ ಮುಸ್ಲಿಂ ಯುವಕರು (Muslim Youths) ಸ್ಮಶಾನಕ್ಕೆ ನಂಜಮ್ಮನ ಶವ ಹೊತ್ತು ಸಾಗಿಸಿ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.


ನಂಜಮ್ಮ ಅವರ ಶವಸಂಸ್ಕಾರಕ್ಕೆ ಸಂಬಂಧಿಕರು ಬಾರದೇ ಇರಲು‌ ಕಾರಣ ಇಷ್ಟೆ. ನಂಜಮ್ಮ ಅಂತರಜಾತಿ ವಿವಾಹವಾಗಿದ್ದರು. ಹಾಗಾಗಿ ಇವರ ಬಂಧು ಬಳಗದವರೆಲ್ಲಾ ದೂರ ಆಗಿದ್ದರು.


ಬಾಡಿಗೆ ಶೆಡ್​​​ನಲ್ಲಿ ವಾಸವಾಗಿದ್ದ ನಂಜಮ್ಮ


ಹಲವು ವರ್ಷಗಳ ಹಿಂದೆ ಇವರ ಪತಿ ತೀರಿಕೊಂಡಿದ್ದರು. ಹಾಗಾಗಿ ನಂಜಮ್ಮ  ತಮ್ಮ ಮಗಳೊಂದಿಗೆ ಚಾಮರಾಜನಗರದ ಅಹಮದ್‌ ನಗರದಲ್ಲಿ ಬಾಡಿಗೆ ಶೆಡ್‌ವೊಂದರಲ್ಲಿ ವಾಸವಿದ್ದರು.


ಅಂತರ ಜಾತಿ ವಿವಾಹವಾಗಿದ್ದರು ಎಂಬ ಒಂದೇ ಕಾರಣಕ್ಕೆ ಮೊಮ್ಮಗಳ ಪತಿ ಹೊರತುಪಡಿಸಿ ನಂಜಮ್ಮನ ಅಂತ್ಯಸಂಸ್ಕಾರಕ್ಕೆ ಬೇರೆ ಯಾವ ನೆಂಟರಿಷ್ಟರು ಕೈ ಜೋಡಿಸಲಿಲ್ಲ.


Chamarajanara muslim youths performs Hindu woman s last rites mrq
ಹಿಂದೂ ಮಹಿಳೆಯ ಅಂತ್ಯಕ್ರಿಯೆ ನೆರವೇರಿಸಿದ ಮುಸ್ಲಿಂ ಯುವಕರು


ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ


ವಿಷಯ ಅರಿತ ಮುಸ್ಲಿಂ ಯುವಕರು ತಾವೇ ಹೋಗಿ ಶವಸಂಸ್ಕಾರಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ತಾವೇ ಖರೀದಿಸಿ ತಂದು ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಅಲ್ಲದೆ ನಂಜಮ್ಮ ಅನಾರೋಗ್ಯದಿಂದ ಬಳಲುತ್ತಿದ್ದಾಗ ಹಣದ ಸಹಾಯವನ್ನು ಮಾಡುತ್ತಾ ಸಹಾಯಹಸ್ತ ಚಾಚುತ್ತಿದ್ದರು.


ಮುಸ್ಲಿಂ ಯುವಕರ ಮಾನವೀಯತೆ


ಕೋಮು ಸಂಘರ್ಷ, ಧರ್ಮದಂಗಲ್‌ನಂತಹ ಘಟನೆಗಳಿಂದ ಮನುಷ್ಯ ಮನುಷ್ಯರ ನಡುವೆಯೇ ಕಂದಕ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಎಲ್ಲರೂ ಮೈಯಲ್ಲೂ ಹರಿಯುತ್ತಿರುವುದು ಕೆಂಪು ರಕ್ತವೇ.  ನಾವೆಲ್ಲಾ ಮನುಷ್ಯರು ಎಂದುಕೊಂಡು ಹಿಂದೂ ಮಹಿಳೆ ಅಂತ್ಯ ಸಂಸ್ಕಾರ ನೆರವೇರಿಸಿದ ಮುಸ್ಲಿಂ ಯುವಕರು ಸಾಮರಸ್ಯ ಮೆರೆದಿದ್ದಾರೆ.
ಬಾರ್​ ಸ್ಥಳಾಂತರಿಸುವಂತೆ ಮಹಿಳೆಯರ ಪ್ರೊಟೆಸ್ಟ್​​


ಬಾರ್​ ಅನ್ನ ಸ್ಥಳಾಂತರಿಸುವಂತೆ ಆಗ್ರಹಿಸಿ ಮಹಿಳೆಯರು ಬಾಗಲಕೋಟೆಯ ನವನಗರದ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.


ಬಾದಾಮಿ ತಾಲೂಕಿನ ಬಿ.ಎನ್ ಜಾಲಿಹಾಳ ಗ್ರಾಮದ ಪ್ರಮುಖ ಬೀದಿಯಲ್ಲಿರುವ ಮದ್ಯದ ಅಂಗಡಿಯಿಂದ ಶಾಲಾ ವಿದ್ಯಾರ್ಥಿಗಳು ಕುಡಿತದ ದಾಸರಾಗುತ್ತಿದ್ದಾರೆ.


ಈ ಹಿಂದೆ ಪ್ರತಿಭಟನೆ ಮಾಡಿದ್ರೂ ಏನು ಪ್ರಯೋಜನ ಆಗಿಲ್ಲ. ಈಗಲಾದ್ರೂ ಬಾರ್​​ ಸ್ಥಳಾಂತರಿಸಿ ಅಂತಾ ಮಹಿಳೆಯರು ಒತ್ತಾಯಿಸಿದ್ರು. ಜೊತೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ 2 ದಿನಗಳ ಗಡುವು ಕೊಟ್ಟಿದ್ದು, ಬೇಡಿಕೆ ಈಡೇರದಿದ್ದರೆ ಜಿಲ್ಲಾಡಳಿತಕ್ಕೆ ಮುತ್ತಿಗೆ ಹಾಕೋದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.


ಜೋಡೆತ್ತುಗಳ ಹೊಸ ದಾಖಲೆ


ಒಂದೇ ದಿನದಲ್ಲಿ ಜೋಡೆತ್ತುಗಳು ಚಕ್ಕಡಿಯನ್ನು 120 ಕಿಲೋ ಮೀಟರ್ ಎಳೆದೊಯ್ಯೋ ಮೂಲಕ ದಾಖಲೆ ನಿರ್ಮಿಸಿವೆ.


ಒಂದೇ ದಿನ ಬ್ಯಾಹಟ್ಟಿಯಿಂದ ತೆರಳಿ ಸವದತ್ತಿ ಯಲ್ಲಮ್ಮನ ದರ್ಶನ ಪಡೆದು ಚಕ್ಕಡಿಯೊಂದಿಗೆ ಜೋಡೆತ್ತುಗಳು ವಾಪಸ್​ ಆಗಿದ್ದು, 120 ಕಿಲೋ ಮೀಟರ್ ಸಂಚರಿಸಿದ ಜೋಡಿ ಎತ್ತುಗಳು ಎಲ್ಲರ ಅಚ್ಚರಿಗೂ ಕಾರಣವಾಗಿವೆ.


ಇದನ್ನೂ ಓದಿ:  Modi Letter: ಬೆಂಗಳೂರಿನ ಬಾಲಕನಿಗೆ ಪ್ರಧಾನಿಯವರಿಂದ ಬಂತು ಪತ್ರ! ವಿದ್ಯಾರ್ಥಿಗೆ ಥ್ಯಾಂಕ್ಸ್ ಹೇಳಿದ್ದೇಕೆ ಮೋದಿ?


ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ರೈತರೊಬ್ಬರು ಶಕ್ತಿ ಪ್ರದರ್ಶನ ಮಾಡಿದ್ದಾರೆ. ಸೋಮಶೇಖರ್ ಅಡಿವೆಪ್ಪ ಬೆಂಗೇರಿ ಎಂಬವರಿಗೆ ಸೇರಿದ ಜೋಡೆತ್ತು ಇಂಥದ್ದೊಂದು ಸಾಹಸಕ್ಕೆ ಮಾಡಿವೆ. ಜೋಡೆತ್ತುಗಳೊಂದಿಗೆ ಸಾಹಸ ಮಾಡಿ ಜನತೆಯೂ ಮೆಚ್ಚುಗೆ ಪಡೆದಿದ್ದಾರೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು