ಆತ 42, ಆಕೆ 22; ಇಬ್ಬರು ಹೆಂಡಿರಿದ್ದರೂ ಮದುವೆಯಾದ ಚಪಲಿಗ; ಕೊಲೆ ಮಾಡಿ ಆ್ಯಕ್ಸಿಡೆಂಟ್ ಎಂದು ಕಥೆ ಕಟ್ಟಿದ

ಸಿದ್ದರಾಜುಗೆ ಅದಾಗಲೇ ಇಬ್ಬರು ಹೆಂಡತಿಯರಿದ್ದ ಕಾರಣ ಮಮತಾಳ ಜೊತೆ ಹೆಚ್ಚಾಗಿ ಇರುತ್ತಿರಲಿಲ್ಲ. ಇದರಿಂದಾಗಿ ಆಗಾಗ್ಗೆ ಮಮತಾ ಮತ್ತು ಸಿದ್ದರಾಜು ನಡುವೆ ಗಲಾಟೆ ನಡೆಯುತ್ತಿರುತ್ತದೆ. ಕೊನೆಗೆ ಮಮತಾಳನ್ನು ಮುಗಿಸಲು ಸಂಚು ರೂಪಿಸಿದ ಸಿದ್ದರಾಜು, ಮಮತಾಳನ್ನು 2019 ರ ಮೇ 26 ರಂದು ತನ್ನ ಆಟೋದಲ್ಲಿ ಕೂರಿಸಿಕೊಂಡು ಹಲ್ಲೆ ನಡೆಸಿ ಆಟೋದಿಂದ ಹೊರಕ್ಕೆ ತಳ್ಳಿ ಕೊಲೆ ಮಾಡಿರುತ್ತಾನೆ

G Hareeshkumar | news18-kannada
Updated:January 16, 2020, 9:56 PM IST
ಆತ 42, ಆಕೆ 22; ಇಬ್ಬರು ಹೆಂಡಿರಿದ್ದರೂ ಮದುವೆಯಾದ ಚಪಲಿಗ; ಕೊಲೆ ಮಾಡಿ ಆ್ಯಕ್ಸಿಡೆಂಟ್ ಎಂದು ಕಥೆ ಕಟ್ಟಿದ
ಆರೋಪಿ ಸಿದ್ದರಾಜು
  • Share this:
ಚಾಮರಾಜನಗರ(ಜ. 16): ಕಳೆದ ಎಂಟು ತಿಂಗಳ ಹಿಂದೆ ನಡೆದಿದ್ದ ಅಪಘಾತ ಎಂದು ಬಿಂಬಿಸಲಾಗಿದ್ದ ಪ್ರಕರಣವೊಂದರ ನೈಜ ವಿಷಯನ್ನು ಭೇದಿಸುವಲ್ಲಿ ಚಾಮರಾಜನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

2019 ಮೇ 26ರಂದು ರಾತ್ರಿ ಚಾಮರಾಜನಗರದ ರಾಮುಸಮುದ್ರದ ರಸ್ತೆಯಲ್ಲಿ ಓರ್ವ ಯುವತಿಗೆ ಅಪಘಾತ ವಾಗಿದೆಯೆಂದು ಆಕೆಯನ್ನು ಆಟೋಚಾಲಕನೊಬ್ಬ ತನ್ನ ಆಟೋದಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಹೋಗಿದ್ದ. ಗಾಯಾಳು ಯುವತಿಯನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾಳೆ. ಇದೊಂದು ಅಪಘಾತ ಪ್ರಕರಣವೆಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ. ಪೊಲೀಸರು ಮೃತಳ ವಾರಸುದಾರರನ್ನು ಪತ್ತೆಹಚ್ಚಲು ಮುಂದಾದಾಗ ನೈಜ ವಿಷಯ ಬಯಲಿಗೆ ಬಂದಿದೆ.

ಘಟನೆ ಏನು?

ಚಾಮರಾಜನಗರ ತಾಲೂಕಿನ ಮಸಣಾಪುರದ ಮಮತಾ ಎಂಬ 22 ವರ್ಷದ ಯುವತಿಯನ್ನು ಹೊಂಗನೂರು ಗ್ರಾಮದ ಸಿದ್ದರಾಜು ಎಂಬ 42 ವರ್ಷ ವಯಸ್ಸಿನ ವಿವಾಹಿತ ವ್ಯಕ್ತಿ ಪ್ರೀತಿಸಿರುತ್ತಾನೆ. ಆದರೆ, ಮಮತಾಳಿಗೆ ಬೇರೊಬ್ಬ ಯುವಕನೊಂದಿಗೆ ನಿಶ್ಚಿತಾರ್ಥವಾಗಿರುವುದನ್ನು ತಿಳಿದ ಸಿದ್ದರಾಜು, ಆ ಯುವತಿಯನ್ನು ತಾನು ಪ್ರೀತಿಸುತ್ತಿದ್ದು ತಾನೇ ಮದುವೆಯಾಗುತ್ತೇನೆ ಎಂದು ಹೇಳುತ್ತಾನೆ. ಬಳಿಕ ಯುವತಿಯನ್ನು ಬೆಂಗಳೂರಿಗೆ ಕರೆದೊಯ್ದು ದೇವಸ್ಥಾನವೊಂದರಲ್ಲಿ ತಾಳಿಕಟ್ಟಿ ಮದುವೆಯಾಗುತ್ತಾನೆ. ನಂತರ ಆಕೆಯನ್ನು ಚಾಮರಾಜನಗರಕ್ಕೆ ಕರೆತಂದು ಗಾರ್ಮೆಂಟ್ಸ್ ಫ್ಯಾಕ್ಟರಿಯೊಂದಕ್ಕೆ ಸೇರಿಸಿರುತ್ತಾನೆ.

ಇದನ್ನೂ ಓದಿ : ಶಾಂತಿ ಕದಡೋ ದುರುದ್ದೇಶದಿಂದ ಮಾಜಿ ಶಾಸಕರಿಂದ ಪ್ರತಿಭಟನೆ ; ಸತೀಶ್ ಸೈಲ್ ವಿರುದ್ಧ ಶಾಸಕಿ ರೂಪಾಲಿ ನಾಯ್ಕ ಕಿಡಿ

ಸಿದ್ದರಾಜುಗೆ ಅದಾಗಲೇ ಇಬ್ಬರು ಹೆಂಡತಿಯರಿದ್ದ ಕಾರಣ ಮಮತಾಳ ಜೊತೆ ಹೆಚ್ಚಾಗಿ ಇರುತ್ತಿರಲಿಲ್ಲ. ಇದರಿಂದಾಗಿ ಆಗಾಗ್ಗೆ ಮಮತಾ ಮತ್ತು ಸಿದ್ದರಾಜು ನಡುವೆ ಗಲಾಟೆ ನಡೆಯುತ್ತಿರುತ್ತದೆ. ಕೊನೆಗೆ ಮಮತಾಳನ್ನು ಮುಗಿಸಲು ಸಂಚು ರೂಪಿಸಿದ ಸಿದ್ದರಾಜು, ಮಮತಾಳನ್ನು 2019 ರ ಮೇ 26 ರಂದು ತನ್ನ ಆಟೋದಲ್ಲಿ ಕೂರಿಸಿಕೊಂಡು ಹಲ್ಲೆ ನಡೆಸಿ ಆಟೋದಿಂದ ಹೊರಕ್ಕೆ ತಳ್ಳಿ ಕೊಲೆ ಮಾಡಿರುತ್ತಾನೆ. ಹಲ್ಲೆಯಿಂದ ಗಾಯಗೊಂಡ ಮಮತಾಳನ್ನು ತಾನೇ ತನ್ನ ಆಟೋದಲ್ಲಿ ಕರೆದುಕೊಂಡು ಬಂದು ಅಪಘಾತ ಎಂದು ಕಥೆ ಕಟ್ಟಿ ಆಸ್ಪತ್ರೆಗೆ ದಾಖಲಿಸಿ ಬಳಿಕ ನಾಪತ್ತೆಯಾಗಿರುತ್ತಾನೆ.

ಇದೀಗ ಬೆಂಗಳೂರಿನ ಚೋಳನಾಯ್ಕನಹಳ್ಳಿಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸಿದ್ದರಾಜುನನ್ನು ಪತ್ತೆ ಹಚ್ಚಿರುವ ಚಾಮರಾಜನಗರ ಪೊಲೀಸರು ಆತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.(ವರದಿ : ಎಸ್.ಎಂ. ನಂದೀಶ್)
First published: January 16, 2020, 9:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading