ಜಮೀರ್ ಗೆ ರಾಜಕೀಯ ನೆಲೆ ಕಲ್ಪಿಸಿ, ಮುಖ್ಯವಾಹಿನಿಗೆ ತಂದವರು HDK: ಸೈಯದ್ ಅಕ್ರಂ

ಮುಸ್ಲಿಮರಿಗೆ ಕಾಂಗ್ರೆಸ್ (Congress)ಯಾವ ಯೋಜನೆಗಳನ್ನು ಕೊಟ್ಟಿಲ್ಲ. ಬೇಕಾದರೆ ತಾವುಗಳು ನೀಡಿರುವ ಯೋಜನೆಗಳ ಆಧಾರದ ಮೇಲೆ ಮುಸ್ಲಿಮರ ಮತ (Muslim Votes) ಕೇಳಲಿ. ಜೆಡಿಎಸ್ ಗೆ ಮತ ನೀಡಿದರೆ ಬಿಜೆಪಿ (BJP) ಗೆದ್ದು ಬಿಡುತ್ತೆ ಎಂದು ಮುಸ್ಲಿಮರನ್ನು ಕಾಂಗ್ರೆಸ್ ದಿಕ್ಕು ತಪ್ಪಿಸುತ್ತಿದೆ.

ಜಮೀರ್ ಅಹ್ಮದ್

ಜಮೀರ್ ಅಹ್ಮದ್

  • Share this:
ಚಾಮರಾಜನಗರ/ವಿಜಯಪುರ: ಶಾಸಕ ಜಮೀರ್ ಅಹ್ಮದ್ ಖಾನ್ (Zameer Ahmed Khan)  ಅವರಿಗೆ ರಾಜಕೀಯ ನೆಲೆ ಕಲ್ಪಿಸಿದ್ದು ಜನತಾದಳ ಪಕ್ಷ(JDS). ನಂತರ ಅವರನ್ನು ಮುಖ್ಯ ನೆಲೆಗೆ ತಂದಿದ್ದು, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ(Former CM HD Kumaraswamy) ಎಂದು ಚಾಮರಾಜನಗರ ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸೈಯದ್ ಅಕ್ರಂ ಹೇಳಿಕೆ ನೀಡಿದ್ದಾರೆ. ಮುಸ್ಲಿಮರಿಗೆ ಕಾಂಗ್ರೆಸ್ (Congress)ಯಾವ ಯೋಜನೆಗಳನ್ನು ಕೊಟ್ಟಿಲ್ಲ. ಬೇಕಾದರೆ ತಾವುಗಳು ನೀಡಿರುವ ಯೋಜನೆಗಳ ಆಧಾರದ ಮೇಲೆ ಮುಸ್ಲಿಮರ ಮತ ಕೇಳಲಿ. ಜೆಡಿಎಸ್ ಗೆ ಮತ ನೀಡಿದರೆ ಬಿಜೆಪಿ ಗೆದ್ದು ಬಿಡುತ್ತೆ ಎಂದು ಮುಸ್ಲಿಮರನ್ನು ಕಾಂಗ್ರೆಸ್ ದಿಕ್ಕು ತಪ್ಪಿಸುತ್ತಿದೆ. ಮುಸ್ಲಿಮರನ್ನು ಕಾಂಗ್ರೆಸ್ ಕೇವಲ ಮತಬ್ಯಾಂಕ್  (Muslim Vote) ಆಗಿ ಬಳಸಿಕೊಂಡಿದೆ. ಕಾಂಗ್ರೆಸ್ ಗೆ ಈಗ ಮುಸ್ಲಿಮರ ಮತ ಕೈ ತಪ್ಪುವ ಭೀತಿ ಎದುರಾಗಿದೆ. ಹಾಗಾಗಿ ಕಾಂಗ್ರೆಸ್ ನಾಯಕರು ಹತಾಶ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಸೈಯದ್ ಅಕ್ರಂ ವಾಗ್ದಾಳಿ ನಡೆಸಿದರು.

ಟಿಪ್ಪು ಜಯಂತಿ ಮಾಡಿ ದ್ವೇಷ ಹುಟ್ಟು ಹಾಕಿದ್ದು ಕಾಂಗ್ರೆಸ್:

ಮುಸ್ಲಿಮರ ಬಗ್ಗೆ ಕಾಂಗ್ರೆಸ್ ಗೆ ನಿಜವಾದ ಕಾಳಜಿ ಇದ್ದರೆ ದೇಶ ವಿಭಜನೆ ಆಗುತ್ತಿರಲಿಲ್ಲ. ಟಿಪ್ಪುವಿನ ಬಗ್ಗೆ ಎಲ್ಲ ಧರ್ಮದವರಿಗು ಗೌರವ ಭಾವನೆ ಇತ್ತು. ಟಿಪ್ಪು ಜಯಂತಿ (Tipu Jayanti Celebration) ಮಾಡಿ ದ್ವೇಷ ಹುಟ್ಟು ಹಾಕಿದವರೇ ಕಾಂಗ್ರೆಸ್ ನಾಯಕರು ಎಂದು ಸೈಯದ್ ಅಕ್ರಂ ಆರೋಪಿಸಿದರು.

ಇದನ್ನೂ ಓದಿ: Nalin Kumar Kateel: 'ರಾಹುಲ್ ಗಾಂಧಿ ಒಬ್ಬ ಡ್ರಗ್ ಅಡಿಕ್ಟ್, ಡ್ರಗ್ ಪೆಡ್ಲರ್': ನಳಿನ್ ಕುಮಾರ್ ಕಟೀಲ್ ವಿವಾದಾತ್ಮಕ ಹೇಳಿಕೆ

ಸಿಂದಗಿಯಲ್ಲಿ ಕುಮಾರಸ್ವಾಮಿ ಪ್ರಚಾರ:

ಸಿಂದಗಿ ಉಪಚುನಾವಣೆ (Sindagi By Election) ಹಿನ್ನೆಲೆ  ಪ್ರಚಾರದಲ್ಲಿ ತೊಡಗಿಕೊಂಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಅಭ್ಯರ್ಥಿ ಪರ ಮತ ಯಾಚನೆ ಮಾಡಿದರು. ಈ ವೇಳೆ ಸಿದ್ದರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ(Former CM Siddaramaiah)ನವರಿಗೆ ನನ್ನ ಕಂಡ್ರೆ ಭಯ ಅವರಿಗೆ ನಾನ್ಯಾಕೆ ಹೆದರಲಿ. ಸಿಂದಗಿ ಕ್ಷೇತ್ರಕ್ಕೆ ನಾನು,  ದೇವೇಗೌಡರು ಅಪಾರ ಕೊಡುಗೆ ನೀಡಿದ್ದೇವೆ ಎಂದರು. ಸಿದ್ದರಾಮಯ್ಯ ಮೂರನೇ ಸ್ಥಾನದಲ್ಲಿದ್ದಾರೆ. ಕಾಂಗ್ರೆಸ್, ಬಿಜೆಪಿ ಪಕ್ಷಗಳು ಏನೇ ಅಪಪ್ರಚಾರ, ಏನೇ ಚುನಾವಣಾ ತಂತ್ರಗಾರಿಕೆ ಮಾಡಿದರೂ ನನಗೆ ಸಂಪೂರ್ಣ ವಿಶ್ವಾಸವಿದೆ ಜನರು ಜೆಡಿಎಸ್ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ. ಕಾಂಗ್ರೆಸ್ ಮೂರನೇ ಸ್ಥಾನದಲ್ಲಿರುವ ಹಿನ್ನೆಲೆಯಲ್ಲಿ ಮನಗೂಳಿಯವರನ್ನು ಕರೆದುಕೊಂಡು ಹೋಗಿ ಟಿಕೆಟ್ ನೀಡಿದ್ದಾರೆ. ಸಿಂದಗಿ ಕ್ಷೇತ್ರದ ಚುನಾವಣೆ ಬಿಜೆಪಿ, ಜೆಡಿಎಸ್ ನಡುವೆ ನಡೆಯುತ್ತಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಕಣದಲ್ಲಿ ಎಂಬಂತೆ ಮಾತನಾಡಿದರು.

ಇದನ್ನೂ ಓದಿ:  ರೇವಣ್ಣ DCM ಆಗೋದನ್ನು ಸಹಿಸದೇ ಕುಮಾರಸ್ವಾಮಿ ಅವರು BSYಗೆ ಅಧಿಕಾರ ಕೊಡಲಿಲ್ಲ: Zameer ವಾಗ್ದಾಳಿ

ಖರ್ಗೆ ಮುಸ್ಲಿಂ ಮತಗಳನ್ನ ಗುತ್ತಿಗೆ ಪಡೆದಿದ್ದಾರಾ.?

ದಿ.ಎಂ ಸಿ ಮನಗೂಳಿ(M C Manuguli)ಯವರು ಆಸ್ಪತ್ರೆಗೆ ಸೇರಿದ ನಂತರ ಹೊರಗೆ ಬಂದಿಲ್ಲ ಅವರ ಹೆಸರನ್ನು ದುರುಪಯೋಗ ಪಡೆಸಿಕೊಳ್ಳುವುದು ಸರಿಯಲ್ಲ. ಅವರ ಹೆಸರು ಬಳಸೋದು ನಮಗೂ, ಅವರಿಗೂ ಶೋಭೆ ತರುವುದಿಲ್ಲ ಎಂದರು. ಇದ ವೇಳೆ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಮುಸ್ಲಿಂ ಮತಗಳನ್ನು ಖರ್ಗೆ ಗುತ್ತಿಗೆ ಪಡೆದಿದ್ದಾರಾ.? ನಮ್ಮದು ಕೊಡುಗೆ ಇದೆ ಎಂದು ಖರ್ಗೆಗೆ ತಿರುಗೇಟು ನೀಡಿದರು. ನಮ್ಮ ಬಗ್ಗೆ ನಿರಂತರ ಅಪಪ್ರಚಾರ ಮಾಡಿದ್ದಕ್ಕಾಗಿ ಅಲ್ಪಸಂಖ್ಯಾತರು ಅಸಮಾಧಾನಿತರಾಗಿದ್ದರು. ಆದರೆ ಕಾಂಗ್ರೆಸ್ ನವರ ನಾಟಕಗಳೆಲ್ಲ ಈಗ ಮುಸ್ಲಿಂ ಸಮಾಜಕ್ಕೆ ಅರ್ಥವಾಗಿವೆ.  ಸಿಂದಗಿಯಲ್ಲಿ ವಿದ್ಯಾವಂತ ಮಹಿಳೆಗೆ ಟಿಕೆಟ್ ನೀಡಿದ್ದೇವೆ ಜನರು ಆಶೀರ್ವಾದ ಮಾಡಿ ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಮೀರ್  ವಾಗ್ದಾಳಿ

ಸಿದ್ದರಾಮಯ್ಯರನ್ನು (siddaramaiah)  ಸಮರ್ಥಿಸಿಕೊಂಡ ಜಮೀರ್​ ಅವರು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ (HD Kumaraswamy) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಜೆಡಿಎಸ್​-ಬಿಜೆಪಿ ಸಮ್ಮಿಶ್ರ ಸರ್ಕಾರ ನಡೆಸಿದ ವೇಳೆ 20 ತಿಂಗಳುಗಳ ಬಳಿಕ ಕುಮಾರಸ್ವಾಮಿ ಅವರು ಬಿ.ಎಸ್​.ಯಡಿಯೂರಪ್ಪ ಅವರಿಗೆ ಅಧಿಕಾರ ನೀಡದಿರಲು ಹೊಟ್ಟೆಕಿಚ್ಚು ಕಾರಣ. ಬಿಎಸ್​ವೈಗೆ ಅಧಿಕಾರ ಕೊಟ್ಟರೆ ರೇವಣ್ಣ ಡಿಸಿಎಂ ಆಗುತ್ತಾರೆ ಎಂಬುದನ್ನು ಸಹಿಸದೇ ಕುಮಾರಸ್ವಾಮಿ ಅಧಿಕಾರ ಹಸ್ತಾಂತರಿಸಲಿಲ್ಲ ಎಂದು ಗಂಭೀರ ಆರೋಪ ಮಾಡಿದರು.
Published by:Mahmadrafik K
First published: