HOME » NEWS » State » CHAMARAJANAGARA DC NOTICE ISSUED TO ABSENT 41 OFFICERS FOR GRAM PANCHAYAT ELECTION DUTY NCHM HK

ಚಾಮರಾಜನಗರ: ಚುನಾವಣಾ ಕರ್ತವ್ಯಕ್ಕೆ ಗೈರಾದ 41 ಅಧಿಕಾರಿಗಳಿಗೆ ನೋಟಿಸ್ ಜಾರಿ

ಮೊದಲನೆ ಹಂತದಲ್ಲಿ ಚುನಾವಣಾ ಸಂಬಂಧ ನೇಮಕವಾಗಿದ್ದವರ ಪೈಕಿ 41 ಮತಗಟ್ಟೆ ಅಧಿಕಾರಿಗಳು ಗೈರು ಹಾಜರಾಗಿದ್ದ ಹಿನ್ನಲೆಯಲ್ಲಿ ಕಾರಣ ಕೇಳಿ ಜಿಲ್ಲಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ

news18-kannada
Updated:December 23, 2020, 9:29 PM IST
ಚಾಮರಾಜನಗರ: ಚುನಾವಣಾ ಕರ್ತವ್ಯಕ್ಕೆ ಗೈರಾದ 41 ಅಧಿಕಾರಿಗಳಿಗೆ ನೋಟಿಸ್ ಜಾರಿ
ಸಾಂದರ್ಭಿಕ ಚಿತ್ರ
  • Share this:
ಚಾಮರಾಜನಗರ(ಡಿಸೆಂಬರ್. 23): ಮೊದಲನೇ ಹಂತದ ಗ್ರಾಮ ಪಂಚಾಯಿತಿ ಚುನಾವಣಾ ಕರ್ತವ್ಯಕ್ಕೆ ಗೈರು ಹಾಜರಾದ ಒಟ್ಟು 41 ಮತಗಟ್ಟೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಮೊದಲನೆ ಹಂತದಲ್ಲಿ ಚುನಾವಣಾ ಸಂಬಂಧ ನೇಮಕವಾಗಿದ್ದವರ ಪೈಕಿ 41 ಮತಗಟ್ಟೆ ಅಧಿಕಾರಿಗಳು ಗೈರು ಹಾಜರಾಗಿದ್ದ ಹಿನ್ನಲೆಯಲ್ಲಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿರುವ ಜಿಲ್ಲಾಧಿಕಾರಿ ನೋಟಿಸ್ ತಲುಪಿದ 24 ಗಂಟೆಯೊಳಗೆ ವಿವರಣೆ ನೀಡುವಂತೆ ಸೂಚಿಸಿದ್ದಾರೆ. ಚಾಮರಾಜನಗರ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿ ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡು ಗೈರುಹಾಜರಾದ ಓರ್ವ ಮತಗಟ್ಟೆ ಅಧಿಕಾರಿ, ಮೂವರು ಸಹಾಯಕ ಮತಗಟ್ಟೆಗೆ ಅಧಿಕಾರಿ ಹಾಗೂ 22 ಪೋಲಿಂಗ್ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಗುಂಡ್ಲುಪೇಟೆ ತಾಲ್ಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿ ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡು ಗೈರು ಹಾಜರಾದ ಮೂವರು ಮತಗಟ್ಟೆ ಅಧಿಕಾರಿ, ನಾಲ್ವರು ಸಹಾಯಕ ಮತಗಟ್ಟೆಗೆ ಅಧಿಕಾರಿ ಹಾಗೂ 8 ಪೋಲಿಂಗ್ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಶೇ 85.70 ರಷ್ಟು ಮತದಾನ :

ಚಾಮರಾಜನಗರ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕುಗಳ ಒಟ್ಟು 77 ಗ್ರಾಮ ಪಂಚಾಯಿತಿಗಳಿಗೆ ನಡೆದ  ಚುನಾವಣೆಯಲ್ಲಿ ಶೇ  85.70 ರಷ್ಟು ಮತದಾ‌ನವಾಗಿದೆ.

194784 ಪುರುಷರು, 199288 ಮಹಿಳೆಯರು, ಇತರರು 31 ಮಂದಿ ಸೇರಿದಂತೆ 394103 ಮತದಾರರಿದ್ದಾರೆ. ಇವರಲ್ಲಿ 169391 ಪುರುಷರು, 168349 ಮಹಿಳೆಯರು, ಇತರರು ನಾಲ್ವರು ಸೇರಿದಂತೆ ಒಟ್ಟು 337744 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಚಾಮರಾಜನಗರ ತಾಲೂಕಿನ 43 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಒಟ್ಟು 233686 ಮತದಾರರಿದ್ದು ಈ  ಪೈಕಿ 115447 ಪುರುಷ, 118220  ಮಹಿಳೆಯರು, ಇತರರು 19 ಮಂದಿ ಇದ್ದಾರೆ. ಇವರಲ್ಲಿ 98575 ಪುರುಷರು,95579 ಮಹಿಳೆಯರು, ಇತರೆ ನಾಲ್ವರು ಸೇರಿ ಒಟ್ಟು 196158 ಮತದಾರರು  ಮತ ಚಲಾಯಿಸಿದ್ದು, ಶೇಕಡ 83.94 ರಷ್ಟು ಮತದಾನವಾಗಿದೆ.

ಗುಂಡ್ಲುಪೇಟೆ ತಾಲೂಕಿನ 34 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಒಟ್ಟು 160417 ಮತದಾರರಿದ್ದು ಈ ಪೈಕಿ 79337 ಪುರುಷ, 81068 ಮಹಿಳೆಯರು, ಇತರರು 12 ಮಂದಿ ಇದ್ದಾರೆ. ಇವರಲ್ಲಿ 70816 ಪುರುಷರು, 70770 ಮಹಿಳೆಯರು ಸೇರಿದಂತೆ ಒಟ್ಟು141586 ಮಂದಿ  ಮತ ಚಲಾಯಿಸಿದ್ದು, ಶೇಕಡ 88.26 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದ್ದಾರೆ.

ಇದನ್ನೂ ಓದಿ : Vinay Guruji: ಜೈವಿಕ ಕೃಷಿ ಹೆಚ್ಚಿಸಿ, ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ ವಿನಯ್ ಗುರೂಜಿ ಮನವಿಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 28 ಮಂದಿ ಕೋವಿಡ್ ಸೋಂಕಿತರು  ಮತದಾನ ಮಾಡಿದ್ದಾರೆ. ಚಾಮರಾಜನಗರ ತಾಲೂಕಿನಲ್ಲಿ 20 ಮತ್ತು ಗುಂಡ್ಲುಪೇಟೆ ತಾಲೂಕಿನಲ್ಲಿ 8 ಮಂದಿ ಕೋವಿಡ್ ಸೋಂಕಿತರು ತಮ್ಮ ಹಕ್ಕು ಚಲಾಯಿಸಿದ್ದಾರೆ.
Youtube Video

ಕೋವಿಡ್ ಸೋಂಕಿತರಿಗಾಗಿಯೇ ಮತ ಚಲಾಯಿಸಲು ಕೊನೆಯ ಅವಧಿ ಅಂದರೆ ಸಂಜೆ 4 ಗಂಟೆಯಿಂದ 5 ಗಂಟೆಯವರೆಗೆ ವಿಶೇಷವಾಗಿ ಸಮಯ  ನಿಗಧಿ ಮಾಡಲಾಗಿತ್ತು. ಮತಗಟ್ಟೆ ಅಧಿಕಾರಿ ಸಿಬ್ಬಂದಿ ಪಿಪಿಇ ಕಿಟ್ ಧರಿಸಿ ಆರೋಗ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ನೆರವಿನೊಂದಿಗೆ ಇತರೆ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಕೋವಿಡ್ ಸೋಂಕಿತರು ಮತದಾನ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿತ್ತು.
Published by: G Hareeshkumar
First published: December 23, 2020, 9:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories