Charamarajanagara: ಮಗನ ಸಾವಿನಲ್ಲಿ ಸಾರ್ಥಕತೆ ಕಂಡ ಕುಟುಂಬ! ಐವರ ಪ್ರಾಣ ಉಳಿಸಿತು ಅಂಗಾಂಗ ದಾನ

ಮಗ ಏನೇ ಮಾಡಿದರು ಬದುಕುವುದಿಲ್ಲ ಎಂಬುದು ಗೊತ್ತಾಯಿತು, ಆತನ ಅಂಗಾಂಗಗಳು ವ್ಯರ್ಥವಾಗದೆ ಇತರರ ಪ್ರಾಣ ಉಳಿಸಲು ನೆರವಾಗಲಿ ಎಂದು ಮಗನ ಅಂಗಾಂಗ ದಾನ ಮಾಡಲು ನಿರ್ಧರಿಸಿದೆವು ಎಂದು ರಾಘವ ವರ ತಂದೆ ನೀಲಪ್ಪಸ್ವಾಮಿ ಹಾಗು ತಾಯಿ ಯಶೋದಮ್ಮ ತಿಳಿಸಿದರು.

ರಾಘವ

ರಾಘವ

  • Share this:
ಚಾಮರಾಜನಗರ ( ಆ.04)  ಮಗನ ಸಾವಿನ ದು:ಖದ  ನಡುವೆಯು ಆತನ ಅಂಗಾಂಗಗಳನ್ನು (Organ Donation) ದಾನ ಮಾಡಿ ಐವರ ಪ್ರಾಣ (Life) ಉಳಿಸುವ ಮೂಲಕ ಕುಟುಂಬವೊಂದ ಸಾರ್ಥಕತೆ ಮೆರೆದಿದೆ. ಹೌದು ಅಪಘಾತವೊಂದರಲ್ಲಿ (Accident) ಗಾಯಗೊಂಡು ಮೆದುಳು ನಿಷ್ಕ್ರಿಯವಾಗಿದ್ದ (Brain Dead) ಚಾಮರಾಜನಗರ (Chamarajanagara) ಜಿಲ್ಲೆ ಕೊಳ್ಳೇಗಾಲ ತಾಲೂಕು ಚಿಲಕವಾಡಿ ಗ್ರಾಮದ ರಾಘವ ಎಂಬ ಮೂವತ್ತನಾಲ್ಕು ವರ್ಷದ ವ್ಯಕ್ತಿಯ ಯಕೃತ್ತು, ಎರಡು ಮೂತ್ರಪಿಂಡ, ಹೃದಯಕವಾಟುಗಳು ಹಾಗು ಕಾರ್ನಿಯಾದಿಂದ  ಐವರಿಗೆ ಜೀವದಾನ ದೊರೆತಿದೆ.

ಚಾಮರಾಜನಗರ ಜಿಲ್ಲೆ ಯಳಂದೂರಿನಲ್ಲಿ ಜುಲೈ 29 ರಂದು ಬೈಕ್ ನಲ್ಲಿ ತೆರಳುತ್ತಿದ್ದ ರಾಘವ ಅವರಿಗೆ ಮತ್ತೊಂದು ಬೈಕ್‍ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಮೈಸೂರಿನ ಡಿಆರ್ ಎಂ ಎಂಬ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಿಟಿ ಸ್ಕ್ಯಾನ್ ಮಾಡಿದಾಗ ಅವರ ಮೆದುಳು ಕಾಂಡವು ಊದಿಕೊಂಡು ಪತ್ತೆ ಆಗಿತ್ತು.

ವೈದ್ಯರ ಸಲಹೆಯಂತೆ ಅಂಗಾಂದ ದಾನ

ಜೀವ ರಕ್ಷಕ ವ್ಯವಸ್ಥೆಯೊಂದಿಗೆ ಐಸಿಯುಗೆ ದಾಖಲಿಸಿ ಚಿಕಿತ್ಸೆ ಮುಂದುರಿಸಲಾಯಿತು ಆದರೆ ಆಗಸ್ಟ್ 1 ರ ಮಧ್ಯ ರಾತ್ರಿ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು. ಅವರು ಬದುಕುವುದು ಕಷ್ಟ ಎಂದು ಅರಿತ ಸಂಬಂಧಿಕರೊಬ್ಬರು  ರಾಘವ ವರ ಅಂಗಾಂಗಳನ್ನೇಕೆ ದಾನ ಮಾಡಬಾರದು ಇದರಿಂತ ಕೆಲ ಜೀವಗಳಾದರು ಉಳಿಯುತ್ತವೆ ಎಂದು ರಾಘವ ವರ ತಂದೆ ನೀಲಪ್ಪಸ್ವಾಮಿಗೆ ಸಲಹೆ ನೀಡಿದರು.

ಅಂಗಾಗ ದಾನಕ್ಕೆ ನಿರ್ಧಾರ

ಹೌದು  ತಮ್ಮ ಮಗನ ಶರೀರ ಮಣ್ಣಲ್ಲಿ ಮಣ್ಣಾಗಿ ವ್ಯರ್ಥವಾಗಿ  ಹೋಗುವ ಬದಲು ಅವಶ್ಯಕತೆ ಇರುವವರ ಪ್ರಾಣ ಉಳಿಸಲು  ನೆರವಾಗಲಿ ಎಂದು ಯೋಚಿಸಿ ಕುಟುಂಬದವರೊಂದಿಗೆ ಚರ್ಚಿಸಿದರು. ಬಳಿಕ ಮೈಸೂರಿನ ಜೀವ ಸಾರ್ಥಕತೆ ಎಂಬ ಸ್ವಯಂ ಸೇವಾಸಂಸ್ಥೆಯನ್ನು ಸಂಪರ್ಕಿಸಿ ತಮ್ಮ ನಿರ್ಧಾರ ತಿಳಿಸಿದರು.

ಇದನ್ನೂ ಓದಿ: Morning Digest: ಕೊಡಗಿನಲ್ಲಿ ಜಲಸ್ಫೋಟ, ಕೊಪ್ಪಳದಲ್ಲೊಬ್ಬ ಪಾಪಿ ಮಗ, ಚಿನ್ನದ ಬೆಲೆ ಇಳಿಕೆ; ಬೆಳಗಿನ ಟಾಪ್ ನ್ಯೂಸ್

ನಂತರ ಕುಟುಂಬ ಸದಸ್ಯರ ಒಪ್ಪಿಗೆ ಪಡೆದು ರಾಘವ ಅವರ ಅಂಗಾಂಗಗಳು ಯೋಗ್ಯವಾಗಿಯೇ ಎಂಬುದನ್ನು ಪರೀಕ್ಷೆಗಳ ಮೂಲಕ ಖಚಿತ ಪಡಿಸಿಕೊಂಡು  ರಾಘವ ಅವರ ಎರಡು ಮೂತ್ರಪಿಂಡ, ಒಂದು ಯಕೃತ್ತು, ಹೃದಯ ಕವಾಟುಗಳು ಮತ್ತು ಕಾರ್ನಿಯಾವನ್ನು ಬೇರ್ಪಡಿಸಲಾಯಿತು.  ಮೈಸೂರಿನ್ ಅಪೋಲೋ ಬಿಜಿಎಸ್ ಆಸ್ಪತ್ರೆ,  ಜೆ.ಎಸ್.ಎಸ್. ಆಸ್ಪತ್ರೆ,  ಬೆಂಗಳೂರಿನ ರಾಮಯ್ಯ ಅಸ್ಪತ್ರೆ, ಹಾಗು ಜಯದೇವ ಅಸ್ಪತ್ರೆಗಳಲ್ಲಿ ಅಗತ್ಯ ಇರುವ ಒಟ್ಟು ಐವರಿಗೆ ಈ ಅಂಗಾಂಗಳನ್ನು ಕಸಿ ಮಾಡಲಾಯಿತು.

ಕುಟುಂಬ ಹೇಳಿದ್ದೇನು?

ಮಗ ಏನೇ ಮಾಡಿದರು ಬದುಕುವುದಿಲ್ಲ ಎಂಬುದು ಗೊತ್ತಾಯಿತು, ಆತನ ಅಂಗಾಂಗಗಳು ವ್ಯರ್ಥವಾಗದೆ ಇತರರ ಪ್ರಾಣ ಉಳಿಸಲು ನೆರವಾಗಲಿ ಎಂದು ಮಗನ ಅಂಗಾಂಗ ದಾನ ಮಾಡಲು ನಿರ್ಧರಿಸಿದೆವು ಎಂದು ರಾಘವ ಅವರ ತಂದೆ ನೀಲಪ್ಪಸ್ವಾಮಿ ಹಾಗು ತಾಯಿ ಯಶೋದಮ್ಮ ತಿಳಿಸಿದರು. ಮೃತ ರಾಘವ ಅವರಿಗೆ ಪತ್ನಿ ಹಾಗು ಎರಡು ವರ್ಷದ ಹೆಣ್ಣು ಮಗು ಇದೆ. ಒಟ್ಟಾರೆ ಈ ಕುಟುಂಬ ಮಗನ ಸಾವಿನ ದುಃಖದ ನಡುವೆಯು ಆತನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದು ಇತರರಿಗೆ ಮಾದರಿಯಾಗಿದೆ.

ಇದನ್ನೂ ಓದಿ: Anekal: ಮಳೆ ಬಳಿಕ ದೊಡ್ಡ ದೊಡ್ಡ ಕಂದಕಗಳಾದ ರಸ್ತೆ ಗುಂಡಿಗಳು; ಪ್ರಾಧಿಕಾರದಿಂದ ತೇಪೆ ಹಚ್ಚುವ ಕೆಲಸ

"ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ, ಸುಟ್ಟರೆ ನೊಸಲಿಗೆ ವಿಭೂತಿಯಾದೆ, ತಟ್ಟದೇ ಹಾಕಿದರೆ ಮೇಲು ಗೊಬ್ಬರವಾದೆ, ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರಿ ಗೋವು ನಾನು".. ಎನ್ನುವ ಮೂಲಕ ಮನುಷ್ಯ   ಯಾವ ಪ್ರಯೋಜನಕ್ಕೂ ಬಾರದವ ಎಂಬರ್ಥದ ಎಂಬ ಕವಿವಾಣಿ ಇದೆ.  ಆದರೆ ಇತ್ತೀಚಿನ ವರ್ಷಗಳಲ್ಲಿ ಮನುಷ್ಯನ  ಅಂಗಾಂಗಗಳನ್ನು ದಾನ ಮಾಡಿ  ಇತರರ ಜೀವ ಉಳಿಸುವ ಕೆಲಸಗಳು ನಡೆಯುತ್ತಿವೆ. ಅಂಗಾಗ ದಾನ ಮಾಡುವವರ ಪ್ರಮಾಣವು ಹೆಚ್ಚಾಗುತ್ತಿದೆ.
Published by:Divya D
First published: