ಗಟ್ಟಿಮೇಳವಿಲ್ಲ, ಪೂಜಾರಿ ಇಲ್ಲ.. ವರನಿಗೂ ಮಾಂಗಲ್ಯಧಾರಣೆ.. ಗಮನ ಸೆಳೆದ ಅಪರೂಪದ ವಚನ ಕಲ್ಯಾಣ

ಇಲ್ಲಿ ಯಾವುದೇ ಬ್ಯಾಂಡ್ ಬಾಜಾ ಇರಲಿಲ್ಲ, ಮಂಗಳ ವಾದ್ಯವೂ ಇರಲಿಲ್ಲ. ಬಸವಾದಿ ಶರಣರ ವಚನಗಳನ್ನು ಪಠಿಸುವ ಮೂಲಕ ಈ ಮದುವೆ ನಡೆದಿದ್ದು , ಸಮಾನತೆಯ ಪ್ರತೀಕವಾಗಿ ವಧುನಿಂದ ವರನ ಕೊರಳಿಗೆ ರುದ್ರಾಕ್ಷಿ ಮಾಂಗಲ್ಯ ಧಾರಣೆ ಮಾಡಿಸಲಾಯ್ತು.

ವಚನ ಕಲ್ಯಾಣ

ವಚನ ಕಲ್ಯಾಣ

  • Share this:
ಚಾಮರಾಜನಗರ(chamarajanagar) : ಎಮ್ಮವರು ಬೆಸಗೊಂಡರೆ ಶುಭ ಲಗ್ನವೆನ್ನಿರಯ್ಯ, ರಾಶಿಕೂಟ ಋಣ ಸಂಬಂಧವುಂಟೆಂದು ಹೇಳಿರಯ್ಯ  ಚಂದ್ರಬಲ ತಾರಾಬಲ ಉಂಟೆಂದು ಹೇಳಿರಯ್ಯ ಎಂಬ ವಚನದಂತೆ (Vachana) ಗಡಿ ಜಿಲ್ಲೆಯಲ್ಲೊಂದು ಅಪರೂಪದ ವಿವಾಹ (Different Marriage) ನೆರವೇರಿದೆ. ಎಲ್ಲಾ ಶಾಸ್ತ್ರ ಗಳು, ಆಚರಣೆಗಳು,  ಕಂದಾಚಾರಗಳಿಗೆ ತಿಲಾಂಜಲಿ ನೀಡಿ ಕೇವಲ ವಚನಗಳ ಮೂಲಕವೇ ವಿವಾಹ ಮಹೋತ್ಸವ ನೆರವೇರಿಸಲಾಗಿದೆ.  ಮದುವೆ ಎಂದರೆ  ನೀರು ಹಾಕುವ ಶಾಸ್ತ್ರ, ಅರಿಶಿನ ಶಾಸ್ತ್ರ, ಧಾರಾಮಹೋತ್ಸವ, ಮಂಗಳ ವಾದ್ಯ  ಹೀಗೆ ನಾನಾ ರೀತಿಯ  ಶಾಸ್ತ್ರ ಸಂಪ್ರದಾಯಗಳು ಆಚರಣೆಗಳಿರುತ್ತವೆ. ಆದರೆ ಚಾಮರಾಜನಗರದಲ್ಲಿ ಇದಕ್ಕೆಲ್ಲ ತಿಲಾಂಜಲಿ ನೀಡಿ ಕೇವಲ ವಚನಗಳ ಮೂಲಕವೇ ವಿವಾಹ ನೆರವೇರಿಸಲಾಗಿದೆ. 

ಅಮೃತಭೂಮಿಯಲ್ಲಿ ಅಪರೂಪದ ಮದುವೆ 

ರೈತ ಚೇತನ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ಸಮಾಧಿ ಇರುವ ಚಾಮರಾಜನಗರ ತಾಲೋಕಿನ ಅಮೃತಭೂಮಿಯಲ್ಲಿ ಈ ಅಪರೂಪದ ಈ ವಚನ ಕಲ್ಯಾಣ ಮಹೋತ್ಸವ ನಡೆಯಿತು. ಚಾಮರಾಜನಗರ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ತಮ್ಮ ಮಗಳು ಶೋಭಾಳನ್ನು ಚಾಮರಾಜನಗರ ತಾಲೋಕಿನ ಮೂಕಹಳ್ಳಿಯ ಪೃಥ್ವಿ ಎಂಬ ಯುವ ರೈತನಿಗೆ ಕೊಟ್ಟು ವಚನ ಕಲ್ಯಾಣ ಮಾಡಿದ್ದಾರೆ.

ಇದನ್ನೂ ಓದಿ: ಕೊಪ್ಪಳದಲ್ಲಿ ವಿಶೇಷ ಜಾತ್ರೆ: ಮುಳ್ಳು ಕಂಟಿಗಳ ಮೇಲೆ ಜಿಗಿದು ಹರಕೆ ತೀರಿಸುವ ಭಕ್ತರು

ರುದ್ರಾಕ್ಷಿ ಮಾಂಗಲ್ಯ ಧಾರಣೆ

ಇಲ್ಲಿ ಯಾವುದೇ ಬ್ಯಾಂಡ್ ಬಾಜಾ ಇರಲಿಲ್ಲ,  ಮಂಗಳ ವಾದ್ಯವು ಇರಲಿಲ್ಲ. ಬಸವಾದಿ ಶರಣರ  ವಚನಗಳನ್ನು ಪಠಿಸುವ ಮೂಲಕ ಈ ಮದುವೆ ನಡೆದಿದ್ದು  ಸಮಾನತೆಯ ಪ್ರತೀಕವಾಗಿ ವಧುವಿನಿಂದ ವರನ ಕೊರಳಿಗೆ ರುದ್ರಾಕ್ಷಿ ಮಾಂಗಲ್ಯ ಧಾರಣೆ ಮಾಡಿಸಲಾಯ್ತು. ಬಳಿಕ ವರನಿಂದ ವಧುವಿನ ಕೊರಳಿಗೆ ಸಾಂಪ್ರದಾಯಿಕ ತಾಳಿ ಕಟ್ಟಿಸಲಾಯ್ತು. ವಚನಗಳನ್ಮು ಹೇಳುತ್ತಾ ವಧುವರರಿಗೆ ಪುಷ್ಪವೃಷ್ಠಿ ಮಾಡಿ ಬಳಿಕ ವಧುವರರಿಗೆ  ನಾನು ನಿನಗೊಲಿದೆ, ನೀನು ಎನಗೊಲಿದೆ ನೀನೆನ್ನ ನಗಲದಿಪ್ಪ, ನಾನಿನ್ನ ನಗಲದಿಪ್ಪೆನಯ್ಯಾ ಎಂಬ ಅಕ್ಕಮಹದೇವಿಯ ವಚನಪ್ರತಿಜ್ಞೆ  ಬೋಧಿಸಲಾಯ್ತು

ಪೃಥ್ವಿ-ಶೋಭಾ ದಂಪತಿ


ರಕ್ತದಾನ ಮಾಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು

ಈ ವಚನ ಕಲ್ಯಾಣಮಹೋತ್ಸವ.. ಶಾಸ್ತ್ರ ಸಂಪ್ರದಾಯಗಳಿಗೆ  ತಿಲಾಂಜಲಿ ನೀಡಿದ್ದಷ್ಟೇ ಅಲ್ಲ, ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಗಮನಸೆಳೆಯಿತು ಸ್ವತಃ ರಕ್ತದಾನ ಮಾಡಿ ಸಮಾಜಮುಖಿ ಕೆಲಸ ಮಾಡುವ  ಮೂಲಕ ಯುವ ರೈತ ಪೃಥ್ವಿ ದಾಂಪತ್ಯ ಜೀವನಕ್ಕೆ ಅಡಿಯಟ್ಟರು. ಪ್ರೊ. ಎಂ.ಡಿ.ನಂಜುಂಡಸ್ವಾಮಿ ರೈತರ ಆತ್ಮಗೌರವದ ಸಂಕೇತವಾಗಿದ್ದರು. ಅವರ ಅನುಯಾಯಿಗಳಾಗಿ, ಅಲ್ಲದೆ ಬಸವಣ್ಣನವರ ಸಿದ್ದಾಂತದ ತಳಹದಿಯ ಮೇಲೆ ಕಾರ್ಯ ನಿರ್ವಹಿಸಬೇಕು ಎಂಬ ನಿಟ್ಟಿನಲ್ಲಿ ಸಮಾಜ ಮುಖಿ ಕೆಲಸ ಮಾಡಬೇಕು ಇತರರಿಗು ಮಾದರಿಯಾಗಬೇಕೆಂಬ ಆಶಯದೊಂದಿಗೆ ರಕ್ತದಾನ ಮಾಡಿ  ವಚನಗಳ ಪ್ರತಿಜ್ಞೆ ಸ್ವೀಕರಿಸಿ  ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇನೆ ಎನ್ನುತ್ತಾರೆ ಯುವ ರೈತ ಪೃಥ್ವಿ

ವಚನ ಕಲ್ಯಾಣ ಮಾದರಿ ಆಗಬೇಕು 

ಬಸವಾದಿ ಶರಣರ ತತ್ವಗಳು ಇಂದಿನ ಕಾಲ ಘಟ್ಟಕ್ಕೆ ಹೆಚ್ಚು ಪ್ರಸ್ತುತವಾಗಿವೆ, ಶಾಸ್ತ್ರಗಳ ಅನುಸಾರ ಆಡಂಬರದ ಮದುವೆ ಮಾಡುವುದರ ಬದಲು ಪರಸ್ಪರ  ಒಪ್ಪಿ ಸರಳವಾಗಿ ಮದುವೆಯಾದರೆ ಸಾಕು, ಹಾಗಾಗಿ ಸರಳವಾಗಿ ವಚನ ಕಲ್ಯಾಣ ಮಹೋತ್ಸವ ಮಾಡಬೇಕು ಜೊತೆಗೆ ಮದುವೆಗಾಗಿ  ರೈತರು ಸಾಲಗಾರರಾಗುವುದನ್ನು  ತಪ್ಪಿಸಬೇಕು , ವಚನ ಕಲ್ಯಾಣ ಇತರರಿಗು ಮಾದರಿಯಾಗಬೇಕು ಎಂಬುದು ಉದ್ದೇಶವಾಗಿದೆ ರಂದು ವಧುವಿನ  ತಂದೆ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ತಿಳಿಸಿದರು.

ಇದನ್ನೂ ಓದಿ: ಕರ್ನಾಟಕದ ರೈತರ ಮಕ್ಕಳಿಗೆ GOOD NEWS; ರೈತ ವಿದ್ಯಾ ನಿಧಿ ಯೋಜನೆಯಲ್ಲಿ ಮಹತ್ವದ ಬದಲಾವಣೆ

ಇಲ್ಲಿ ವಚನ  ಹೇಳುವ ಮೂಲಕ ವಿವಾಹ ನೆರವೇರಿಸಿದ್ದಷ್ಡೇ ಅಲ್ಲ, ಮತ್ತೊಂದು ಸಂದೇಶ ವನ್ನು ರವಾನಿಸಲಾಯ್ತು. ರೈತರ ಮಕ್ಕಳಿಗೆ ಹೆಣ್ಣು ಕೊಡುವುದಿಲ್ಲ ಎಂಬ ಅಪವಾದ ಇದೆ.. ಆದರೆ  ರೈತನಿಗೆ ಮಗಳನ್ನು ಕೊಟ್ಟು ಮದುವೆ ಮಾಡುವ ಮೂಲಕ ಈ ಅಪವಾದ ದೂರ ಮಾಡಲು ಪ್ರಯತ್ನ ಮಾಡಲಾಗಿದೆ. ಆ  ಮೂಲಕ ರೈತ ಮಕ್ಕಳು ಯಾರಿಗೇನು ಕಮ್ಮಿ ಇಲ್ಲ ಎಂಬ ಸಂದೇಶವನ್ಮು ಈ ವೇದಿಕೆ ಮೂಲಕ  ರವಾನಿಸಲಾಯಿತು.
Published by:Kavya V
First published: