Chamarajanagar Tragedy: ಚಾಮರಾಜನಗರದ ರೋಗಿಗಳ ಸಾವಿಗೆ ಬಿಜೆಪಿ ಸರ್ಕಾರವೇ ನೇರ ಹೊಣೆ; ಸಂಸದ ಡಿ.ಕೆ. ಸುರೇಶ್ ಆರೋಪ

Chamarajanagara Hospital Tragedy: ನಮ್ಮ ಬಳಿ ಆಕ್ಸಿಜನ್ ಇಲ್ಲ ಎಂದು ಹೇಳಿದರೆ ಜನರೇ ಸಾಲ ಮಾಡಿ ಜೀವ ಉಳಿಸಿಕೊಳ್ತಾರೆ‌. ಚಾಮರಾಜನಗರದ ಸಾವುಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೇರ ಹೊಣೆ ಎಂದು ಸಂಸದ ಡಿ.ಕೆ ಸುರೇಶ್ ಆರೋಪಿಸಿದ್ದಾರೆ.

ಸಂಸದ ಡಿ.ಕೆ. ಸುರೇಶ್.

ಸಂಸದ ಡಿ.ಕೆ. ಸುರೇಶ್.

  • Share this:
    ಬೆಂಗಳೂರು (ಮೇ 3): ಚಾಮರಾಜನಗರದ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ರೋಗಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ದುರಂತದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಸಂಸದ ಡಿ.ಕೆ ಸುರೇಶ್, ಚಾಮರಾಜನಗರದ ಸಾವುಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೇರ ಹೊಣೆ ಎಂದು ಆರೋಪಿಸಿದ್ದಾರೆ.

    ಆಕ್ಸಿಜನ್ ಇಲ್ಲದೇ 24 ಜನ ಸತ್ತಿದ್ದಾರೆ ಎಂಬುದು ತಕ್ಷಣ ವರದಿ ಆದ ಪ್ರಕರಣ. ರಾಜ್ಯಾದ್ಯಂತ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಇದೆ. ಆಕ್ಸಿಜನ್ ಯಾರಿಗೆ ಕೊಡಬೇಕು, ಕೊಡಬಾರದು ಎಂಬ ಬಗ್ಗೆ ವೈದ್ಯರಲ್ಲಿ ಗೊಂದಲ ಇದೆ. ನಮ್ಮ ಬಳಿ ಆಕ್ಸಿಜನ್ ಇಲ್ಲ ಎಂದು ಹೇಳಿದರೆ ಜನರೇ ಸಾಲ ಮಾಡಿ ಜೀವ ಉಳಿಸಿಕೊಳ್ತಾರೆ‌. ಚಾಮರಾಜನಗರದ ಸಾವುಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೇರ ಹೊಣೆ. ಆರ್ ಆರ್ ನಗರದ ಆಸ್ಪತ್ರೆಯಲ್ಲಿ ಪ್ರತಿದಿನ ಏಳು ಜನರು ಸಾಯುತ್ತಿದ್ದಾರೆ. ಬೆಂಗಳೂರಿನಲ್ಲಿ ಒಂದು ಲಕ್ಷ ಸೋಂಕಿತರಿಗೆ 1 ಸಾವಿರ ಇಂಜೆಕ್ಷನ್ ಕೊಡುತ್ತಿದ್ದಾರೆ. ಸಿದ್ದಗಂಗಾ ಆಸ್ಪತ್ರೆಗೆ ಎರಡು ಇಂಜೆಕ್ಷನ್ ಕೊಟ್ಟಿದ್ದಾರೆ. ಇದು ಯಾರಿಗೆ ಸಾಕಾಗುತ್ತದೆ? ಎಂದು ಡಿ.ಕೆ. ಸುರೇಶ್ ಪ್ರಶ್ನಿಸಿದ್ದಾರೆ.

    ಇದನ್ನೂ ಓದಿ: ಸಚಿವ ಸುಧಾಕರ್​, ಚಾಮರಾಜನಗರ ಡಿಸಿ ವಿರುದ್ಧ ಸಿಎಂ ಕೆಂಡಾಮಂಡಲ; ಆರೋಗ್ಯಾಧಿಕಾರಿಗಳ ನಿರ್ಲಕ್ಷ್ಯ ಸಹಿಸಲ್ಲ ಎಂದ ಬಿಎಸ್​ವೈ

    ರಾಜ್ಯದಲ್ಲಿ 4ರಿಂದ 5 ಲಕ್ಷ ಕೊರೋನಾ ಸೋಂಕಿತರು ಇದ್ದಾರೆ. 1 ಲಕ್ಷದವರೆಗೂ ಐಸಿಯುಗೆ ಹೋದವರು ಇದ್ದಾರೆ. ಐಸಿಯುನಲ್ಲಿ ಇರೋರಿಗೆ ಆಕ್ಸಿಜನ್, ರೆಮ್ಡಿಸಿವಿಯರ್ ಕೊಡುತ್ತಿಲ್ಲ. ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಬೆಡ್ ಕೊಟ್ಟಿದ್ದೇ ದೊಡ್ಡ ಸಾಧನೆ ಎಂದು ಹೇಳುತ್ತಿದ್ದಾರೆ. ಕೋವಿಡ್ ಬಂದ ಮೊದಲ ದಿನಗಳಲ್ಲಿ ರೆಮ್ಡಿಸಿವಿಯರ್ ಕೊಟ್ಟಿದ್ದರೆ ಅನೇಕ ರೋಗಿಗಳು ಬದುಕುತ್ತಿದ್ದರು. ಆಕ್ಸಿಜನ್ ಲೆವೆಲ್ ಕಡಿಮೆ ಆದ ಬಳಿಕ ರೆಮ್ಡಿಸಿವಿಯರ್ ಕೊಡ್ತಿದ್ದಾರೆ. ಆಗ ಕೊಡುವುದರಿಂದ ಏನೂ ಪ್ರಯೋಜನವಿಲ್ಲ ಎಂದು ಸಂಸದ ಡಿ.ಕೆ. ಸುರೇಶ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ 24 ಮಂದಿ ಸಾವನ್ನಪ್ಪಿದ್ದಾರೆ. ಆಕ್ಸಿಜನ್​ ಪೂರೈಕೆಗೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ದ ಗಂಭೀರ ಆರೋಪ ಕೇಳಿ ಬಂದಿದೆ. ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೊರ ಜಿಲ್ಲೆಗಳಿಗೆ ಆಮ್ಲಜನಕ ಪೂರೈಸಲು ನಕಾರ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಕೊರೋನಾ ರೋಗಿಗಳು ಆಮ್ಲಜನಕವಿಲ್ಲದೇ ಒಂದು ರಾತ್ರಿ ಕಳೆದಿದ್ದಾರೆ. ಈವರೆಗೆ ಚಾಮರಾಜನಗರ ಜಿಲ್ಲೆಗೆ ಪ್ರತಿನಿತ್ಯ ಮೈಸೂರಿನಿಂದ ಆಮ್ಲಜನಕ ಪೂರೈಕೆಯಾಗುತ್ತಿತ್ತು. ಮೈಸೂರಿನ ಸದರನ್ ಗ್ಯಾಸ್ ಏಜೆನ್ಸಿ ಮೂಲಕ ಚಾಮರಾಜನಗರ ಜಿಲ್ಲೆಗೆ ಆಮ್ಲಜನಕವನ್ನು ಪೂರೈಸಲಾಗುತ್ತಿತ್ತು. ಆದರೆ ನಿನ್ನೆ ರಾತ್ರಿ ತಡವಾಗಿ ಆಮ್ಲಜನಕ ಬಂದ ಕಾರಣ ಕೋವಿಡ್ ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
    Published by:Sushma Chakre
    First published: