Seema.RSeema.R
|
news18-kannada Updated:February 28, 2020, 1:07 PM IST
ಮಲೆ ಮಹದೇಶ್ವರ ಸ್ವಾಮಿ ದೇವಾಲಯ
ಚಾಮರಾಜನಗರ (ಫೆ.28): ರಾಜ್ಯದಲ್ಲಿ ಅಧಿಕ ಆದಾಯ ತರುವ ದೇಗುಲ ಎಂಬ ಹೆಗ್ಗಳಿಕೆ ಹೊಂದಿದ್ದ ಮಲೆ ಮಹದೇಶ್ವರ ದೇವಾಲಯ ಈಗ ಮತ್ತೊಂದು ಹೊಸ ದಾಖಲೆ ನಿರ್ಮಿಸಿದೆ. ಶಿವರಾತ್ರಿ ಹಬ್ಬಂದು ದೇವಾಲಯದಲ್ಲಿ ಭಕ್ತರಿಗೆ ವಿತರಿಸಲಾಗಿದ್ದ ಲಾಡು ಪ್ರಸಾದದಿಂದ ದೇಗುಲಕ್ಕೆ ಕೋಟಿ ರೂ ಆದಾಯ ಗಳಿಕೆಯಾಗಿರುವುದು ವಿಶೇಷ.
ಮಲೆ ಮಹದೇಶ್ವರ ಬೆಟ್ಟದಲ್ಲಿ ಈ ಬಾರಿ ವಿಜೃಂಭಣೆಯಿಂದ ಶಿವರಾತ್ರಿ ಆಚರಣೆ ಮಾಡಲಾಗಿದೆ. ರಥೋತ್ಸವ ಸೇರಿದಂತೆ ವಿವಿಧ ಸೇವೆಗಳನ್ನು ಮಾದಪ್ಪನಿಗೆ ಭಕ್ತರು ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಭಕ್ತರಿಗೆ ತಿರುಪತಿ ಮಾದರಿ ಲಡ್ಡು ವಿತರಣೆ ಮಾಡಲು ಆಡಳಿತ ಮಂಡಳಿ ನಿರ್ಧರಿಸಿತ್ತು. ಅದರಂತೆ 6 ಲಕ್ಷದ 20 ಸಾವಿರ ಲಡ್ಡುಗಳನ್ನು ವಿತರಿಸಲಾಗಿದೆ. ಇದರಿಂದ 1 ಕೋಟಿ 50 ಸಾವಿರ ಆದಾಯ ಬಂದಿದೆ ಎಂದು ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಮಾಹಿತಿ ನೀಡಿದ್ದಾರೆ.
ಕ್ಷೇತ್ರದಲ್ಲಿ ಪ್ರತಿವರ್ಷ ಮೂರು ಬಾರಿ ರಥೋತ್ಸವ ನಡೆಯುವ ಮಾದಪ್ಪನ ಬೆಟ್ಟದಲ್ಲಿ ಲಕ್ಷಗಟ್ಟಲೆ ಲಾಡು ತಯಾರಿಸಿ ಭಕ್ತರಿಗೆ ನೀಡಲಾಗುತ್ತಿದೆ. ಈ ಬಾರಿ ವಿವಿಧ ಸೇವೆಗಳನ್ನು ಮಾಡಿಸಿದವರಿಗೆ 23,000 ಸಾವಿರ ಲಾಡುಗಳನ್ನು ಹಾಗೂ ಉತ್ಸವ ಮಾಡಿಸಿದವರಿಗೆ 65 ಸಾವಿರ ಲಾಡುಗಳನ್ನು ಪ್ರಸಾದವಾಗಿ ನೀಡಲಾಗಿದೆ ಎಂದರು.
ರಾಜ್ಯದ ಶ್ರೀಮಂತ ದೇವಾಲಯಗಳಲ್ಲಿ ಎರಡನೇ ಸ್ಥಾನದಲ್ಲಿರುವ ಮಲೆ ಮಹದೇಶ್ವರ ದೇವಾಲಯದಲ್ಲಿ ವಾರ್ಷಿಕವಾಗಿ 15ರಿಂದ 20 ಕೋಟಿ ರೂ ಹಣ ಸಂಗ್ರಹವಾಗುತ್ತದೆ. ಇದರ ಜೊತೆಗೆ ಚಿನ್ನದ ತೇರು ಎಳೆಯುವುದು, ವಿಶೇಷ ಪೂಜೆ, ಮುಡಿಸೇವೆ ಹೀಗೆ ಬೇರೆ ಬೇರೆ ರೀತಿಯಲೂ ಕೋಟ್ಯಾಂತರ ರೂಪಾಯಿ ಆದಾಯವಿದೆ.
ತಿರುಪತಿ ಮಾದರಿಯಲ್ಲಿಯೇ ರುಚಿಯಾದ ಲಾಡು ತಯಾರಿ
ಸಾಮಾನ್ಯ ದಿನಗಳ ಹೊರತಾಗಿ, ಹಬ್ಬಗಳು, ರಜಾದಿನಗಳು ಅಮಾವಸ್ಯೆ, ದೀಪಾವಳಿ, ಶಿವರಾತ್ರಿ, ಯುಗಾದಿ ಸೇರಿದಂತೆ ವಿಶೇಷ ಸಂದರ್ಭಗಳಲ್ಲಂತೂ ಇಲ್ಲಿಗೆ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಹೀಗೆ ಬರುವ ಭಕ್ತರಿಗೆ ದೇವಸ್ಥಾನದಿಂದ ಪ್ರಸಾದ ರೂಪದಲ್ಲಿ ಲಾಡು ನೀಡಲಾಗುತ್ತೆ. ಈ ಲಾಡು ತಯಾರಿಕೆಗೆಂದೆ ದೇವಸ್ಥಾನದ ಮಗ್ಗುಲಲ್ಲೇ ಅಡುಗೆ ಕೋಣೆ ನಿರ್ಮಿಸಲಾಗಿದೆ.. ಈ ಬಾರಿ ಶಿವರಾತ್ರಿ ಜಾತ್ರೆಗೆಂದು ವಿಶೇಷವಾಗಿ ಲಾಡುಗಳನ್ನು ತಯಾರು ಮಾಡಲಾಗಿತ್ತು.
ಇದನ್ನು ಓದಿ: ಬೆಂಕಿ ಬಿದ್ದ ಕೂಡಲೇ ಅಲರ್ಟ್ ಮೆಸೇಜ್; ಬೇಸಿಗೆ ಕಾಡ್ಗಿಚ್ಚು ಪರಿಸ್ಥಿತಿ ಎದುರಿಸಲು ಬಂಡೀಪುರ ಅರಣ್ಯ ಸಿಬ್ಬಂದಿಯಿಂದ ಹಲವು ಮುಂಜಾಗ್ರತಾ ಕ್ರಮದೇವಸ್ಥಾನದ 40 ಕ್ಕು ಹೆಚ್ಚು ಮಂದಿ ನೌಕರರು ಇಲ್ಲಿ ಲಾಡು ತಯಾರಿಸುತ್ತಾರೆ. ಸಕ್ಕರೆ, ಕಡ್ಲೆಹಿಟ್ಟು, ನಂದಿನಿತುಪ್ಪ, ಏಲಕ್ಕಿ ಪಚ್ಚಕರ್ಪೂರ ಕಲ್ಲು, ಸಕ್ಕರೆ, ಒಣದ್ರಾಕ್ಷಿ, ಗೋಡಂಬಿ ಹಾಗೂ ಬಾದಾಮಿಯನ್ನು ಹದವಾಗಿ ಮಿಶ್ರಣ ಮಾಡಿ ತಿರುಪತಿ ಮಾದರಿಯಲ್ಲಿ ರುಚಿಯಾಗಿ ಲಾಡು ತಯಾರಿಸಲಾಗುತ್ತಿದೆ. ಪ್ರತಿ ಲಾಡು 100 ಗ್ರಾಮ ತೂಕವಿರುವಂತೆ ನೋಡಿಕೊಳ್ಳಲಾಗುತ್ತಿದೆ. ಲಾಡು ವಿತರಣೆಗೆಂದೆ ವಿಶೇಷ ಕೌಂಟರ್ ಗಳನ್ನು ತೆರೆಯಲಾಗಿದ್ದು 20 ರೂಪಾಯಿಗೆ ಒಂದರಂತೆ ನೀಡಲಾಗುತ್ತದೆ. ಶುಚಿ ರುಚಿಯಾಗಿರುವ ಈ ಲಾಡು ಪ್ರಸಾದಕ್ಕೆ ಭಾರೀ ಬೇಡಿಕೆ ಇದೆ.
(ವರದಿ: ಎಸ್.ಎಂ.ನಂದೀಶ್)
First published:
February 28, 2020, 1:07 PM IST