HOME » NEWS » State » CHAMARAJANAGAR IN CHARGE MINISTER SURESH KUMAR SAYS 24 PEOPLE DIED NOT FROM LACK OF OXYGEN LG

Chamarajanagar: 24 ಜನರು ಆಕ್ಸಿಜನ್​ ಕೊರತೆಯಿಂದ ಸಾವನ್ನಪ್ಪಿಲ್ಲ; ವೈದ್ಯರಿಂದ ಡೆತ್ ರಿಪೋರ್ಟ್​ ಕೇಳಿದ್ದೇನೆ; ಸಚಿವ ಸುರೇಶ್ ಕುಮಾರ್​

ಮೈಸೂರಿನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಿರಬಹುದು. ಆದ್ರೆ, ಕೊಡಗು, ಚಾಮರಾಜನಗರ ಜಿಲ್ಲೆಗೆ ಬೇಕಾದ ಆಕ್ಸಿಜನ್ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.

news18-kannada
Updated:May 3, 2021, 11:49 AM IST
Chamarajanagar: 24 ಜನರು ಆಕ್ಸಿಜನ್​ ಕೊರತೆಯಿಂದ ಸಾವನ್ನಪ್ಪಿಲ್ಲ; ವೈದ್ಯರಿಂದ ಡೆತ್ ರಿಪೋರ್ಟ್​ ಕೇಳಿದ್ದೇನೆ; ಸಚಿವ ಸುರೇಶ್ ಕುಮಾರ್​
ಸಚಿವ ಸುರೇಶ್​ ಕುಮಾರ್
  • Share this:
 ಬೆಂಗಳೂರು(ಮೇ 03): ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದಾಗಿ 24 ಮಂದಿ ಸಾವನ್ನಪ್ಪಿರುವ ವಿಚಾರವಾಗಿ ಉಸ್ತುವಾರಿ ಸಚಿವ ಎಸ್​.ಸುರೇಶ್​ ಕುಮಾರ್​ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ್ದಾರೆ. 24 ಮಂದಿ ಆಕ್ಸಿಜನ್ ಕೊರತೆಯಿಂದಾಗಿ ಸಾವನ್ನಪ್ಪಿಲ್ಲ ಎಂದು ಸಚಿವರು ಹೇಳುತ್ತಿದ್ದಾರೆ. ಆ ಮೂಲಕ ಆಕ್ಸಿಜನ್ ಕೊರತೆಯಿಂದಲೇ ಮೃತಪಟ್ಟಿದ್ದಾರೆಂಬ ವಿಷಯವನ್ನು ತಳ್ಳಿಹಾಕುವ ಕೆಲಸ ಮಾಡಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ 24 ಸಾವು ಸಂಭವಿಸಿವೆ. ಈ ಸಾವುಗಳನ್ನ ಸಂಖ್ಯೆಯ ದೃಷ್ಟಿಯಲ್ಲಿ ನಾವು ನೋಡಲ್ಲ. ಒಂದು ಸಾವಾದರೂ ನಮಗೆ ದುಃಖದ ಸಂಗತಿ. 24 ಸಾವುಗಳು ಆಮ್ಲಜನಕ ಕೊರತೆಯಿಂದ ಆಗಿದೆ ಅನ್ನೋದು ಸರಿಯಲ್ಲ. ಆಮ್ಲಜನಕ ಕೊರತೆ ಆಗಿರುವುದು ರಾತ್ರಿ 12.30 ನಂತರ. ನಿನ್ನೆ ಮಧ್ಯರಾತ್ರಿ ಆಸ್ಪತ್ರೆಯಲ್ಲಿ ಆಕ್ಸಿಜನ್​ ಸಮಸ್ಯೆ ಆಗಿತ್ತು.  ಆದ್ರೆ ಎಲ್ಲರೂ ಆಕ್ಸಿಜನ್ ಸಮಸ್ಯೆಯಿಂದ ಸಾವನ್ನಪ್ಪಿಲ್ಲ. ಬೇರೆ ಬೇರೆ ರೋಗಗಳ ಸಮಸ್ಯೆ ಇತ್ತು ಎಂದು ಹೇಳಿದ್ದಾರೆ.

ಸರಿಯಾದ ಸಮಯಕ್ಕೆ ಆಕ್ಸಿಜನ್ ಪೂರೈಕೆ ಆಗದೆ ಈ ದುರಂತ ಸಂಭವಿಸಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ವೈದ್ಯರಿಂದ ಡೆತ್​ ರಿಪೋರ್ಟ್​ ಕೇಳಿದ್ದೇನೆ. ಯಾವ ಕಾರಣಕ್ಕೆ ಮೃತಪಟ್ಟಿದ್ದಾರೆಂದು ಕೇಳಿದ್ದೇನೆ ಎಂದರು.

ಕೊರೋನಾ ‌ನಿಯಂತ್ರಿಸಲು ಮತ್ತೆ ಲಾಕ್​ಡೌನ್​ ಮಾಡಲೇಬೇಕಾಗುತ್ತಾ?; ಕೇಂದ್ರಕ್ಕೆ ಸುಪ್ರೀಂ ಹೇಳಿದ್ದೇನು?

ಕೊನೆಯ ಕ್ಷಣದಲ್ಲಿ ಆಸ್ಪತ್ರೆಗೆ ಬರಬೇಡಿ, ಸಮಸ್ಯೆ ಬಂದ ಕೂಡಲೇ ಆಸ್ಪತ್ರೆಗೆ ಬನ್ನಿ. ಆಗ ಜೀವ ಉಳಿಯಬಹುದು ಎಂದು ಸಚಿವರು ಜನರಿಗೆ ಹೇಳಿದ್ದಾರೆ.

ಈ ಬಗ್ಗೆ ಸ್ಪಷ್ಟವಾದ ವರದಿ ಕೇಳಿದ್ದೇನೆ. ಆಕ್ಸಿಜನ್ ಕೊರತೆಯಾಗಿದೆ ಎಂದು ರಾತ್ರಿ ಗೊತ್ತಾದ ತಕ್ಷಣ ಆಕ್ಸಿಜನ್ ತರುವ ಪ್ರಯತ್ನವನ್ನು ಜಿಲ್ಲಾಡಳಿತ ಮಾಡಿದೆ. ಆಕ್ಸಿಜನ್ ಕೊರತೆಯ ಪ್ರಕರಣವನ್ನು ರಾಜ್ಯ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ  ತಂದಿದ್ದೇನೆ. ಮೈಸೂರಿನಲ್ಲೂ ಆಕ್ಸಿಜನ್ ಕೊರತೆ ಇದೆ. ಆದರೆ ಚಾಮರಾಜನಗರ ಜಿಲ್ಲೆಗೆ ಬರಬೇಕಾದ ಆಕ್ಸಿಜನ್​ನಲ್ಲಿ ಕೊರತೆಯಾಗಬಾರದು ಎಂದು ಹೇಳಿದರು.

ಇವತ್ತು ಮಧ್ಯಾಹ್ನದ ಒಳಗೆ ಆಕ್ಸಿಜನ್ ಕೊರತೆ ಸರಿಪಡಿಸುವ ಭರವಸೆಯನ್ನ ಅಧಿಕಾರಿಗಳು ನೀಡಿದ್ದಾರೆ. ನನಗಿರುವ ಮಾಹಿತಿ ಪ್ರಕಾರ, ಮೈಸೂರಿನಲ್ಲಿ ಅವಶ್ಯಕ ಆಕ್ಸಿಜನ್ ಇದೆ. ಆದ್ರೆ ಅದು ವಿತರಣೆ ಆಗುವುದರಲ್ಲಿ ತೊಂದರೆ ಆಗ್ತಿದೆಯಾ? ಎನಿಸುತ್ತಿದೆ. ಮೈಸೂರಿನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಿರಬಹುದು. ಆದ್ರೆ, ಕೊಡಗು, ಚಾಮರಾಜನಗರ ಜಿಲ್ಲೆಗೆ ಬೇಕಾದ ಆಕ್ಸಿಜನ್ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು. ಆ ಮೂಲಕ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮೇಲೆ ಆಕ್ಸಿಜನ್​ ಪೂರೈಕೆ ಮಾಡಿಲ್ಲ ಎಂಬ ಆರೋಪವನ್ನು ಮಾಡಿದರು.
Youtube Video

ಆಕ್ಸಿಜನ್ ವಿತರಣೆಗೆ ಯಾರು ಅಡ್ಡಿಪಡಿಸಿದ್ದಾರೆ ಎಂಬ ಬಗ್ಗೆ ಮುಖ್ಯಕಾರ್ಯದರ್ಶಿಗಳು ಸಭೆ ನಡೆಸಿ ಕ್ರಮ ಕೈಗೊಳ್ತಾರೆ.  ಮೈಸೂರಲ್ಲಿ ಆಕ್ಸಿಜನ್ ಕೊರತೆ ಇಲ್ಲ. ಇದು ನನ್ನ ಗಮನಕ್ಕೆ ಇದೆ. ಮುಖ್ಯಕಾರ್ಯದರ್ಶಿಗಳು ಮೈಸೂರು ಡಿ.ಸಿ, ಚಾಮರಾಜನಗರ ಡಿಸಿ ಜೊತೆ ಚರ್ಚೆ ನಡೆಸುತ್ತಾರೆ. ಈ ಬಗ್ಗೆ ನಾನು ಮುಖ್ಯ ಕಾರ್ಯದರ್ಶಿಗಳ ಜೊತೆ ಮಾತಾಡಿದ್ದೇನೆ. ಚಾಮರಾಜನಗರಕ್ಕೆ ಹೋಗಿ ಡೆತ್ ಆಡಿಟ್ ರಿಪೋರ್ಟ್ ನೋಡಿ ಸೂಕ್ತ ತನಿಖೆಗೆ ವಹಿಸುತ್ತೇನೆ ಎಂದು ಹೇಳಿದರು.
Published by: Latha CG
First published: May 3, 2021, 11:29 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories