HOME » NEWS » State » CHAMARAJANAGAR HANURU GRAMAPANCHAYAT MEMBERS PROMISE DRAMA SESR NCHM

ಗ್ರಾಪಂ ಸದಸ್ಯರಿಗೆ  ಕಂತೆ ಕಂತೆ ಹಣ: ಮೈತ್ರಿಧರ್ಮ ಪಾಲನೆಗೆ ಧರ್ಮಸ್ಥಳದಲಿ ಆಣೆ ಪ್ರಮಾಣ

ಬಿಜೆಪಿ ಜೆಡಿಎಸ್​ ಸದಸ್ಯರು ಪರಸ್ಪರ ನಂಬಿಕೆ ಇಲ್ಲದೆ ಮೈತ್ರಿಧರ್ಮ ಪಾಲನೆಗಾಗಿ ಧರ್ಮಸ್ಥಳಕ್ಕೆ  ಹೋಗಿ ಮಂಜುನಾಥನ ಸನ್ನಿಧಿಯಲ್ಲಿ ಕರ್ಪೂರ ಹಚ್ಚಿ ನುಡಿದಂತೆ ನಡೆಯುತ್ತೇವೆಂದು ಆಣೆ ಪ್ರಮಾಣ ಮಾಡಿದ್ದಾರೆ

news18-kannada
Updated:January 27, 2021, 5:27 PM IST
ಗ್ರಾಪಂ ಸದಸ್ಯರಿಗೆ  ಕಂತೆ ಕಂತೆ ಹಣ: ಮೈತ್ರಿಧರ್ಮ ಪಾಲನೆಗೆ ಧರ್ಮಸ್ಥಳದಲಿ ಆಣೆ ಪ್ರಮಾಣ
ಅಣೆ ಮಾಡುತ್ತಿರುವುದು
  • Share this:
ಚಾಮರಾಜನಗರ ( ಜ. 27) :  ಜಿಲ್ಲೆಯಲ್ಲಿ ಗ್ರಾಮಪಂಚಾಯ್ತಿ ಅಧಿಕಾರ ಹಿಡಿಯಲು ಆಣೆ ಪ್ರಮಾಣ ಮಾಡಿದ್ದು ಆಯ್ತು ಈಗ ಝಣಝಣ ಕಾಂಚಾಣದ ಸದ್ದು ಕೇಳಿಬರುತ್ತಿದೆ ಪ್ರಮುಖ ಜೆಡಿಎಸ್ ಮುಖಂಡರೊಬ್ಬರು ಗ್ರಾಮ ಪಂಚಾಯತಿ ಸದಸ್ಯರಿಗೆ ಕಂತೆ ಕಂತೆ ಹಣ ನೀಡುತ್ತಿರುವ ಫೋಟೋಗಳು  ಇದೀಗ ವೈರಲ್ ಆಗಿವೆ.  ಜಿಲ್ಲೆಯ ಹನೂರು ತಾಲೂಕಿನ ಕೌದಳ್ಳಿ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಹನೂರು ವಿಧಾನಸಭಾ ಕ್ಷೇತ್ರದ ಪರಾಜಿತ  ಅಭ್ಯರ್ಥಿ ಜೆ.ಡಿ.ಎಸ್  ಮುಖಂಡ ಮಂಜುನಾಥ್ ಕಂತೆ ಕಂತೆ ಹಣವನ್ನು ಎಲೆ ಅಡಿಕೆ ಜೊತೆ ಇಟ್ಟು ನೀಡುತ್ತಿರುವುದು ಫೋಟೋಗಳಲ್ಲಿ ಕಂಡು ಬಂದಿದೆ. ಹನೂರು ತಾಲೋಕಿ ಕೌದಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಒಟ್ಟು 23 ಸದಸ್ಯ ಬಲವಿದ್ದು  ಕಾಂಗ್ರೆಸ್ ಬೆಂಬಲಿತರು 15 ಸ್ಥಾನಗಳಲ್ಲಿ ಗೆದು ಬಹುಮತ ಸಾಧಿಸಿದ್ದಾರೆ. ಬಿಜೆಪಿ 6 ಹಾಗು  ಜೆಡಿಎಸ್ ಬೆಂಬಲಿತರು 2 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ. ಅಧಿಕಾರದ ಚುಕ್ಕಾಣಿ ಹಿಡಿಯಲು  ಜೆಡಿಎಸ್ ಹಾಗೂ  ಬಿಜೆಪಿ ಬೆಂಬಲಿತರು  ಮೈತ್ರಿ ಕೂಟ ರಚಿಸಿಕೊಂಡಿದ್ದಾರೆ. ಈ ಮೈತ್ರಿಗೆ ಕಾಂಗ್ರೆಸ್‌ ಬೆಂಬಲಿತರನ್ನು ಸೆಳೆಯಲು ಕಸರತ್ತು ನಡೆಸಲಾಗಿದ್ದು ಕೌದಳ್ಳಿ ಗ್ರಾಮದ ಹುಚ್ಚಪ್ಪ ದೇವಾಲಯದ ಮುಂದೆ ಕೆಲವು ಗ್ರಾಮಪಂಚಾಯ್ತಿ ಸದಸ್ಯರನ್ನು ಕರೆಸಿ  ಜೆಡಿಎಸ್ ಮುಖಂಡ ಮಂಜುನಾಥ್ ಎಲೆ ಅಡಿಕೆಯೊಂದಿಗೆ ಕಂತೆ ಕಂತೆ ಹಣ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ

 ಮೈತ್ರಿಧರ್ಮ ಪಾಲನೆಗೆ  ಧರ್ಮಸ್ಥಳದಲ್ಲಿ ಆಣೆಪ್ರಮಾಣ

ಇನ್ನೊಂದೆಡೆ ಕೆಲದಿನಗಳ ಹಿಂದೆ  ಗ್ರಾಮ ಪಂಚಾಯತಿ ಅಧಿಕಾರ ಹಂಚಿಕೆಗೂ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿರುವ ಘಟನೆ ನಡೆದಿದೆ.

ಹನೂರು ತಾಲೂಕಿನ ಕಣ್ಣೂರು ಗ್ರಾಮ ಪಂಚಾಯಿತಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಹಾಗೂ  ಜೆಡಿಎಸ್ ಬೆಂಬಲಿತ ಸದಸ್ಯರು ಪರಸ್ಪರ ಒಪ್ಪಂದ ಮಾಡಿಕೊಂಡು  ಮೈತ್ರಿಕೂಟ  ರಚಿಸಿ ಕೊಂಡಿದ್ದಾರೆ. ಅಧ್ಯಕ್ಷ ಸ್ಥಾನ ಮೊದಲ ಅವಧಿ 10 ತಿಂಗಳು ಜೆಡಿಎಸ್ ಬೆಂಬಲಿತರಿಗೆ, ಎರಡನೇ ಅವಧಿಗೆ ಬಿಜೆಪಿ ಬೆಂಬಲಿತರಿಗೆ ನೀಡಲು ಹಾಗೂ ಉಪಾಧ್ಯಕ್ಷ ಸ್ಥಾನ ಮೊದಲ 10 ತಿಂಗಳು ಬಿಜೆಪಿ ಬೆಂಬಲಿತರಿಗೆಎರಡನೇ ಅವಧಿಗೆ ಜೆಡಿಎಸ್ ಬೆಂಬಲಿತರಿಗೆಂದು ಒಪ್ಪಂದ ಮಾಡಿಕೊಂಡಿದ್ದಾರೆ‌. ಆದರೆ, ಪರಸ್ಪರ ನಂಬಿಕೆ ಇಲ್ಲದೆ ಮೈತ್ರಿಧರ್ಮ ಪಾಲನೆಗಾಗಿ ಧರ್ಮಸ್ಥಳಕ್ಕೆ  ಹೋಗಿ ಮಂಜುನಾಥನ ಸನ್ನಿಧಿಯಲ್ಲಿ ಕರ್ಪೂರ ಹಚ್ಚಿ ನುಡಿದಂತೆ ನಡೆಯುತ್ತೇವೆಂದು ಆಣೆ ಪ್ರಮಾಣ ಮಾಡಿದ್ದಾರೆ

ಇದನ್ನು ಓದಿ: ಅಕ್ರಮ ಕಲ್ಲುಗಣಿಗಾರಿಕೆ ನಡೆಸಿದ್ರೆ ಎಫ್ಐಆರ್; ಕಠಿಣ ಕ್ರಮಕ್ಕೆ ಮುಂದಾದ ಯಾದಗಿರಿ ಜಿಲ್ಲಾಧಿಕಾರಿ

ಈ ಆಣೆ ಪ್ರಮಾಣದ ವಿಡಿಯೋ ಸಹ  ವೈರಲ್ ಆಗಿದ್ದು ಭಾರೀ ಟೀಕೆಗೆ ಗುರಿಯಾಗಿದೆ.ಇದು ಪ್ರಜಾಪ್ರಭುತ್ವಕ್ಕೆ ಮಾರಕ ಬೆಳವಣಿಗೆಯಾಗಿದೆ ಈ ಬಗ್ಗೆ ಕ್ರಮ ವಹಿಸಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಹನೂರು ಶಾಸಕ ಆರ್.ನರೇಂದ್ರ ಹೇಳಿದ್ದಾರೆ

ಗ್ರಾಮ ಪಂಚಾಯತಿ ಚುನಾವಣೆ ಪಕ್ಷಾತೀತವಾಗಿ ನಡೆದಿರುತ್ತವೆ, ಆದರೆ ಕಾಂಗ್ರೆಸ್, ಬಿಜೆಪಿ ಬೆಂಬಲಿತ ಸದಸ್ಯರಿಗೆ ಜೆಡಿಎಸ್  ಮುಖಂಡರು ಹಣ  ನೀಡುತ್ತಿರುವ  ಫೋಟೋಗಳು ಹಾಗು ಆಣೆಪ್ರಮಾಣ ಮಾಡಿರುವ ವಿಡಿಯೋ ವೈರಲ್ ಆಗಿದೆ ವಾಮ ಮಾರ್ಗದಲ್ಲಿ ಜೆಡಿಎಸ್ ಮುಖಂಡರು ಅಧಿಕಾರ ಹಿಡಿಯಲು ಮುಂದಾಗಿದ್ದಾರೆ ಈ ಬಗ್ಗೆ ಚುನಾವಣಾ ಆಯುಕ್ತರು ಕ್ರಮ ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ(ವರದಿ: ಎಸ್.ಎಂ.ನಂದೀಶ್ )
Published by: Seema R
First published: January 27, 2021, 5:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories