Marriage: ನಮ್ಮ ಮದುವೆಗೆ ಬರಲೇಬೇಡಿ ಅಂತ ಆಮಂತ್ರಣ ಪತ್ರಿಕೆ ಮುದ್ರಿಸಿದ ಚಾಮರಾಜನಗರದ ಜೋಡಿ
ChamarajaNagar Couple: ಕೊರೋನಾ ಮೂರನೇ ಅಲೆ ರಾಜ್ಯದಲ್ಲಿ ಅಬ್ಬರ ಮಾಡುವುದಕ್ಕೂ ಮುಂಚೆಯೇ ಚಾಮರಾಜನಗರದ ಜೋಡಿಯೊಂದು ಅದ್ದೂರಿಯಾಗಿ ಮದುವೆಮಾಡಿಕೊಳ್ಳಲು ನಿಶ್ಚಯ ಮಾಡಿಕೊಂಡಿತ್ತು.. ಹೀಗಾಗಿ ಮದುವೆ ಆಮಂತ್ರಣ ಪತ್ರಿಕೆಯನ್ನು ಮುದ್ರಣ ಮಾಡಿ ನೆಂಟರಿಷ್ಟರೂ ಬಂಧುಬಳಗದವರು ಎಲ್ಲರಿಗೂ ಹಂಚಿಕೆ ಮಾಡಲಾಗಿತ್ತು
ಕೊರೊನಾ(Corona) ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ.. ಈಗಾಗಲೇ ಸೋಂಕು ನಿಯಂತ್ರಣ ಮಾಡಲು ರಾಜ್ಯ ಸರ್ಕಾರ(State Government) ಹಾಗೂ ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ರು ಸೋಂಕು ನಿಯಂತ್ರಣಕ್ಕೆ ಬಾರದೆ ನಾಗಾಲೋಟ ಮುಂದುವರೆಸಿದೆ. ಪ್ರತಿನಿತ್ಯ ರಾಜ್ಯದಲ್ಲಿ ಅರ್ಧ ಲಕ್ಷ ಸಮೀಪದ ಕೊರೋನಾ ಪ್ರಕರಣಗಳು(Corona Case) ಪತ್ತೆಯಾಗಿವೆ.. ಹೀಗಾಗಿ ಹಲವಾರು ಕಾರ್ಯಕ್ರಮಗಳಿಗೂ(Programs) ಅಡಚಣೆ ಉಂಟಾಗಿದೆ.. ಅದರಲ್ಲೂ ವೈವಾಹಿಕ(Marriage) ಜೀವನಕ್ಕೆ ಕಾಲಿಡಬೇಕು ಎಂದುಕೊಂಡಿದ್ದ ಅನೇಕರ ಬದುಕಿಗೆ(Life) ಕೊರೋನಾ ಅಡಚಣೆಯ ತಂದಿದೆ.. ಹೀಗಾಗಿ ಕೆಲವರು ಸರಳವಾಗಿ ವಿವಾಹವಾದರೆ ಇನ್ನೂ ಕೆಲವರು ಆನ್ಲೈನ್(Online) ಮೂಲಕ ಮದುವೆಯಾಗುತ್ತಿದ್ದಾರೆ.
ನೆಂಟರಿಷ್ಟರು ಬಂಧು-ಬಳಗ ದವರನ್ನು ಸೇರಿಸಲು ಹೆಚ್ಚಿನ ಜನರು ಆನ್ಲೈನ್ ಮೂಲಕ ಮದುವೆಯಾಗುತ್ತಿದ್ದಾರೆ.. ಇನ್ನು ಕೆಲವರು ತಮ್ಮ ಮದುವೆ ದಿನಾಂಕ ಮುಂದೂಡಿ ಸೋಂಕು ನಿಯಂತ್ರಣಕ್ಕೆ ಬಂದಾಗ ಮದುವೆಯಾದರೆ ಆಯಿತು ಎಂದು ಸುಮ್ಮನೆ ಆಗಿದ್ದಾರೆ..ಆದ್ರೆ ಚಾಮರಾಜನಗರದಲ್ಲಿ ಜೋಡಿಯೊಂದು ತಮ್ಮ ಮದುವೆಯನ್ನು ನಿಶ್ಚಯಿಸಿದ ದಿನಾಂಕದಲ್ಲಿ ಆಗಲು ತೀರ್ಮಾನ ಮಾಡಿ ವಿವಿಧ ಕ್ರಮಕ್ಕೆ ಮುಂದಾಗಿದೆ. ಅಲ್ಲದೇ ಇದಕ್ಕಾಗಿ ಹೊಸ ಆಮಂತ್ರಣ ಪತ್ರಿಕೆಯನ್ನು ಈ ಜೋಡಿ ಮುದ್ರಣ ಮಾಡಿ ಬಂಧುಬಳಗದವರಿಗೆ ಹಂಚಿದೆ
ಮದುವೆಗೆ ಬರದೇ ಇರುವ ಸ್ಥಳದಿಂದಲೇ ಆಶೀರ್ವದಿಸಿ ಎಂದು ವಧು ವರರ ಮನವಿ
ಕೊರೋನಾ ಮೂರನೇ ಅಲೆ ರಾಜ್ಯದಲ್ಲಿ ಅಬ್ಬರ ಮಾಡುವುದಕ್ಕೂ ಮುಂಚೆಯೇ ಚಾಮರಾಜನಗರದ ಜೋಡಿಯೊಂದು ಅದ್ದೂರಿಯಾಗಿ ಮದುವೆಮಾಡಿಕೊಳ್ಳಲು ನಿಶ್ಚಯ ಮಾಡಿಕೊಂಡಿತ್ತು.. ಹೀಗಾಗಿ ಮದುವೆ ಆಮಂತ್ರಣ ಪತ್ರಿಕೆಯನ್ನು ಮುದ್ರಣ ಮಾಡಿ ನೆಂಟರಿಷ್ಟರೂ ಬಂಧುಬಳಗದವರು ಎಲ್ಲರಿಗೂ ಹಂಚಿಕೆ ಮಾಡಲಾಗಿತ್ತು.. ಅಂದುಕೊಂಡಂತೆಯೇ ಎಲ್ಲವೂ ಆಗಿದ್ದರೆ ಜನವರಿ 22 ಹಾಗೂ ಜನವರಿ 23ರಂದು ಚಾಮರಾಜನಗರದ ಚನ್ನಪ್ಪನಪುರದ ಶ್ರೇಯಸ್, ವಿ.ಸಿ.ಹೊಸೂರಿನ ಸುಷ್ಮಾ ಅದ್ದೂರಿಯಾಗಿ ಬಂಧು-ಬಳಗದವರ ಸಮ್ಮುಖದಲ್ಲಿ ಮದುವೆ ಬಂಧನಕ್ಕೆ ಕಾಲಿಡಬೇಕಾಗಿತ್ತು...
ಆದರೆ ಜನವರಿ ಮೊದಲ ವಾರದಿಂದ ರಾಜ್ಯದಲ್ಲಿ ಸೋಂಕಿನ ಅಬ್ಬರ ಅಧಿಕವಾದ ಹಿನ್ನೆಲೆ ಚಾಮರಾಜನಗರ ಜಿಲ್ಲಾಡಳಿತ ಹಲವಾರು ನಿರ್ಬಂಧಗಳನ್ನು ಹೇರಿದೆ.. ಹೀಗಾಗಿ ಸುಷ್ಮಾ ಹಾಗೂ ಶ್ರೇಯಸ್ ತಮ್ಮ ಮದುವೆ ದಿನಾಂಕ ಮುಂದೂಡಿಕೆ ಮಾಡದೆ ಸರಳವಾಗಿ ಮದುವೆಯಾಗಲು ತೀರ್ಮಾನ ಮಾಡಿದ್ದಾರೆ.ಹೀಗಾಗಿ ಇರುವ ಸ್ಥಳದಿಂದಲೇ ನಮ್ಮನ್ನು ಆಶೀರ್ವದಿಸಿ ಎಂದು ನೆಂಟರಿಷ್ಟರು ಹಾಗೂ ಬಂಧು ಬಳಗದವರಿಗೆ ಬೇಡಿಕೆ ಇಟ್ಟಿದ್ದಾರೆ.
ಕೊರೊನಾ ಪ್ರಕರಣ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಮದುವೆಗೆ ಬಾರದಂತೆ ಮತ್ತೊಂದು ಆಮಂತ್ರಣ ಪತ್ರ ಕಳಿಸಿ ತಾವು ಇರುವ ಜಾಗದಲ್ಲಿ ನಮ್ಮನ್ನು ಆಶೀರ್ವದಿಸಿ.. ಕೊರೋನಾ ಪ್ರಕರಣ ಅಧಿಕವಾಗುತ್ತಿದೆ.
ಕೊರೋನಾ ನಿಯಮಪಾಲನೆ ಮಾಡಬೇಕಿದೆ ಎಂದು ಈಗಾಗಲೇ ಲಗ್ನಪತ್ರಿಕೆ ಹಂಚಿದವರಿಗೆ ಮತ್ತೊಂದು ಆಮಂತ್ರಣ ಪತ್ರಿಕೆಯಲ್ಲಿ ಎರಡು ಕುಟುಂಬದ ಜನರು ಬೇಡಿಕೊಂಡಿದ್ದಾರೆ.
ಸದ್ಯ ಮದುವೆ ಕಾರ್ಯಕ್ರಮಗಳಿಗೂ ಹಲವಾರು ನಿರ್ಬಂಧಗಳು ಇರುವ ಹಿನ್ನೆಲೆಯಲ್ಲಿ ಹೆಚ್ಚು ಜನರು ಕೋರೋನಾಸ್ಫೋಟ ವಾಗುವ ಭೀತಿ ಹಿನ್ನೆಲೆ ಸುಷ್ಮಾ ಹಾಗೂ ಶ್ರೇಯಸ್ ಕುಟುಂಬ ಸರಳವಾಗಿ ಮದುವೆ ಮಾಡಲು ತೀರ್ಮಾನ ತೆಗೆದುಕೊಂಡಿದೆ.. ಹೆಚ್ಚು ಜನರನ್ನು ಸೇರಿಸಬೇಕು ಸರಳವಾಗಿ ಮದುವೆಯಾಗಲು ಸುಷ್ಮಾ ಹಾಗೂ ಶ್ರೇಯಸ್ ನಿರ್ಧಾರ ಮಾಡಿಕೊಂಡಿದ್ದು ಮದುವೆಯಲ್ಲಿ ಕೇವಲ ಎರಡು ಕುಟುಂಬಗಳ ಜನರು ಮಾತ್ರ ಭಾಗಿಯಾಗಿ ವಿವಾಹ ನೆರವೇರಿಸಲು ನಿರ್ಧಾರ ಮಾಡಿದ್ದಾರೆ.ಒಟ್ಟಾರೆ ಎಲ್ಲರೂ ನಮ್ಮ ಮದುವೆಗೆ ಬನ್ನಿ ಎಂದು ಆಮಂತ್ರಣ ಪತ್ರ ಹಂಚಿದರೆ.. ಶ್ರೇಯಸ್ ಹಾಗೂ ಸುಷ್ಮಾ ಜೋಡಿ ಮಾತ್ರ ಕೊರೋನಾ ಹೆಚ್ಚಿದೆ ನಮ್ಮ ಮದುವೆಗೆ ಬರಬೇಡಿ ಎಂದು ಆಮಂತ್ರಣ ಪತ್ರ ಹಂಚುವ ಮೂಲಕ ಕೊರೋನಾ ನಿಯಮಾವಳಿಗಳನ್ನು ಪಾಲಿಸುವುದರ ಜೊತೆಗೆ ಎಲ್ಲರಿಗೂ ಮಾದರಿಯಾಗಿದೆ.
Published by:ranjumbkgowda1 ranjumbkgowda1
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ