Video: ಗಜನಿಗೆ ಶರಣಾದ ಬಸವ; ಪ್ರಚಾರದ ವೇಳೆ ಅಡ್ಡ ಬಂದ ಎತ್ತಿನ ಮೈದಡವಿ ಮಾತಾಡಿಸಿದ ನಟ ದರ್ಶನ್​

ಕೆ.ಆರ್​. ನಗರದಲ್ಲಿ ಇಂದು ಸುಮಲತಾ ಪರವಾಗಿ ಪ್ರಚಾರ ನಡೆಸಲು ತೆರಳಿದ್ದ ಚಾಲೆಂಜಿಂಗ್ ಸ್ಟಾರ್​ ದರ್ಶನ್​ ಅವರ ವಾಹನಕ್ಕೆ ಅಡ್ಡ ಬಂದ ಎತ್ತಿನ ಜೊತೆಗೆ ತನ್ನದೇ ಭಾಷೆಯಲ್ಲಿ ಮಾತನಾಡಿ ದೂರ ಕಳುಹಿಸುವ ಮೂಲಕ ದರ್ಶನ್​ ಮತ್ತೊಮ್ಮೆ ತಮ್ಮ ಪ್ರಾಣಿಪ್ರೀತಿ ಮೆರೆದಿದ್ದಾರೆ.

Sushma Chakre | news18
Updated:April 10, 2019, 10:36 PM IST
Video: ಗಜನಿಗೆ ಶರಣಾದ ಬಸವ; ಪ್ರಚಾರದ ವೇಳೆ ಅಡ್ಡ ಬಂದ ಎತ್ತಿನ ಮೈದಡವಿ ಮಾತಾಡಿಸಿದ ನಟ ದರ್ಶನ್​
ದರ್ಶನ್​ ವಾಹನಕ್ಕೆ ಅಡ್ಡ ಬಂದ ಬಸವ
  • News18
  • Last Updated: April 10, 2019, 10:36 PM IST
  • Share this:
ಪುಟ್ಟಪ್ಪ

ಮೈಸೂರು (ಏ. 10): ಮಂಡ್ಯ ಲೋಕಸಭಾ ಚುನಾವಣೆ ಅಭ್ಯರ್ಥಿಯಾಗಿರುವ ಸುಮಲತಾ ಅಂಬರೀಶ್​ ಪರವಾಗಿ ಪ್ರಚಾರ ನಡೆಸಿದ ಚಾಲೆಂಜಿಂಗ್ ಸ್ಟಾರ್​ ದರ್ಶನ್​ ಪ್ರಚಾರ ವಾಹನಕ್ಕೆ ಇಂದು ಊರ ಬಸವ ಅಡ್ಡ ಬಂದ ಘಟನೆ  ನಡೆದಿದೆ.

ದರ್ಶನ್ ಪ್ರಚಾರದ ವೇಳೆ ಅಪರೂಪದ ಘಟನೆ ನಡೆದಿದ್ದು, ಸೇರಿದ್ದ ಜನಸ್ತೋಮವನ್ನು ನೋಡಿ ದರ್ಶನ್ ಪ್ರಚಾರದ ವಾಹನಕ್ಕೆ ಬಸವ ಅಡ್ಡ ಬಂದು ನಿಂತಿತು. ಸುತ್ತಲೂ ಸೇರಿದ್ದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಎಷ್ಟೇ ಪ್ರಯತ್ನಪಟ್ಟರೂ ಆ ಬಸವನನ್ನು ಓಡಿಸಲು ಸಾಧ್ಯವಾಗಲಿಲ್ಲ. ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಬೆಳ್ಳಿ ಪರದೆಗೆ ಜೋಡೆತ್ತುಗಳು: ಡಿಬಾಸ್​-ರಾಕಿಂಗ್​ ಸ್ಟಾರ್ ತೆರೆ ಹಂಚಿಕೊಳ್ಳಲು ಕಾರಣರಾದರಾ ಸುಮಲತಾ..?​

ಬಸವ ಅಲ್ಲಿಂದ ಕದಲದೇ ಇದ್ದುದನ್ನು ನೋಡಿದ ನಟ ದರ್ಶನ್​ ಪ್ರಚಾರ ವಾಹನದಿಂದ ಕೆಳಗಿಳಿದು ಬಸವನ ಮೈಮುಟ್ಟಿ ಮಾತನಾಡಿಸಿದರು. ಅಲ್ಲಿಯವರೆಗೆ ನಿಂತಲ್ಲೇ ನಿಂತಿದ್ದ ಬಸವ ದರ್ಶನ್​ ಮೈ ಮುಟ್ಟುತ್ತಿದ್ದಂತೆ ಪ್ರಚಾರ ವಾಹನಕ್ಕೆ ಜಾಗ ಮಾಡಿಕೊಟ್ಟ ಅಪರೂಪದ ಘಟನೆ ಕೆ.ಆರ್​. ನಗರದಲ್ಲಿ ನಡೆದಿದೆ. ಈ ದೃಶ್ಯವನ್ನು ನೋಡಿ ದರ್ಶನ್​ ಅಭಿಮಾನಿಗಳು ಹರ್ಷೋದ್ಘಾರ ಮಾಡಿದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.ದರ್ಶನ್​ ಪ್ರಾಣಿಪ್ರಿಯ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಮೈಸೂರಿನಲ್ಲಿ ತನ್ನದೇ ಆದ ಫಾರ್ಮ್​ಹೌಸ್​ ಹೊಂದಿರುವ ದರ್ಶನ್​ ಅಲ್ಲಿ ನಾನಾ ರೀತಿಯ ಪ್ರಾಣಿಗಳನ್ನು ಸಾಕಿದ್ದಾರೆ. ಹಾಗೇ, ಮೈಸೂರು ಮೃಗಾಲಯದ ಅನೇಕ ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಮಾದರಿಯಾಗಿದ್ದಾರೆ. ವಿಶೇಷ ಜಾತಿಯ ಕುದುರೆಗಳು, ಪಕ್ಷಿಗಳು, ನಾಯಿ, ಕೋತಿಗಳು, ಹಸುಗಳನ್ನು ದರ್ಶನ್​ ಸಾಕಿದ್ದಾರೆ. ಒಟ್ಟಾರೆ 8 ಏಮು ಪಕ್ಷಿಗಳು, 5 ಟರ್ಕಿ ಕೋಳಿಗಳು, ಕೋತಿಗಳು, 5 ಕುದುರೆ, 30 ಹಸು, 4 ಎತ್ತು, 30 ಕುರಿಗಳು, 10 ಬಾತುಕೋಳಿಗಳು, 8 ನಾಯಿಗಳು ದರ್ಶನ್​ ಅವರ ಫಾರ್ಮ್​ ಹೌಸ್‌ನಲ್ಲಿವೆ. ಇಂದು ತಮ್ಮ ವಾಹನಕ್ಕೆ ಅಡ್ಡ ಬಂದ ಬಸವನನ್ನು ತನ್ನದೇ ಭಾಷೆಯಲ್ಲಿ ಮಾತನಾಡಿಸಿದ ದರ್ಶನ್​ ಮತ್ತೊಮ್ಮೆ ತಮ್ಮ ಪ್ರಾಣಿಪ್ರೀತಿಯನ್ನು ಅಭಿವ್ಯಕ್ತಿಸಿದ್ದಾರೆ.
First published: April 10, 2019, 9:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading