ರಾಜಕೀಯದ ನಡುವೆಯೂ ಪರಿಸರ ಕಾಳಜಿಯಲ್ಲಿ ಮುಳುಗಿದ ಚಾಲೆಂಜಿಂಗ್ ಸ್ಟಾರ್ ಫ್ಯಾನ್ಸ್

news18
Updated:May 1, 2018, 11:21 AM IST
ರಾಜಕೀಯದ ನಡುವೆಯೂ ಪರಿಸರ ಕಾಳಜಿಯಲ್ಲಿ ಮುಳುಗಿದ ಚಾಲೆಂಜಿಂಗ್ ಸ್ಟಾರ್ ಫ್ಯಾನ್ಸ್
news18
Updated: May 1, 2018, 11:21 AM IST
ಎ.ಟಿ.ವೆಂಕಟೇಶ್, ನ್ಯೂಸ್ 18 ಕನ್ನಡ

 ರಾಮನಗರ(ಮೇ.01) :  ರಾಜ್ಯದೆಲ್ಲೆಡೆ ರಾಜಕೀಯದ ರಂಗು ಜೋರಾಗಿದೆ. ಈ ಬಾರಿಯಂತೂ ಯುವ ಸಮುದಾಯ ಚುನಾವಣಾ ಸಮರದ ಗುಂಗಿನಲ್ಲಿ ಬೆರೆತು ಹೋಗಿದ್ದಾರೆ. ಆದರೆ ಬೊಂಬೆನಾಡು ಚನ್ನಪಟ್ಟಣದ ದರ್ಶನ್ ಅಭಿಮಾನಿ ಬಳಗದ ಯುವ ತಂಡ ಕಾರ್ಮಿಕ ದಿನಚಾರಣೆ ಪ್ರಯುಕ್ತ ಅರಣ್ಯ ಪ್ರದೇಶದಲ್ಲಿ ನೂರಾರು ಗಿಡಗಳನ್ನ ನೆಡುವ ಮೂಲಕ ಇತರ ಯುವಕರಿಗೆ ಮಾದರಿಯಾಗಿದ್ದಾರೆ.

ಒಂದೆಡೆ ಆಧುನಿಕತೆಯ ಭರಾಟೆಯಲ್ಲಿ ಅರಣ್ಯ ನಾಶವಾಗುತ್ತಿವೆ ಇದಕ್ಕಾಗಿ ಈ ತಂಡ ತಮ್ಮ ನೆಚ್ಚಿನ ನಟ ದರ್ಶನ್ ತೂಗುದೀಪ ಹೆಸರಿನಲ್ಲಿ ಗಿಡಗಳನ್ನ ಖರೀದಿಸಿ ಖಾಲಿ ಜಾಗ ಹಾಗೂ ಅರಣ್ಯಪ್ರದೇಶ ಗಳಲ್ಲಿ ನೆಡುವ ಮೂಲಕ ಪರಿಸರ ಪ್ರೇಮ ಮೆರೆದಿದ್ದಾರೆ.

ಇಂತಹ ಯುವ ಸಮುದಾಯ ಇನ್ನಷ್ಟು ಹೆಚ್ಚಾಗಲಿ ಎನ್ನುವುದೇ ಸಾರ್ವಜನಿಕರ ಆಶಯವಾಗಿದೆ.

ದರ್ಶನ್ ತೂಗುದೀಪ ಅಭಿಮಾನಿ‌ಬಳಗದ ಅಧ್ಯಕ್ಷ ಛಾಯಾಪ್ರಸಾದ್, ಪದಾಧಿಕಾರಿಗಳಾದ ಪ್ರಪುಲ್ಲ, ನರಸಿಂಹ, ರಂಜಿತ್, ಶ್ರೀನಿವಾಸ್ ಇನ್ನು‌ ಮುಂತಾದವರು ಭಾಗವಹಿಸಿದ್ದರು.
First published:May 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ