ಮತಯಾಚನೆ ವೇಳೆ 'ದಾಸ'ನ ಪ್ರಾಣಿ ಪ್ರೀತಿ, ಗಡ್ಡಪ್ಪನಿಗೆ ಗೌರವ: ಹೇಗಿತ್ತು ಇಂದಿನ ದರ್ಶನ್​ರ ಮತಬೇಟೆ: ವಿಡಿಯೋ ನೋಡಿ

ಬಳಿಕ ಇಂಡುವಾಳು ಗ್ರಾಮದತ್ತ ಪ್ರಚಾರಕ್ಕೆ ತೆರಳಿದಾಗ  ಅಭೂತ ಪೂರ್ವ ಸ್ವಾಗತ ದೊರೆಯಿತು. ಈ ಬಗ್ಗೆ ಮಾತನಾಡಿದ ದಾಸ, ಸ್ವಾಗತ ಎಂಬುದೇ ಒಂದು ಗೌರವದ ವಿಷಯ. ಎಷ್ಟೇ ಕಷ್ಟವಾದರೂ ನಾನು ಪ್ರಚಾರವನ್ನು ಮುಂದುವರೆಸುತ್ತೇನೆ.

zahir | news18
Updated:April 13, 2019, 10:59 PM IST
ಮತಯಾಚನೆ ವೇಳೆ 'ದಾಸ'ನ ಪ್ರಾಣಿ ಪ್ರೀತಿ, ಗಡ್ಡಪ್ಪನಿಗೆ ಗೌರವ: ಹೇಗಿತ್ತು ಇಂದಿನ ದರ್ಶನ್​ರ ಮತಬೇಟೆ: ವಿಡಿಯೋ ನೋಡಿ
darshan
zahir | news18
Updated: April 13, 2019, 10:59 PM IST
ಮಂಡ್ಯ ಚುನಾವಣಾ ಅಖಾಡ ದಿನಕಳೆದಂತೆ ರಂಗೇರುತ್ತಿದೆ. ಅದರಲ್ಲೂ ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ಮತಯಾಚಿಸುತ್ತಿರುವ ದರ್ಶನ್ ತೂಗುದೀಪ್ ಪ್ರಚಾರದ ನಡುವೆಯು ಪ್ರಾಣಿ ಪ್ರೀತಿ ತೋರುವ ಮೂಲಕ ಗಮನ ಸೆಳೆದಿದ್ದಾರೆ.

ಇಂದು ಬೆಳಿಗ್ಗೆಯಿಂದಲೇ ಶ್ರೀರಂಗ ಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ಮತಯಾಚನೆಯಲ್ಲಿ ತೊಡಗಿದ್ದರು. ಈ ವೇಳೆ ಅನಾರೋಗ್ಯದಿಂದ ಬಳಲುತ್ತಿದ್ದ ಬಸವಣ್ಣನಿಗೆ ಪೂಜೆ ಮಾಡಿದ ದರ್ಶನ್, ಮತ್ತೊಮ್ಮೆ ತಮ್ಮ ಪ್ರಾಣಿ ಪ್ರೀತಿಯನ್ನು ತೋರಿದರು. ಖಾಯಿಲೆಯಿಂದ ಬಳಲುತ್ತಿದ್ದ ಎತ್ತನ್ನು ಗಮನಿಸಿದ ದಾಸ, ಒಂದಷ್ಟು ಹಾರೈಕೆ ಮಾಡಿ ಪೂಜೆ ಸಲ್ಲಿಸಿದರು.


ನಂತರ ಅಲ್ಲಿಂದ ಹಳ್ಳಿಗಳತ್ತ ತೆರಳಿದ ದರ್ಶನ್​ಗೆ ಭರ್ಜರಿ ಸ್ವಾಗತ ಕೋರಲಾಯಿತು. 'ಕರಿಯ'ನ ಆಗಮನಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳು ಹೂವಿನ ಹಾರಗಳನ್ನು ಹಾಕುವ ಮೂಲಕ ಸ್ವಾಗತಿಸಿದರು. ಇದೇ ವೇಳೆ ಹಿರಿಯ ನಟ 'ತಿಥಿ' ಖ್ಯಾತಿಯ ಗಡ್ಡಪ್ಪ ಅವರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.ಇನ್ನು ಗಡ್ಡಪ್ಪ ಅವರ ಬಳಿ ಮಾತನಾಡುತ್ತಿದ್ದಾಗ ಕೆಲವು ಅಭಿಮಾನಿಗಳು ದರ್ಶನ್ ಅವರಿಗೆ ಹೂವಿನ ಹಾರ ಹಾಕಲು ಮುಂದಾಗಿದ್ದರು. ಆದರೆ ಹಾರವನ್ನು ಹಾಕಿಸಿಕೊಳ್ಳಲು ನಿರಾಕರಿಸಿದ ದರ್ಶನ್ ಅದನ್ನು ಗಡ್ಡಪ್ಪ ಅವರಿಗೆ ಹಾಕಿ, ನೀವು ಸ್ಟಾರ್ ನೀವು ಚೆನ್ನಾಗಿರಬೇಕು' ಎಂದು ಅಭಿಮಾನಿಗಳ ಮನ ಗೆದ್ದರು.
Loading...ಅಲ್ಲದೆ ಸುಮಲತಾ ಅವರಿಗೆ ನಿಮ್ಮ ಮತ ನೀಡಬೇಕೆಂದು ಮನವಿ ಮಾಡಿಕೊಂಡರು. ದರ್ಶನ್​ ಅವರ ಕೋರಿಕೆಗೆ ಗಡ್ಡಪ್ಪನ ಸ್ಟೈಲ್​ನಲ್ಲೇ ಉತ್ತರ ನೀಡಿದ ಹಿರಿಯ ನಟ 'ನನ್ನ ವೋಟ್ ಸುಮಲತಾಗೆ ಹೋಗಿ' ಎಂದರು.ಬಳಿಕ ಇಂಡುವಾಳು ಗ್ರಾಮದತ್ತ ಪ್ರಚಾರಕ್ಕೆ ತೆರಳಿದಾಗ  ಅಭೂತ ಪೂರ್ವ ಸ್ವಾಗತ ದೊರೆಯಿತು. ಈ ಬಗ್ಗೆ ಮಾತನಾಡಿದ ದಾಸ, ಸ್ವಾಗತ ಎಂಬುದೇ ಒಂದು ಗೌರವದ ವಿಷಯ. ಎಷ್ಟೇ ಕಷ್ಟವಾದರೂ ನಾನು ಪ್ರಚಾರವನ್ನು ಮುಂದುವರೆಸುತ್ತೇನೆ. ಇಂದಿಗೂ ಕೂಡ ನಾನು ಕೈ ನೋವಿನಿಂದ ಬಳಲುತ್ತಿದ್ದೇನೆ. ಆದರೂ ನಾನು ಏಪ್ರಿಲ್​ 16ರವರೆಗೆ ಸುಮಲತಾ ಪರ ಪ್ರಚಾರ ಮಾಡುತ್ತೇನೆ. ಅದರೊಳಗೆ ಯಮನೇ ಬಂದು ಕರೆದರೂ 16ರವರೆಗೆ ಕಾಲಾವಕಾಶ ಕೇಳುವುದಾಗಿ ತಿಳಿಸಿದರು.ಶ್ರೀರಂಗಪಟ್ಟಣದಲ್ಲಿ ನಡೆದ ಭರ್ಜರಿ ಪ್ರಚಾರದ ವೇಳೆ ಡಿ ಬಾಸ್ ಘಂಟಘೋಷದೊಂದಿಗೆ ಅಭಿಮಾನಿಗಳೂ ಸಹ ಸಾಥ್ ನೀಡಿದ್ದರು. ಇನ್ನು ನಾಳೆಯು ದರ್ಶನ್​ ಅವರ ಮತ ಬೇಟೆ ಮುಂದುವರೆಯಲಿದ್ದು, ಮದ್ದೂರಿನಲ್ಲಿ ಡಿ ಬಾಸ್ ಮತ್ತು ಅಭಿಮಾನಿಗಳು ಮತಯಾಚಿಸಲಿದ್ದಾರೆ. ಇದರ ಬಳಿಕ ಪಾಂಡವಪುರದಲ್ಲಿ ಪ್ರಚಾರ ಮಾಡುವುದಾಗಿ ತಿಳಿಸಿದ್ದಾರೆ. ಹಾಗೆಯೇ ಏಪ್ರಿಲ್ 16 ರಂದು ಬೃಹತ್ ಜಾಥ ನಡೆಸಿ ಸುಮಲತಾ ಅವರಿಗೆ ಮತ ನೀಡುವಂತೆ ಕೇಳಿಕೊಳ್ಳಲು ಚಾಲೆಂಜಿಂಗ್ ಸ್ಟಾರ್ ಯೋಜನೆ ಹಾಕಿಕೊಂಡಿದ್ದಾರೆ.


First published:April 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...