ಕಬಿನಿ ಹಿನ್ನೀರಿನಲ್ಲಿ ದರ್ಶನ್​​ ಭರ್ಜರಿ ಸಫಾರಿ!

news18
Updated:June 27, 2018, 5:57 PM IST
ಕಬಿನಿ ಹಿನ್ನೀರಿನಲ್ಲಿ ದರ್ಶನ್​​ ಭರ್ಜರಿ ಸಫಾರಿ!
news18
Updated: June 27, 2018, 5:57 PM IST
-ಪುಟ್ಟಪ್ಪ ನ್ಯೂಸ್18 ಕನ್ನಡ

ಮೈಸೂರು,(ಜೂ.27): ಸ್ಯಾಂಡಲ್‌ವುಡ್‌ ಬಾಕ್ಸ್‌ ಆಫೀಸ್‌ ಸುಲ್ತಾನ್‌, ಅಭಿಮಾನಿಗಳ ಡಿ ಬಾಸ್‌ ಆಗಿರುವ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮೈಸೂರಿನಲ್ಲಿ ಅರಣ್ಯ ಸಂಚಾರ ನಡೆಸಿದ್ದಾರೆ. ಸದಾ ಪ್ರಾಣಿ ಪ್ರೀತಿ ಮೆರೆಯುವ ದರ್ಶನ್‌ ವನ್ಯಮೃಗಗಳ ಜೊತೆ ಕಾಲ ಕಳೆದಿದ್ದಾರೆ. ಶೂಟಿಂಗ್‌ ಬ್ಯೂಸಿಯಿಂದ ಬಿಡುವು ಮಾಡಿಕೊಂಡು ಎರಡು ದಿನಗಳ ಕಾಲ ಮೈಸೂರಿನಲ್ಲಿ ವಿಶ್ರಾಂತಿ ಪಡೆದಿರುವ ದಚ್ಚು, ದಟ್ಟಾರಣ್ಯದಲ್ಲಿ ಸಫಾರಿ ನಡೆಸಿದ್ದಾರೆ.ಹೌದು, ಕನ್ನಡ ಚಿತ್ರರಂಗದ ಐರಾವತನಾಗಿರುವ ನಟ, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಎರಡು ದಿನಗಳ ಕಾಲ ಮೈಸೂರು ಭಾಗದ ಅರಣ್ಯದಲ್ಲಿ ಕಾಡಿನ ರಾಜನಾಗಿದ್ದಾರೆ. ಮೊದಲಿನಿಂದಲೂ ಪ್ರಾಣಿಗಳ ಬಗ್ಗೆ ಅಪಾರ ಕಾಳಜಿ ಇರುವ ನಟ ದರ್ಶನ್‌ರನ್ನ ರಾಜ್ಯ ಅರಣ್ಯ ಇಲಾಖೆಯ ರಾಯಭಾರಿಯಾಗಿಯೂ ನೇಮಕ ಮಾಡಲಾಗಿದೆ. ಈ ಹಿನ್ನೆಯಲ್ಲಿ ಅರಣ್ಯಾಧಿಕಾರಿಗಳ ಮನವಿ ಮೇರೆಗೆ ಎರಡು ದಿನಗಳ ಕಾಲ ಶೂಟಿಂಗ್‌ನಿಂದ ಬಿಡುವು ಮಾಡಿಕೊಂಡಿದ್ದ ನಟ ದರ್ಶನ್‌ ಮೈಸೂರಿನ ಕಬಿನಿ ಹಿನ್ನೀರು ಹಾಗೂ ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿ ನಡೆಸಿದ್ದಾರೆ. ಎರಡು ದಿನಗಳ ಕಾಲ ಗೆಳೆಯೊಂದಿಗೆ ವಿಶ್ರಾಂತಿ ನಡೆಸಿರುವ ನಟ ದರ್ಶನ್‌ ಕಾಡಿನಲ್ಲಿ ಸಂತಸದ ಕ್ಷಣಗಳನ್ನು ಕಳೆದಿದ್ದಾರೆ.ಕಬಿನಿ ಹಿನ್ನೀರಿನ ಅರಣ್ಯದಲ್ಲಿ ಸಫಾರಿ ನಡೆಸಿದ ದರ್ಶನ್‌ಗೆ ಆನೆ,ಚಿರತೆ, ಹುಲಿಗಳಂತಹ ಪ್ರಾಣಿಗಳು ದರ್ಶನ ನೀಡಿದೆ. ಈ ಅಪರೂಪದ ಕ್ಷಣಗಳನ್ನು ತನ್ನದೇ ಕ್ಯಾಮಾರದಲ್ಲಿ ಸೆರೆ ಹಿಡಿದಿರುವ ನಟ ದರ್ಶನ್‌ ಕಾಡು ಪ್ರಾಣಿಗಳನ್ನ ಕಂಡು ಸಂತಸ ವ್ಯಕ್ತಪಡಿಸಿದ್ದಾರೆ. ಆ ನಂತರ ಅರಣ್ಯ ಸಿಬ್ಬಂದಿಗಳು ಹಾಗೂ ಕಾಡಿನ ಹಾಡಿಯಲ್ಲಿರುವ ಮಕ್ಕಳ ಜೊತೆ ಕಾಲ ಕಳೆದು, ಅವರೆಲ್ಲರ ಜೊತೆ ಪೋಟೋಗೆ ಪೋಸ್‌ ಕೊಟ್ಟಿದ್ದಾರೆ. ಕಾಡಿನ ಶಿಬಿರದಲ್ಲಿದ್ದ ಒಂಟಿ ಸಲಗ ಆನೆಯನ್ನು ಮೈಮುಟ್ಟಿ ಹಾರೈಕೆ ಮಾಡಿದ್ದಾರೆ.

ಸದಾ ಶೂಟಿಂಗ್‌ ಸಿನಿಮಾ ಅಂತ ಬ್ಯೂಸಿಯಾಗಿರುವ ಈ ಅಭಿಮಾನಿಗಳ ನೆಚ್ಚಿನ ಡಿ ಬಾಸ್‌ಗೆ ಎರಡು ದಿನಗಳ ವಿಶ್ರಾಂತಿ ಸಾಕಷ್ಟು ಖುಷಿ ನೀಡಿದೆ. ರಾಯಭಾರಿ ಆಗಿರುವ ದರ್ಶನ್‌ ಪದೆ ಪದೆ ಕಾಡಿಗೆ ಬಂದು ಹೋದರೆ ಜನರಲ್ಲಿ ಕಾಡು ಪ್ರಾಣಿಗಳ ಬಗ್ಗೆ ಇನ್ನಷ್ಟು ಜಾಗೃತಿ ಮೂಡಲಿದೆ ಎನ್ನುವುದು ಅರಣ್ಯಾಧಿಕಾರಿಗಳ ಅಭಿಪ್ರಾಯವಾಗಿದೆ.
First published:June 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...