News18 India World Cup 2019

ಸುಮಲತಾ ಭರ್ಜರಿ ಗೆಲುವು; 'ಮಂಡ್ಯದ ಜನತೆಗೆ ನನ್ನ ಸಾಷ್ಟಾಂಗ ನಮಸ್ಕಾರ' ಎಂದ ದರ್ಶನ್

2019 Election Result: ಸುಮಲತಾ ಅವರು ಗೆಲುವು ಸಾಧಿಸುತ್ತಿದ್ದಂತೆ ಜೋಡೆತ್ತುಗಳಾಗಿದ್ದ ದರ್ಶನ್ ಹಾಗೂ ಯಶ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಮಂಡ್ಯದಲ್ಲಿ ಸುಮಲತಾ ಪರ ಅಭಿಮಾನಿಗಳು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

Vinay Bhat | news18
Updated:May 23, 2019, 9:09 PM IST
ಸುಮಲತಾ ಭರ್ಜರಿ ಗೆಲುವು; 'ಮಂಡ್ಯದ ಜನತೆಗೆ ನನ್ನ ಸಾಷ್ಟಾಂಗ ನಮಸ್ಕಾರ' ಎಂದ ದರ್ಶನ್
ದರ್ಶನ್
Vinay Bhat | news18
Updated: May 23, 2019, 9:09 PM IST
ಬೆಂಗಳೂರು (ಮೇ. 23): ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ ಅವರು ಸುಮಾರು ಒಂದು ಲಕ್ಷ ಮತಗಳ ಅಂತರದಿಂದ ಪ್ರತಿಸ್ಪರ್ಧಿ ನಿಖಿಲ್​ ಕುಮಾರಸ್ವಾಮಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ಇವರ ಗೆಲುವಿನಲ್ಲಿ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಹಾಗೂ ಯಶ್​ ಅವರ ಶ್ರಮ ಅಧಿಕವಾಗಿದೆ.

ಸುಮಲತಾ ಅವರು ಗೆಲುವು ಸಾಧಿಸುತ್ತಿದ್ದಂತೆ ಜೋಡೆತ್ತುಗಳಾಗಿದ್ದ ದರ್ಶನ್ ಹಾಗೂ ಯಶ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಮಂಡ್ಯದಲ್ಲಿ ಸುಮಲತಾ ಪರ ಅಭಿಮಾನಿಗಳು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಸದ್ಯ ಸುಮಲತಾ ಗೆಲುವಿಗೆ ಕಾರಣರಾದ ಮಂಡ್ಯ ಜನತೆಗೆ ದರ್ಶನ್ ಧನ್ಯವಾದ ತಿಳಿಸಿದ್ದಾರೆ.

ವಿಡಿಯೋ ಮೂಲಕ ಮಂಡ್ಯ ಜನತೆಗೆ ದರ್ಶನ್ ಅಭಿನಂದನೆ ತಿಳಿಸಿರುವ ದರ್ಶನ್,  ಮಂಡ್ಯದ ಪ್ರತಿ ಒಂದು ಹಳ್ಳಿಯ ಜನತೆಗೆ ಧನ್ಯವಾದ ಹೇಳಿದರೆ ಸಾಲದು ವಿಡಿಯೋ ಮೂಲಕವೇ ನನ್ನ ಸಾಷ್ಟಾಂಗ ನಮಸ್ಕಾರ ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ದಿ ಯುನೈಟರ್ ಇನ್ ಚೀಫ್ ಆಫ್ ಇಂಡಿಯಾ’; ಜಾತಿ, ಧರ್ಮ, ಪ್ರಾದೇಶಿಕತೆಗೆ ಅಂಟಿಕೊಂಡಿದ್ದ ಭಾರತ ಚುನಾವಣೆಗೆ ಮೋದಿಯಿಂದ ಹೊಸ ಭಾಷ್ಯ

ನಾವು ಮಾಡಿದ ಚಿಕ್ಕ ಅಳಿಲು ಸೇವೆಗೆ ನೀವು ಇಷ್ಟೊಂದು ದೊಡ್ಡ ಗೆಲುವು ನೀಡಿದ್ದೀರಿ. ಸಾಯುವವರೆಗೂ ನಾವು ನಿಮಗೆ ಚಿರರುಣಿಯಾಗಿರುತ್ತೇವೆ. ನೀವು ನೀಡಿರುವ ಗೆಲುವಿನ ಮೂಲಕ ಅಮ್ಮ ಮಂಡ್ಯದಲ್ಲಿ ಐದು ವರ್ಷ ಅವರ ಕೈಲಾಗುವ ಎಲ್ಲಾ ಒಳ್ಳೆಯ ಕೆಲಸಗಳನ್ನು ಮಾಡುತ್ತಾರೆ. ಮತ ಹಾಕಿದ ದೇವರುಗಳಿಗೆ ಧನ್ಯವಾದ ಎಂದು ಹೇಳಿದ್ದಾರೆ.

 
Loading...
ಸದ್ಯ ಯಶ್​-ದರ್ಶನ್​ ಪ್ರಚಾರ ಫಲಪ್ರಧವಾಗಿದೆ. ಸುಮಲತಾ ಸುಮಾರು ಒಂದೂವರೆ ಲಕ್ಷ ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ. ಮಂಡ್ಯದಲ್ಲಿ ಗೆಲ್ಲುವ ಕನಸು ಕಂಡಿದ್ದ ನಿಖಿಲ್​ ಆಸೆಗೆ ತಣ್ಣೀರು ಬಿದ್ದಿದೆ. ಅಂಬರೀಶ್​ ಅವರು ಚುನಾವಣೆ ಎದುರಿಸಿದಾಗ ಅವರ ಬೆಂಬಲಕ್ಕೆ ದರ್ಶನ್​ ನಿಂತಿದ್ದರು.

ಆರಂಭದಲ್ಲಿ, ಈ ಬಾರಿ ಪೂರ್ತಿ ಸಿನಿಮಾ ಮಾಡುತ್ತಿರೋ ಅಥವಾ ಅರ್ಧ ಸಿನಿಮಾ ಮಾಡುತ್ತಿರೋ ಎಂದು ಪತ್ರಕರ್ತರು ದರ್ಶನ್​ಗೆ ಪ್ರಶ್ನಿಸಿದ್ದರು. ಈ ಮೂಲಕ ಸಂಪೂರ್ಣ ಪ್ರಚಾರದಲ್ಲಿ ತೊಡಗುತ್ತೀರೋ ಅಥವಾ ಹೀಗೆ ಬಂದು ಹಾಗೆ ಹೋಗುತ್ತೀರಾ ಎಂಬುದನ್ನು ಪರೋಕ್ಷವಾಗಿ ಪತ್ರಕರ್ತರು ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ದರ್ಶನ್​ ನಾವು ಮಾಡಿದ ಮೇಲೆ ಪೂರ್ತಿ ಸಿನಿಮಾವನ್ನೇ ಮಾಡುತ್ತೇವೆ ಎಂದಿದ್ದರು. ಅವರು ಮಾಡಿದ್ದ ಸಿನಿಮಾ ಈಗ ತೆರೆಕಂಡು ಯಶಸ್ಸು ಪಡೆದುಕೊಂಡಿದೆ.

- ಆನಂದ್, ನ್ಯೂಸ್ 18 ಕನ್ನಡ

First published:May 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...