ಮುನಿರತ್ನ ಪರ ಭರ್ಜರಿ ರೋಡ್ ಶೋ; ಡಿ ಬಾಸ್ ದರ್ಶನ್​ ಜೊತೆ ಬಿಜೆಪಿ ನಾಯಕರಿಂದ ಮತಬೇಟೆ

RR Nagar Bypoll: ಯಶವಂತಪುರ ರೈಲ್ವೆ ನಿಲ್ದಾಣದಿಂದ ಪ್ರಾರಂಭಗೊಂಡು, ಜೆಪಿ ಪಾರ್ಕ್, ಜಾಲಹಳ್ಳಿ, ಪೀಣ್ಯ, ಗೊರಗುಂಟೆಪಾಳ್ಯ, ಲಕ್ಷ್ಮೀದೇವಿ ನ ಗರ, ಲಗ್ಗೆರೆ, ಕೊಟ್ಟಿಗೆ ಪಾಳ್ಯ, ಸುಂಕದಕಟ್ಟೆ ಸೇರಿದಂತೆ ಆರ್ ಆರ್ ನಗರದ ವಿವಿಧೆಡೆ ಚಾಲೆಂಜಿಂಗ್ ಸ್ಟಾರ್ ಪ್ರಚಾರ ನಡೆಸಿದ್ದಾರೆ.

ಬಿಜೆಪಿ

ಬಿಜೆಪಿ

  • Share this:
ಬೆಂಗಳೂರು: ಆರ್.ಆರ್ ನಗರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಪ್ರಚಾರ ನಡೆಸುತ್ತಿದ್ದಾರೆ. ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಭರ್ಜರಿ ರೋಡ್ ಶೋ ನಡೆಸುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕಂದಾಯ ಸಚಿವ ಆರ್.ಅಶೋಕ್, ಕೃಷಿ ಸಚಿವ ಬಿ.ಸಿ. ಪಾಟೀಲ್, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಭಾಗಿಯಾಗಿದ್ದಾರೆ.ಯಶವಂತಪುರ ರೈಲ್ವೆ ನಿಲ್ದಾಣದಿಂದ ಜೆಪಿ ಪಾರ್ಕ್​ವರೆಗೂ ಭರಾಟೆಯ ಪ್ರಚಾರ ನಡೆಸಲಾಯಿತು.ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಮತ ಯಾಚನೆ ಮಾಡಲಾಯಿತು. ರೋಡ್ ಶೋ ಸಾಗಿದ ರಸ್ತೆಯುದ್ದಕ್ಕೂ ಇಕ್ಕೆಲಗಳ ಮಹಡಿ ಮನೆಗಳ ಮೇಲಿಂದ ದರ್ಶನ್ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಹೂ ಮಳೆಯನ್ನು ಸುರಿಸಿದರು. ಡಿ ಬಾಸ್ ಘೋಷಣೆಗಳನ್ನು ಮೊಳಗಿಸಿದರು.

ಮುನಿರತ್ನ ನಿರ್ಮಾಕರಾಗಿ, ಶಾಸಕರಾಗಿದ್ದಾಗಿನಿಂದ ನೋಡ್ತಿದ್ದೇನೆ. ಅಭಿವೃದ್ಧಿ ಮಾಡಿದ್ದಾರೆ. ಯಾರೂ ಹಾಲು ನೀಡದ ಸಮಯದಲ್ಲಿ ಅವರು ಅನ್ನ ನೀಡಿದ್ದಾರೆ. ಅವರಿಗೆ ಮತ ಹಾಕಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮತದಾರರನ್ನ ಕೇಳಿಕೊಂಡರು.

ಇದನ್ನೂ ಓದಿ: Darshan: ಪಕ್ಷಕ್ಕಿಂತ ನನಗೆ ವ್ಯಕ್ತಿ ಮುಖ್ಯ; ಮುನಿರತ್ನ ಪರ ನಟ​ ದರ್ಶನ್​ ಪ್ರಚಾರ

ಯಶವಂತಪುರ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಆರಂಭಗೊಂಡ ರೋಡ್ ಶೋ ನಂತರ ವಾರ್ಡ್ ನಂ.17 ಜೆ.ಪಿ.ಪಾರ್ಕ್ ಚೌಡೇಶ್ವರಿ ಬಸ್ ನಿಲ್ದಾಣದಿಂದ ಹೊರಟು ಜೆ.ಪಿ.ಪಾರ್ಕ್ ವಾರ್ಡ್ ವ್ಯಾಪ್ತಿಯಲ್ಲಿ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು.

ವಾರ್ಡ್ ನಂ.16 ಜಾಲಹಳ್ಳಿ ವಿಲೇಜ್ ಮೂಲಕ,ವಾರ್ಡ್ ನಂ.38 ಹೆಚ್.ಎಂ.ಟಿ ಪೀಣ್ಯದಿಂದ‌ ಗೊರಗುಂಟೆಪಾಳ್ಯ, ವಾರ್ಡ್ ನಂ.42 ಲಕ್ಷ್ಮಿದೇವಿನಗರದ ಕೂಲಿನಗರ ಸೇತುವೆ ಮಾರ್ಗ, ವಾರ್ಡ್ ನಂ.69 ಲಗ್ಗೆರೆ ಆಲದಮರ ಸರ್ಕಲ್ ಮೂಲಕ ಕೊಟ್ಟಿಗೆಪಾಳ್ಯ ಪೈಪ್ ಲೈನ್, ಸುಂಕದ ಕಟ್ಟೆಯಲ್ಲಿ ಪ್ರಚಾರ ನಡೆಸಿದ್ದಾರೆ.

ಸಂಜೆ ವಾರ್ಡ್ ನಂ.73 ಕೊಟ್ಟಿಗೆಪಾಳ್ಯದ ಬಿಡಿಎ ಕಾಂಪ್ಲೆಕ್ಸ್, ರಾತ್ರಿ ವಾರ್ಡ್ ನಂ.129 ಜ್ಞಾನಭಾರತಿಯ ಕೆಂಗುಂಟೆ, ಮಲ್ಲತ್ತಹಳ್ಳಿ, ವಾರ್ಡ್ ನಂ.160 ರಾಜರಾಜೇಶ್ವರಿನಗರದ ಪ್ರವೇಶದ್ವಾರದ ಮೂಲಕ ರಾಜರಾಜೇಶ್ವರಿನಗರದ ಪ್ರಮುಖ‌ ರಸ್ತೆಗಳಲ್ಲಿ ಚಿತ್ರನಟ ದರ್ಶನ್ ಮತಯಾಚಿಸಲಿದ್ದಾರೆ.

ಇಂದಿನ ದರ್ಶನ್ ಪ್ರಚಾರ ಕಾರ್ಯಕ್ರಮದಲ್ಲಿಯೂ ಕೊರೋನಾ ನಿಯಮ ಉಲ್ಲಂಘನೆ ಮಾಡಲಾಯಿತು. ತೆರೆದ ವಾಹನದಲ್ಲಿ ದೈಹಿಕ ಅಂತರವಿಲ್ಲದೆ ಮುಖಂಡರು ಅಕ್ಕಪಕ್ಕದಲ್ಲಿ ನಿಂತು ಜನರತ್ತ ಕೈ ಬೀಸುತ್ತಿದ್ದರು. ಮಾಸ್ಕ್ ಧರಿಸಿದ್ದರೂ ಅಂತರ ಪಾಲನೆ ಮಾಡಲಿಲ್ಲ.

ಮೆರವಣಿಗೆಯುದ್ದಕ್ಕೂ ನೂರಾರು ಬಿಜೆಪಿ ಕಾರ್ಯಕರ್ತರು, ಮುನಿರತ್ನ ಅಭಿಮಾನಿಗಳು ಭಾಗಿಯಾಗಿದ್ದು.ಸಾಮಾಜಿಕ ಅಂತರ ಮರೆತು ಗುಂಪುಗೂಡಿ ಸಾಗಿದರು. ಬಹುತೇಕರು ಮಾಸ್ಕ್ ಸರಿಯಾಗಿ ಧರಿಸಿರಲಿಲ್ಲ.

ವರದಿ: ಶ್ರೀನಿವಾಸ ಹಳಕಟ್ಟಿ
Published by:Vijayasarthy SN
First published: