ಆರ್​ಆರ್​ನಗರ ಉಪಚುನಾವಣೆ: ಮುನಿರತ್ನ ಪರ ನಾಳೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಪ್ರಚಾರ

ನಾಳೆ ದರ್ಶನ್​ ಆರ್​ಆರ್​ನಗರದಲ್ಲಿ ರೋಡ್​ ಶೋ ನಡೆಸುವ ಮೂಲಕ ಮುನಿರತ್ನ ಪರ ಪ್ರಚಾರ ನಡೆಸಲಿದ್ದಾರೆ. ಇದಕ್ಕೂ ಮುನ್ನ ನಟಿ ಖುಷ್ಬೂ ಇಂದು ನಾಲ್ಕು ಗಂಟೆಯಿಂದ ಲಗ್ಗೆರೆ ಸೇರಿದಂತೆ ಕೆಲ ಭಾಗದಲ್ಲಿ ಮತಯಾಚನೆ ಮಾಡಲಿದ್ದಾರೆ.

ದರ್ಶನ್

ದರ್ಶನ್

  • Share this:
ಬೆಂಗಳೂರು (ಅ.28): ಬಿಜೆಪಿ ಸೇರಿದ ಬಳಿಕ ಮೊದಲ ಬಾರಿ ಚುನಾವಣೆ ಎದುರಿಸುತ್ತಿರುವ ಮುನಿರತ್ನಗೆ ಪ್ರತಿಷ್ಠೆಯ ಕಣವಾಗಿದೆ. ಕ್ಷೇತ್ರದಲ್ಲಿ ಗೆಲುವಿಗಾಗಿ ಹರಸಾಹಸ ನಡೆಸುತ್ತಿರುವ ಅವರ ಪರ ಪ್ರಚಾರಕ್ಕೆ  ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಕೂಡ ಮುಂದಾಗಿದ್ದಾರೆ. ಸಿನಿಮಾ ರಂಗದಲ್ಲಿಯೂ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಮುನಿರತ್ನ ಪರ ಈಗ ಪ್ರಚಾರಕ್ಕೆ ಸ್ಯಾಂಡಲ್​ವುಡ್​ನ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಕೂಡ ಮುಂದಾಗಿದ್ದಾರೆ. ಅಷ್ಟೇ ಅಲ್ಲದೇ, ಇತ್ತೀಚೆಗಷ್ಟೇ ಬಿಜೆಪಿ ಸೇರಿರುವ ನಟಿ ಖುಷ್ಭೂ ಕೂಡ ಅವರ ಪರ ಇಂದು ಪ್ರಚಾರ ನಡೆಸಲು ಮುಂದಾಗಿದ್ದಾರೆ. ಮುನಿರತ್ನ ಹಾಗೂ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಉತ್ತಮ ಸ್ನೇಹವನ್ನು ಹೊಂದಿದ್ದು, ಈ ಹಿನ್ನಲೆ ದರ್ಶನ್​ ಆರ್​ಆರ್​ನಗರ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಮುಂದಾಗಿದ್ದಾರೆ. ದರ್ಶನ್​ ಪ್ರಚಾರದಿಂದ ಕ್ಷೇತ್ರ ಮತ್ತಷ್ಟು ರಂಗೇರಲಿದ್ದು, ಇದು ತಮಗೆ ವರದಾನವಾಗಲಿದೆ ಎಂಬ ಲೆಕ್ಕಾಚಾರ ಮುನಿರತ್ನ ನಡೆಸಿದ್ದಾರೆ ಎನ್ನಲಾಗಿದೆ.  

ನಾಳೆ ದರ್ಶನ್​ ಆರ್​ಆರ್​ನಗರದಲ್ಲಿ ನಗರಗಳಲ್ಲಿ ರೋಡ್​ ಶೋ ನಡೆಸುವ ಮೂಲಕ ಮುನಿರತ್ನ ಪರ ಪ್ರಚಾರ ನಡೆಸಲಿದ್ದಾರೆ. ಇದಕ್ಕೂ ಮುನ್ನ ನಟಿ ಖುಷ್ಬೂ ಇಂದು ನಾಲ್ಕು ಗಂಟೆಯಿಂದ ಲಗ್ಗೆರೆ ಸೇರಿದಂತೆ ಕೆಲ ಭಾಗದಲ್ಲಿ ಮತಯಾಚನೆ ಮಾಡಲಿದ್ದಾರೆ.

ಈ ಹಿಂದೆ ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ನಡೆಸಿದ್ದ ನಟ ದರ್ಶನ್​ ಅವರ ಗೆಲುವಿಗೆ ಸಾಕಷ್ಟ ಪಾತ್ರವಹಿಸಿದ್ದರು. ಈ ಹಿಂದೆ ಚುನಾವಣಾ ಅಭ್ಯರ್ಥಿಗಳ ಮತ ಪ್ರಚಾರದ ಕುರಿತು ಮಾತನಾಡಿದ್ದ ನಟ ದರ್ಶನ್​ ನನಗೆ ಪಕ್ಷಕ್ಕಿಂತ ವ್ಯಕ್ತಿಮುಖ್ಯ. ಈ ಹಿನ್ನಲೆ ಸ್ನೇಹಿತರು ಆಮಂತ್ರಣದ ಹಿನ್ನಲೆ ಅವರ ಪರ ಪ್ರಚಾರ ನಡೆಸುತ್ತೇನೆ ಎಂದಿದ್ದರು.

ಇದನ್ನು ಓದಿ: ಹಣ, ಅಧಿಕಾರದ ಹಿಂದೆ ಬಿದ್ದವರಿಗೆ ಪಾಠ ಕಲಿಸಿ; ಶಾಶ್ವತ ಪರಿಹಾರಕ್ಕೆ ಕೃಷ್ಣಮೂರ್ತಿ ಗೆಲ್ಲಿಸಿ: ನಿಖಿಲ್ ಕುಮಾರಸ್ವಾಮಿ

ಇನ್ನು ದರ್ಶನ್​ ಮುನಿರತ್ನ ಜೊತೆ ಹೆಚ್ಚು ಆತ್ಮೀಯ ಸಂಬಂಧ ಹೊಂದಿದ್ದಾರೆ. ಮುನಿರತ್ನ ನಿರ್ಮಾಣ ಮಾಡಿದ್ದ ಅದ್ಧೂರಿ ಬಜೆಟ್​ನ ಕುರುಕ್ಷೇತ್ರದಲ್ಲಿ ನಟ ದರ್ಶನ್​ ಮಿಂಚಿದ್ದರು. ಬಿಗ್​ ಬಜೆಟ್​ ಸಿನಿಮಾವಾದ ಇದರಲ್ಲಿ ಜೆಡಿಎಸ್​ ಯುವ ನಾಯಕ ನಿಖಿಲ್​ ಕುಮಾರಸ್ವಾಮಿ ಕೂಡ ಅಭಿಮಾನ್ಯು ಪಾತ್ರನಿರ್ವಹಿಸಿದ್ದರು. ಚುನಾವಣಾ ಕಣದಲ್ಲಿ ಸದ್ಯ ಎದುರಾಳಿಗಳಾಗಿರುವ ನಿಖಿಲ್​, ಮುನಿರತ್ನ ಜೊತೆಗಿನ ಸಂಬಂಧ ಚಿತ್ರ ಮುಗಿಯುತ್ತಿದ್ದಂತಲೇ ಮುಕ್ತಾಯವಾಗಿದೆ. ಈಗ ಅವರು ನಮ್ಮ ವಿರೋಧಿ ಅಭ್ಯರ್ಥಿ ಅವರ ವಿರುದ್ಧ ನಾನು ಪ್ರಚಾರ ಮಾಡುತ್ತೇನೆ ಎಂದಿದ್ದಾರೆ.
Published by:Seema R
First published: