ವೀರ ಸಾವರ್ಕರ್ ಫೋಟೋ (Veer Savarkar Photo) ಹಾಕುವ ಬಗ್ಗೆ ಹಿಂದೂ ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarti Sulibele) ನೀಡಿದ ಹೇಳಿಕೆಗೆ SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ (SDPI Secretary Bhaskar Prasad) ಪ್ರತಿಕ್ರಿಯೆ ನೀಡಿದ್ದಾರೆ. ಚಕ್ರವರ್ತಿ ಸೂಲಿಬೆಲೆ ಯಾರು? ಚಕ್ರವರ್ತಿ ಸೂಲಿಬೆಲೆ ಓರ್ವ ಯಕಶ್ಚಿತ್. ಅವರ ಬಗ್ಗೆ ನಾನ್ಯಾಕೆ ಮಾತನಾಡಲಿ. ಚಕ್ರವರ್ತಿ ಸೂಲಿಬೆಲೆ ಓರ್ವ ಭಯೋತ್ಪಾದಕ (Terrorist). ಎಲ್ಲರ ಕೈಯಲ್ಲಿ ಚಾಕು ಚೂರಿ ಕೊಟ್ಟು ಮುನ್ನೆಡೆಸ್ತಾನೆ. ಅಂಥವರ ಬಗ್ಗೆ ಎಲ್ಲ ಮಾಡನಾಡೋದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಭಾಸ್ಕರ್ ಪ್ರಸಾದ್ ನೀಡಿದ ಹೇಳಿಕೆಗೆ ಹಿಂದೂ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿದೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಭಾಸ್ಕರ್ ಪ್ರಸಾದ್, ಇದು ಗೂಂಡಾಗಾರಿಕೆ ಸರ್ಕಾರ. ರೌಡಿಗಳ ತಂಡ ನಡೆಸುತ್ತಿರೋ ಸರ್ಕಾರ ಇದಾಗಿದೆ. ಮಕ್ಕಳಿಗೆ ಮೊಟ್ಟೆ ಕೊಡಲು ಯೋಗ್ಯತೆ ಇಲ್ಲ ಅಂತಾರೆ. ಧರ್ಮದ ವಿಚಾರಕ್ಕೆ ಸಾವಿರಾರು ಕೋಟಿ ಕೊಡ್ತಾರೆ.
ನಾಳೆ ಜನಾಧಿಕಾರದ ಬೃಹತ್ ಸಮಾವೇಶ
ಸಾವರ್ಕರ್ ವಿಚಾರಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್‌ನವರೂ ಒಪ್ಪಿ ನಡೆದುಕೊಂಡಿರೋದು ಕಾಣುತ್ತೆ. ಮುಸಲ್ಮಾನರು ಹಾಗೂ ದಲಿತರ ವಿಚಾರ ಬಂದಾಗ ಕಡೆಗಣಿಸೋದು ಆಗ್ತಿದೆ. ಮುಸಲ್ಮಾನ ಸಮುದಾಯದ ಕಾಂಗ್ರೆಸ್ ಶಾಸಕರು ಮಾತನಾಡಬಾರದು ಎಂದು ಹೇಳುತ್ತಿದೆ
ಇದನ್ನೂ ಓದಿ: Savarkar ಫೋಟೋಗೆ ಬೆಂಕಿ, ಕಾಂಗ್ರೆಸ್ ಮುಖಂಡರ ವಿರುದ್ಧ ಎಫ್ಐಆರ್
ರಾಜ್ಯದಲ್ಲಿ ವಿಪಕ್ಷಗಳು ನಿಷ್ಕ್ರಿಯ
ಇದೇ 21ರಂದು 5 ನೇ ಬೃಹತ್ ಜನಾಧಿಕಾರ ಜನಾಂದೋಲ ಸಮಾವೇಶ ಮಾಡುತ್ತಿದ್ದೇವೆ. ವಿರೋಧ ಪಕ್ಷಗಳು ನಿಷ್ಕ್ರಿಯವಾಗಿವೆ. ಅವುಗಳು ಇಲ್ಲವೇ ಇಲ್ಲಂದತಾಗಿದೆ. ರಾಜ್ಯದಲ್ಲಿ ನಡೆಯುತ್ತಿರೋ ಭ್ರಷ್ಟಾಚಾರ ಸೇರಿ ಎಲ್ಲಾ ವಿಚಾರಗಳಲ್ಲಿ ನಿಷ್ಕ್ರಿಯವಾಗಿದೆ.
ಗೃಹ ಸಚಿವರಿಂದ ತಾರತಮ್ಯ
ಸ್ವತಃ ಸಿಎಂ ಬಸವರಾಜ್ ಬೊಮ್ಮಾಯಿ ಅವರೇ ಗೂಂಡಾಗಿರಿಯ ಹೇಳಿಕೆಯನ್ನು ನೀಡ್ತಿದ್ದಾರೆ. ಗೃಹ ಸಚಿವರು ತಾರತಮ್ಯ ಮಾಡ್ತಿದ್ದಾರೆ. ತಮ್ಮ ಪಕ್ಷದ ಕಾರ್ಯಕರ್ತ ಸತ್ತಾಗ ಮನೆಗೆ ಹೋಗೋದು ಮಾಡ್ತಾರೆ. ಆದ್ರೆ ಬೇರೆಯವರು ಸತ್ತಾಗ ಕಿಂಚಿತ್ತು ಗಮನ ಕೊಡೋದಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ಇದು ಸಾವಿರ ಕೋಟಿ ರೂಪಾಯಿಯ ಪರ್ಚೇಸ್ ಸರ್ಕಾರ
ದಿನೇಶ್ ಕನ್ಯಾಡಿ ಎಂಬ ಯುವಕನನ್ನು ಭಜರಂಗದಳದವರು ಒದ್ದಾಗ ಯಾರು ಮಾತನಾಡಲಿಲ್ಲ. ಅದೇ ಹರ್ಷ, ಪ್ರವೀಣ್ ಸತ್ತಾಗ ಎಲ್ಲಾರು ಮನೆಗೆ ಹೋದರು. ಅದ್ರ ಜೊತೆಗೆ ಹಲ್ಲೆಯಾಗಬೇಕು ಎನ್ನುವ ರೀತಿಯಲ್ಲಿ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದಾರೆ. ಇದು ಸಾವಿರ ಕೋಟಿ ರೂಪಾಯಿಯ ಪರ್ಚೇಸ್ ಸರ್ಕಾರ ಎಂದು ಆರೋಪಿಸಿದರು.
ಮತ್ತೊಂದು ಧರ್ಮ ದಂಗಲ್‌ಗೆ ಮುಂದಾಯ್ತಾ ಸಾವರ್ಕರ್ ವಿಚಾರ?
ಒಂದು ಫ್ಲೆಕ್ಸ್ ಗಲಾಟೆ ಈಗ ಸಾವಿರಾರು ಸಾವರ್ಕರ್ ಫ್ಲೆಕ್ಸ್ ಹುಟ್ಟಿಗೆ ಕಾರಣವಾಗುತ್ತಾ ಅನ್ನೋ ಅನುಮಾನ ಉಂಟಾಗಿದೆ. ಈ ಬಾರಿಯ ಗಣೇಶ ಉತ್ಸವದ ಜೊತೆಗೆ ಸಾರ್ವಕರ್ ಉತ್ಸವ ನಡೆಯುವ ಸಾಧ್ಯತೆಗಳಿವೆ ಎನ್ನಲಾಗ್ತಿದೆ. ಈ ಬಾರಿಯ ಗಣೇಶೋತ್ಸವದಲ್ಲಿ ಸಾರ್ವಕರ್ ಫೋಟೋ ಹಾಕಲು ಹಿಂದೂ ಸಂಘಟನೆಗಳು ಮುಂದಾಗ್ತಿವೆ ಎನ್ನಲಾಗಿದೆ.
ಹಿಂದೂ ಪರ ಚಿಂತಕ ಚಕ್ರವರ್ತಿ ಸೂಲಿಬೆಲೆಯಿಂದ ಸಾವರ್ಕರ್ ಫ್ಲೆಕ್ಸ್ ಅಳವಡಿಸೋದಾಗಿ ಹೇಳಿಕೆ ನೀಡಿದ್ದಾರೆ. ಬರೊಬ್ಬರಿ ಹತ್ತು ಸಾವಿರ ಸಾರ್ವಜನಿಕ ಗಣೇಶ ಉತ್ಸವಗಳ ಪೆಂಡಾಲ್ ಗಳಲ್ಲಿ ಸಾವರ್ಕರ್ ಫೋಟೋ ಹಾಕುವ ಕುರಿತು ಚಿಂತನೆಗಳು ನಡೆದಿವೆಯಂತೆ.
ಪೆಂಡಾಲ್ಗಳಲ್ಲಿ ಸಾರ್ವಕರ್ ಸಾಧನೆಯ ವಿಡಿಯೋ
ವೀರ ಸಾವರ್ಕರ್ ಫೋಟೋ ಜೊತೆ ಬಾಲಗಂಗಾಧರ ತಿಲಕ್ ಅವರ ಫೋಟೋ ಹಾಕುವ ಮೂಲಕ ಹೊಸ ಅಭಿಯಾನ ಆರಂಭಿಸುವ ಕುರಿತು ಹಿಂದೂ ಚಿಂತಕರು ಮತ್ತು ಹೋರಾಟಗಾರರು ಚಿಂತನೆ ನಡೆಸಿದ್ದಾರೆ. ಗಣೇಶನ ಪೆಂಡಾಲ್ಗಳಲ್ಲಿ ಸಾರ್ವಕರ್ ಸಾಧನೆಯ ವಿಡಿಯೋ ಡಿಸ್ಪ್ಲೇ ಮಾಡುವ ಬಗ್ಗೆ ಚರ್ಚೆಗಳು ನಡೆದಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ