ಚಿತ್ರದುರ್ಗ(ಮೇ.29): ಪಠ್ಯ ಪುಸ್ತಕ ಪರಿಷ್ಕರಣೆ (Text Book Row) ಆಗಬೇಕಿರುವುದು ಮಕ್ಕಳಿಗಲ್ಲ, ಈ ಕಾಲದ ಮಕ್ಕಳು ಜಾಣರಿದ್ದಾರೆ. ಶಾಸಕರು (MLA), ಸಂಸದರಿಗಾಗಿ (MP) ಪರಿಷ್ಕರಣೆ ಆಗಬೇಕಿದೆ. ನಮ್ಮ ನಾಡಿನಲ್ಲಿ ಕೆಲ ಮೂರ್ಖರು ಇದ್ದಾರೆ, ಆರ್ಯರು ಬೇರೆ, ದ್ರಾವಿಡರು ಬೇರೆ ಎಂದು ಸುಳ್ಳು ಹೇಳುತ್ತಾರೆ, ಆರ್ಯರು ಹೊರಗಿನಿಂದ ಬಂದವರು, ದ್ರಾವಿಡರು ಮೂಲ ನಿವಾಸಿ ಅಂತ ಬ್ರಿಟಿಷರು ಹೇಳಿದ ಸುಳ್ಳನ್ನೇ ಇವರು ಹೇಳುತ್ತಿದ್ದಾರೆ ಅಂಥ ಅಯೋಗ್ಯರು ಇದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ (Siddaramaiah) ಪರೋಕ್ಷವಾಗಿ ಚಕ್ರವರ್ತಿ ಸೂಲಿಬೆಲೆ (Chakravarti Sulibele) ವ್ಯಂಗ್ಯ ಮಾಡಿದ್ದಾರೆ.
ಚಿತ್ರದುರ್ಗ ನಗರದ ಹಳೆ ಮಾಧ್ಯಮಿಕ ಶಾಲಾ ಮೈದಾನದಲ್ಲಿ ವಿಶ್ವಹಿಂದೂ ಪರಿಷತ್ ವೀರಮದಕರಿ ಸೇವಾ ಟ್ರಸ್ಟ್ ಆಯೋಜಿಸಿದ ಹುತಾತ್ಮ ಯೋಧರಿಗೆ ಗೌರವ ಸಮರ್ಪಣ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಕಿಡಿ
ನಮ್ಮ ನಾಡಿನಲ್ಲಿ ಕೆಲ ಮೂರ್ಖರು ಇದ್ದಾರೆ. ಆರ್ಯರು ಬೇರೆ, ದ್ರಾವಿಡರು ಬೇರೆ ಎಂದು ಸುಳ್ಳು ಹೇಳುತ್ತಾರೆ. ಆರ್ಯರು ಹೊರಗಿನಿಂದ ಬಂದವರು. ದ್ರಾವಿಡರು ಮೂಲ ನಿವಾಸಿ ಅಂತಬ್ರಿಟಿಷರು ಹೇಳಿದ ಸುಳ್ಳನ್ನೇ ಇವರು ಹೇಳುತ್ತಿದ್ದಾರೆ. ಅಂತ ಅಯೋಗ್ಯರು ಇದ್ದಾರೆ. ನಮಗೆ ತೊಂದರೆ ಆಗುತ್ತದೆ ಎಂದಾಗ ನನ್ನ ಜತೆಗೆ ನೂರ ಮೂವತ್ತು ಕೋಟಿ ಜನರು ಮಾತಾಡಬೇಕು. ಈಗ ಕುಳಿತ ಜಾಗದಲ್ಲಿ ಟ್ವೀಟ್ ನೋಡುತ್ತಿದ್ದೆ, ನೋವಾಗುತ್ತದೆ ಎಂದು ಸಿದ್ಧರಾಮಯ್ಯ ಹೆಸರೇಳದೆ ಕಿಡಿ ಕಾರಿದ್ದಾರೆ.
ಈಗಿನ ಮಕ್ಕಳು ಜಾಣರು
ಇನ್ನೂ ಈಗಿನ ಕಾಲದ ಮಕ್ಕಳು ಜಾಣರಿದ್ದಾರೆ ಅವರಿಗೆ ಅರ್ಥ ಆಗುತ್ತದೆ, ಶಾಸಕರು, ಸಂಸದರಿಗಾಗಿ ಪಠ್ಯ ಪುಸ್ತಕ ಪರಿಷ್ಕರಣೆ ಆಗಬೇಕು. ಆರ್ಯರು ಭಾರತದ ಮೂಲ ನಿವಾಸಿಗಳೆಂಬುದು ವೈಜ್ಞಾನಿಕವಾಗಿ ಖಚಿತವಾಗಿದೆ. ಡಿಎನ್ ಎ ಸಹ ಬೇರೆ ದೇಶದವರ ಜತೆ ಮ್ಯಾಚ್ ಆಗಲ್ಲ, ಆರ್ಯರು ಅಂದರೆ ಅಪ್ಪಟ ಭಾರತೀಯರು, ಹೊರಗಿನಿಂದ ಬಂದವರಲ್ಲ ಎಂದು ಅಧಿಕಾರಕ್ಕಾಗಿ ದೇಶ ಒಡೆಯುವ ಮಾತನಾಡುತ್ತಾರೆ ಎಂದಿದ್ದಾರೆ.
ಪಾಕ್ನಲ್ಲಿರುವ ಆದಿತ್ಯ ಮಂದಿರವೂ ಬೇಕು
ಆದ್ದರಿಂದ ದೇಶದ ಪರಂಪರೆ ಮೇಲೆ ನಿರಂತರ ಆಘಾತ ಆಗಿದೆ ಎಂದಿದ್ದಾರೆ. ಇನ್ನೂ ನನಗೆ ಪಾಕ್ ನ ಮುಲ್ತಾನ್ ನಲ್ಲಿರುವ ಆದಿತ್ಯ ಮಂದಿರವೂ ಬೇಕಿದೆ, ಮಸೀದಿ ಕೆಡವಿ ಮಂದಿರ ಕಟ್ಟುವ ಅಧಿಕಾರ ಸಿಕ್ಕಿದೆ. ಆದರೆ ನಾವು ಬೇರೆಯವರಿಗೆ ನೋವು ಕೊಡುವುದು ಬೇಡ ಅಂತೀವಿ. ಆದರೇ ಎಲ್ಲಿವರೆಗೆ ಒನ್ ಸೈಡೆಡ್ ಒಳ್ಳೆಯತನ ಬೇಕು ಹೇಳಿ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Evening Digest: ರಾಜ್ಯಸಭೆಗೆ ಜೈರಾಮ್ ರಮೇಶ್ ಆಯ್ಕೆಗೆ ವಿರೋಧ; ಅಶ್ವತ್ಥ ನಾರಾಯಣ ವಿರುದ್ಧ FIR- ಇಂದಿನ ಪ್ರಮುಖ ಸುದ್ದಿಗಳು
ನಮ್ಮದ್ದು ಯಾವುದು ನಾಶ ಪಡಿಸಿದ್ದೀರಿ ಮರಳಿ ಪಡೆಯುತ್ತೇವೆ, ರಾಮಮಂದಿರ, ಮಥುರಾ ಕೃಷ್ಣ ಮಂದಿರ, ಕಾಶಿ ವಿಶ್ವನಾಥ ಮೂರು ಮಂದಿರ ಬಿಟ್ಟು ಕೊಡಿ, ಬೇರೆ ಮಂದಿರ ಕೇಳಲ್ಲ ಎಂದು ಹೇಳಿದ್ದರು. ಈಗ ಜಾಗೃತ ಹಿಂದೂ ಸಮಾಜಕ್ಕೆ ಯಾರ ಜತೆ ವ್ಯವಹರಿಸಬೇಕೆಂದು ತಿಳಿದಿದೆ ಎಂದಿದ್ದಾರೆ.
ಇನ್ನೂ ಕುರಾನ್ ನ ಸತ್ಯ ಹೇಳಿದ ಮಹಿಳೆಯ ತಲೆ ಕಡಿಯಬೇಕೆಂದು ನೀವು ಶುರು ಮಾಡಿದ್ದೀರಿ, ನೇರವಾಗಿ ಅಲ್ಲದಿದ್ದರೂ ಫೇಕ್ ಐಡಿ ಮಾಡಿಕೊಂಡು ಫೇಸ್ ಬುಕ್ಕಲ್ಲಾದರೂ ಪ್ರಶ್ನಿಸಿ, ಈಗ ಸಾಯಲೆಂದು ಸೈನ್ಯಕ್ಕೆ ಸೇರುವ ಕಾಲ ಹೋಯಿತು. ಈಗ (ಪಾಕ್) ಸಾಯಿಸಲು ಸೈನ್ಯಕ್ಕೆ ಸೇರುವಂತಾಗಿದೆ ಎಂದಿದ್ದಾರೆ.
ಇದನ್ನೂ ಓದಿ: Basavaraj Bommai: ಜನರಿಗೆ ಮತ್ತೊಮ್ಮೆ ‘ಕಾಮನ್ ಮ್ಯಾನ್’ ಆದ ‘ಸಿಎಂ’ ಬಸವರಾಜ ಬೊಮ್ಮಾಯಿ
ಪಾಕಿಸ್ತಾನ ಬಿಲಿಯನ್ ಗಟ್ಟಲೇ ಸಾಲ ಮಾಡಿದೆ.ಇನ್ನೆರಡು ತಿಂಗಳ ನಂತರ ಯಾರಾದರೂ ಅವರಿಗೆ ಭಿಕ್ಷೆ ಕೊಡಬೇಕು, ಪಾಕಿಸ್ತಾನ ದೇಶವೂ ಶ್ರೀಲಂಕಾದಂತೆ ಆಗಲಿದೆ, ಭಾರತದಲ್ಲಿ 9ರೂ. ಕಡಿಮೆ ಮಾಡಿದರೆ ಪಾಕಿಸ್ತಾನದಲ್ಲಿ 30ರೂ ಜಾಸ್ತಿ ಮಾಡಲಾಗಿದೆ, ಇಡೀ ಜಗತ್ತು ಕೊರೊನಾ ಕಾಲದಲ್ಲಿ ನಲುಗಿದೆ, ಇಡೀ ಜಗತ್ತು ಭಾರತ ದೇಶದತ್ತ ನೋಡುತ್ತಿದೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ