Chakka Jam: ದೆಹಲಿ ಹೋರಾಟ ಬೆಂಬಲಿಸಿ ರಾಜ್ಯದಲ್ಲೂ ಪ್ರತಿಭಟನೆ; ಇಂದು ಎಲ್ಲೆಲ್ಲಿ ರಸ್ತೆ ತಡೆ?

ಇಂದು ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಅನ್ನದಾತರು ಹೆದ್ದಾರಿ ತಡೆದು ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದ್ದಾರೆ. ರಾಜ್ಯದ ಉದ್ದಗಲಕ್ಕೂ ರೈತರು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಲಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು(ಫೆ.06): ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿ ಗಡಿಯಲ್ಲಿ ಹೋರಾಟ ಮಾಡುತ್ತಿರುವ ರೈತರು 'ಕೇಂದ್ರ ಸರ್ಕಾರ ಮತ್ತು ಪೊಲೀಸರು ತಮಗೆ ನೀಡುತ್ತಿರುವ ಕಿರುಕುಳಗಳನ್ನು ನಿಲ್ಲಿಸುವವರೆಗೆ ಸರ್ಕಾರದ ಜೊತೆ ಯಾವುದೇ ರೀತಿಯ ಮಾತುಕತೆ ನಡೆಸಲು ಸಾಧ್ಯವಿಲ್ಲ' ಎಂದು ಹೇಳಿದ್ದರು.‌ ಇದೀಗ ಇಂದು 'ಚಕ್ಕಾ ಜಾಮ್' ನಡೆಸುವುದಾಗಿ ಘೋಷಿಸಿದ್ದಾರೆ. ಜೊತೆಗೆ ಚಕ್ಕಾ ಜಾಮ್ ವೇಳೆ ಸಿಲುಕುವ ನಾಗರಿಕರಿಗೆ ಈ ಸಮಸ್ಯೆ ಉಂಟಾಗಲು ಕೇಂದ್ರ ಸರ್ಕಾರ ಯಾವ ರೀತಿ ಕಾರಣ ಎಂಬುದನ್ನು ತಿಳಿಸಿಕೊಡಲು ಮುಂದಾಗಿದ್ದಾರೆ. ಈ ದೆಹಲಿ ರೈತರ ಹೋರಾಟ ಬೆಂಬಲಿಸಿ ಇಂದು ರಾಜ್ಯದಲ್ಲಿ ಹೆದ್ದಾರಿ ತಡೆ ಚಳುವಳಿ ನಡೆಯಲಿದೆ.

  ಇಂದು ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಅನ್ನದಾತರು ಹೆದ್ದಾರಿ ತಡೆದು ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದ್ದಾರೆ. ರಾಜ್ಯದ ಉದ್ದಗಲಕ್ಕೂ ರೈತರು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಲಿದ್ದಾರೆ. ಹಾಗಿದ್ರೆ ಇಂದು ರಾಜ್ಯದಲ್ಲಿ ಎಲ್ಲೆಲ್ಲಿ ರಸ್ತೆ ತಡೆ ಹೋರಾಟ ನಡೆಯಲಿದೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

  ರಾಜ್ಯದಲ್ಲಿ ಎಲ್ಲೆಲ್ಲಿ ರಸ್ತೆ ತಡೆ ಹೋರಾಟ?

  • ಗದಗ ಜಿಲ್ಲೆಯ ಟಿಪ್ಪು ಸುಲ್ತಾನ್ ಸರ್ಕಲ್
  • ಧಾರವಾಡದ ರಮ್ಯ ರೆಸಿಡಿನ್ಸಿ ಬಳಿಯ NH4
  • ಬಾಗಲಕೋಟೆಯ ಹುಬ್ಬಳಿ-ಧಾರವಾಡ NH18
  • ಬಳ್ಳಾರಿಯಲ್ಲಿ 3 ಕಡೆ ರಸ್ತೆ ತಡೆ

  India vs England: ಜೋ ರೂಟ್​ ಇಂಜುರಿಗೆ ತುತ್ತಾದಾಗ ಓಡಿ ಬಂದು ಟ್ರೀಟ್ಮೆಂಟ್ ಕೊಟ್ಟ ವಿರಾಟ್ ಕೊಹ್ಲಿ

  1. ಮರಿಯಮ್ಮನ ಹಳ್ಳಿ NH4
  2. ಢಾಣಾಪುರ NH13
  3. ಅನಂತಶಯನಗುಡಿ SH25

  • ಚಿಕ್ಕಬಳ್ಳಾಪುರ NH7
  • ರಾಯಚೂರು ಲಿಂಗಸೂರು ಟೋಲ್ ಬಂದ್
  • ಚಿತ್ರದುರ್ಗ ನಗರದ ಗ್ರಾಮೀಣ ಬ್ಯಾಂಕ್ ಮುಂಭಾಗ NH4
  • ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ (ಕೊಲಂಬಿಯಾ ಏಷಿಯಾ ಆಸ್ಪತ್ರೆ ಸಿಗ್ನಲ್, ಮೈಸೂರು)
  • ಮೈಸೂರು-ಊಟಿ ಹೆದ್ದಾರಿ (ಬಂಡಿಪುರ APMC ಮುಂಭಾಗ)
  • ಬೆಂಗಳೂರು-ಮೈಸೂರು ಹೆದ್ದಾರಿ, ಮಂಡ್ಯ (VC ಫಾರಂ ಹತ್ತಿರ)
  • ಶ್ರೀರಂಗಪಟ್ಟಣ-ಹಾಸನ ರಸ್ತೆ ತಡೆ
  • ಮಳವಳ್ಳಿ-ಕೆಎಂ ದೊಡ್ಡಿ ನಡುವಿನ ರಾಜ್ಯ ಹೆದ್ದಾರಿ
  • ನಾಗಮಂಗಲ ಬೆಳ್ಳೂರು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ
  • ಹುಣಸೂರು-ಪಿರಿಯಾಪಟ್ಟಣ ರಾಷ್ಟ್ರೀಯ ಹೆದ್ದಾರಿ (KR ನಗರ - ಹಾಸನ ರಸ್ತೆ)
  • ರಾಮನಗರ APMC ಸರ್ಕಲ್
  • ಗುಬ್ಬಿ ಗೇಟ್ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ, ತುಮಕೂರು
  • ಬೆಳಗಾವಿ ರಾಷ್ಟ್ರೀಯ ಹೆದ್ದಾರಿ
  • ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿ, ಹಾಸನ
  • ವಡಗೂರು ಹೆದ್ದಾರಿ ಮತ್ತು ನರಸಾಪುರ ಹೆದ್ದಾರಿ (ಟೊಮ್ಯಾಟೊ ಮಾರ್ಕೆಟ್) ಕೋಲಾರ
  • ಕೊಡಗು - ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿ, ಚಾಮರಾಜನಗರ

  ಬೆಂಗಳೂರು

  • ಯಲಹಂಕ ಪೊಲೀಸ್ ಠಾಣೆ ಸರ್ಕಲ್ ರಸ್ತೆ ತಡೆ
  • KIAL ಬಳಿಯ ಸರಹಳ್ಳಿ ರಸ್ತೆ ತಡೆ (ದೇವನಹಳ್ಳಿ)
  • ಹಳೆ ಮೈಸೂರು ರಸ್ತೆ & ಕೆಆರ್ ಪುರಂ
  • ಮೈಸೂರು ರಸ್ತೆ (ಬಿಡದಿ & ಕೆಂಗೇರಿ ಮಧ್ಯ)
  • ತುಮಕೂರು ರಸ್ತೆ (ನೆಲಮಂಗಲ)
  • ಕರ್ನಾಟಕ - ತಮಿಳುನಾಡು ಗಡಿ (ಅತ್ತಿ ಬೆಲೆ + ಅನೇಕಲ್)

  ಈ ಮೇಲ್ಕಂಡ ಮಾರ್ಗಗಳಲ್ಲಿ ರೈತರು ಇಂದು ರಸ್ತೆ ತಡೆ ಹೋರಾಟ ನಡೆಸಲಿದ್ದಾರೆ. ಈ ಮಾರ್ಗವಾಗಿ ಪ್ರಯಾಣಿಸುವ ಪ್ರಯಾಣಿಕರಿಗೆ ರಸ್ತೆ ತಡೆಯಿಂದಾಗಿ ತೊಂದರೆ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿವೆ  ಎನ್ನಲಾಗಿದೆ.

  (ವರದಿ: ಆಶಿಕ್ ಮುಲ್ಕಿ)
  Published by:Latha CG
  First published: