ರೈತ ಸಂಘಟನೆಗಳಿಂದ ಹೆದ್ದಾರಿ ಬಂದ್ ಹಿನ್ನೆಲೆ; ಬೆಂಗಳೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ರಸ್ತೆ ತಡೆಗೆ ಅನುಮತಿ ಕೊಡಲ್ಲ ಎಂದು ಪೊಲೀಸರು ಹೇಳುತ್ತಿದ್ದರೆ, 12 ಗಂಟೆಗೆ ರಸ್ತೆ ತಡೆ ಮಾಡೇ ಮಾಡ್ತೀವಿ ಅಂತ ರೈತರು ಪಟ್ಟು ಹಿಡಿದು ಕುಳಿತಿದ್ದಾರೆ. ಯಲಹಂಕ RMZ ಗ್ಯಾಲರಿ ಮಾಲ್ ಮುಂಭಾಗದ ರಸ್ತೆಯನ್ನೇ ತಡೆಯಲು ರೈತರು ನಿರ್ಧಾರ ಮಾಡಿದ್ದಾರೆ.

ಕುರುಬೂರು ಶಾಂತಕುಮಾರ್

ಕುರುಬೂರು ಶಾಂತಕುಮಾರ್

 • Share this:
  ಬೆಂಗಳೂರು(ಫೆ.06): ಇಂದು ದೆಹಲಿ ರೈತರ ಹೋರಾಟ ಬೆಂಬಲಿಸಿ ರಾಜ್ಯದಲ್ಲಿಯೂ ಸಹ ಹಲವು ರೈತ ಸಂಘಟನೆಗಳು ಹೆದ್ದಾರಿ ತಡೆ ಮಾಡಲು ಸಜ್ಜಾಗಿವೆ. ವಿವಿಧ ರೈತ ಸಂಘಟನೆಗಳು ಮತ್ತು ಇತರೆ ಸಂಘಟನೆಗಳು ಈ ಹೆದ್ದಾರಿ ತಡೆಗೆ ಬೆಂಬಲ ನೀಡಿವೆ. ಮಧ್ಯಾಹ್ನ 12ರಿಂದ 3 ಗಂಟೆವರೆಗೆ ಹೆದ್ದಾರಿ ತಡೆದು ಬಂದ್ ಮಾಡಲಿದ್ದಾರೆ. ಹೀಗಾಗಿ ರಾಜ್ಯ ರಾಜಧಾನಿಯಲ್ಲಿ ಖಾಕಿ ಪಡೆ ನಿಗಾ ವಹಿಸಿದೆ. ದೆಹಲಿಯಲ್ಲಿ ‌ನಡೆದ ರೈತರ ದಂಗೆಯಂತೆ ಇಲ್ಲಿ ಯಾವುದೇ ಸಣ್ಣ ಘಟನೆಯೂ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.

  ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವ ಪೊಲೀಸ್ ಇಲಾಖೆ,  ಪ್ರತಿಭಟನೆಯ ಇಂಚಿಂಚು ಸನ್ನಿವೇಶಗಳನ್ನು ವಿಡಿಯೋ ರೆಕಾರ್ಡ್ ಮಾಡಲಿದೆ.  ಪ್ರತಿಭಟನಾ ಸ್ಥಳಗಳ ಠಾಣಾ ವ್ಯಾಪ್ತಿಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗುತ್ತದೆ.  ಪ್ರತಿಭಟನಾ ಸ್ಥಳದ ಬಳಿ ಹೆಚ್ಚುವರಿಯಾಗಿ ಕೆಎಸ್ಆರ್ ಪಿ,ಹೋಮ್ ಗಾರ್ಡ್ಸ್ ನಿಯೋಜನೆ ಮಾಡಲಾಗಿದೆ.

  ಪ್ರತಿಭಟನೆ ವೇಳೆ ಪ್ರಚೋದನಾಕಾರಿ ಹೇಳಿಕೆ, ಭಾಷಣ ನೀಡುವವರ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಪ್ರತಿಭಟನೆ ವೇಳೆ ಪೊಲೀಸರು ವಿಧಿಸಿರುವ ಷರತ್ತು ಉಲ್ಲಂಘಿಸಿದರೆ ಕೂಡಲೇ ವಶಕ್ಕೆ ಪಡೆಯಲಾಗುತ್ತದೆ.

  ಮಸ್ಕಿ ಉಪಚುನಾವಣೆ: ಉಸ್ತುವಾರಿಗಳ ಬದಲಾವಣೆ ಹಿಂದಿದೆ ಜಾತಿ ಲೆಕ್ಕಾಚಾರ..!

  ಪೊಲೀಸರು ‌ವಿಧಿಸಿರುವ ಕೆಲ‌ ಷರತ್ತುಗಳು

  •  ಪ್ರತಿಭಟನೆ ವೇಳೆ ಪ್ರಚೋದನಕಾರಿ ಹೇಳಿಕೆಗೆ ಅವಕಾಶವಿಲ್ಲ.

  •  ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು.

  • ಒಂದು ವೇಳೆ ಸಾರ್ವಜನಿಕ ಆಸ್ತಿಗೆ ಹಾನಿಯಾದರೆ ಆಯಾ ಪ್ರತಿಭಟನೆಯ ಆಯೋಜಕರೇ‌ ಹೊಣೆ.

  • ಸಾರ್ವಜನಿಕರಿಗೆ ಯಾವುದೇ ತೊಂದರೆ ನೀಡುವಂತಿಲ್ಲ. ಜನಸಾಮಾನ್ಯರಿಗೆ ಸಮಸ್ಯೆಯಾಗುವ ರೀತಿ ವರ್ತಿಸುವಂತಿಲ್ಲ.

  • ಯಾವುದೇ ಕಾರಣಕ್ಕೂ ಕಾನೂನು-ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವಂತಿಲ್ಲ

  • ಪ್ರತಿಭಟನೆ ವೇಳೆ ಪೊಲೀಸರ ಸಲಹೆ, ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು


  ರೈತರ ರಾಷ್ಟ್ರೀಯ ಹೆದ್ದಾರಿ ತಡೆ ಹೋರಾಟ ಹಿನ್ನೆಲೆ,  ಯಲಹಂಕ ಪೊಲೀಸ್ ಠಾಣೆ ಮುಂಭಾಗದ ವೃತ್ತದಲ್ಲಿ ಬಿಗಿ ಬಂದೋ ಬಸ್ತ್ ಮಾಡಲಾಗಿದೆ.  ಕೆಎಸ್​ಆರ್​ಪಿ ನಿಯೋಜಿಸಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿರುವ ಪೊಲೀಸ್ ಇಲಾಖೆ,  ಯಲಹಂಕ ನ್ಯೂ ಟೌನ್ ಬಳಿಯ ನಾಗೇನಹಳ್ಳಿ ಗೇಟ್ ಬಳಿಯೂ ಟೈಟ್ ಸೆಕ್ಯೂರಿಟಿ ನೀಡಿದೆ.

  ರಸ್ತೆ ತಡೆಗೆ ಅನುಮತಿ ಕೊಡಲ್ಲ ಎಂದು ಪೊಲೀಸರು ಹೇಳುತ್ತಿದ್ದರೆ, 12 ಗಂಟೆಗೆ ರಸ್ತೆ ತಡೆ ಮಾಡೇ ಮಾಡ್ತೀವಿ ಅಂತ ರೈತರು ಪಟ್ಟು ಹಿಡಿದು ಕುಳಿತಿದ್ದಾರೆ. ಯಲಹಂಕ RMZ ಗ್ಯಾಲರಿ ಮಾಲ್ ಮುಂಭಾಗದ ರಸ್ತೆಯನ್ನೇ ತಡೆಯಲು ರೈತರು ನಿರ್ಧಾರ ಮಾಡಿದ್ದಾರೆ.

  ಯಲಹಂಕ ಪೊಲೀಸ್ ಠಾಣೆ ಮುಂಭಾಗದ ವೃತ್ತದಲ್ಲಿ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರಸ್ತೆ ತಡೆಯಲಾಗುತ್ತದೆ. ನಾಗೇನಹಳ್ಳಿ ಗೇಟ್ ಶೆಲ್ ಪೆಂಟ್ರೋಲ್ ಬಂಕ್ ಬಳಿ ಸ್ಥಳೀಯ ರೈತ ಮುಖಂಡ ಹಳ್ಳಿ ನಾರಾಯಣ ನೇತೃತ್ವದಲ್ಲಿ ತಡೆಯಲಾಗುತ್ತದೆ.
  Published by:Latha CG
  First published: