Crime News| ಬೆಂಗಳೂರು ಅನ್ಲಾಕ್ ಆಗುತ್ತಿದ್ದಂತೆ ಆಕ್ಟಿವ್ ಆದ ಸರಗಳ್ಳರು; ನಗರದ ಎರಡು ಕಡೆ ಸರಗಳ್ಳತನ!

ರಾಜ್ಯ ಸರ್ಕಾರ ಇಂದಿನಿಂದ ಅನೇಕ ವಿಚಾರಗಳಿಗೆ ರಿಯಾಯಿತಿ ನೀಡಿ ಅನ್​ಲಾಕ್ ಮಾಡಿದೆ. ಆದರೆ, ಇದನ್ನೇ ಬಳಸಿಕೊಂಡಿರುವ ನಗರದ ಕುಖ್ಯಾತ ಸರಗಳ್ಳರು, ನಗರ ಅನ್​ಲಾಕ್​ ಆಗುತ್ತಿದ್ದಂತೆ ಮತ್ತೆ ತಮ್ಮ ಕೈಚಳಕವನ್ನು ತೋರಿಸಿದ್ದಾರೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  ಬೆಂಗಳೂರು (ಜೂನ್ 21); ಕಳೆದ ಒಂದು ತಿಂಗಳಿನಿಂದ ಕೊರೋನಾ ಸೋಂಕು ಅಧಿಕವಾಗಿದ್ದ ಕಾರಣಕ್ಕೆ ಬೆಂಗಳೂರು ಸೇರಿದಂತೆ ಇಡೀ ರಾಜ್ಯಾದ್ಯಂತ ಲಾಕ್​ಡೌನ್ ಮಾಡಲಾಗಿತ್ತು. ಹೀಗಾಗಿ ಲಾಕ್​ಡೌನ್​ ವೇಳೆ ಅಪರಾಧ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗಿತ್ತು. ಆದರೆ, ಇದೀಗ ರಾಜ್ಯದಲ್ಲಿ ಅನ್​ಲಾಕ್ ಪ್ರಕ್ರಿಯೆಗಳು ಆರಂಭವಾಗಿದೆ. ರಾಜ್ಯ ಸರ್ಕಾರ ಇಂದಿನಿಂದ ಅನೇಕ ವಿಚಾರಗಳಿಗೆ ರಿಯಾಯಿತಿ ನೀಡಿ ಅನ್​ಲಾಕ್ ಮಾಡಿದೆ. ಆದರೆ, ಇದನ್ನೇ ಬಳಸಿಕೊಂಡಿರುವ ನಗರದ ಕುಖ್ಯಾತ ಸರಗಳ್ಳರು, ನಗರ ಅನ್​ಲಾಕ್​ ಆಗುತ್ತಿದ್ದಂತೆ ಮತ್ತೆ ತಮ್ಮ ಕೈಚಳಕವನ್ನು ತೋರಿಸಿದ್ದಾರೆ.

  ಇಂದು ಒಂದೇ ದಿನ ನಗರದ ಎರಡು ಕಡೆ ಸರಗಳ್ಳತನ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಜಯನಗರ ಮತ್ತು ಕೊಡಿಗೆಹಳ್ಳಿಯಲ್ಲಿ ಖದೀಮರು ಸರ ಎಗರಿಸಿದ್ದಾರೆ. ಕೊಡಿಗೆಹಲ್ಳಿಯಲ್ಲಿ ಕಳ್ಳರು ವೃದ್ದೆಯ ಸರ ಕಸಿದು ಪರಾರಿಯಾಗಿದ್ದಾರೆ. ಬೆಳಗ್ಗೆ 8.30ರ ಸುಮಾರಿಗೆ ಲಕ್ಷ್ಮಿ ಎಂಬ ವೃದ್ದೆ ರಸ್ತೆಯಲ್ಲಿ ವಾಕ್ ಮಾಡುವಾಗ ಇಬ್ಬರು ಕಳ್ಳರು ಬೈಕ್​ನಲ್ಲಿ ಬಂದು ಸರವನ್ನು ಕಸಿದಿದ್ದಾರೆ. ಈ ಸಂಬಂಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

  ಇದನ್ನೂ ಓದಿ: Explained| ಸದ್ಯಕ್ಕೆ ಯಡಿಯೂರಪ್ಪ ಸ್ಥಾನ ಭದ್ರ....ಆದರೂ, ಆ ಮೂವರು ಕಮಲ ನಾಯಕರು ಸಿಎಂ ವಿರುದ್ಧ ಬಂಡಾಯ ಎದ್ದಿರುವುದು ಏಕೆ?

  ಅದೇ ರೀತಿ ಜಯನಗರ ಸಾಕಮ್ಮ ಗಾರ್ಡನ್ ಬಳಿ ಮತ್ತೊಂದು ಸರಗಳ್ಳತನ ನಡೆದಿದೆ. ರಾಜೇಶ್ವರಿ ಎಂಬುವರ 72 ಗ್ರಾಂ ಮಾಂಗಲ್ಯ ಸರವನ್ನು ಕಳ್ಳರು ಕದ್ದೊಯ್ದಿದ್ದಾರೆ. ಬೈಕ್ ನಲ್ಲಿ ಬಂದಿದ್ದ ಇಬ್ಬರು ಸರಗಳ್ಳರಿಂದ ಕೃತ್ಯ ನಡೆದಿದ್ದು, ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: