Hassan: ಅಮ್ಮ ಬರ್ತಾಳೆ ಅಂತ ಕಾಯ್ತಿದ್ದ ಮಗನಿಗೆ ಶಾಕ್; ಕೆರೆಯಲ್ಲಿ ಮುಳುಗಿಸಿ ಕೊಂದ ಕಳ್ಳ!

ಖದೀಮನನ್ನು ಬೆನ್ನಟ್ಟಿ ಹಿಡಿದ ಯುವಕರು ಗ್ರಾಮಕ್ಕೆ ಕರೆ ತಂದಿದ್ದಾರೆ. ಕೊಲೆ ಮಾಡಿದ್ದಾನೆ ಎಂಬ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಕೊಲೆಗಾರನಿಗೆ ಹಿಗ್ಗಾಮುಗ್ಗಾ ಗೂಸ ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.

ಕೊಲೆಯಾದ ಮಹಿಳೆ

ಕೊಲೆಯಾದ ಮಹಿಳೆ

  • Share this:
ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕೀಳಲು (Chain Snatching) ಯತ್ನಿಸಿದ್ದನ್ನು ತಡೆದ ಮಹಿಳೆಯನ್ನು ಖದೀಮನೊಬ್ಬ (Chain Snatcher) ಕೆರೆಯಲ್ಲಿ (Lake) ಮುಳುಗಿಸಿ ಜೀವ ತೆಗೆದಿರುವ ಘಟನೆ ಹಾಸನ ನಗರದ ಹೊರವಲಯದ ಗವೇನಹಳ್ಳಿ (Gavenahalli, Hassan) ಗ್ರಾಮದಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಗ್ರಾಮದ ನೀಲಾ (50) ಮೃತ ಮಹಿಳೆ. ನೀಲಾ ಗಾರ್ಮೆಂಟ್ಸ್‌ ನಲ್ಲಿ (Garments Worker) ಕೆಲಸ ಮಾಡುತ್ತಿದ್ದರು. ಮಗನಿಗೆ (Son) ಒಳ್ಳೆಯ ವಿದ್ಯಾಭ್ಯಾಸ (Educatio) ಕೊಡಿಸಬೇಕೆಂಬ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿರುವ (Ujire, Dakshina Kannada) ಪ್ರತಿಷ್ಠಿತ ಶಾಲೆಗೆ (School) ಸೇರಿಸಿದ್ದರು. ಮೂರು ದಿನ ಗಾರ್ಮೆಂಟ್ಸ್‌ ಗೆ ರಜೆ (Leave) ಹಾಕಿ ನಾಳೆ ಮಗನನ್ನು ನೋಡಲು ಉಜಿರಿಗೆ ಹೊರಡಲು ಸಿದ್ಧತೆ ಮಾಡಿಕೊಂಡಿದ್ದರು.

ಮಗನಿಗೆ ಬೇಕಿದ್ದ ಕೆಲ ವಸ್ತುಗಳು, ತಿಂಡಿ ತಿನಿಸುಗಳನ್ನು ಖರೀದಿಸಲು ಪತಿಯೊಂದಿಗೆ ಬೈಕ್ ‌ನಲ್ಲಿ ಗುರುವಾರ ಬೆಳಗ್ಗೆ ಹಾಸನ ನಗರಕ್ಕೆ ಬಂದಿದ್ದ ನೀಲಾ ಬೆಡ್‌ ಶೀಟ್  ಇತ್ಯಾದಿ ವಸ್ತುಗಳನ್ನು ತೆಗೆದುಕೊಂಡು ಮನೆಗೆ ವಾಪಸ್ ಹೊರಟಿದ್ದರು. ಈ ವೇಳೆ ಪತಿ ಬೈಕ್‌ ನಲ್ಲಿ ಮನೆಗೆ ಬಿಡುತ್ತೇನೆ ಎಂದಿದ್ದು, ಬಸ್‌ ನಲ್ಲಿಯೇ ತೆರಳುತ್ತೇನೆ ಎಂದು ಬಸ್ ಏರಿ ಗವೇನಹಳ್ಳಿ ಬಳಿ ಬಂದು ಇಳಿದಿದ್ದಾರೆ.

ಕಾಲು ದಾರಿಯಲ್ಲಿ ಹೋಗ್ತಿರುವಾಗ ಎದುರಾದ ಸರಗಳ್ಳ

ಮನೆಗೆ ಹೋಗಲು ಕೆರೆಯ ಪಕ್ಕದಲ್ಲಿದ್ದ ಕಾಲು ದಾರಿಯಲ್ಲಿ ನಡೆದು ಹೋಗುತ್ತಿದ್ದಾಗ ದಿಢೀರ್ ಎದುರಾದ ಕಂದಲಿಯ ಭರತ್ ಎಂಬ ಖದೀಮ, ನೀಲಾ ಅವರ ಕೊರಳಿಗೆ ಕೈ ಹಾಕಿ ಮಾಂಗಲ್ಯ ಸರ ಕದಿಯಲು ವಿಫಲಯತ್ನ ನಡೆಸಿದ್ದಾನೆ.

ಇದನ್ನೂ ಓದಿ:  Government School: ಇದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ-ಬದಿಪಳಿಕೆ; ಇಲ್ಲಿ ಶಿಕ್ಷಕರಿಗಾಗಿ ಕಾಯುತ್ತಿದ್ದಾರೆ ಮಕ್ಕಳು!

ಕೆರೆಯ ನೀರಿನಲ್ಲಿ ಮುಳುಗಿಸಿ ಕೊಲೆ

ಅರ್ಧ ಸರ ಕಳ್ಳನ ಕೈ ಸೇರಿದ್ದರೆ ಉಳಿದರ್ಧ ಮಹಿಳೆ ಬಳಿಯಲ್ಲಿಯೇ ಉಳಿದಿದೆ. ಇಡೀ ಚಿನ್ನದ ಸರ ಕೀಳಲು ಅವಕಾಶ ನೀಡದೇ ಇದ್ದಾಗ ಕೋಪಗೊಂಡ ದುರುಳ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ವೇಳೆ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದಾರೆ. ನಂತರ ಕೆಸರು ಮಿಶ್ರಿತ ಕೆರೆಯ ನೀರಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾನೆ.

ಕೊಲೆಗಾರನನ್ನ ಹಿಡಿದ ಯುವಕರು

ಅಣತಿ‌ ದೂರದಲ್ಲೇ ಹೊರ ರಾಜ್ಯದ ಕೆಲವು ಯುವಕರು ಕೆಲಸ‌ ಮಾಡುತ್ತಿದ್ದು ಮಹಿಳೆ ಕಿರುಚಿದ್ದನ್ನು ಕೇಳಿಸಿಕೊಂಡು ಓಡಿ ಬಂದಿದ್ದು, ಅಷ್ಟರಲ್ಲಿ ನೀಲಾ ಕೊಲೆ ನಡೆದು ಹೋಗಿತ್ತು.‌ ಸುತ್ತ ನೋಡಿದಾಗ ಕೊಲೆಗಾರ ಭರತ್ ಪರಾರಿಯಾಗಲು ಯತ್ನಿಸಿದ್ದಾನೆ.

ಖದೀಮನನ್ನ ಪೊಲೀಸರ ವಶಕ್ಕೆ ನೀಡಿದ ಗ್ರಾಮಸ್ಥರು

ಖದೀಮನನ್ನು ಬೆನ್ನಟ್ಟಿ ಹಿಡಿದ ಯುವಕರು ಗ್ರಾಮಕ್ಕೆ ಕರೆ ತಂದಿದ್ದಾರೆ. ಕೊಲೆ ಮಾಡಿದ್ದಾನೆ ಎಂಬ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಕೊಲೆಗಾರನಿಗೆ ಹಿಗ್ಗಾಮುಗ್ಗಾ ಗೂಸ ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.

ಸುದ್ದಿ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಆರ್.ಶ್ರೀನಿವಾಸ್‌ಗೌಡ, ಡಿವೈ‌ಎಸ್‌‌ಪಿ ಉದಯ್‌ ಭಾಸ್ಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈವರೆಗೆ ಜಿಲ್ಲೆಯ ಹಲವೆಡೆ ಬೈಕ್ ‌ನಲ್ಲಿ ಬಂದು ಇಲ್ಲವೆ ಹೊಂಚು ಹಾಕಿ ಚೋರರು ಬೆಲೆಬಾಳುವ ಸರ ಕಿತ್ತು ಪರಾರಿಯಾಗುತ್ತಿದ್ದರು. ಆದರೀಗ ಜೀವ ತೆಗೆಯುವ ಹಂತಕ್ಕೂ ಹೋಗಿರುವುದು ಸಹಜವಾಗಿಯೇ ಆತಂಕ ಮೂಡಿಸಿದೆ.

ಇದನ್ನೂ ಓದಿ:  High Court: ಪ್ರೀತ್ಸೋದು ತಪ್ಪಲ್ಲ, ಆದ್ರೆ ಅಪ್ಪ-ಅಮ್ಮನ ತ್ಯಾಗ ನೆನಪಿರಲಿ

ತಬ್ಬಲಿಯಾದ ಮಗ

ಬಡಾವಣೆ ಪೊಲೀಸರು ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ. ಇತ್ತ ಮಗನನ್ನು ಕಾಣುವ ಆತುರದಲ್ಲಿದ್ದ ತಾಯಿ ತನ್ನದಲ್ಲದ ತಪ್ಪಿಗೆ ಪ್ರಾಣ ಕಳೆದಕೊಂಡಿದ್ದರೆ, ಅತ್ತ ನಾಳೆ ನನ್ನನ್ನು ನೋಡಲು ಅಮ್ಮ ಬರುತ್ತಿದ್ದಾಳೆ ಎಂದು ಹಾಸ್ಟೆಲ್ ‌ನಲ್ಲಿ ಕಾಯುತ್ತಿದ್ದ ಮಗ ತಬ್ಬಲಿಯಾಗಿದ್ದಾನೆ.
Published by:Mahmadrafik K
First published: