ಚಡಚಣ ಸಹೋದರರ ಕೊಲೆ ಆರೋಪ‌ ಪ್ರಕರಣ : ಮಹಾದೇವ ಭೈರಗೊಂಡ ಸೇರಿ ಮೂವರಿಗೆ ಜಾಮೀನು

ವಿಜಯಪುರ ಜಿಲ್ಲೆಯ ಉಮರಾಣಿ ರೌಡಿ ಶೀಟರ್ ಮಹಾದೇವ ಸಾಹುಕಾರ ಭೈರಗೊಂಡ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕಲಬುರ್ಗಿ ಹೈಕೋರ್ಟ್ ನ್ಯಾಯಮೂರ್ತಿ ಸೋಮಶೇಖರ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ.

G Hareeshkumar | news18
Updated:April 25, 2019, 5:32 PM IST
ಚಡಚಣ ಸಹೋದರರ ಕೊಲೆ ಆರೋಪ‌ ಪ್ರಕರಣ : ಮಹಾದೇವ ಭೈರಗೊಂಡ ಸೇರಿ ಮೂವರಿಗೆ ಜಾಮೀನು
ಮಹಾದೇವ ಸಾಹುಕಾರ ಭೈರಗೊಂಡ, ಮುಡವೆ ಮತ್ತು ಶಿವಾನಂದ ಬಿರಾದಾರ
G Hareeshkumar | news18
Updated: April 25, 2019, 5:32 PM IST
ವಿಜಯಪುರ (ಏ.25) : ಭೀಮಾ ತೀರದ ಹಂತದ ಧರ್ಮರಾಜ ಚಡಚಣ ನಕಲಿ ಎನಕೌಂಟರ್ ಹಾಗೂ ಆತನ ತಮ್ಮ ಗಂಗಾಧರ ಚಡಚಣ ನಿಗೂಢ ಕೊಲೆ ಆರೋಪ ಈ ಎರಡೂ ಪ್ರಕರಣಗಳಲ್ಲಿ ಪ್ರಮುಖ ಆರೋಪಿ ಮಹಾದೇವ ಸಾಹುಕಾರ ಭೈರಗೊಂಡ ಸೇರಿ ಮೂವರಿಗೆ ಜಾಮೀನು ದೊರೆತಿದೆ.

ಜಿಲ್ಲೆಯ ಉಮರಾಣಿ ರೌಡಿ ಶೀಟರ್ ಮಹಾದೇವ ಸಾಹುಕಾರ ಭೈರಗೊಂಡ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕಲಬುರ್ಗಿ ಹೈಕೋರ್ಟ್ ಸಂಚಾರಿಪೀಠದ ನ್ಯಾಯಮೂರ್ತಿ ಸೋಮಶೇಖರ್ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ. ಭೈರಗೊಂಡನ ಜೊತೆಗೆ ಸಿದ್ದಗೊಂಡ ಮುಡವೆ ಮತ್ತು ಶಿವಾನಂದ ಬಿರಾದಾರ ಅವರಿಗೂ ಬೇಲ್ ದೊರೆತಿದೆ.

ಕಲಬರ್ಗಿ ಹೈಕೋರ್ಟ್​ ನಿಂದ ಜಾಮೀನು

ಇಂದು ಬೆಳಿಗ್ಗೆ ಗಂಗಾಧರ ಚಡಚಣ ನಿಗೂಢ ಕೊಲೆ ಪ್ರಕರಣದಲ್ಲಿ ನ್ಯಾಯಾಯ ಮಹಾದೇವ ಸಾಹುಕಾರ ಭೈರಗೊಂಡಗೆ ಷರತ್ತುಬದ್ಧ ಜಾಮೀನು ನೀಡಿತ್ತು. ಇಂದು ಮಧ್ಯಾಹ್ನ ಧರ್ಮರಾಜ ಚಡಚಣ ನಕಲಿ ಎನಕೌಂಟರ್ ಪ್ರಕರಣದಲ್ಲಿಯೂ ಮಹಾದೇವ ಸಾಹುಕಾರ ಭೈರಗೊಂಡಗೆ ಷರತ್ತು ಬದ್ಧ ಜಾಮೀನು ನೀಡಿ ಕಲಬುರಗಿ ಹೈಕೋರ್ಟ್ ನ್ಯಾಯಮೂರ್ತಿ ಸೋಮಶೇಖರ್ ಆದೇಶ ಹೊರಡಿಸಿದ್ದಾರೆ. ಆರೋಪಿ ಪರ ನ್ಯಾಯವಾದಿ ಸಿ.ವಿ. ನಾಗೇಶ್ ವಾದ ಮಂಡಿಸಿದ್ದರು.

ಈ ಎರಡು ಪ್ರಕರಣಗಳಲ್ಲಿ ಕೆಲ ದಿನಗಳ ಹಿಂದಷ್ಟೇ ಪಿಎಸ್​ಐ ಗೋಪಾಲ ಹಳ್ಳೂರ ಸೇರಿದಂತೆ ಆರೋಪಿ ಪೊಲೀಸರಿಗೂ ಜಾಮೀನು ನೀಡಲಾಗಿತ್ತು.

ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್:2017 ರ ಅಕ್ಟೋಬರ್ 30 ಭೀಮಾ ತೀರದ ಹಂತಕ ಧರ್ಮರಾಜ ಚಡಚಣ ನನ್ನು ಅಂದಿನ ಚಡಚಣ ಪಿಎಸ್‌ಐ ಗೋಪಾಲ ಹಳ್ಳೂರ ನೇತೃತ್ವದ ತಂಡ ಎನಕೌಂಟರ್ ಮಾಡಿತ್ತು.  ಅಲ್ಲದೇ, ಅದೇ ದಿನ ಆತನ ತಮ್ಮ ಗಂಗಾಧರ ಚಡಚಣನನ್ನು ಅಪಹರಿಸಿ ನಿಗೂಢವಾಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ಗಂಗಾಧರ ಚಡಚಣ ಶವ ಈವರೆಗೂ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಧರ್ಮ‌ರಾಜ ಚಡಚಣ ತಾಯಿ ತಮ್ಮ ಮಗ ಗಂಗಾಧರ ಚಡಚಣನನ್ನು ಹುಡುಕಿ ಕೊಡುವಂತೆ ಕಲಬುರಗಿ ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಸಲ್ಲಿಸಿದ್ದರು.

ಇದನ್ನೂ ಓದಿ : ಭೀಮಾ ತೀರದ ಚಡಚಣ ಸಹೋದರರ ಹತ್ಯೆಗೆ 1 ವರ್ಷ – ಇಲ್ಲಿಯವರೆಗೆ ನಡೆದದ್ದೇನು?

ಅದಾದ ಬಳಿಕ ಮಹಾದೇವ ಸಾಹುಕಾರ ಭೈರಗೊಂಡ ಸೇರಿದಂತೆ 16 ಜನರು ಸಿಐಡಿ ಪೊಲೀಸರು ಬಂಧಿಸಿ ಆರೋಪ ಪಟ್ಟಿ ಸಲ್ಲಿಸಿದ್ದರು. ಇದೀಗ ಕಲಬುರಗಿ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ ಎಂದು ಮಹಾದೇವ ಭೈರಗೊಂಡ ಕುಟುಂಬದ ಮೂಲಗಳು ನ್ಯೂಸ್ 18 ಕನ್ನಡಕ್ಕೆ ಖಚಿತಪಡಿಸಿವೆ.

 (ವರದಿ: ಮಹೇಶ್ ವಿ ಶಟಗಾರ) 

First published:April 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ