ಮೂರನೇ ಬಾರಿಗೆ ಸಿಇಟಿ ಮುಂದೂಡಿಕೆ - ಗುಲ್ಬರ್ಗಾ ವಿ.ವಿ. ಯಡವಟ್ಟಿಗೆ ಪರೀಕ್ಷಾರ್ಥಿಗಳ ಆಕ್ರೋಶ

ಬಿ.ಎಡ್. ಪ್ರಶ್ನೆಪತ್ರಿಕೆ ಲೀಕ್ ನಿಂದಾಗಿ ಒಂದು ವಾರದ ಹಿಂದೆಯಷ್ಟೇ ಗುಲ್ಬರ್ಗಾ ವಿಶ್ವವಿದ್ಯಾಲಯದ ಕಾರ್ಯವೈಖರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಪಿಎಚ್.ಡಿ. ಪ್ರವೇಶ ಪ್ರಶ್ನಪತ್ರಿಕೆಯೂ ಲೀಕ್ ಆಗಿದೆ ಎಂಬ ಆರೋಪ ಕೇಳಿ ಬಂದಿದ್ದು, ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿದ್ದಾರೆ

ಗುಲಬರ್ಗ ವಿಶ್ವವಿದ್ಯಾಲಯ

ಗುಲಬರ್ಗ ವಿಶ್ವವಿದ್ಯಾಲಯ

  • Share this:
ಕಲಬುರ್ಗಿ(ಮಾ.12) : ಗುಲ್ಬರ್ಗಾ ವಿಶ್ವವಿದ್ಯಾಲಯದ ಯಡವಟ್ಟು ಮುಂದುವರೆದಿದ್ದು, ಇಂದು ನಡೆಯಬೇಕಿದ್ದ ರಾಜ್ಯಶಾಸ್ತ್ರ ವಿಷಯದ ಪಿಎಚ್.ಡಿ. ಪ್ರವೇಶ ಪರೀಕ್ಷೆ ಮುಂದೂಡಲಾಗಿದೆ. ಇದೇ ಪರೀಕ್ಷೆ ಮುಂದೂಡುತ್ತಿರುವುದು ಇದು ಮೂರನೆಯ ಬಾರಿಗೆ. ಮೊದಲ ಬಾರಿ ಪ್ರಶ್ನೆಪತ್ರಿಕೆ ಕೇವಲ ಇಂಗ್ಲೀಷ್ ನಲ್ಲಿದೆ ಎಂಬ ಕಾರಣಕ್ಕೆ ಮುಂದೂಡಿದ್ದರೆ, ನಂತರದಲ್ಲಿ ಕೀ ಉತ್ತರಗಳು ತಪ್ಪಾಗಿವೆ ಎಂದು ಮರು ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಪ್ರಶ್ನೆಪತ್ರಿಕೆ ಲೀಕ್ ಆಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿದ್ದಾರೆ. ಮತ್ತೊಂದೆಡೆ ಬಿ.ಕಾಂ. ಫಲಿತಾಂಶ ವಿಳಂಬ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಬಿ.ಎಡ್. ಪ್ರಶ್ನೆಪತ್ರಿಕೆ ಲೀಕ್ ನಿಂದಾಗಿ ಒಂದು ವಾರದ ಹಿಂದೆಯಷ್ಟೇ ಗುಲ್ಬರ್ಗಾ ವಿಶ್ವವಿದ್ಯಾಲಯದ ಕಾರ್ಯವೈಖರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಪಿಎಚ್.ಡಿ. ಪ್ರವೇಶ ಪ್ರಶ್ನಪತ್ರಿಕೆಯೂ ಲೀಕ್ ಆಗಿದೆ ಎಂಬ ಆರೋಪ ಕೇಳಿ ಬಂದಿದ್ದು, ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿದ್ದಾರೆ. ಇಂದು ನಡೆಯಬೇಕಿದ್ದ ರಾಜ್ಯಶಾಸ್ತ್ರ ಪಿಎಚ್.ಡಿ. ಪರೀಕ್ಷೆ ಮುಂದೂಡಲಾಗಿದೆ. ಒಂದೇ ವಿಷಯದ ಪ್ರವೇಶ ಪರೀಕ್ಷೆಯನ್ನು ಮುಂದೂಡುತ್ತಿರುವುದು ಇದು ಮೂರನೆಯ ಬಾರಿಗೆ ಅನ್ನೋದು ಅಚ್ಚರಿಯೆನಿಸಿದರೂ ಸತ್ಯ. ಕೇವಲ ಇಂಗ್ಲೀಷ್ ನಲ್ಲಿ ಮಾತ್ರ ಪ್ರಶ್ನೆ ಪತ್ರಿಕೆ ಮುದ್ರಿಸಲಾಗಿದೆ ಎಂಬ ಕಾರಣದಿಂದಾಗಿ ಮೊದಲ ಬಾರಿ ಪ್ರವೇಶ ಪರೀಕ್ಷೆ ಮುಂದೂಡಲಾಗಿತ್ತು.

ನಂತರದಲ್ಲಿ ನಡೆಸಿದ್ದ ಪ್ರವೇಶ ಪರೀಕ್ಷೆಯ ಕೀ ಉತ್ತರಗಳು ಸರಿಯಿಲ್ಲ ಎಂಬ ಕಾರಣಕ್ಕೆ ಅದನ್ನು ರದ್ದು ಮಾಡಲಾಗಿತ್ತು. ಮೂರನೆಯ ಬಾರಿಗೆ ಇಂದು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಇಂದೂ ಸಹ ಯಡವಟ್ಟು ನಡೆದು ಹೋಗಿದೆ. ಪರೀಕ್ಷಾ ಕೊಠಡಿಗೆ ಬರುವ ಮುನ್ನವೇ ಪ್ರಶ್ನೆಪತ್ರಿಕೆ ಲಕೋಟೆ ಒಡೆದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಪ್ರಶ್ನೆಪತ್ರಿಕೆ ಲೀಕ್ ಮಾಡಿ, ನಂತರ ಹಾಲ್ ಗೆ ತರಲಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿದ್ದಾರೆ. ಆಡಳಿತ ಕಛೇರಿ ಎದುರು ಪ್ರತಿಭಟನೆ ನಡೆಸಿ, ವಿಶ್ವವಿದ್ಯಾಲಯದ ಕಾರ್ಯವೈಖರಿ ವಿರುದ್ಧ ಪರೀಕ್ಷಾರ್ಥಿಗಳು ಆಕ್ರೋಶ ವ್ಯಕ್ತಪಡಿಸಲಾಯಿತು.

ಸ್ಥಳಕ್ಕೆ ಆಗಮಿಸಿದ ಕುಲಸಚಿವ ಸೋಮಶೇಖರ್ ಪರೀಕ್ಷಾರ್ಥಿಗಳ ಮನವೊಲಿಕೆಗೆ ಯತ್ನಿಸಿದರು. ಆದರೆ ಪರೀಕ್ಷಾ ಹಾಲ್ ಗೆ ಪ್ರಶ್ನೆ ಪತ್ರಿಕೆ ಲಕೋಟೆ ಒಡೆದದ್ದು ಯಾಕೆ. ಪರೀಕ್ಷಾರ್ಥಿಗಳಿಗೆ ತೋರಿಸಿದ ನಂತರವೇ ಲಕೋಟೆಯ ಸೀಲ್ ಒಡೆಯಬೇಕಾಗಿತ್ತು ಎಂದು ಪ್ರತಿಭಟನಾಕಾರರು ಕಿಡಿಕಾರಿದರು. ಕೊನೆಗೆ ಪರೀಕ್ಷೆಯನ್ನು ಮುಂದೂಡಿರುವುದಾಗಿ ಪ್ರಕಟಿಸಿದ ಕುಲಸಚಿವರು, ಶೀಘ್ರವೇ ಮುಂದಿನ ಪರೀಕ್ಷಾ ದಿನಾಂಕ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ :  ಕೊರೋನಾ ಶಂಕೆ: ಸೌದಿಯಿಂದ ಮರಳಿದ್ದ ವೃದ್ಧ ಸಾವು, ಸಂಜೆ ಸಿಗಲಿದೆ ಖಚಿತ ಮಾಹಿತಿ, ಆತಂಕದ ಅಗತ್ಯವಿಲ್ಲ

ಮತ್ತೊಂದೆಡೆ ಬಿ.ಕಾಂ. ಫಲಿತಾಂಶ ಪ್ರಕಟಿಸಲು ಅನಗತ್ಯ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಅಹಿಂದ ಚಿಂತಕರ ವೇದಿಕೆ ನೇತೃತ್ವದಲ್ಲಿ ವಿಶ್ವವಿದ್ಯಾಲಯದ ಆಡಳಿತ ಕಛೇರಿ ಎದುರು ಪ್ರತಿಭಟನೆ ನೆಡೆಸಿದರು. ವಿಶ್ವವಿದ್ಯಾಲಯದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಫಲಿತಾಂಶ ಪ್ರಕಟಿಸುವಂತೆ ಆಗ್ರಹಿಸಿದರು.
First published: