2019ನೇ ಸಾಲಿನ ಸಿಇಟಿ ವೇಳಾಪಟ್ಟಿ ಪ್ರಕಟ; ಈ ಬಾರಿಯೂ ಆನ್​ಲೈನ್​ ಪರೀಕ್ಷೆಯಿಲ್ಲ

ಏಪ್ರಿಲ್​ ತಿಂಗಳಲ್ಲೇ ಪರೀಕ್ಷೆ ಇರುವುದರಿಂದ ಆನ್​ಲೈನ್​ ಪರೀಕ್ಷೆ ನಡೆಸಲು ಸಿದ್ಧತೆಗೆ ಹೆಚ್ಚಿನ ಸಮಯಾವಕಾಶ ಸಿಗುವುದಿಲ್ಲ ಎಂಬ ಕಾರಣಕ್ಕೆ ಈ ವರ್ಷ ಆನ್​ಮೈಲ್​ ಪರೀಕ್ಷೆ ನಡೆಸುವುದು ಬೇಡ ಎಂಬ ನಿರ್ಧಾರ ಕೈಗೊಳ್ಳಲಾಗಿದೆ.

sushma chakre | news18
Updated:January 12, 2019, 8:36 AM IST
2019ನೇ ಸಾಲಿನ ಸಿಇಟಿ ವೇಳಾಪಟ್ಟಿ ಪ್ರಕಟ; ಈ ಬಾರಿಯೂ ಆನ್​ಲೈನ್​ ಪರೀಕ್ಷೆಯಿಲ್ಲ
ಸಾಂದರ್ಭಿಕ ಚಿತ್ರ
sushma chakre | news18
Updated: January 12, 2019, 8:36 AM IST

ಬೆಂಗಳೂರು (ಜ.12): 2019ನೇ ಶೈಕ್ಷಣಿಕ ವರ್ಷದ ಸಿಇಟಿ ಪರೀಕ್ಷೆ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಘೋಷಣೆ ಮಾಡಿದೆ. ಈ ಬಾರಿ ಏಪ್ರಿಲ್ 23, 24ರಂದು ಸಿಇಟಿ ಪರೀಕ್ಷೆಗಳು ನಡೆಯಲಿವೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳ ಜೊತೆಗೆ ಗುರುವಾರ ಸಭೆ ನಡೆಸಿದ್ದ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಪರೀಕ್ಷಾ ವಿಧಾನದ ಬಗ್ಗೆ ಚರ್ಚಿಸಿದ್ದರು. ಈ ವೇಳೆ ಆನ್​ಲೈನ್​ ಮೂಲಕವೇ ಸಿಇಟಿ ಪರೀಕ್ಷೆ ನಡೆಸುವ ಬಗ್ಗೆಯೂ ಚರ್ಚೆಗಳು ನಡೆದಿದ್ದವು. ಆದರೆ, ಏಪ್ರಿಲ್​ ತಿಂಗಳಲ್ಲೇ ಪರೀಕ್ಷೆ ಇರುವುದರಿಂದ ಆನ್​ಲೈನ್​ ಪರೀಕ್ಷೆ ನಡೆಸಲು ಸಿದ್ಧತೆಗೆ ಹೆಚ್ಚಿನ ಸಮಯಾವಕಾಶ ಸಿಗುವುದಿಲ್ಲ ಎಂಬ ಕಾರಣಕ್ಕೆ ಈ ವರ್ಷ ಆನ್​ಮೈಲ್​ ಪರೀಕ್ಷೆ ನಡೆಸುವುದು ಬೇಡ ಎಂಬ ನಿರ್ಧಾರ ಕೈಗೊಳ್ಳಲಾಯಿತು. ಇದನ್ನೂ ಓದಿ: ಪಿಯು ಪರೀಕ್ಷೆ ವೇಳಾಪಟ್ಟಿ ಪ್ರಕಟ: ಮಾರ್ಚ್ 1ರಿಂದ 18ರವರೆಗೆ ಪರೀಕ್ಷೆ ಮೊದಲ ವರ್ಷದ ಅಥವಾ ಮೊದಲ ಸೆಮಿಸ್ಟರ್​ನ ಇಂಜಿನಿಯರಿಂಗ್​, ಟೆಕ್ನಾಲಜಿ, ಫಾರ್ಮ್​ ಸೈನ್ಸ್​ ಕೋರ್ಸಸ್, ಬ್ಯಾಚುಲರ್​ ಆಫ್​ ವೆಟರ್ನರಿ ಸೈನ್ಸ್​ ಆ್ಯಂಡ್​ ಅನಿಮಲ್ ಹಸ್ಬಂಡ್ರಿ, ಬಿಎಸ್​ಸಿ ಅಗ್ರಿಕಲ್ಚರ್, ಬಿಎಸ್​ಸಿ ಸೆರಿಕಲ್ಚರ್, ಬಿಎಸ್​ಸಿ ಹಾರ್ಟಿಕಲ್ಚರ್, ಬಿಎಸ್​ಸಿ ಫಾರೆಸ್ಟ್ರಿ, ಬಿಟೆಕ್, ಬಿಎಸ್​ಸಿ ಕಮ್ಯುನಿಟಿ ಸೈನ್ಸ್, ಬಿಟೆಕ್​ ಅಗ್ರಿಕಲ್ಚರಲ್ ಇಂಜಿನಿಯರಿಂಗ್, ಬಿಟೆಕ್ ಫುಡ್​ ಟೆಕ್ನಾಲಜಿ, ಬಿಎಫ್​ಎಸ್​ಸಿ (ಫಿಷರೀಸ್), ಬಿಎಸ್​ಸಿ ಅಗ್ರಿಕಲ್ಚರಲ್ ಮಾರ್ಕೆಟಿಂಗ್​ ಆ್ಯಂಡ್​ ಕೋ ಆಪರೇಟಿವ್ಸ್​, ಬಿ ಫಾರ್ಮಾ ಮತ್ತು ಫಾರ್ಮಾ-ಡಿ ಕೋರ್ಸ್​ಗಳಿಗೆ ವಿದ್ಯಾರ್ಥಿಗಳ ಪ್ರವೇಶಾತಿಗಾಗಿ ನಡೆಸಲಾಗುವ ಸಿಇಟಿ ಪರೀಕ್ಷೆಗಳು ಏಪ್ರಿಲ್​ ಕೊನೆಯ ವಾರದಲ್ಲಿ ನಡೆಯಲಿವೆ.

ಈ ವರ್ಷದ ಸಿಟಿಟಿ ಪರೀಕ್ಷೆ ವೇಳಾಪಟ್ಟಿ

ಇದನ್ನೂ ಓದಿ: ಸಿಇಟಿ ಫಲಿತಾಂಶ ಪ್ರಕಟ; ಎಂಜಿನಿಯರಿಂಗ್ ವಿಭಾಗದಲ್ಲಿ​ ಶ್ರೀಧರ್ ದೊಡ್ಡಮನಿ ಪ್ರಥಮ ಏಪ್ರಿಲ್ 23ರಂದು ಬೆಳಗ್ಗೆ 10.30ರಿಂದ 11.50ರವರೆಗೆ ಜೀವಶಾಸ್ತ್ರ ವಿಷಯದ ಪರೀಕ್ಷೆ ನಡೆಯಲಿದೆ. ಮಧ್ಯಾಹ್ನ 2.30ರಿಂದ 3.50ರವರೆಗೆ ಗಣಿತ ವಿಷಯದ ಪರೀಕ್ಷೆ ಇರಲಿದೆ. ಏಪ್ರಿಲ್ 24ರಂದು ಬೆಳಗ್ಗೆ 10.30ಕ್ಕೆ ಭೌತಶಾಸ್ತ್ರ ಮತ್ತು 2.30ಕ್ಕೆ ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ. ಏಪ್ರಿಲ್​ 25ರಂದು ಬೆಳಗ್ಗೆ 11.30ಕ್ಕೆ ಹೊರನಾಡು ಮತ್ತು ಗಡಿನಾಡು ಕನ್ನಡ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ಇದು ಬೆಂಗಳೂರಿನಲ್ಲಿ ಮಾತ್ರ ಇರಲಿದೆ.

First published:January 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ