ಅಕ್ಟೋಬರ್​ 15ರ ಬಳಿಕ ಶಾಲಾ-ಕಾಲೇಜ್​ ಆರಂಭ; ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದ ಕೇಂದ್ರ

school reopen: ರಾಜ್ಯ ಸರ್ಕಾರಗಳು ಶಾಲಾ-ಕಾಲೇಜ್​ ಆರಂಭದ ಬಗ್ಗೆ ಆಯಾ ಶಿಕ್ಷಣ ಸಂಸ್ಥೆಗಳೊಡನೆ ಚರ್ಚೆ ನಡೆಸಿ ಕ್ರಮಕ್ಕೆ ಮುಂದಾಗಬಹುದು.  ಪರಿಸ್ಥಿತಿ ಅವಲೋಕನದ ಆಧಾರದ ಜೊತೆ ಷರತ್ತುಗಳ ಅನ್ವಯ ಕಡ್ಡಾಯವಾಗಿದೆ

news18-kannada
Updated:September 30, 2020, 9:45 PM IST
ಅಕ್ಟೋಬರ್​ 15ರ ಬಳಿಕ ಶಾಲಾ-ಕಾಲೇಜ್​ ಆರಂಭ; ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದ ಕೇಂದ್ರ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಸೆ.30): ಶಾಲಾ-ಕಾಲೇಜುಗಳನ್ನು ಪುನಾರಾಂಭ ಮಾಡುವ ಕುರಿತು ಹೊಸ ಮಾರ್ಗಸೂಚಿ ಹೊರಡಿಸಿರುವ ಕೇಂದ್ರ, ಅಕ್ಟೋಬರ್​ 15ರ ನಂತರ ಶಾಲೆಗಳ ಪುನರ್​ ಆರಂಭದ ಕುರಿತು ರಾಜ್ಯ ಸರ್ಕಾರಗಳು ನಿರ್ಧಾರ ಕೈಗೊಳ್ಳಬಹುದು ಎಂದು ತಿಳಿಸಿದೆ. ಕೇಂದ್ರ ಗೃಹ ಇಲಾಖೆ ಕೋವಿಡ್​ನ ಹಲವು ನಿಯಮಗಳನ್ನು ಸಡಿಲಗೊಳಿಸಿ ಮಾರ್ಗಸೂಚಿ ಪ್ರಕಟಿಸಿದ್ದು, ಶಾಲೆ- ಕಾಲೇಜ್​ ಆರಂಭದ ಕುರಿತು ಕೂಡ ತಿಳಿಸಿದೆ. ಶಾಲೆ ಮತ್ತು ಕೋಚಿಂಗ್​ ಸಂಸ್ಥೆಗಳ ಆರಂಭಕ್ಕೆ  ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿಯಮ ಸಡಿಲ ಮಾಡಿದೆ. ಅದರ ಅನುಸೂರವಾಗಿ ಶ್ರೇಣಿ ವ್ಯವಸ್ಥೆ ಮೂಲಕ ಹಂತ ಹಂತವಾಗಿ ಶಾಲೆ ಆರಂಭಿಸುವ ಬಗ್ಗೆ ನಿಯಮ ಕೈಗೊಳ್ಳಬಹುದು ಎಂದು ತಿಳಿಸಿದೆ.

ರಾಜ್ಯ ಸರ್ಕಾರಗಳು ಶಾಲಾ-ಕಾಲೇಜ್​ ಆರಂಭದ ಬಗ್ಗೆ ಆಯಾ ಶಿಕ್ಷಣ ಸಂಸ್ಥೆಗಳೊಡನೆ ಚರ್ಚೆ ನಡೆಸಿ ಕ್ರಮಕ್ಕೆ ಮುಂದಾಗಬಹುದು.  ಪರಿಸ್ಥಿತಿ ಅವಲೋಕನದ ಆಧಾರದ ಜೊತೆ ಷರತ್ತುಗಳ ಅನ್ವಯ ಕಡ್ಡಾಯವಾಗಿದೆ.

ಕೇಂದ್ರ ತಿಳಿಸಿರುವ ಮಾರ್ಗಸೂಚಿ

  • ಪ್ರಸುತ್ತ ಶಾಲೆಗಳು ಆನ್​ಲೈನ್​ ತರಗತಿ ಮೊರೆಹೋಗಿದ್ದು, ಅದನ್ನೇ ಅನುಸರಿಸಲು ಇಚ್ಛಿಸಿದರೆ ಅದಕ್ಕೆ ಅನುಮತಿ ನೀಡಬಹುದು.

  • ಒಂದು ವೇಳೆ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಲು ಬಯಸಿದ್ದರೆ, ಅದಕ್ಕೆ ಅವರ ಪೋಷಕರಿಂದ ಅನುಮತಿ ಪತ್ರ ಕಡ್ಡಾಯವಾಗಿದೆ.

  • ಹಾಜರಾತಿ ಕಡ್ಡಾಯವಲ್ಲ. ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುವ ಕುರಿತು ಪೋಷಕರದ್ದೇ ಅಂತಿಮ ತೀರ್ಮಾನ.
  • ಶಿಕ್ಷಣ ಸಂಸ್ಥೆ ತೆರೆಯಲು ಮುಂದಾದರೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಆರೋಗ್ಯ ಮತ್ತು ಸುರಕ್ಷಾ ದೃಷ್ಟಿಕೋನ ಅನುಸರಿಸಬೇಕು. ಇದನ್ನು ಶಿಕ್ಷಣ ಇಲಾಖೆ ಆಧಾರದ ಮೇಲೆ ಈ ನಿಯಮಗಳ ಪಾಲನೆ ಮಾಡಬೇಕು

  • ಪುನರ್​ಆರಂಭವಾದ ಶಾಲೆಗಳು ಈ ಸುರಕ್ಷಾ ನಿಯಮ ಪಾಲಿಸುವುದು ಕಡ್ಡಾಯ

  • ಉನ್ನತ ಶಿಕ್ಷಣ ಇಲಾಖೆ ಕಾಲೆಜು ಆರಂಭ ಕುರಿತು ಪರಿಸ್ಥಿತಿ ಅವಲೋಕಿಸಿ ಸಮಯ ನಿಗದಿಸಬಹುದು. ಆನ್​ಲೈನ್​/ ದೂರ ಶಿಕ್ಷಣ ಕಲಿಕೆ ಉತ್ತೇಜನಕ್ಕೆ ಹೆಚ್ಚಿನ ಮಾನ್ಯತೆ ನೀಡಬೇಕು.

  • ಅದಾಗ್ಯೂ, ಉನ್ನತ ಶಿಕ್ಷಣ ಸಂಸ್ಥೆಗಳು ಅದರಲ್ಲಿಯೂ ಸಂಶೋಧನ ವಿದ್ಯಾರ್ಥಿ (ಪಿಎಚ್​ಡಿ) ಹಾಗೂ ವಿಜ್ಞಾನ ಹಾಗೂ ತಂತ್ರಜ್ಞಾನದ  ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ  ಲ್ಯಾಬೋರೇಟರಿ ಅವಶ್ಯಕವಾಗಿದೆ. ಈ ಹಿನ್ನಲೆ ಅಕ್ಟೋಬರ್​ 15ರಿಂದ ಇದನ್ನು ತೆರೆಯಲು ಅನುಮತಿ ನೀಡಲಾಗಿದೆ, ಇದಕ್ಕೆ ರಾಜ್ಯ ಸರ್ಕಾರದ ಅನುಮತಿ ಕಡ್ಡಾಯ.

Published by: Seema R
First published: September 30, 2020, 9:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading