• Home
 • »
 • News
 • »
 • state
 • »
 • Kalasa-Banduri Nala Project: ಕಳಸಾ ಬಂಡೂರಿ ನಾಲಾ ಯೋಜನೆಗೆ ಕೇಂದ್ರದ ಬಿಗ್ ​​ಬೂಸ್ಟ್​; ಕರ್ನಾಟಕದ ಬೇಡಿಕೆಗೆ ಜಲಶಕ್ತಿ ಸಚಿವಾಲಯ ಅಸ್ತು

Kalasa-Banduri Nala Project: ಕಳಸಾ ಬಂಡೂರಿ ನಾಲಾ ಯೋಜನೆಗೆ ಕೇಂದ್ರದ ಬಿಗ್ ​​ಬೂಸ್ಟ್​; ಕರ್ನಾಟಕದ ಬೇಡಿಕೆಗೆ ಜಲಶಕ್ತಿ ಸಚಿವಾಲಯ ಅಸ್ತು

ಮಹದಾಯಿ ಯೋಜನೆ ಜಾರಿಗೆ ಮತ್ತೆ ಗೋವಾ ಕ್ಯಾತೆ!

ಮಹದಾಯಿ ಯೋಜನೆ ಜಾರಿಗೆ ಮತ್ತೆ ಗೋವಾ ಕ್ಯಾತೆ!

ಉತ್ತರ ಕರ್ನಾಟಕದ ಭಾಗದ ಮಹತ್ವಕಾಂಕ್ಷಿ ಯೋಜನೆ ಕಳಸಾ ಭಂಡೂರಿ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗವು ಅನುಮತಿಯನ್ನು ನೀಡಿದೆ.

 • News18 Kannada
 • 2-MIN READ
 • Last Updated :
 • Hubli-Dharwad (Hubli), India
 • Share this:

ಹುಬ್ಬಳ್ಳಿ: ಉತ್ತರ ಕರ್ನಾಟಕದ (North Karnataka) ಭಾಗದ ಮಹತ್ವಕಾಂಕ್ಷಿ ಯೋಜನೆ ಕಳಸಾ ಬಂಡೂರಿ (Kalasa-Banduri Nala Project) ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗವು (Central Water Commission) ಅನುಮತಿಯನ್ನು ನೀಡಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರು, ಪ್ರಧಾನಿ ನರೇಂದ್ರ ಮೋದಿ (PM Modi) ಹಾಗೂ ಗೃಹ ಸಚಿವ ಅಮಿತ್ ಶಾ (Amit Shah) ಸೇರಿದಂತೆ ಕೇಂದ್ರ ಜಲ ಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ (Gajendra Singh Shekhawat) ಅವರಿಗೆ ಧನ್ಯವಾದ ತಿಳಿಸಿದ್ದಾರೆ.


ಇದೇ ವೇಳೆ ಸಚಿವ ಜೋಶಿ ಅವರು, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್​​ವೈ ಹಾಗೂ ರಾಜ್ಯ ನೀರಾವರಿ ಸಚಿವರಾದ ಗೋವಿಂದ ಕಾರಜೋಳ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಕಳಸಾ ಬಂಡೂರಿ ಯೋಜನೆಯ ಅನುಮೋದನೆಗಾಗಿ ರಚನಾತ್ಮಕ ಯೋಜನಾ ವರದಿಯನ್ನು ನಿರೂಪಿಸಿದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರಕ್ಕೆ , ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿಎಸ್​ ಯಡಿಯೂರಪ್ಪ ಅವರಿಗೆ ಹಾಗೂ ರಾಜ್ಯದ ನೀರಾವರಿ ಸಚಿವರಾದ ಗೋವಿಂದ ಕಾರಜೋಳ ಅವರಿಗೂ ಅನಂತ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.ಬೆಳಗಾವಿ ಅಧಿವೇಶನದ ವೇಳೆಗೆ ಸಿಹಿ ಸುದ್ದಿ ಬಂದಿದೆ ಎಂದ ಸಿಎಂ ಬೊಮ್ಮಾಯಿ


ಈ ಕುರಿತಂತೆ ವಿಧಾನಸಭೆಯಲ್ಲಿ ಹೇಳಿಕೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು, ಕಳಸಾ ಬಂಡೂರಿ ಯೋಜನೆಯೂ 1.7 ಟಿಎಂಸಿ ಕಳಸಾ ಡ್ಯಾಮ್ ನಿಂದ ನೀರು ಪಡೆಯುವ, 2.18 ಟಿಎಂಸಿ ನೀರು ಬಂಡೂರಿ ಡ್ಯಾಮ್ ನಿಂದ ಯೋಜನೆಯಾಗಿದೆ. ಯೋಜನೆಯ ಡಿಪಿಆರ್ ಕೇಂದ್ರಕ್ಕೆ ಸಲ್ಲಿಕೆ ಮಾಡಿದ್ದೇವು. ಮೋದಿ ನೇತೃತ್ವದ ಸರ್ಕಾರ ಡಿಪಿಆರ್ ಒಪ್ಪಿಕೊಂಡಿದೆ. ಬಹಳ ದಿನಗಳ ಕನಸು ನನಸಾಗುವುದಿದೆ.


ಇದನ್ನೂ ಓದಿ: Mahadayi Issue: ಮಹದಾಯಿ ನೀರು ಪಡೆಯಲು ಸರ್ಕಾರದ ಮಾಸ್ಟರ್ ಪ್ಲಾನ್; ಕಾಂಗ್ರೆಸ್ ಪಾದಯಾತ್ರೆಗೂ ಮುನ್ನ ಘೋಷಣೆ


ಉತ್ತರ ಕರ್ನಾಟಕದ ಪರವಾಗಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದಕ್ಕೆ ಸಹಕಾರ ಕೊಟ್ಟ ಕೇಂದ್ರ ನೀರಾವರಿ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕೂಡಲೆ ಟೆಂಡರ್ ಪ್ರಕ್ರಿಯೆ ಆರಂಭಿಸುತ್ತದೆ. ಯೋಜನೆ ಕಾಮಗಾರಿಯನ್ನು ಶೀಘ್ರವೇ ಆರಂಭಿಸಲು ಸರ್ಕಾರ ಬದ್ಧವಾಗಿದೆ. ಬೆಳಗಾವಿ ಅಧಿವೇಶನದ ವೇಳೆಗೆ ಸಿಹಿ ಸುದ್ದಿ ಬಂದಿದೆ ಎಂದು ಹೇಳಿದಿದ್ದಾರೆ.ದಶಕಗಳ ಹೋರಾಟಕ್ಕೆ ಕೇಂದ್ರದ ಬಿಗ್​ ಬೂಸ್ಟ್​


ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆಯಿಂದ ಹುಬ್ಬಳ್ಳಿ- ಧಾರವಾಡ, ಗದಗ ಸೇರಿ ಅನೇಕ ಪಟ್ಟಣಗಳ ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥವಾಗಲಿದೆ. ಮಹದಾಯಿ ನದಿಯ ಉಪ ನದಿಗಳಾಗಿರುವ ಕಳಸಾ–ಬಂಡೂರಿಯ ಸುಮಾರು 7.56 ಟಿಎಂಸಿ ನೀರನ್ನು ಮಲ್ಲಪ್ರಭಾ ನದಿಗೆ ತಿರುಗಿಸೋ ಯೋಜನೆ ಇದಾಗಿದ್ದು, ಎಸ್​​.ಎಂ.ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಈ ಯೋಜನೆಗೆ ಒಪ್ಪಿಗೆ ನೀಡಲಾಗಿತ್ತು. ಅಲ್ಲದೇ 2002ರಲ್ಲಿ ಈ ಯೋಜನೆಗೆ ಕೇಂದ್ರದಿಂದ ಕರ್ನಾಟಕ ಸರ್ಕಾರ ಕ್ಲಿಯರೆನ್ಸ್ ಕೂಡ ಪಡೆದುಕೊಂಡಿತ್ತು.


2006ರಲ್ಲಿ ಬೆಳಗಾವಿಯ ಕಣಕುಂಬಿಯಲ್ಲಿ ಯೋಜನೆಯ ಆರಂಭಕ್ಕೆ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಭೂಮಿ ಪೂಜೆ ನೆರವೇರಿಸಿದ್ದರು. ಆದರೆ ಆ ನಂತರ ಬೆಳವಣಿಗೆಗಳಲ್ಲಿ ಗೋವಾ ಸರ್ಕಾರದಿಂದ ಯೋಜನೆಗೆ ಬಗ್ಗೆ ಆಕ್ಷೇಪಣೆ ಸಲ್ಲಿಕೆ ಮಾಡಿತ್ತು. ಪರಿಣಾಮ ಅಂದಿನ ಎನ್​​​ಡಿಎ ಸರ್ಕಾರದ ಯೋಜನೆಯ ಅನುಮೋದನೆಯನ್ನು ತಡೆಹಿಡಿದಿತ್ತು. ನಿರಂತರವಾಗಿ ಆ ಭಾಗದ ರೈತರು ನಡೆಸಿದ ಹೋರಾಟಕ್ಕೆ ಮಹತ್ವದ ಮುನ್ನಡೆ ಸಿಕ್ಕಿದ್ದು, ಸದ್ಯ ಕೇಂದ್ರ ಜಲ ಸಚಿವಾಲಯ ಯೋಜನೆಗೆ ಅನುಮೋದನೆಯನ್ನ ನೀಡಿದೆ.


ಇದನ್ನೂ ಓದಿ: Raichur: ಗ್ರಾಮ ಪಂಚಾಯತ್ ಚೇರ್ಮನ್ ಈಗ ಭಿಕ್ಷುಕ! ಈತ ಸಿಎಂ ಬೊಮ್ಮಾಯಿಗೂ ಗೆಳೆಯ!


2008ರಲ್ಲೇ ಮಹದಾಯಿ ನೀರು ಹಂಚಿಕೆ ತೀರ್ಪು


2008 ರಲ್ಲಿ ಮಹದಾಯಿ ನ್ಯಾಯ ಮಂಡಳಿಯಿಂದ ಮಹದಾಯಿ ನೀರು ಹಂಚಿಕೆ ತೀರ್ಪು ಪ್ರಕಟವಾಗಿತ್ತು. ತೀರ್ಪಿನ ಅನ್ವಯ ಕಳಸಾ ನಾಲಾದಿಂದ 1.72 ಟಿಎಂಸಿ ಹಾಗೂ ಬಂಡೂರಿ ನಾಲಾದಿಂದ 2.18 ಟಿಎಸಿ ಅಡಿ ನೀರು ಅಂದರೇ, ಕರ್ನಾಟಕಕ್ಕೆ ಒಟ್ಟಾರೆ 5.5 ಟಿಎಂಸಿ ನೀರು ಹಂಚಿಕೆ ಮಾಡಲಾಗಿತ್ತು. ಅಲ್ಲದೇ 1.50 ಟಿಎಂಸಿ ಅಡಿ ನೀರು ಮಹದಾಯಿ ಜಲಾನಯನ ಪ್ರದೇಶದಲ್ಲಿ ಬಳಕೆಗೆ ಅನುಮತಿ ನೀಡಲಾಗಿತ್ತು.


ಇದರ ಹೊರತಗಿಯೂ ಗೋವಾ ಪದೇ ಪದೇ ಕ್ಯಾತೆ ತೆಗೆಯುತ್ತಿದ್ದ ಕಾರಣ ಯೋಜನೆಗೆ ತಡೆಬಿದ್ದಿತ್ತು. ಇದರ ನಡುವೆಯೂ ಕೇಂದ್ರ ಸರ್ಕಾರ ಯೋಜನೆಗೆ ಹಸಿರು ನಿಶಾನೆ ತೋರಿದ್ದು, ಮುಂಬೈ ಕರ್ನಾಟಕದ ಜನತೆಯ ಮೊಗದಲ್ಲಿ ಹರ್ಷ ಮೂಡುವಂತೆ ಮಾಡಿದೆ.

Published by:Sumanth SN
First published: