ನಮ್ಮ ಪರಿಸ್ಥಿತಿ ಹೇಳತೀರದಾಗಿದೆ; ಕೇಂದ್ರ ಅಧ್ಯಯನ ತಂಡದ ಎದುರು ಪ್ರವಾಹ ಸಂತ್ರಸ್ತ ವೃದ್ಧೆ ಕಣ್ಣೀರು

ಜಿಲ್ಲೆಯಲ್ಲಿ ಪ್ರವಾಹದಿಂದ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಕಬ್ಬು ಬೆಳೆ ಸೇರಿದಂತೆ ವಿದ್ಯುತ್ ಕಂಬಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ. ಪ್ರವಾಹ ಪೀಡಿತ ಗ್ರಾಮಗಳಲ್ಲಿ ತುಂಬಾ ನಷ್ಟ ಸಂಭವಿಸಿದೆ. ಸೇತುವೆಗಳು, ಮನೆಗಳು,ರಸ್ತೆಗಳು  ನಾಶಗೊಂಡಿವೆ. ಪ್ರಾಥಮಿಕ ವರದಿ ಸಲ್ಲಿಕೆಯಾದ ಬಳಿಕ ಮತ್ತೊಮ್ಮೆ ಸಮೀಕ್ಷೆಗೆ  ಕೇಂದ್ರ ತಂಡ  ರಾಜ್ಯಕ್ಕೆ ಬರಲಿದೆ. 

Seema.R | news18-kannada
Updated:August 26, 2019, 12:28 PM IST
ನಮ್ಮ ಪರಿಸ್ಥಿತಿ ಹೇಳತೀರದಾಗಿದೆ; ಕೇಂದ್ರ ಅಧ್ಯಯನ ತಂಡದ ಎದುರು ಪ್ರವಾಹ ಸಂತ್ರಸ್ತ ವೃದ್ಧೆ ಕಣ್ಣೀರು
ಪ್ರವಾಹ ಸಂತ್ರಸ್ತರ ಮನವಿ ಆಲಿಸಿದ ಕೇಂದ್ರ ತಂಡ
Seema.R | news18-kannada
Updated: August 26, 2019, 12:28 PM IST
ಬಾಗಲಕೋಟೆ (ಆ.26): ಕಂಡರಿಯದ ಪ್ರವಾಹಕ್ಕೆ ತುತ್ತಾಗಿರುವ ಜಿಲ್ಲೆಯ ಸ್ಥಿತಿಗತಿ ಕುರಿತು ಕೇಂದ್ರ ತಂಡ ಅಧ್ಯಯನ ನಡೆಸಿತು. ಈ ವೇಳೆ ಪ್ರವಾಹಕ್ಕೆ ತುತ್ತಾಗಿರುವ ವಯೋವೃದ್ದೆ ಮಹಿಳೆ ಹೇಳೆ ನೆರೆ ತಮ್ಮ ಬದುಕನ್ನು ಕಸಿದುಕೊಂಡಿದೆ ಎಂದು ಕಣ್ಣೀರು ಹಾಕಿದ ಘಟನೆ ಕೇಂದ್ರ ಅಧ್ಯಯನ ತಂಡದ ಮನ ಕಲುಕಿದೆ.

ಬಾಗಲಕೋಟೆ ಜಿಲ್ಲೆ ಜಮಖಂಡಿಯ ಚಿಕ್ಕಪಡಸಲಗಿ ಸೇರಿದಂತೆ ಅನೇಕ ಪ್ರದೇಶಗಳ ಪ್ರವಾಹ ಪರಿಶೀಲನೆ ನಡೆಸಿದ  ಕೇಂದ್ರ ಗೃಹ ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ್​ ನೇತೃತ್ವದ ತಂಡ ತೇರದಾಳದ ಅಸ್ಕಿಯ ಪ್ರವಾಹ ಸಂತ್ರಸ್ತ ಕೇಂದ್ರಕ್ಕೆ ಭೇಟಿ ನೀಡಿದರು.

ಈ ವೇಳೆ ತಮ್ಮ ಪರಿಸ್ಥಿತಿ ಹೇಳಿಕೊಂಡ ವಯೋವೃದ್ಧೆ, ನೆರೆಯಿಂದಾಗಿ ನಮ್ಮ ಪರಿಸ್ಥಿತಿ ಹೇಳತೀರದಂತೆ ಆಗಿದೆ. ಪ್ರವಾಹದಿಂದ ನಮ್ಮ ಬದುಕು ಕೂಡ ಕೊಚ್ಚಿಹೋಗಿದೆ. ಕಳೆದ 12 ವರ್ಷದಿಂದಲೂ ಪ್ರತಿಬಾರಿ ಪ್ರವಾಹಕ್ಕೆ ಒಳಗಾಗುತ್ತಿದ್ದೇವೆ. ಪ್ರತಿ ಬಾರಿ ಬಂದು ಸಮಾಧಾನ ಹೇಳಿ ಹೋಗುತ್ತೀರಾ. ಆಮೇಲೆ ಏನು ಆಗುವುದಿಲ್ಲ. ನಮಗೆ ಶಾಶ್ವತ ಪರಿಹಾರ ಕಲ್ಪಿಸಿ. ನಮ್ಮ ಊರನ್ನು ಸ್ಥಳಾಂತರಿಸಿ ಎಂದು ಮನವಿ ಮಾಡಿದರು. 

ಕನ್ನಡದಲ್ಲಿ ಅಜ್ಜಿ ಗೋಳ ಅರ್ಥವಾಗದಿದ್ದಕ್ಕೆ ತರ್ಜುಮೆ ಮಾಡುವಂತೆ ಕೇಳಿ ಕೊಂಡ ಹಿನ್ನೆಲೆ ಜಿಲ್ಲಾಧಿಕಾರಿ ಆರ್​ ರಾಮಚಂದ್ರನ್​ ಪರಿಸ್ಥಿತಿ ವಿವರಿಸಿದರು.

ಇದನ್ನು ಓದಿ:  ರಾಜ್ಯ ಹಾಲು ಕುಡಿದ ಮಕ್ಕಳೇ ಬದುಕಲ್ಲ, ಇನ್ನು ವಿಷ ಕುಡಿದೋರು ಬದುಕ್ತಾರಾ?; ಬಿಎಸ್​ವೈ ಸರ್ಕಾರಕ್ಕೆ ಸಿದ್ದರಾಮಯ್ಯ ಟಾಂಗ್

ಅಧ್ಯಯನ ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರವಾಹದಿಂದ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಕಬ್ಬು ಬೆಳೆ ಸೇರಿದಂತೆ ವಿದ್ಯುತ್ ಕಂಬಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ. ಪ್ರವಾಹ ಪೀಡಿತ ಗ್ರಾಮಗಳಲ್ಲಿ ತುಂಬಾ ನಷ್ಟ ಸಂಭವಿಸಿದೆ. ಸೇತುವೆಗಳು, ಮನೆಗಳು,ರಸ್ತೆಗಳು  ನಾಶಗೊಂಡಿವೆ. ಪ್ರಾಥಮಿಕ ವರದಿ ಸಲ್ಲಿಕೆಯಾದ ಬಳಿಕ ಮತ್ತೊಮ್ಮೆ ಸಮೀಕ್ಷೆಗೆ  ಕೇಂದ್ರ ತಂಡ  ರಾಜ್ಯಕ್ಕೆ ಬರಲಿದೆ. ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವ ಕಾರ್ಯವನ್ನ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡುತ್ತೇವೆ ಎಂದು ಭರವಸೆ ನೀಡಿದರು.

(ವರದಿ : ರಾಚಪ್ಪ ಬನ್ನಿದಿನ್ನಿ)
Loading...

First published:August 26, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...