ಬೆಂಗಳೂರು(ಆ.30): ರಾಜ್ಯದ ಮಳೆ ಹಾನಿ ಅಧ್ಯಯನಕ್ಕೆ ಬರಬೇಕಿದ್ದ ಕೇಂದ್ರ ತಂಡದ ಪ್ರವಾಸ ಮುಂದೂಡಿಕೆ ಆಗಿದೆ. ಭಾನುವಾರ ಬರಬೇಕಿದ್ದ ಅಧಿಕಾರಿಗಳ ತಂಡ ಮಂಗಳವಾರ ರಾಜ್ಯಕ್ಕೆ ಆಗಮಿಸಲಿದೆ. ರಾಜ್ಯದಲ್ಲಿ ಎರಡು ದಿನಗಳ ಕಾಲ ಪ್ರವಾಸ ಕೈಗೊಳ್ಳಲಿರುವ ಈ ತಂಡ, ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಲಿದೆ.
ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ಮೊದಲ ಪ್ರವಾಸ ಮಾಡಲಿದೆ. ನಂತರ ಕೊಡಗು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಎರಡನೇ ದಿನದ ಪ್ರವಾಸ ಮಾಡಲಿದೆ. ನಂತರ ಗುರುವಾರ ಸಿಎಂ ಯಡಿಯೂರಪ್ಪ ರನ್ನು ಭೇಟಿ ಮಾಡಿ ಚರ್ಚಿಸಿ ದೆಹಲಿಗೆ ವಾಪಸ್ಸಾಗಲಿದೆ. ಈಗಾಗಲೇ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕೂಡ ನೆರೆ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ, ಮಳೆ ಹಾನಿಯಿಂದ ಆಗಿರುವ ನಷ್ಟದ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಇನ್ನು, ಕಂದಾಯ ಸಚಿವ ಆರ್ ಅಶೋಕ್ ಕೂಡ ಈಗಾಗಲೇ ಮೂರು ದಿನಗಳ ಪ್ರವಾಸ ನಡೆಸಿ, ಮಳೆ ಹಾನಿ ಕುರಿತು ಅಧ್ಯಯನ ನಡೆಸಿದ್ದಾರೆ. ಬೆಳಗಾವಿಯಲ್ಲೇ ಮಳೆಯಿಂದ ಸುಮಾರು 950 ಕೋಟಿ ನಷ್ಟ ವಾಗಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ರಾಜ್ಯದಿಂದ ಈಗ ಮನೆಯಿಂದ ಆಗಿರುವ ನಷ್ಟದ ಬಗ್ಗೆ ವರದಿ ರೆಡಿಯಾಗಿದೆ. ಇದೀಗ ಕೇಂದ್ರದ ತಂಡದಿಂದ ಅಧ್ಯಯನ ನಂತರ ಅಂತಿಮ ವರದಿ ಸಿದ್ದವಾಗಲಿದೆ.
ಬಳಿಕ ಕೇಂದ್ರ ಅಧ್ಯಯನ ತಂಡಕ್ಕೆ ರಾಜ್ಯ ಅಧಿಕಾರಿಗಳ ತಂಡ ಮಳೆ ಹಾನಿ ಕುರಿತು ಮಾಹಿತಿ ಸಲ್ಲಿಸಲಿದ್ದಾರೆ. ಅಂತಿಮವಾಗಿ ಕೇಂದ್ರ ಅಧಿಕಾರಿಗಳ ತಂಡ ಈ ಬಗ್ಗೆ ಪರಿಶೀಲಿಸಿ, ಅದನ್ನು ದೆಹಲಿಗೆ ಕೊಂಡೊಯ್ಯಲ್ಲಿದೆ. ಬಳಿಕ ರಾಜ್ಯಕ್ಕೆ ಪರಿಹಾರ ಕೊಡುವ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ಮಾಡಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ