Air Quality Index: ಉತ್ತಮ ವಾಯು ಗುಣಮಟ್ಟವುಳ್ಳ ಜಿಲ್ಲೆಗಳಲ್ಲಿ ಮಡಿಕೇರಿ ದೇಶದಲ್ಲೇ ನಂ. 1, ಗದಗಕ್ಕೆ 2ನೇ ಸ್ಥಾನ

ಹೆಚ್ಚಿನ ಶೇಕಡಾವಾರು ಹಳ್ಳಿಗರು ಕೃಷಿಯಲ್ಲಿ ತೊಡಗಿರುವ ಕಾರಣ, ಇದು ಕಡಿಮೆ ವಾಯು ಮಾಲಿನ್ಯ ಉಂಟುಮಾಡುತ್ತದೆ.

ರಾಜಾಸೀಟ್

ರಾಜಾಸೀಟ್

  • Share this:
ಬೆಂಗಳೂರು (ನ. 19): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಗುಣಮಟ್ಟ (Air Quality) ತೀವ್ರ ಹದಗೆಡುತ್ತಿರುವ ಬಗ್ಗೆ ದಿನೇ ದಿನೇ ನಾನಾ ವರದಿಗಳು ಬರುತ್ತಿವೆ. ನವದೆಹಲಿ (Delhi Air) ಮಾತ್ರವಲ್ಲದೇ ದೇಶದ ಹಲವು ನಗರಗಳಲ್ಲಿ ಇದೇ ಸ್ಥಿತಿ ಇದೆ. ಇಂತಹ ವಾಯು ಗುಣಮಟ್ಟದಿಂದ ಜನರು ಸಾಕಷ್ಟು ತೊಂದರೆ ಎದುರಿಸುವಂತೆ ಆಗಿದೆ.  ಹಾಗಾದರೆ, ನಮ್ಮ ಕರ್ನಾಟಕ ರಾಜ್ಯದ ನಗರಗಳ ಸ್ಥಿತಿ ಏನು..? ಯಾವುದು ಉತ್ತಮ ವಾಯುಗುಣಮಟ್ಟವುಳ್ಳ ನಗರ ಅಥವಾ ಜಿಲ್ಲೆ ಅಂತೀರಾ..? ಇಲ್ಲಿನ ವಾತವಾರಣ ಹೇಗಿದೆ. ಹೆಚ್ಚುತ್ತಿರುವ ವಾಹನಗಳು, ಕಾರ್ಖಾನೆಗಳ ಮಧ್ಯೆ ನಾವು ಉಸಿರಾಡುತ್ತಿರುವ ಗಾಳಿ ಹೇಗಿದೆ ಎಂಬುದು ಮುಖ್ಯ. ಈ ಸಂಬಂಧ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಬಿಡುಗಡೆಯಾಗಿದ್ದು, ರಾಜ್ಯದ ಪ್ರವಾಸಿಗರ ಸ್ವರ್ಗ ಮಡಿಕೇರಿಯ (Madikeri) ವಾಯುಗುಣ ಮಟ್ಟ ಅತ್ಯುತ್ತಮವಾಗಿದ್ದು, ದೇಶದಲ್ಲೇ ಉತ್ತಮ ವಾಯುಗುಣಮಟ್ಟ ಹೊಂದಿರುವ ನಗರ ಎಂಬ ಹೆಗ್ಗಳಿಕೆಗೆ ಗುರಿಯಾಗಿದೆ.  

ದೇಶದಲ್ಲೇ ಉತ್ತಮ ವಾಯುಗುಣಮಟ್ಟವುಳ್ಳ ನಗರಗಳಲ್ಲಿ ರಾಜ್ಯದ ನಗರಗಳಿಗೆ ಮೊದಲ ಎರಡು ಸ್ಥಾನ ದೊರಕಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (Central Pollution Control Board)(CPCB) ದೈನಂದಿನ ಬುಲೆಟಿನ್ ಬಿಡುಗಡೆಯಾಗಿದ್ದು, ಈ ಪೈಕಿ ರಾಜ್ಯದ ಮಡಿಕೇರಿಯ  ವಾಯು ಗುಣಮಟ್ಟ ಸೂಚ್ಯಂಕ (Air Quality Index)(AQI) ಮೌಲ್ಯ 19 ಎಂದು ತಿಳಿದುಬಂದಿದ್ದು, ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನು, ಉತ್ತಮ ಗಾಳಿಯ ಗುಣಮಟ್ಟ ಹೊಂದಿರುವ ದೇಶದ ಪ್ರಮುಖ ನಗರಗಳಲ್ಲಿ ಕರ್ನಾಟಕದ ಗದಗ ಎರಡನೇ ಸ್ಥಾನದಲ್ಲಿದ್ದು, ಅದರ AQI ಮೌಲ್ಯ 22 ಆಗಿದೆ.

ಇನ್ನು, ಗದಗ ಹೊರತುಪಡಿಸಿ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳು ‘ಉತ್ತಮ’ AQI ವಿಭಾಗದಲ್ಲಿ ಸೇರಿವೆ. ಹುಬ್ಬಳ್ಳಿ (35), ಬಾಗಲಕೋಟೆ (23), ಯಾದಗಿರಿ (30) ಮತ್ತು ಬೀದರ್ (41) ಈ ವಿಭಾಗದಲ್ಲಿವೆ. ಈ ವರ್ಷ ಜೂನ್ 5 ಮತ್ತು ಜುಲೈ 6 ರಂದು ಗದಗ ರಾಷ್ಟ್ರದಾದ್ಯಂತ ಮೊದಲ ಸ್ಥಾನದಲ್ಲಿತ್ತು. ಅಂದಿನಿಂದ, ಇದು 'ಉತ್ತಮ' ಮತ್ತು 'ಸರಾಸರಿ' ವಿಭಾಗದಲ್ಲಿದೆ.

ಇನ್ನೊಂದೆಡೆ, ‘ಉತ್ತಮ’ ವಾಯು ಗುಣಮಟ್ಟ ವಿಭಾಗದಲ್ಲಿರುವ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಚಾಮರಾಜನಗರ (44), ಚಿಕ್ಕಮಗಳೂರು (33), ದಾವಣಗೆರೆ (23), ಹಾಸನ (25), ಕೊಪ್ಪಳ (46), ಕೋಲಾರ (50), ಮೈಸೂರು (29), ರಾಮನಗರ (40), ಶಿವಮೊಗ್ಗ (37) ಮತ್ತು ವಿಜಯಪುರ (45) ಸೇರಿವೆ.

ಪ್ರಮುಖ ಮಾಲಿನ್ಯಕಾರಕಗಳ ಸಾಂದ್ರತೆ ಅವಲಂಬಿಸಿ AQI ಮೌಲ್ಯವನ್ನು ಅಳೆಯುವ 500 ಪಾಯಿಂಟ್ ಸ್ಕೇಲ್ ಅನ್ನು ಭಾರತ ಅನುಸರಿಸುತ್ತದೆ. 0-50 ಮೌಲ್ಯವನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. ನಂತರ ತೃಪ್ತಿದಾಯಕ (51-100), ಮಧ್ಯಮ (101-200), ಕಳಪೆ (201- 300), ಅತ್ಯಂತ ಕಳಪೆ (301- 400) ಮತ್ತು ತೀವ್ರ (401-500) ಎಂದು ವರ್ಗೀಕರಿಸಲಾಗುತ್ತದೆ.

ಇದನ್ನು ಓದಿ: ಇಲ್ಲದ ದೇವರನ್ನ ಯಾಕೆ ಪೂಜಿಸಬೇಕು? ಮನುಧರ್ಮ ನಾಶ ಆಗಬೇಕು: ನಿಜಗುಣಾನಂದ ಸ್ವಾಮಿ

ಗದಗ 'ಉತ್ತಮ' ಗಾಳಿಯ ಗುಣಮಟ್ಟದ ಟ್ಯಾಗ್ ಅನ್ನು ಗಳಿಸಲು ಹತ್ತಿರದ ಬೆಟ್ಟದ ಶ್ರೇಣಿ, ಕಪ್ಪತಗುಡ್ಡ ಮತ್ತು ಕಡಿಮೆ ಸಂಖ್ಯೆಯ ಕೈಗಾರಿಕೆಗಳಿಗೆ ಕಾರಣವಾಗಿದೆ. ಹೆಚ್ಚಿನ ಶೇಕಡಾವಾರು ಹಳ್ಳಿಗರು ಕೃಷಿಯಲ್ಲಿ ತೊಡಗಿರುವ ಕಾರಣ, ಇದು ಕಡಿಮೆ ವಾಯು ಮಾಲಿನ್ಯ ಉಂಟುಮಾಡುತ್ತದೆ.

ಇದನ್ನು ಓದಿ: ಚಳಿಗಾಲ ಎಂದರೆ ಈ ರಾಶಿಯವರಿಗೆ ಬಲು ಪ್ರೀತಿ; ಕಾರಣ ಇದು!

ಇನ್ನು, ಈ ಸಂಬಂಧ ಮಾತನಾಡಿದ ಗದಗ ಮತ್ತು ಧಾರವಾಡ ಜಿಲ್ಲೆಯ ಪರಿಸರ ಅಧಿಕಾರಿ ಶೋಭಾ ಪೋಳ್, ‘’ನಾವು AQI ಮೌಲ್ಯವನ್ನು ಗಮನಿಸುತ್ತಿದ್ದು, ಈ ಬಾರಿ ಕರ್ನಾಟಕದ ಹಲವು ಜಿಲ್ಲೆಗಳು ಉತ್ತಮ ವಿಭಾಗದಲ್ಲಿವೆ. ಈ ಹಿಂದೆ ಇಲ್ಲದ ಪಟ್ಟಿಯಲ್ಲಿ ಹುಬ್ಬಳ್ಳಿ ಸೇರಿದೆ. ವಿವರವಾದ ಅಧ್ಯಯನ ಮತ್ತು ಸಮೀಕ್ಷೆಯ ಅಗತ್ಯವಿರುವುದರಿಂದ ಕಾರಣಗಳನ್ನು ಊಹಿಸಲು ಸಾಧ್ಯವಿಲ್ಲ’’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
First published: