ಐಷಾರಾಮಿ ಜೀವನ ಮಾಡೋ ಸಿದ್ಧರಾಮಯ್ಯರ ಸಮಾಜವಾದ ಎಲ್ಲಿ ಹೋಯ್ತು ; ಡಿ.ವಿ.ಸದಾನಂದಗೌಡ ಪ್ರಶ್ನೆ

ನಾನು ಮಂಗಳೂರಿನಿಂದ ಬಂದವರು ಅಂತಾ ಹೇಳ್ತಾರೆ. ಆದರೆ ನಂಗೆ ಊರವರು ಹರಿಸಿ ಇನ್ನೂ ಬೆಳೆಯಿರಿ ಅಂತಾ ಕಳಿಸಿದ್ದಾರೆ. ಅವರ ಹಾಗೇ ಟೆಂಟ್ ಹಾಕಿಕೊಂಡಿರಿ ಅಂತಾ ಊರವರು ಕಳಿಸಿಲ್ಲ ಎಂದು ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದರು

news18-kannada
Updated:November 23, 2019, 2:32 PM IST
ಐಷಾರಾಮಿ ಜೀವನ ಮಾಡೋ ಸಿದ್ಧರಾಮಯ್ಯರ ಸಮಾಜವಾದ ಎಲ್ಲಿ ಹೋಯ್ತು ; ಡಿ.ವಿ.ಸದಾನಂದಗೌಡ ಪ್ರಶ್ನೆ
ಸಿದ್ದರಾಮಯ್ಯ ಹಾಗೂ ಸದಾನಂದ ಗೌಡ
  • Share this:
ಬೆಂಗಳೂರು(ನ.23): ನಾನು ಕುರಿ ಕಾದು ಬಂದವನು, ನಾನು ಸಮಾಜವಾದಿ ಎಂದು ಹೇಳುವ ಸಿದ್ದರಾಮಯ್ಯ ಅವರ ಐಷಾರಾಮಿ ಜೀವನ, ಲಕ್ಷಾಂತರ ಬೆಲೆ ಬಾಳುವ ವಾಚ್ ಕಟ್ಟಿಕೊಳ್ಳುತ್ತಾರೆ. ಅವರ ಸಮಾಜವಾದ ಈಗ ಎಲ್ಲಿ ಹೋಯ್ತು ಎಂದು ಸಿದ್ದರಾಮಯ್ಯನವರಿಗೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಪ್ರಶ್ನೆ ಮಾಡಿದ್ದಾರೆ.

ನಾನು ರೈತರ ಮನೆಯಿಂದ ಬಂದವ, ನಾನು ಕುರಿ ಮೇಯಿಸುವವ ಅಂತಾ ಹೇಳುವವರಿಗೆ ನಾನು ಏಕ ವಚನ ಬಳಸಲ್ಲ. ನಾವು ರೈತರಿಗೆ ಕೊಡುವ ಗೊಬ್ಬರದ ಸಬ್ಸಿಡಿ ರಾಜ್ಯದ ಬಜೆಟ್ ನ ಅರ್ಧದಷ್ಟು. ಇಷ್ಟು ದೊಡ್ಡ ಇಲಾಖೆ ಬಗ್ಗೆ ಹಗುರವಾಗಿ ಮಾತನಾಡಿದ್ದನ್ನ ರೈತರೇ ಗಮನಿಸಿದ್ದಾರೆ. ನಾನು ಮಂಗಳೂರಿನಿಂದ ಬಂದವರು ಅಂತಾ ಹೇಳ್ತಾರೆ. ಆದರೆ ನಂಗೆ ಊರವರು ಹರಿಸಿ ಇನ್ನೂ ಬೆಳೆಯಿರಿ ಅಂತಾ ಕಳಿಸಿದ್ದಾರೆ. ಅವರ ಹಾಗೇ ಟೆಂಟ್ ಹಾಕಿಕೊಂಡಿರಿ ಅಂತಾ ಊರವರು ಕಳಿಸಿಲ್ಲ ಎಂದು ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದರು.

ಮಾಜಿ ಪ್ರಧಾನಿ ದೇವೇಗೌಡರು, ಕುಮಾರಸ್ವಾಮಿ ಅವರು ಕಾಂಗ್ರೆಸ್ ಗಿಂತ ಬಿಜೆಪಿ ಉತ್ತಮ ಅಂತಾ ಹೇಳಿದ್ದಾರೆ. ಈಗ ಎರಡು ದಿನಗಳಿಂದ ಅವರಲ್ಲಿ ಬದಲಾವಣೆ ಆಗಿದೆ. ಈಗಾಗಲೇ ಜೆಡಿಎಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಚುನಾವಣೆ ನಡೆಯುತ್ತಿರುವ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರಿದ್ದಾರೆ. ಕಾಂಗ್ರೆಸ್, ಜೆಡಿಎಸ್ ನಾಯಕರು ಕಂಗಾಲಾಗಿದ್ದಾರೆ ಎಂದರು.

ಕೆ ಆರ್ ನಗರ, ಹೊಸಕೋಟೆ ಮುಂತಾದ ಕ್ಷೇತ್ರಗಳನ್ನ ಸೂಕ್ಷ್ಮ ಅಂತಾ ಚುನಾವಣಾ ಆಯೋಗ ಘೋಷಣೆ ಮಾಡಬೇಕು. ಅಂತಹ ಕ್ಷೇತ್ರಗಳ ಬಗ್ಗೆ ಆಯೋಗ ವಿಶೇಷ ಗಮನ ಕೊಡಬೇಕು ಎಂದು ಕೇಂದ್ರ ಸಚಿವ ಡಿ ವಿ ಸದಾನಂದಗೌಡ ಹೇಳಿದರು.

ಮಹಾರಾಷ್ಟ್ರದಲ್ಲಿ ಎನ್​​​ಸಿಪಿ ಉತ್ತಮ ಆಡಳಿತದ ಹಿನ್ನೆಲೆಯಲ್ಲಿ ಬಿಜೆಪಿ ಜೊತೆಗೆ ಬಂದಿದೆ. ಇದನ್ನ ದೇವೇಗೌಡರು ಕೂಡ ಮನಗಾಣಬೇಕಿದೆ. ಉಪ ಚುನಾವಣೆಯಲ್ಲಿ ನಾವು 15ಕ್ಕೆ 15 ಸೀಟುಗಳಲ್ಲಿ ಗೆಲವು ಸಾಧಿಸಲಿದೆ. ಕಳೆದ 30 ವರ್ಷಗಳಿಂದ ಶಿವಸೇನೆ ನಮ್ಮೊಂದಿಗೆ ಇತ್ತು. ಆದರೆ ಶಿವಸೇನೆಗೆ ತಕ್ಷಣ ಅಧಿಕಾರದ ವ್ಯಾಮೋಹ ಬಂತು. ಹಿಂದುತ್ವ ಅನ್ನುತ್ತಿದ್ದ ಶಿವಸೇನೆ ಅದರಿಂದ ಹಿಂದಕ್ಕೆ ಸರಿಯಿತು ಎಂದರು.

ಇದನ್ನೂ ಓದಿ : ಕಾಂಗ್ರೆಸ್ ದಾರಿ ತಪ್ಪಿದೆ - ಒಂದರ್ಥದಲ್ಲಿ ಸಿದ್ಧರಾಮಯ್ಯ ಕಾಂಗ್ರೆಸ್ ಆಗಿದೆ; ಕೆ.ಎಸ್.ಈಶ್ವರಪ್ಪ ಲೇವಡಿ

ಈಗ ಅಭಿವೃದ್ಧಿ ಅಂದರೆ ಬಿಜೆಪಿ ಅಂತಾ ಅಲ್ಲಿನ ಜನರಿಗೆ ಬಂದಿದೆ. ಹಿಂದೆಯೂ ಕೂಡ ಶಿವಸೇನೆ ನಮಗೆ ತೊಂದರೆ ಕೊಟ್ಟಿತ್ತು. ಅದನ್ನೆಲ್ಲ ನಾವು ಸಹಿಸಿಕೊಂಡು ಬಂದಿದ್ದೇವು ಮಹಾರಾಷ್ಟ್ರದಲ್ಲಿ ಮೈತ್ರಿ ಇಲ್ಲದೆ ಸ್ವತಂತ್ರ ಸ್ಪರ್ಧೆ ಮಾಡಿದ್ರೆ ಮೂರನೇ ಎರಡರಷ್ಟು ಸ್ಪಷ್ಟ ಬಹುಮತ ಪಡೆದುಕೊಳ್ಳುತ್ತಿತ್ತು. ನೋಡುತ್ತಿರಿ ಇನ್ನು ಆರು ತಿಂಗಳು, ವರ್ಷದಲ್ಲಿ ಶಿವಸೇನೆ ನಿರ್ನಾಮವಾಗುತ್ತದೆ ಎಂದು ಕೇಂದ್ರ ಸಚಿವ ಡಿ ವಿ ಸದಾನಂದಗೌಡ ಹೇಳಿದರು.

 
First published: November 23, 2019, 2:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading