ಸಿದ್ಧರಾಮಯ್ಯ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ - ಕಾಂಗ್ರೆಸ್ ದಯನೀಯ ಸ್ಥಿತಿಗೆ ತಲುಪಿದ್ರೂ ಬುದ್ಧಿ ಬಂದಿಲ್ಲ; ಡಿ.ವಿ.ಸದಾನಂದಗೌಡ

ಕಾಂಗ್ರೆಸ್ ನ ಹಿರಿಯ ನಾಯಕರು ಯಾರು ಸಿದ್ದರಾಮಯ್ಯನವರ ಜತೆ ಇಲ್ಲ. ಮಾಜಿ ಡಿಸಿಎಂ ಪರಮೇಶ್ವರ್​​, ಮಾಜಿ ಸಚಿವ ಡಿ ಕೆ ಶಿವಕುಮಾರ್​ ಎಲ್ಲರದ್ದೂ ಒಂದೊಂದು ಹಾದಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರಂತೂ ಕಾಣಿಸುತ್ತಿಲ್ಲ.

news18-kannada
Updated:November 22, 2019, 1:39 PM IST
ಸಿದ್ಧರಾಮಯ್ಯ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ - ಕಾಂಗ್ರೆಸ್ ದಯನೀಯ ಸ್ಥಿತಿಗೆ ತಲುಪಿದ್ರೂ ಬುದ್ಧಿ ಬಂದಿಲ್ಲ; ಡಿ.ವಿ.ಸದಾನಂದಗೌಡ
ಸಿದ್ದರಾಮಯ್ಯ, ಹಾಗೂ ಡಿ ವಿ ಸದಾನಂದ ಗೌಡ
  • Share this:
ಬೆಂಗಳೂರು(ನ.22): ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ಮಾನಸಿಕ ಸ್ಥಿಮಿತ ಕಳೆದು ಕೊಂಡಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ದಯನೀಯ ಸ್ಥಿತಿಗೆ ತಲುಪಿದ್ರು ಸಿದ್ದರಾಮಯ್ಯನವರಿಗೆ ಮಾತ್ರ ಬುದ್ದಿ ಬಂದಿಲ್ಲ ಎಂದು ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಹೇಳಿದ್ದಾರೆ.

ಕಾಂಗ್ರೆಸ್ ನ ಹಿರಿಯ ನಾಯಕರು ಯಾರು ಸಿದ್ದರಾಮಯ್ಯನವರ ಜತೆ ಇಲ್ಲ. ಮಾಜಿ ಡಿಸಿಎಂ ಪರಮೇಶ್ವರ್​​, ಮಾಜಿ ಸಚಿವ ಡಿ ಕೆ ಶಿವಕುಮಾರ್​ ಎಲ್ಲರದ್ದೂ ಒಂದೊಂದು ಹಾದಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರಂತೂ ಕಾಣಿಸುತ್ತಿಲ್ಲ. ರಾಜ್ಯದಲ್ಲಿ ಅವರೇ ಅಧಿಕಾರದಲ್ಲಿದ್ದಾಗ ಬಿಜೆಪಿ 25 ಸ್ಥಾನ ಗೆದ್ದಿದೆ. ವಾಮ ಮಾರ್ಗದಿಂದ ಚುನಾವಣೆ ಎದುರಿಸೊ ಗತಿ ಬಿಜೆಪಿಗೆ ಇಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಸದಾನಂದ ಗೌಡ ವಾಗ್ದಾಳಿ ನಡೆಸಿದರು.

ನಮ್ಮ ಅಭ್ಯರ್ಥಿ ಗೋಪಾಲಯ್ಯನವರು ವೈಯಕ್ತಿಕವಾದ ವರ್ಚಸ್ಸು ಹೊಂದಿದ್ದಾರೆ. ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿ ನೋಡಿದ್ರೆ ನಗು ಬರುತ್ತೆ ಇರುವ 12 ಜನ ಸ್ಟಾರ್ ಪ್ರಚಾರಕರಲ್ಲಿ 8 ಜನ ಕುಟುಂಬದವರೇ ಇದ್ದಾರೆ. ದೇವೇಗೌಡ ಅಂಡ್ ಕಂಪನಿಯಲ್ಲಿ 12 ಮಂದಿ ಸ್ಟಾರ್ ಪ್ರಚಾರಕರಾಗಿದ್ದಾರೆ ಎಂದು ತಿಳಿಸಿದರು..

ಅಥಣಿ ಮತ್ತು ಹಿರೇಕೆರೂರಿನಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನ ಬಲವಂತವಾಗಿ ಹಿಂದೆ ಸರಿಸಿಲ್ಲ. ಒಂದು ಪಕ್ಷದಿಂದ ಟಿಕೆಟ್ ಪಡೆದು ನಿಂತವರನ್ನ ವಾಪಸ್ ತೆಗೆಸೋಕೆ ಅವರೇನು ಚಿಕ್ಕಮಕ್ಕಳಾ ಎಂದು ಹೇಳಿದ ಅವರು, ಈ ಹಿಂದೆ ರಾಮನಗರದಲ್ಲಿ ಚಂದ್ರಶೇಖರ್ ಅವರನ್ನು ಕಣದಿಂದ ಹಿಂದೆ ಸರಿಸಿದವರಾರು ? ಈ ರೀತಿಯಾದ ಕೆಲಸಗಳನ್ನು ಬಿಜೆಪಿ ಮಾಡೊಲ್ಲ ಅಂತಾ ಮಾಜಿ ಪ್ರಧಾನಿ ದೇವೇಗೌಡರಿಗೆ ಕೇಂದ್ರ ಸಚಿವ ಸದಾನಂದಗೌಡರು ತಿರುಗೇಟು ನೀಡಿದರು.

ಇದನ್ನೂ ಓದಿ : ಸಿದ್ದರಾಮಯ್ಯ ಒಕ್ಕಲಿಗ ವಿರೋಧಿಯಲ್ಲ; ಅದೆಲ್ಲಾ ಜೆಡಿಎಸ್ ಗಿಮಿಕ್: ಚಲುವರಾಯಸ್ವಾಮಿ

ಮೊನ್ನೆಯವರೆಗೂ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಹಾವು ಮುಂಗುಸಿ ತರ ಇದ್ರು ಈಗ ಸ್ಬಲ್ಪ ಪ್ಲೇಟ್ ಬದಲಾವಣೆ ಆಗಿದೆ. 15 ಜನರನ್ನ ಸೋಲಿಸುವುದೇ ನನ್ನ ಗುರಿ ಅಂತ ಕುಮಾರಸ್ವಾಮಿ ಹೇಳುತ್ತಾರೆ. ಅವರು ಯಾವಾಗ ಸರಿ ಅಂತ ಹೇಳ್ತಾರೋ ತಪ್ಪು ಅಂತಾರೋ ಇದೆಲ್ಲಾ ದೇವರಿಗೆ ಅರ್ಥವಾಗಬೇಕು, ಜನಸಾಮಾನ್ಯರಿಗೆ ಮಾತ್ರ ಅರ್ಥ ಆಗಲ್ಲ ಎಂದು ಕುಮಾರಸ್ವಾಮಿ ವಿರುದ್ದ ಸದಾನಂದ ಗೌಡ ವಾಗ್ದಾಳಿ ನಡೆಸಿದರು

First published: November 22, 2019, 10:37 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading