ಮಹಾರಾಷ್ಟ್ರದಲ್ಲಿ ದುರಾಸೆಯ ಉದ್ಧವ್, ದುರಹಂಕಾರಿ ರಾವತ್​ಗೆ ತಕ್ಕ ಶಾಸ್ತಿ: ಪ್ರಲ್ಹಾದ್ ಜೋಶಿ

ಕೇಂದ್ರ ಸರ್ಕಾರ ಯಾವುದೇ ರೀತಿಯ ಅಧಿಕಾರ ದುರ್ಬಳಕೆ ಮಾಡಿಕೊಂಡಿಲ್ಲ. ಶಿವಸೇನೆ ಸುಧಾರಿಸಲು ಸಮಯ ಕೊಟ್ಟೆವು, ಸುಧಾರಣೆ ಆಗಲಿಲ್ಲ ಹೀಗಾಗಿ ಅವರ ಸಂಗ ಬಿಡಬೇಕಾಯಿತು. ಶಿವಸೇನಾ ನಮ್ಮನ್ನು ಬ್ಲ್ಯಾಕ್‌ಮೇಲೆ ಮಾಡಲು ಪ್ರಯತ್ನಿಸಿದ್ರು

news18-kannada
Updated:November 23, 2019, 4:41 PM IST
ಮಹಾರಾಷ್ಟ್ರದಲ್ಲಿ ದುರಾಸೆಯ ಉದ್ಧವ್, ದುರಹಂಕಾರಿ ರಾವತ್​ಗೆ ತಕ್ಕ ಶಾಸ್ತಿ: ಪ್ರಲ್ಹಾದ್ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ್​ಜೋಶಿ
  • Share this:
ಹುಬ್ಬಳ್ಳಿ(ನ.23): ಮಹಾರಾಷ್ಟ್ರ ಜನರು ನರೇಂದ್ರ ಮೋದಿ ಮತ್ತು ದೇವೇಂದ್ರ ಫಡ್ನವೀಸ್ ನೇತ್ರತ್ವಕ್ಕೆ ಓಟು ಕೊಟ್ಟಿದ್ದರು. ಬಾಳಾಸಾಹೇಬ್ ಜೀವನ, ವಿಚಾರ ಧಾರೆಯ ಹೋರಾಟಕ್ಕೆ ವಿರುದ್ಧವಾಗಿ ಶಿವಸೇನೆ ಕಾಂಗ್ರೆಸ್ ಜೊತೆಗೆ ಹೋಗಿದ್ದರು. ದುರಾಸೆ, ದುರಹಂಕಾರದ ಕಾರಣ ಬಿಜೆಪಿ ಸ್ನೇಹ ಬಿಟ್ಟಿದ್ದರು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಮಹಾರಾಷ್ಟ್ರದಲ್ಲಿ ಸ್ಥಿರ ಸರ್ಕಾರದ ಅವಶ್ಯಕತೆ ಇದೆ. ಹೀಗಾಗಿ ಅನಿವಾರ್ಯವಾಗಿ ಎನ್‌ಸಿಪಿಯೊಂದಿಗೆ ನಾವು ಸರ್ಕಾರ ರಚಿಸಿದ್ದೇವೆ. ಸಂಜಯ್ ರಾವುತ್ ಎನ್ನುವ ದುರಹಂಕಾರಿ ಮನುಷ್ಯನಿಗೆ, ಉದ್ಧವ್ ಠಾಕ್ರೆ ಎನ್ನುವ ಅಧಿಕಾರದ ದುರಾಸೆಯ ವ್ಯಕ್ತಿಗೆ ಈ ಪಾಠ ಕಲಿಸಿದ್ದೇವೆ ಎಂದು ತಮ್ಮ ನಿರ್ಧಾರವನ್ನು ಕೇಂದ್ರ ಸಚಿವರು ಸಮರ್ಥಿಸಿಕೊಂಡರು.

ಕೇಂದ್ರ ಸರ್ಕಾರ ಯಾವುದೇ ರೀತಿಯ ಅಧಿಕಾರ ದುರ್ಬಳಕೆ ಮಾಡಿಕೊಂಡಿಲ್ಲ. ಶಿವಸೇನೆ ಸುಧಾರಿಸಲು ಸಮಯ ಕೊಟ್ಟೆವು, ಸುಧಾರಣೆ ಆಗಲಿಲ್ಲ ಹೀಗಾಗಿ ಅವರ ಸಂಗ ಬಿಡಬೇಕಾಯಿತು. ಶಿವಸೇನಾ ನಮ್ಮನ್ನು ಬ್ಲ್ಯಾಕ್‌ಮೇಲೆ ಮಾಡಲು ಪ್ರಯತ್ನಿಸಿದ್ರು ಎಂದು ನಾವು ಹೇಳಿದ್ದೇವೆ ಎಂದರು.

ಇದನ್ನೂ ಓದಿ : ಐಷಾರಾಮಿ ಜೀವನ ಮಾಡೋ ಸಿದ್ಧರಾಮಯ್ಯರ ಸಮಾಜವಾದ ಎಲ್ಲಿ ಹೋಯ್ತು ; ಡಿ.ವಿ.ಸದಾನಂದಗೌಡ ಪ್ರಶ್ನೆ

ರಾಜ್ಯದಲ್ಲಿ ಉಪಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಆಗುತ್ತದೆ ಎಂದು ಗುಪ್ತಚರ ವರದಿ ಬಂದಿರುವ ವಿಚಾರವಾಗಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಯಾವುದೇ ಗುಪ್ತಚರ ಮಾಹಿತಿ ಬಂದಿಲ್ಲ. ನಾನು ಬಿಜೆಪಿ ಹೈಕಮಾಂಡ್‌ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದೇನೆ. ಇನ್ನು ಯಾರಿಗೆ ಇಂತಹ ವರದಿ ಬಂದಿದೆ ನನಗೆ ಗೊತ್ತಿಲ್ಲ.
ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ. ಬಹುಮತಕ್ಕೆ ಅಗತ್ಯವಾಗುವ ಸ್ಥಾನಕ್ಕಿಂತ ಹೆಚ್ಚಿನ ಸ್ಥಾನದಲ್ಲಿ ಬಿಜೆಪಿ ಗೆಲ್ಲಲಿದೆ ಎಂದಿಉ ತಿಳಿಸಿದರು.

ಮಹದಾಯಿ ವಿಚಾರ ಪರಿಶೀಲಿಸಲು ಯಾವುದೇ ಹೊಸ ಸಮಿತಿ ರಚಿಸಿಲ್ಲಮಹದಾಯಿ ವಿಚಾರದಲ್ಲಿ ಮರುಪರಿಶೀಲನಾ ಸಮಿತಿ ನೇಮಕ ವಿಚಾರ ಮಾತನಾಡಿದ ಅವರು,  ಕಾಂಗ್ರೆಸ್‌ನವರು ಚುನಾವಣೆಗಾಗಿ ಗಿಮಿಕ್ ಮಾಡುತ್ತಿದ್ದಾರೆ. ಮರುಪರಿಶೀಲನೆ ಸಮಿತಿ ಆಗುವ ಪ್ರಶ್ನೆಯಿಲ್ಲ‌. ನಾವು ಕುಡಿಯುವ ನೀರಿಗೆ ಪರಿಸರ ಇಲಾಖೆಯ ಅನುಮತಿ ಕೇಳಿದ್ದೆವು, ಕೊಟ್ಟಿದ್ದಾರೆ. ಕೃಷಿಗಾಗಿ ಕ್ಯಾನಲ್ ಜೋಡಿಸಿದ್ದಾರೆಂದು ನಮ್ಮ ವಿರುದ್ಧ ದೂರಿದ್ದಾರೆ. ಅದರ ಪರಿಶೀಲನೆ ಮಾಡುವುದಾಗಿ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಯಾವುದೇ ರಾಜ್ಯ ಸರ್ಕಾರ ಇಂತಹ ಆರೋಪ ಮಾಡಿದಾಗ ಪರಿಶೀಲನೆ ಮಾಡುವುದು ಸಹಜ. ಯಾವುದೇ ಹೊಸ ಸಮಿತಿ ರಚಿಸಿಲ್ಲ. ಈಗಿರುವ ಅಧಿಕಾರಿಗಳ ಸಮಿತಿಗೆ ಪರಿಶೀಲಿಸಲು ಹೇಳಿದ್ದಾರೆ. ಗೆಜೆಟ್ ನೋಟಿಫಿಕೇಶನ್ ಹೊರಡಿಸಲು ಪೂರ್ವ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಯೋಜನೆ ಜಾರಿಗೆ ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ. ಏನು ಪ್ರಯತ್ನ ನಡೆಸಿದ್ದೇವೆಂದು ಬಹಿರಂಗವಾಗಿ ಹೇಳಲ್ಲ ಎಂದರು.

ಡಿಕೆಶಿಯ 23 ವರ್ಷದ ಮಗಳಿಗೆ 108 ಕೋಟಿ ಆಸ್ತಿ ಎಲ್ಲಿಂದ ಬಂತು

ಜೈಲಲ್ಲಿದ್ದಾಗ ಯಾರು ಏನು ಹೇಳಿದ್ದಾರೆ, ಎಲ್ಲರಿಗೂ ಸರಿಯಾಗಿ ಉತ್ತರ ಕೊಡುತ್ತೇನೆಂದು ಡಿ.ಕೆ. ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಏನು ಉತ್ತರ‌ ಕೊಡುತ್ತಾರೆ, ಕೊಡಲಿ. ಉತ್ತರ ನೀಡಲು ಕಾಯುವುದು ಬೇಡ. ಉಪಚುನಾವಣೆ ಸಂದರ್ಭದಲ್ಲೇ ಉತ್ತರ ಕೊಡುವುದು ಸೂಕ್ತ. ಡಿಕೆಶಿಯ 23 ವರ್ಷದ ಮಗಳಿಗೆ 108 ಕೋಟಿ ಆಸ್ತಿ ಎಲ್ಲಿಂದ ಬಂತು ಮೊದಲು ಉತ್ತರ ಕೊಡಲಿ. ಡಿಕೆಶಿ ರಾಜಕೀಯಕ್ಕೆ‌ ಬಂದಾಗ ಆಸ್ತಿ ಎಷ್ಟಿತ್ತು? ಈಗ ಎಷ್ಟಾಗಿದೆ.?  ಜನತೆಗೆ ಗೊತ್ತಾಲ್ವಾ? ಜನರು ಮೂರ್ಖರಲ್ಲ. ಆದ ತಪ್ಪು ಸರಿಪಡಿಸಿಕೊಂಡು, ಮುಂದೆ ಸರಿಯಾದ ದಾರಿಯಲ್ಲಿ ನಡೆಯಲಿ ಎಂದು ಹೇಳಿದರು.
First published:November 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ