ಸಿಎಎ, ಎನ್.ಆರ್.ಸಿ. ವಿಷಯದಲ್ಲಿ ಕಾಂಗ್ರೆಸ್ ನಿಂದ ಹಾದಿ ತಪ್ಪಿಸೋ ಕೆಲಸ ; ಪ್ರಹ್ಲಾದ್​ ಜೋಶಿ ಕಿಡಿ

ನಾವು ಶಾಂತಿಯುತವಾಗಿ ಜನಜಾಗೃತಿ ಮಾಡುತ್ತಿದ್ದೇವೆ‌. ಕೆಲವರು ಗಲಾಟೆ ಮಾಡಿ ಜನರ ದಾರಿ ತಪ್ಪಿಸುತ್ತಿದ್ದಾರೆ‌. ಕಾಂಗ್ರೆಸ್‌ನವರಿಗೆ ಜನರೇ ಗೋ ಬ್ಯಾಕ್ ಅಂತಾ ಹೇಳಿ ಮನೆಗೆ ಕಳಿಸಿದ್ದಾರೆ. ಕಾಂಗ್ರೆಸ್ ವಿರೋಧ ಪಕ್ಷವಾಗಿ ರಚನಾತ್ಮಕ ಹೋರಾಟ ಮಾಡಲಿ ಎಂದರು.

news18-kannada
Updated:January 13, 2020, 3:30 PM IST
ಸಿಎಎ, ಎನ್.ಆರ್.ಸಿ. ವಿಷಯದಲ್ಲಿ ಕಾಂಗ್ರೆಸ್ ನಿಂದ ಹಾದಿ ತಪ್ಪಿಸೋ ಕೆಲಸ ; ಪ್ರಹ್ಲಾದ್​ ಜೋಶಿ ಕಿಡಿ
ಕೇಂದ್ರ ಸಚಿವ ಪ್ರಲ್ಹಾದ್​ಜೋಶಿ
  • Share this:
ಹುಬ್ಬಳ್ಳಿ (ಜ.13) : ಸಿಎಎ ಹಾಗೂ ಎನ್ ಆರ್ ಸಿ ಕಾಯ್ದೆ ವಿಚಾರದಲ್ಲಿ ಕಾಂಗ್ರೆಸ್ ನವರು ಜನರ ಹಾದಿ ತಪ್ಪಿಸುತ್ತಿದ್ದಾರೆ. ಕಾಂಗ್ರೆಸ್ ನವರಿಗೆ ಪ್ರಧಾನಿ ನರೇಂದ್ರ ಮೋದಿ  ವಿರುದ್ದ ಆರೋಪ ಮಾಡಲು ಯಾವುದೇ ವಿಷಯಗಳಿಲ್ಲ. ಹೀಗಾಗಿ ಪೌರತ್ವ ಕಾಯ್ದೆ ವಿಚಾರದಲ್ಲಿ ಸುಖಾ ಸುಮ್ಮನೇ ಆರೋಪ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಕಿಡಿಕಾರಿದ್ದಾರೆ.

ಜನವರಿ 18 ರಂದು ಕೇಂದ್ರ ಸಚಿವ ಅಮಿತ್ ಶಾ ಅವರು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಾವು ಶಾಂತಿಯುತವಾಗಿ ಜನಜಾಗೃತಿ ಮಾಡುತ್ತಿದ್ದೇವೆ‌. ಕೆಲವರು ಗಲಾಟೆ ಮಾಡಿ ಜನರ ದಾರಿ ತಪ್ಪಿಸುತ್ತಿದ್ದಾರೆ‌. ಕಾಂಗ್ರೆಸ್‌ನವರಿಗೆ ಜನರೇ ಗೋ ಬ್ಯಾಕ್ ಅಂತಾ ಹೇಳಿ ಮನೆಗೆ ಕಳಿಸಿದ್ದಾರೆ. ಕಾಂಗ್ರೆಸ್ ವಿರೋಧ ಪಕ್ಷವಾಗಿ ರಚನಾತ್ಮಕ ಹೋರಾಟ ಮಾಡಲಿ ಎಂದರು.

ನೆರೆ ಪರಿಹಾರ, ಜಿಎಸ್‌ಟಿ ಹಣ ಹಂತಹಂತವಾಗಿ ಬಿಡುಗಡೆಯಾಗುತ್ತಿದೆ. ಸಿದ್ದರಾಮಯ್ಯ ಕೈಗೆ ಕಾಂಗ್ರೆಸ್‌ನವರು ತಾಳ, ತಮಟೆ ಏನು ಕೊಟ್ಟಿಲ್ಲ. ಹಿನ್ನೆಲೆ ಗಾಯನ ಮಾಡುವವರು ಮನೆಗೆ ಹೋಗಿದ್ದಾರೆ. ಸಿದ್ದರಾಮಯ್ಯ ನಿಮ್ಮ ಬಳಿ ಏನೂ ಇಲ್ಲ ನಮ್ಮ ಬಗ್ಗೆ ಮಾತನಾಡಬೇಡಿ. ಸಿದ್ದರಾಮಯ್ಯ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಮಹದಾಯಿ ವಿಚಾರ ಟ್ರಿಬ್ಯುನಲ್‌ಗೆ ಹೋಗಲು  ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ :  ಗುಂಪುಗಳು ನಾಲ್ಕಿದ್ದರೂ ಕೆಪಿಸಿಸಿ ಅಧ್ಯಕ್ಷರು ನೇಮಕವಾದರೆ ಎಲ್ಲರೂ ಒಂದೇ: ಸತೀಶ್ ಜಾರಕಿಹೊಳಿ

ಸಚಿವ ಸಂಪುಟ ರಚನೆ ವಿಚಾರವನ್ನು ಮುಖ್ಯಮಂತ್ರಿ ಬಿಎಸ್ ವೈ ಪಕ್ಷದ ವರಿಷ್ಠರೊದಿಗೆ ಚರ್ಚೆ ಮಾಡಿದ್ದಾರೆ. ಆ ವಿಚಾರ ಅವರಿಗೆ ಬಿಟ್ಟದ್ದು‌ ಅವರ ಹೇಳಿಕೆಯೇ ನಮ್ಮ ಹೇಳಿಕೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯಿಸಿದರು.
First published:January 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ