Belagavi: ಐದು ರಾಷ್ಟ್ರೀಯ ‌ಹೆದ್ದಾರಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಕೇಂದ್ರ ಸಚಿವ Nitin Gadkari

ಒಟ್ಟು 3972 ಕೋಟಿ ರೂಪಾಯಿ ವೆಚ್ಚದ 238 ಕಿ.ಮೀ. ಉದ್ದದ ಕಾಮಗಾರಿಗೆ  ಶಂಕುಸ್ಥಾಪನೆ ನೇರವೆರಿಸಿದರು

ಕಾರ್ಯಕ್ರಮದ ಚಿತ್ರಣ

ಕಾರ್ಯಕ್ರಮದ ಚಿತ್ರಣ

  • Share this:
ಬೆಳಗಾವಿ (ಫೆಬ್ರವರಿ. 28):  ಉತ್ತರ ಕರ್ನಾಟಕದ ಬಹು ದಿನಗಳ ಬೇಡಿಕೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಬರೋಬ್ಬರಿ 3972  ಕೋಟಿ ವೆಚ್ಚದ ಹೆದ್ದಾರಿ (Highway Project) ಕಾಮಗಾರಿಗಳಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಚಾಲನೆ ನೀಡಿದ್ದಾರೆ. ದಶಕಗಳಿಂದ ಬೇಡಿಕೆಯಲ್ಲಿದ್ದ ಉತ್ತರ ಕರ್ನಾಟಕ ಭಾಗದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಶಂಕುಸ್ಥಾಪನೆ ನೇರವೇರಿಸಿದ್ದಾರೆ.  ವಿಶೇಷ ವಿಮಾನದ ಮೂಲಕ ಬೆಳಗಾವಿ ಸಾಂಬ್ರಾ ಏರ್ಪೋರ್ಟ್ ಗೆ ಬಂದಿಳಿದ ಕೇಂದ್ರ ಸಚಿವ ನಿತಿನ್ ಗಡ್ಕರಿಯರನ್ನ ಸಿಎಂ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ವಾಗತಿಸಿದ್ರು.  ಬಳಿಕಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶದಲ್ಲಿ  ಐದು ರಾಷ್ಟ್ರೀಯ  ಹೆದ್ದಾರಿ ಯೋಜನೆಗಳ ಶಂಕುಸ್ಥಾಪನೆಯನ್ನ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ನೇರವೇರಿಸಿದರು.

ಬೆಳಗಾವಿ ಟು ಸಂಕೇಶ್ವರ, ಸಂಕೇಶ್ವರ ಟು ಮಹಾರಾಷ್ಟ್ರ ಗಡಿಯವರೆಗೆ ಷಟ್ಪಥ  ಹೆದ್ದಾರಿ, ಚೋರ್ಲಾ-ಜಾಂಬೋಟಿ-ಬೆಳಗಾವಿ ನಡುವಿನ ದ್ವಿಪಥ ಹೆದ್ದಾರಿ, ವಿಜಯಪುರ-ಮುರಗುಂಡಿಎನ್. ಎಚ್.548ಬಿ, ಸಿದ್ದಾಪುರ-ವಿಜಯಪುರ(ಎನ್.ಎಚ್.561ಎ) ಸೇರಿದಂತೆ ಹುಬ್ಬಳ್ಳಿ-ಧಾರವಾಡ ಬೈಪಾಸ್ ಹೆದ್ದಾರಿ ಹೀಗೆ ಒಟ್ಟು 3972 ಕೋಟಿ ರೂಪಾಯಿ ವೆಚ್ಚದ 238 ಕಿ.ಮೀ. ಉದ್ದದ ಕಾಮಗಾರಿಗೆ  ಶಂಕುಸ್ಥಾಪನೆ ನೇರವೆರಿಸಿದರು

ಶೀಘ್ರದಲ್ಲೇ ಭಾರತ ಮಾಲಾ ಎರಡನೇ ಹಂತದ ಯೋಜನೆ ಘೋಷಣೆ

ಇದೇ ವೇಳೆ ಮಾತನಾಡಿದ ಸಚಿವ ಗಡ್ಕರಿ ಈಗಾಗಲೇ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದೇನೆ. ಆದಷ್ಟು ಬೇಗ ಭಾರತ ಮಾಲಾ ಎರಡನೇ ಹಂತದ ಯೋಜನೆ ಘೋಷಣೆ ಮಾಡಲಿದ್ದೇವೆ.  ನನ್ನ ಇಲಾಖೆಯಲ್ಲಿ ಅನುದಾನ ಕೊರತೆಯಲ್ಲಿ, ಗ್ರೀನ್ ಫಿಲ್ಡ್ ರಸ್ತೆ ಕಾರಿಡಾರ್ ಕಾಮಗಾರಿ ದೇಶದಲ್ಲಿ ನಡೆಯುತ್ತಿವೆ. ಕರ್ನಾಟಕ, ತಮಿಳನಾಡು ಹಾಗೂ ದಿಲ್ಲಿ ಮತ್ತು ಮುಂಬೈ ಮಧ್ಯೆ ಹೈವೆ ನಿರ್ಮಾಣ ಮಾಡ್ತಿದ್ದೇವೆ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಿಂದ ಕೈಗಾರಿಕೋದ್ಯಮ ಪ್ರಗತಿ ಸಾಧಿಸಲಿದೆ ಎಂದ್ರು.ರಾಷ್ಟ್ರೀಯ ಹೆದ್ದಾರಿ ಅಕ್ಕ ಪಕ್ಕದ ಜಮೀನನ್ನೆ ಸರ್ಕಾರ ವೇ ಸ್ವಾಧೀನ ಪಡೆಸಿಕೊಳ್ಳಲಿ, ಯಾಕೆಂದರೆ ರಾಜಕಾರಣಿಗಳು ಹೈವೇ ಪಕ್ಕ ಭೂಮಿ ಖರೀದಿಸಿ ದುಬಾರಿ ಬೆಲೆಗೆ ಮಾರಾಟ ಮಾಡ್ತಾರೆ ಎಂದು ತಿಳಿಸಿದರು

ಇದನ್ನು ಓದಿ: ನಮಗೆ ತಿಳಿಸದೆ ನೇರವಾಗಿ ಗಡಿಗೆ ಬರಬೇಡಿ: ವಿದ್ಯಾರ್ಥಿಗಳಿಗೆ ವಿದೇಶಾಂಗ ಇಲಾಖೆ ಮನವಿ

ಶೀಘ್ರವೇ ಜಲ ವಿವಾದ ಇತ್ಯರ್ಥ

ನಾನು ಜಲಸಂಪನ್ಮೂಲ ಸಚಿವ ಇದ್ದಾಗ ಹಲವು ರಾಜ್ಯಗಳ ಮಧ್ಯೆ 20 ಜಲ ವಿವಾದಗಳ ಜಗಳು ಇದ್ದವು, ನಾನು ಇದರಲ್ಲಿ 16 ರಾಜ್ಯಗಳ ಜಗಳ ಬಗೆಹರಿಸಿರುವೆ. ಆದರೆ ನನಗೆ ಕರ್ನಾಟಕ ಮತ್ತು ಮಹಾರಾಷ್ಟ್ರ ಮಧ್ಯದ ಜಲ ವಿವಾದ ಬಗೆಹರಿಸಲಾಗಲಿಲ್ಲ.ಆದಷ್ಟು ಬೇಗ ಈ ಸಮಸ್ಯೆ ಇತ್ಯರ್ಥ ಆಗಬೇಕಿದೆ ಎಂದು ಕೋರಿದರು

ಇದನ್ನು ಓದಿ: KCR​ ಗೆಲುವಿಗೆ ರಣತಂತ್ರ ಹೆಣೆಯಲು ಮುಂದಾದ ಚುನಾವಣಾ ಚಾಣಾಕ್ಷ Prashant Kishor?

ನಿತಿನ್​ ಗಡ್ಕರಿ ಕಾರ್ಯಕ್ಕೆ ಸಿಎಂ ಮೆಚ್ಚುಗೆ

ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,  ಹೆದ್ದಾರಿ ಕಾಮಗಾರಿ ಶಂಕುಸ್ಥಾಪನೆ ಸಮಾರಂಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನ ಕೊಂಡಾಡಿದ್ರು. ಬೆಳಗಾವಿಯಲ್ಲಿ ಈಗ ರಸ್ತೆಯ ಕ್ರಾಂತಿ ಆಗ್ತಿದೆ. ಪಕ್ಷದ ರಾಜ್ಯಗಳಾದ ಗೋವಾ, ಮಹಾರಾಷ್ಟ್ರ ಸಂಪರ್ಕಿಸುವ ಐದು ಹೆದ್ದಾರಿ ಯೋಜನೆಗಳು ಇವು. ರಸ್ತೆ ಮುಖಾಂತರ ದೇಶದ ಅಭಿವೃದ್ಧಿಗೆ ಪ್ರಧಾನ ಮಂತ್ರಿ ಮೋದಿಯವರು ಕನಸು ಕಂಡಿದ್ದರು. ಅದನ್ನ ನಿತಿನ್ ಗಡ್ಕರಿ ಅವರು ಸಾಕಾರಗೊಳಿಸುವ ಕಾರ್ಯ ಮಾಡುತ್ತಿದ್ದಾರೆ. ನಿತಿನ್ ಗಡ್ಕರಿ ಅವರು ಮಹಾರಾಷ್ಟ್ರ ಲೋಕೋಪಯೋಗಿ ಸಚಿವರಾಗಿ ಕ್ರಾಂತಿಯನ್ನ ಮಾಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಜಲಶಕ್ತಿ ನಿರ್ಮಾಣ

ಸಚಿವ ಗಡ್ಕರಿಗೆ ಅರ್ಥವಾಗಲೆಂದುಕನ್ನಡ ಮತ್ತು ಹಿಂದಿ ಎರಡು ಭಾಷೆಯಲ್ಲಿ ಮಾತನಾಡಿದ ಸಿಎಂ ಇಂದು ಇಡೀ ದೇಶದಲ್ಲಿ ನ್ಯಾಷನಲ್ ಹೈವೇ ಅಭಿವೃದ್ಧಿ ಮಾಡುತ್ತಿದ್ದಾರೆ. ಹಲವು ಉಪಯುಕ್ತ ಯೋಜನೆಗಳನ್ನ ರೂಪಿಸಿದ್ದಾರೆ. ಬೆಳಗಾವಿಯ ನ್ಯಾಷನಲ್ ಹೈವೆ ಪಕ್ಕದಲ್ಲಿ ಜಲಶಕ್ತಿ ನಿರ್ಮಾಣ ಮಾಡಲಾಗುವುದು, ನಿಪ್ಪಾಣಿ ಯಿಂದ ಕಿತ್ತೂರು ವರೆಗಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಜಲಶಕ್ತಿ ನಿರ್ಮಾಣ ಮಾಡಲಾಗುವುದು ಎಂದು ಘೋಷಿಸಿದ ಬೊಮ್ಮಾಯಿ ಬೆಳಗಾವಿಯಿಂದಲೇ ಈ ಯೋಜನೆ ಆರಂಭ ಮಾಡ್ತಿನಿ ಎಂದ್ರು. ಗಡ್ಕರಿಯವರು ರಿಂಗ್ ರೋಡ್ ಮಾಡಲು ಒತ್ತು ನೀಡಿದ್ದಾರೆ. ಬೆಳಗಾವಿಯಲ್ಲಿ ರಿಂಗ್ ರೋಡ್ ಮಾಡಬೇಕೆಂದು ಬಹಳ ವರ್ಷಗಳ ಬೇಡಿಕೆಯಿದೆ. ಆದಷ್ಟು ಬೇಗ ಬೆಳಗಾವಿಯಲ್ಲಿ ರಿಂಗ್ ರೋಡ್ ಮಾಡ್ತಿನಿ, ಮಹಾರಾಷ್ಟ್ರ ಧಾರ್ಮಿಕ ಸ್ಥಳಗಳು, ಕರ್ನಾಟಕ ಧಾರ್ಮಿಕ ಸ್ಥಳಗಳಿಗೆ ಜೋಡಣೆ ಮಾಡುವ ಕನಸು ಗಡ್ಕರಿ ಕಂಡಿದ್ದಾರೆ.ಇದು ರಾಷ್ಟ್ರೀಯ ಐಕ್ಯತೆ ಗೆ ಸಹಕಾರಿ ಆಗಲಿದೆ ಎಂದ್ರು.
Published by:Seema R
First published: