HOME » NEWS » State » CENTRAL MINISTER DV SADANANDA GOWDA CRITICIZED FARMER PROTEST SESR PMTV

ರೈತರ ಪ್ರತಿಭಟನೆ ಹಿಂದೆ ಪಟ್ಟಭದ್ರ ಹಿತಾಸಕ್ತಿ; ರಿಹಾನ್ನಾ ಏನಾದ್ರು ಭತ್ತದಗದ್ದೆ ನೋಡಿದ್ದರಾ: ಸದಾನಂದಗೌಡ ಕಿಡಿ

ರಿಹಾನ್ನಾಗೆ ರೈತರ ಶ್ರಮದ ಬಗ್ಗೆ ಏನು ಗೊತ್ತಿದೆ.  ರೈತರು ಹೇಗೆ  ಮಾರಾಟ ಮಾಡುತ್ತಾರೆ ಎಂದು ಗೊತ್ತಿದ್ಯಾ? ಭತ್ತದ ಗದ್ದೆಯನ್ನು ನೋಡಿದ್ದಾರಾ  ಎಂದು ಪ್ರಶ್ನಿಸಿದ್ದಾರೆ

news18-kannada
Updated:February 6, 2021, 6:27 PM IST
ರೈತರ ಪ್ರತಿಭಟನೆ ಹಿಂದೆ ಪಟ್ಟಭದ್ರ ಹಿತಾಸಕ್ತಿ; ರಿಹಾನ್ನಾ ಏನಾದ್ರು ಭತ್ತದಗದ್ದೆ ನೋಡಿದ್ದರಾ: ಸದಾನಂದಗೌಡ ಕಿಡಿ
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ
  • Share this:
ಮೈಸೂರು (ಫೆ. 6): ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ರೈತರ ಪ್ರತಿಭಟನೆ ಬಗ್ಗೆ ಟ್ವೀಟ್​ ಮಾಡಿ, ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿರುವ ಅಂತರಾಷ್ಟ್ರೀಯ ಪಾಪ್ ತಾರೆ ರಿಹಾನ್ನಾ ವಿರುದ್ಧ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಟೀಕಿಸಿದ್ದಾರೆ.   ಅಂತರಾಷ್ಟ್ರೀಯ ಪಾಪ್​ ಗಾಯಕಿ ವಿರುದ್ಧ ಹರಿಹಾಯ್ದಿರುವ ಅವರು,  ರಿಹಾನ್ನಾಗೆ ರೈತರ ಶ್ರಮದ ಬಗ್ಗೆ ಏನು ಗೊತ್ತಿದೆ?.  ರೈತರು ಹೇಗೆ  ಮಾರಾಟ ಮಾಡುತ್ತಾರೆ ಎಂದು ಗೊತ್ತಿದ್ಯಾ? ಭತ್ತದ ಗದ್ದೆಯನ್ನು ನೋಡಿದ್ದಾರಾ  ಎಂದು ಪ್ರಶ್ನಿಸಿದ್ದಾರೆ.  ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿದೆಯಾದರೂ ರೈತರಿಗೆ ಇನ್ನು ಸಿಕ್ಕಿಲ್ಲ. ತಾವು ಬೆಳೆದ ಬೆಳೆಯನ್ನು ಅವರು ಮುಕ್ತವಾಗಿ ಮಾರಲು ಕೇಂದ್ರ ಸರ್ಕಾರ ಮುಕ್ತ ಮಾರುಕಟ್ಟೆಯ ಸ್ವಾತಂತ್ಯ ನೀಡುತ್ತಿದೆ ಎಂದು ಕೃಷಿ ಕಾಯ್ದೆಯನ್ನು ಸಮರ್ಥಿಸಿಕೊಂಡರು. 

ಒಂದು ಹಂತದಲ್ಲಿ ರೈತರು ಈಗ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಬೇಕಾದವರಿಗೆ ಬೆಳೆ ಮಾರಾಟ ಮಾಡಲು ಸ್ವಾತಂತ್ರ್ಯ ಇಲ್ಲವಾಗಿದೆ. ಇದೇ ಕಾರಣ ಅವರಿಗೆ ಕೇಂದ್ರ ಸರ್ಕಾರ ಸ್ವಾತಂತ್ರ್ಯ ನೀಡಲು ಮುಂದಾಗಿದೆ.  ಬೆಳೆಗೆ ಯಾರಾದರೂ ಹೆಚ್ಚು ಬೆಲೆ ಕೊಡುತ್ತಾರೆ ಎಂದರೆ ಕೊಡಲಿ ಬಿಡಿ. ಸುಮ್ಮನೆ ಯಾಕೆ ಹಠ ಮಾಡುತ್ತೀರಾ ಎಂದು  ಪ್ರತಿಭಟನಾನಿರತ ರೈತರನ್ನು ಪ್ರಶ್ನಿಸಿದರು.

ಇದನ್ನು ಓದಿ: ಪಾಕ್​​ ಧ್ವಜ ಹಿಡಿದ ರಿಹಾನ್ನಾ; ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಈ ಫೋಟೋದ ಅಸಲಿಯತ್ತೇನು..?

ರೈತರಿಗೆ ಬೆಂಬಲ ನೀಡಿದ್ದು ಮೋದಿ ಸರ್ಕಾರ. ರೈತರು ಎಪಿಎಂಸಿ ಕೈ ಗೊಂಬೆಯಾಗಿ ಇರುವುದು ಬೇಡ ಎಂದು ರೈತರು ಸ್ವತಂತ್ರವಾಗಿ ಬೆಳೆ ಮಾರಾಟ ಮಾಡಲು ಅವಕಾಶ ಕೊಟ್ಟಿದ್ದಾರೆ. ಈ ಕಾಯ್ದೆಯಿಂದ ಬಂಡವಾಳ ಶಾಹಿಗಳ ಕೈಗೊಂಬೆಯಾಗುತ್ತಾರೆ ಎನ್ನುವುದು ಸುಳ್ಳು. ಪಟ್ಟಭದ್ರ ಹಿತಾಸಕ್ತಿಯಿಂದಾಗಿ ಈ ಪ್ರತಿಭಟನೆ ನಡೆಯುತ್ತಿದೆ. ಕೃಪಾ ಪೋಷಿತ ಜನರ ಪ್ರೇರಣೆಯಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಕೃಷಿ ಕಾಯ್ದೆಗಳ ವಿಚಾರದಲ್ಲಿ ನಾವು ರಾಜಿ ಆಗಿದ್ದೀವಿ. ಮಾತುಕತೆಗೂ ಸಿದ್ದರಿದ್ದೀವಿ. ಆದರೆ, ರೈತರೇ ಹಠ ಮಾಡುತ್ತಿದ್ದಾರೆ. ನಮ್ಮ ಜೊತೆ ಮಾತುಕತೆಗೆ ಬರುತ್ತಿಲ್ಲ ಎಂದು ಆರೋಪಿಸಿದರು.

ರೈತ ಹಿತ ಕಾಪಾಡಲು ಮೋದಿ ಸರ್ಕಾರ ಬದ್ಧ

ದೇಶದಲ್ಲಿ ಸ್ವಾಮಿನಾಥನ್ ವರದಿಯನ್ನ ಜಾರಿ ಮಾಡಿರುವುದು ಮೋದಿ ಸರ್ಕಾರ. ಮೋದಿ ಅಧಿಕಾರಕ್ಕೆ ಬಂದ ಮೇಲೆ ಕೃಷಿಯಲ್ಲಿ ಅಭಿವೃದ್ದಿ ಆಗಿದೆ. ರೈತರ ಹಿತ ಕಾಪಾಡುವಲ್ಲಿ ಮೋದಿ ಸರ್ಕಾರ ಸದಾ ಉತ್ತಮ ಯೋಜನೆಗಳನ್ನ ರೂಪಿಸಿದೆ. ಈ ಮೂರು ಕೃಷಿ ಕಾಯ್ದೆಯಗಳು ರೈತರಿಗೆ ಲಾಭದಾಯಕವಾಗಿರಲಿವೆ. ಆದರೆ ಕಾನೂನಿನ ಪೂರ್ಣ ಅರಿವಿಲ್ಲದ ಕೆಲ ರೈತರು ಈ ಹೋರಾಟದಲ್ಲಿ ಭಾಗಿಯಾಗುತ್ತಿದ್ದಾರೆ. ಸರ್ಕಾರ ಮಾತುಕತೆಗೆ ಸಿದ್ದವಿರುವಾಗ ಹಾಗೂ ಸುಪ್ರೀಂ ಸೂಚನೆಯಂತೆ 18 ತಿಂಗಳ ಕಾಲ ಆ ಕಾಯ್ದೆಗಳನ್ನ ಜಾರಿಗೆ ತರೋದಿಲ್ಲ ಅಂತ ಹೇಳಿದ ಮೇಲೂ ಪ್ರತಿಭಟನೆ ಮಾಡುವ ಅಗತ್ಯವೇನಿದೆ ಎಂದು ಪ್ರಶ್ನಿಸಿದರು. ಇನ್ನಾದರೂ ಈ ಬಗ್ಗೆ ರೈತರು ಹಠಬಿಟ್ಟು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲಿ ಎಂದು ಸಲಹೆ ನೀಡಿದರು.
Published by: Seema R
First published: February 6, 2021, 6:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories