Pakistanದ ಏಜೆಂಟ್‌‌ಗಳು ಹುಟ್ಟಿಕೊಳ್ಳೋದೆ ಮಂಗಳೂರಲ್ಲಿ: ಕೇಂದ್ರ ಸಚಿವ ಎ ನಾರಾಯಣಸ್ವಾಮಿ

ಕೇಂದ್ರದಿಂದ ಬಿಡುಗಡೆಯಾಗುವ ಹಣದಲ್ಲಿ 5 ಪರ್ಸೆಂಟ್  ಸಹ ಜನರಿಗೆ ತಲುಪಲ್ಲ ಎಂದು ಅಂದಿನ ರಾಜೀವ್‌‌ಗಾಂಧಿ ಪ್ರಧಾನಿಯಾಗಿದ್ದಾಗ ಹೇಳಿದ್ದರು, ಹಾಗಿದ್ರೆ 95% ಭ್ರಷ್ಟಾಚಾರ ಕಾಂಗ್ರೆಸ್ ನವರು ಮಾಡಿದ್ರಾ? ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತೀಕ್ಷ್ಣವಾಗಿ ಪ್ರಶ್ನಿಸಿದರು

ಸಚಿವ ಎ ನಾರಾಯಣಸ್ವಾಮಿ

ಸಚಿವ ಎ ನಾರಾಯಣಸ್ವಾಮಿ

  • Share this:
ಚಾಮರಾಜ‌ನಗರ (ಮೇ.07) ಮಂಗಳೂರಿನಲ್ಲಿ ಹಲವು ಸಂಘಟನೆಗಳಿದ್ದು ಪಾಕಿಸ್ತಾನದ ಏಜೆಂಟ್ ಗಳು ಹುಟ್ಟಿಕೊಳ್ಳೊದೇ ಮಂಗಳೂರಲ್ಲಿ (Mangalore) ಎಂದುಕೇಂದ್ರ ಸಚಿವ ಎ. ನಾರಾಯಣಸ್ವಾಮಿ (A. NarayanaSwamy) ಹೇಳಿದ್ದಾರೆ. ಚಾಮರಾಜನಗರದಲ್ಲಿ ಮಾತನಾಡಿದ ಅವರು ಮುಸ್ಲಿಂ ಡಿಫೆನ್ಸ್ ಫೋರ್ಸ್ ಎಂಬ ಸಂಘಟನೆ ಕಾರ್ಯಾಚರಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ  ಇಂತಹ ಸಂಘಟನೆಗಳು ಮಂಗಳೂರು, ಕೇರಳ, ದೆಹಲಿ ಸೇರಿದಂತೆ ಎಲ್ಲಿಯೇ ಹುಟ್ಟಿಕೊಳ್ಳಲಿ ಅವರನ್ನು ಸದೆ ಬಡೆಯುತ್ತೇವೆ. ಯಾವುದೇ ಕಾರಣಕ್ಕೂ ಅವರನ್ನು ಬಿಡೋ ಪ್ರಶ್ನೆಯೇ ಇಲ್ಲ ಎಂದರು 

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶದ ಗೌರವಕ್ಕೆ ಹಾಗೂ ಸಾರ್ವಭೌಮತೆಗೆ ಕುಂದು ತರುವ ಸಂಸ್ಥೆಗಳನ್ನು ಬಿಡುತ್ತಿಲ್ಲ.ಯಾವುದನ್ನು ಯಾವ ಕಾಲ ಘಟ್ಟದಲ್ಲಿ ಬ್ಯಾನ್ ಮಾಡಬೇಕೋ ,ಮಾಡ್ತೇವೆ ಎಂದ ಅವರು ಪಾಕಿಸ್ತಾನ್ ಜಿಂದಾಬಾದ್, ಚೋಟಾ ಪಾಕಿಸ್ತಾನ್ ಎಂದು ಕೂಗುವ ಪ್ರವೃತ್ತಿಗಳು ಜಮ್ಮು ಕಾಶ್ಮೀರದಲ್ಲಿ ಪ್ರಾರಂಭವಾಗಿತ್ತು. ಹಿಂದಿನ ಸರ್ಕಾರಗಳು ಇದನ್ನು ನಿಗ್ರಹಿಸಲು ವಿಫಲರಾಗಿದ್ದವು. ಪಾಕಿಸ್ತಾನದಲ್ಲಿ ಸರ್ಕಾರ ಬದಲಾವಣೆಯಾದಾಗ ಇಂತಹ ಘಟನೆಗಳು ಮತ್ತೇ ಪ್ರಾರಂಭವಾಗಿದೆ. ಇದನ್ನು ನಿಗ್ರಹಿಸುವ ಶಕ್ತಿ ಭಾರತಕ್ಕಿದ್ದು, ನಿಗ್ರಹ ಮಾಡ್ತೀವಿ. ಪಾಕಿಸ್ತಾನದ ಏಜೆಂಟರಂತೆ ನಡೆದು ಕೊಳ್ಳುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಶಕ್ತವಾಗಿದೆ ಎಂದರು.

ಕವಲಂದೆ ಪ್ರಕರಣದಲ್ಲಿ ಇಬ್ಬರ ಬಂಧನ

ಧರ್ಮ ಸಂಘರ್ಷ ಪ್ರಕರಣಗಳು ನಡೆದಾಗ ನಿರ್ಲಕ್ಷ್ಯ ಮಾಡಿಲ್ಲ. ಆಯಾ  ಘಟನೆಗಳಿಗೆ ಸಂಬಂಧಿಸಿದಂತೆ ಎಫ್ಐಆರ್ ಮಾಡಲಾಗಿದೆ. ಆರೋಪಿಗಳನ್ನು ಬಂಧಿಸಲಾಗುತ್ತಿದೆ. ಹಾಗೆಯೇ ಕವಲಂದೆ ಪ್ರಕರಣದಲ್ಲೂ ಇಬ್ಬರನ್ನು ಬಂಧಿಸಲಾಗಿದೆ ಎಂದು ಸಚಿವ ನಾರಾಯಣಸ್ವಾಮಿ ಹೇಳಿದರು. ಪಾಕಿಸ್ತಾನ್ ಏಜೆಂಟ್ ಗಳು ದೇಶದಲ್ಲಿ ಸಕ್ರಿಯವಾಗಿದ್ದಾರೆ ಅದಕ್ಕಾಗಿಯೇ ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ತೆಗೆದು ಹಾಕಿದ್ದೇವೆ. ದೇಶದಲ್ಲಿ ರಾಷ್ಟ್ರೀಯತೆ ಮೈಗೂಡಿಸಲು ಏನೇನು ಕಾನೂನು ಬೇಕು ಅದನ್ನು ತರಲಾಗುತ್ತಿದೆ ಎಂದು ಅವರು ಹೇಳಿದರು.

ಇದನ್ನು ಓದಿ: Bengaluruನಲ್ಲಿ EV Charging Hub ಉದ್ಘಾಟನೆ: ಒಂದೇ ಬಾರಿಗೆ 50 ಕಾರುಗಳಿಗೆ ಚಾರ್ಜಿಂಗ್ ಸೌಲಭ್ಯ

ಕೇಂದ್ರದಿಂದ ಬಿಡುಗಡೆಯಾಗುವ ಹಣದಲ್ಲಿ 5 ಪರ್ಸೆಂಟ್  ಸಹ ಜನರಿಗೆ ತಲುಪಲ್ಲ ಎಂದು ಅಂದಿನ ರಾಜೀವ್‌‌ಗಾಂಧಿ ಪ್ರಧಾನಿಯಾಗಿದ್ದಾಗ ಹೇಳಿದ್ದರು, ಹಾಗಿದ್ರೆ 95% ಭ್ರಷ್ಟಾಚಾರ ಕಾಂಗ್ರೆಸ್ ನವರು ಮಾಡಿದ್ರಾ? ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತೀಕ್ಷ್ಣವಾಗಿ ಪ್ರಶ್ನಿಸಿದರು.  ಕಾಂಗ್ರೆಸ್ ‌ನವರು   ರಾಜ್ಯ ಸರ್ಕಾರದ  ವಿರುದ್ದ 40 ಪರ್ಸೆಂಟ್  ಕಮಿಷನ್ಆ ರೋಪ ಮಾಡ್ತಾರೆ. ಹಾಗಿದ್ರೆ ರಾಜೀವ್ ಗಾಂಧಿ ಹೇಳಿದ್ದ ರೀತಿ ನೋಡಿದ್ರೆ ಕಾಂಗ್ರೆಸ್ ‌ನವರು‌ ಉಳಿದ 95 ಪರ್ಸೆಂಟ್ ತಿಂದುಹಾಕಿದ್ರಾ? ಎಂದು ಅವರು ಕಿಡಿಕಾರಿದರು

ಭ್ರಷ್ಟಾಚಾರ ಯಾರ ಕಾಲದಲ್ಲಿ ಆರಂಭವಾಯಿತು

ಅಮಿತ್ ಶಾ  40 ಪರ್ಸೆಂಟ್  ಕಮಿಷನ್  ಸರ್ಕಾರವನ್ನು ಸಮರ್ಥನೆ  ಮಾಡಿಕೊಂಡಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆ   ಪ್ರತಿಕ್ರಿಯಿಸಿದ ಅವರು ಅಮಿತ್ ಶಾ ಮನಸ್ಥಿತಿಯನ್ನು ಸಿದ್ದರಾಮಯ್ಯ ತೀರ್ಮಾನಿಸ್ತಾರಾ ? ಎಂದು ಪ್ರಶ್ನಿಸಿದರು ಪರ್ಸೆಂಟೇಜ್  ವ್ಯವಹಾರ  ಯಾವಾಗ ಪ್ರಾರಂಭವಾಯ್ತು, ಭ್ರಷ್ಟಾಚಾರ ಯಾರ ಕಾಲದಲ್ಲಿ ಆರಂಭವಾಯ್ತು ಎಂಬುದರ ಬಗ್ಗೆ ಸಿಬಿಐ ತನಿಖೆ ನಡೆಯಲಿ  ಗೊತ್ತಾಗುತ್ತೆ  ಎಂದು ಸವಾಲು ಹಾಕಿದರು

ಇದನ್ನು ಓದಿ: Modi ಮೇಲೆ ವಿಶ್ವಾಸ ಇಟ್ಟು ಬಿಜೆಪಿ ಸೇರಿದೆ ಎಂದ ಮಧ್ವರಾಜ್; ಇದು ಮೊದಲ ಪಟ್ಟಿ ಎಂದ ಆರ್​ ಅಶೋಕ್​​

ಪಿಎಸ್ಐ ನೇಮಕಾತಿ ವಿಚಾರದಲ್ಲಿಕಾಂಗ್ರೆಸ್ ನವರು ಗೊಂದಲ ಸೃಷ್ಟಿ ಮಾಡ್ತಿದ್ದಾರೆ ಎಂದು ಆರೋಪಿಸಿದ ಅವರು ಈ ಪ್ರಕರಣವನ್ನು ತನಿಖೆಗೆ ಒಳಪಡಿಸಿದ್ದೆ  ರಾಜ್ಯದ  ಗೃಹ ಸಚಿವರು, ಈ ಹಗರಣದ ಬಗ್ಗೆ ತನಿಖೆ ನಡೆಸಿ 25 ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದರೂ  ಏನೂ ಮಾಡಿಲ್ಲ ಎಂದು ಆರೋಪ ಮಾಡುವುದು  ಸೂಕ್ತವಲ್ಲ ಎಂದು ಗೃಹ ಸಚಿವ ಅರಗಜ್ಞಾನೇಂದ್ರ ಪರ   ಸಚಿವ ನಾರಾಯಣ ಸ್ವಾಮಿ ಬ್ಯಾಟ್ ಬೀಸಿದರು. ಕಾಂಗ್ರೆಸ್ ನವರು ದಾಖಲೆ ಸಮೇತ ಮಾಧ್ಯಗಳ ಮುಂದೆ ಬರಲಿ ನಮ್ಮ ಮಂತ್ರಿಗಳು ಭಾಗಿಯಾಗಿದ್ದರೆ ಒಂದು ನಿಮಿಷವೂ ಅಧಿಕಾರದಲ್ಲಿ ಇರಲ್ಲ, ರಾಜೀನಾಮೆ ಕೊಡ್ತಾರೆ ಎಂದ ಅವರು ಕಾಂಗ್ರೆಸ್‌ನವರು ದಾಖಲೆ ಸಮೇತ ರಾಜ್ಯಪಾಲರಿಗೆ ದೂರುಕೊಡಲು, ಕೋರ್ಟ್‌ನಲ್ಲಿ ಕೇಸ್ ಹಾಕಲು ಸ್ವಾತಂತ್ರ್ಯ ವಿದೆ. ಅದನ್ನೆಲ್ಲಾ ಬಿಟ್ಟು ಎಲ್ಲೋ ಒಂದು ಕಡೆ  ಹೇಳಿ ಹೋಗೊದು ಸರಿಯಲ್ಲ ಎಂದರು

ಸಚಿವ ಅಶ್ವಥ್ ನಾರಾಯಣ್ ಮೇಲೆ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು ಅಶ್ವಥ್ ನಾರಾಯಣ್ ರಾಜ್ಯದ ನಾಯಕರಾಗುವ ರೇಸ್ ನಲ್ಲಿದ್ದಾರೆ ಆಯಾ ಸಮಾಜದವರು ಅವರ ಸಮಾಜದ ನಾಯಕರನ್ನೇ ಟಾರ್ಗೆಟ್ ಮಾಡುವ ಪ್ರವೃತ್ತಿ ರಾಜ್ಯದಲ್ಲಿದೆ ಎಂದು ಡಿಕೆಶಿ ವಿರುದ್ದ ಸಚಿವ ನಾರಾಯಣಸ್ವಾಮಿ ಕಿಡಿಕಾರಿದರು
Published by:Seema R
First published: