ಸುಪ್ರೀಂ ಕೋರ್ಟ್​ಗೆ ಕಾವೇರಿ ಸ್ಕೀಂ ರಚನೆ ಕರಡು ಸಲ್ಲಿಸಿದ ಕೇಂದ್ರ ; ಮೇ 16ಕ್ಕೆ ವಿಚಾರಣೆ

news18
Updated:May 14, 2018, 2:20 PM IST
ಸುಪ್ರೀಂ ಕೋರ್ಟ್​ಗೆ ಕಾವೇರಿ ಸ್ಕೀಂ ರಚನೆ ಕರಡು ಸಲ್ಲಿಸಿದ ಕೇಂದ್ರ ; ಮೇ 16ಕ್ಕೆ ವಿಚಾರಣೆ
news18
Updated: May 14, 2018, 2:20 PM IST
ಧರಣೀಶ್​ ಬೂಕನಕೆರೆ, ನ್ಯೂಸ್​ 18 ಕನ್ನಡ

ನವದೆಹಲಿ (ಮಾ.14): ಕಾವೇರಿ ನದಿ ನೀರು‌ ಹಂಚಿಕೆ  ಸ್ಕೀಂ ರಚನೆ ಕುರಿತು ಕೇಂದ್ರ ಸರ್ಕಾರ  ಸುಪ್ರೀಂ ಕೋರ್ಟ್​ಗೆ ಕರಡು ಸಲ್ಲಿಸಿದೆ.

ಐವರು ಶಾಶ್ವತ ಸದಸ್ಯರು, ನಾಲ್ವರು ತಾತ್ಕಾಲಿಕ ಸದಸ್ಯರನ್ನು ಒಳಗೊಂಡ ಸ್ಕೀಂ ರಚನೆ ಮಾಡಿ ಕೇಂದ್ರ ಸರ್ಕಾರ  ಕರಡು ತಯಾರಿಸಿ ಮುಖ್ಯ ನ್ಯಾಯಮೂರ್ತಿ ಪೀಠಕ್ಕೆ ಸಲ್ಲಿಸಿದೆ.

ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಸಲ್ಲಿಸಿದ ಕರಡು ಪರೀಶೀಲಿಸಿದ  ಮುಖ್ಯ ನ್ಯಾಯಮೂರ್ತಿ ಪೀಠ  ಈ ಕುರಿತು ಪರಿಶೀಲಿಸುವುದಾಗಿ ತಿಳಿಸಿದೆ. ಅಲ್ಲದೇ ಮೇ 16ಕ್ಕೆ ಕರಡಿನ ಬಗ್ಗೆ  ವಿಚಾರಣೆ ನಡೆಸುವುದಾಗಿ ತಿಳಿಸಿದೆ.

ಇನ್ನು ಕೇಂದ್ರ ಕರಡು ರಚನೆ ಸಲ್ಲಿಕೆ ವೇಳೆ ತಮಿಳುನಾಡು ಕರಡು ಬದಲು ಮಂಡಳಿ ರಚನೆ ಮಾಡುವಂತೆ ಮನವಿ ಮಾಡಿದೆ. ಈ ಕುರಿತು ಪ್ರತಿಕ್ರಿಯಿಸಿದ ನ್ಯಾಯಾಪೀಠ ಸ್ಕೀಂ‌ ಕರಡು ಪರಿಶೀಲಿಸಿದ ನಂತರ ಈ ಬಗ್ಗೆ ಪರಿಶೀಲಿಸೋಣ ಎಂದಿದೆ,

ಸ್ಕೀಂ  ರಚನೆ ಕುರಿತು ಕೇಂದ್ರ ಸಲ್ಲಿಸಿರುವ  ಕರಡಿನ ಮುಖ್ಯಾಂಶಗಳು ಇಂತಿವೆ.

  • ನ್ಯಾಯಮಂಡಳಿ‌ ಆದೇಶ ಮಾರ್ಪಡಿಸಿ ತೀರ್ಪನ ಅನ್ವಯ ಪ್ರಾಧಿಕಾರದ ಸ್ವರೂಪದ ಸ್ಕೀಂ ರಚನೆ ಮಾಡಲಾಗಿದೆ.

  • ಪ್ರಾಧಿಕಾರ ಕಾವೇರಿ ನೀರಿನ‌ ಸಂಗ್ರಹ, ಹಂಚಿಕೆ ಮತ್ತು ನಿಯಂತ್ರಣ ಕುರಿತು ಗಮನಹರಿಸಲಿದೆ.

  • ಜಲಾಶಯಗಳ ಮೇಲುಸ್ತುವಾರಿ ಹಾಗೂ ನೀರು ಬಿಡುಗಡೆಗೆ ಸಮಿತಿಯ ಸಹಕಾರ ಪಡೆಯಲಿದೆ

  • ಬಿಳಿಗುಂಡ್ಲು ಮಾಪಕ ಕೇಂದ್ರದ ಮೂಲಕ ನೀರಿನ ಅಳತೆ ಮಾಡುವ ಜವಾಬ್ದಾರಿ ಕೂಡ ಪ್ರಾಧಿಕಾರದ್ದಾಗಿರುತ್ತದೆ

  • ಪ್ರಾಧಿಕಾರ ತನ್ನ ಸಹಾಯಕ್ಕಾಗಿ ಒಂದು ಅಥವಾ ಎರಡು ಸಮಿತಿ ನೇಮಿಸಿಕೊಳ್ಳುವ ಅಧಿಕಾರ ಹೊಂದಿರುತ್ತದೆ

  • ಪ್ರಾಧಿಕಾರವು ನೀರಿನ‌ ಒಳಹರಿವು, ಸಂಗ್ರಹ, ಬಳಕೆ ಮತ್ತು ಬಿಡುಗಡೆ ಕುರಿತಂತೆ 10 ದಿನಕ್ಕೊಮ್ಮೆ ಪರಿಶೀಲಿಸಲಿದೆ. ಹಾಗೂ ಸಂಬಂಧಿಸಿದ ರಾಜ್ಯಗಳಿಗೆ ನಿಯಮಿತವಾಗಿ ನೀರನ್ನು ಪಡೆಯಲು ಅವಕಾಶ ನೀಡಲಿದೆ

  • ಹಂಚಿಕೆಯಾದ ನೀರನ್ನು ಸಂಬಂಧಿಸಿದ ರಾಜ್ಯಗಳಿಗೆ ಕೊಡಿಸಲು ಪ್ರಾಧಿಕಾರವು ಪ್ರಯತ್ನಿಸಲಿದೆ

  • ಮಳೆ ಕೊರತೆಯನ್ನು ಪರಿಶೀಲಿಸಿ ಅರಿಯಲಿರುವ ಪ್ರಾಧಿಕಾರವು ಕೊರತೆಗೆ ಅನುಗುಣವಾಗಿಯೇ ನೀರು ಹಂಚಲಿದೆ

  • ಆಯಾ ರಾಜ್ಯಗಳ ಬೆಳೆಯ ಪ್ರಮಾಣ, ಬೆಳೆ ಪದ್ಧತಿ, ನೀರಾವರಿ ಅವಲಂಭನೆ ಅರಿತು ಮತ್ತು ಕುಡಿಯುವ ಹಾಗೂ ಕೈಗಾರಿಕೆಗೂ ಮಳೆಯ ಪ್ರಮಾಣ ಆಧರಿಸಿಯೇ ನಿರ್ಧರಿಸಲಿದೆ

  • ಪ್ರಾಧಿಕಾರವು ಅತ್ಯುತ್ತಮ ಸಂವಹನ ಜಾಲ ರೂಪಿಸಿ ಎಲ್ಲಾ ಅಂಕಿ ಅಂಶಗಳು ಕಣಿವೆ ವ್ಯಾಪ್ತಿಯ ನಾಲ್ಕು ರಾಜ್ಯಗಳಿಗೆ ಲಭ್ಯವಾಗುವಂತೆ ಮಾಡಲಿದೆ

  • ಇದಕ್ಕಾಗಿ ಕೇಂದ್ರ ಜಲ ಆಯೋಗ ಮತ್ತು ಕೇಂದ್ರ-ರಾಜ್ಯ ಸರ್ಕಾರದ ಸಂಬಂಧಿಸಿದ ಇಲಾಖೆಗಳ ನೆರವು ಪಡೆಯಲಿದೆ

  • ಕಣಿವೆ ವ್ಯಾಪ್ತಿಯ ರಾಜ್ಯಗಳು ಆಯಾ ವರ್ಷದ ಬೇಡಿಕೆ ಪಟ್ಟಿಯನ್ನು ಜಲವರ್ಷದ ಆರಂಭದಲ್ಲೇ ಪ್ರಾಧಿಕಾರಕ್ಕೆ ನೀಡುವುದು ಕಡ್ಡಾಯ

  • ಬೇರೆ ಬೇರೆ ಜಲಾನಯನ ಪ್ರದೇಶಗಳಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಸುರಿಯುವ ಮಳೆಯ ಪ್ರಮಾಣ ಆಧರಿಸಿ ಬೇಡಿಕೆ ಪಟ್ಟಿ ತಯಾರಿಸುವುದು ಕಡ್ಡಾಯ

  • ಕಾವೇರಿ ಕಣಿವೆಯಲ್ಲಿ ಕೈಗೊಳ್ಳುವ ಯಾವುದೇ ಕಾಮಗಾರಿಯನ್ನು ಪರಿಶೀಲಿಸುವ ಪ್ರಾಧಿಕಾರ ಹಾಗೂ ಅದರ ಸದಸ್ಯರಿಗೆ ಇರುತ್ತದೆ(11)

  • ರಾಜ್ಯಗಳು ತೀರ್ಪನ ಅನುಷ್ಠಾನಕ್ಕೆ ಸಮ್ಮತಿಸದಿದ್ದರೆ ಮತ್ತೆ ಕೇಂದ್ರ ಸರ್ಕಾರದ ಮೊರೆಹೋಗುವುದು

  • ನೀರಿನ ಸದ್ಭಳಕೆ ಮತ್ತು ಸಂಗ್ರಹ ಕುರಿತಂತೆ ಪ್ರಾಧಿಕಾರವು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡುವ ಅಧಿಕಾರ ಹೊಂದಿದೆ

  • ಕಾವೇರಿ ಜಲ ನಿಯಂತ್ರಣ ಸಮಿತಿ ಅಗತ್ಯ ಎಂದು ಕಂಡುಬಂದಲ್ಲಿ ಅದನ್ನು ರಚಿಸುವ ಅಧಿಕಾರ ಪ್ರಾಧಿಕಾರಕ್ಕೆ ಇರುತ್ತದೆ

  • ಬೆಳೆಯ ಪದ್ಧತಿಯಲ್ಲಿ ಬದಲಾವಣೆ ಹಾಗೂ ಹನಿ ನೀರಾವರಿ ಪದ್ದತಿ ಅಳವಡಿಸಿಕೊಳ್ಳುವ ಮೂಲಕ ನೀರಿನ‌ ನಿಯಮಿತ ಬಳಕೆ ಬಗ್ಗೆ ಪ್ರಾಧಿಕಾರವು ಸಲಹೆ ನೀಡಬೇಕು

  • ಪ್ರಾಧಿಕಾರವು ಪ್ರತಿವರ್ಷ ಸೆಪ್ಟೆಂಬರ್ 30ರೊಳಗೆ ತನ್ನ ಕಾರ್ಯಚಟುವಟಿ ಒಳನ್ನೊಳಗೊಂಡ ಪಟ್ಟಿಯನ್ನು ಕಣಿವೆ ವ್ಯಾಪ್ತಿಯ ನಾಲ್ಕು ರಾಜ್ಯಗಳಿಗೆ ನೀಡಬೇಕು

  • ಪ್ರಾಧಿಕಾರದಲ್ಲಿ ಇರುವ ಮಾಹಿತಿಯನ್ನು ರಾಜ್ಯಗಳು ಬಯಸಿದಾಗ ಕೊಡಬೇಕು

  • ನೀರಿನ‌ ಸಂಗ್ರಹ, ಬಳಕೆ, ಬಿಡುಗಡೆ, ಮಾಪನ ‌ಕೇಂದ್ರಗಳ ಅಳವಡಿಕೆಯ ಖರ್ಚು ವೆಚ್ಛವನ್ನು ಆಯಾ ವ್ಯಾಪ್ತಿಯ ರಾಜ್ಯಗಳೇ ಭರಿಸಬೇಕು

  • ಪ್ರಾಧಿಕಾರದ ಸಭೆ ಮತ್ತು ಚಟುವಟಿಕೆಗಳ ಎಲ್ಲಾ ದಾಖಲೆಗಳು ಹಾಗೂ ಲೆಕ್ಕಪತ್ರ ಸಂಗ್ರಹಿಸಿಡಲು ಸೂಕ್ತವಾದ ಕಚೇರಿ ಸ್ಥಾಪಿಸಬೇಕು

  • ದಾಖಲೆಗಳು ಮತ್ತು ಮಾಪನ‌ ದತ್ತಾಂಶಗಳು ಈ ಕಚೇರಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಲಭ್ಯ ಇರಬೇಕು

  • ಈ ಪ್ರಾಧಿಕಾರದಲ್ಲಿ ಕಾರ್ಯನಿರ್ವಹಿಸಲಿರುವ ಎಲ್ಲಾ ಸಿಬ್ಬಂದಿ ಹಾಗೂ ಅಧಿಕಾರಗಳು ನೇಮಕ‌ ಪ್ರಕ್ರಿಯೆ ಕೇಂದ್ರ ಸರ್ಕಾರದ ನಿಯಾಮವಳಿಗಳ ಪ್ರಕಾರ ಆಗಬೇಕು. ಪ್ರಾಧಿಕಾರದ ಕೇಂದ್ರ ಕಚೇರಿಯು ಬೆಂಗಳೂರಿನಲ್ಲೇ ಇರಬೇಕು

First published:May 14, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ