ಪಂಚರಾಜ್ಯಗಳ ಚುನಾವಣೆ ಕಾರಣ ಕೇಂದ್ರ 3 Controversial Agri Laws ಗಳನ್ನು ಹಿಂಪಡೆದಿದೆ: DK Shivakumar

ಈಗ ಐದು ರಾಜ್ಯಗಳ ಚುನಾವಣೆ ಬರ್ತಿರುವ ಹಿನ್ನಲೆಯಲ್ಲಿ ಮೂರು ಕೃಷಿ ಕಾನೂನು ವಾಪಸ್ ಪಡೆದಿದೆ. ಇದು ಈ ದೇಶದ ಜನರ ಮತ್ತು ಕಾಂಗ್ರೆಸ್ ಪಕ್ಷದ ಗೆಲುವು. ರಾಹುಲ್ ಗಾಂಧಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಿದ್ದರು. ತಡವಾಗಿ ಎಚ್ಚೆತ್ತುಕೊಂಡಿದ್ದಕ್ಕೆ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ  ಎಂದು ಡಿಕೆಶಿ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

 • Share this:
  ನವದೆಹಲಿ: ಕೇಂದ್ರ ಸರ್ಕಾರ (Central Government) ಜಾರಿಗೆ ತರಲು ಮುಂದಾಗಿದ್ದ ಮೂರು ವಿವಾದಿತ ಕೃಷಿ ಕಾಯ್ದೆಗಳ (Controversial Agri Laws)  ವಿರುದ್ಧ ರೈತರು ಕಳೆದ ಒಂದು ವರ್ಷದಿಂದ ಪ್ರತಿಭಟನೆ (Farmers Protest) ನಡೆಸಿದ್ದರು. ಇದೀಗ ರೈತರ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ ಇಂದು ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆದುಕೊಂಡಿದೆ. ಈ ವಿಷಯವಾಗಿ ಇಂದು ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಜನರ ಹೋರಾಟಕ್ಕೆ ಐತಿಹಾಸಿಕ ಜಯ ಸಿಕ್ಕಿದೆ. ಕಾಂಗ್ರೆಸ್ ಪಕ್ಷ ಚಳವಳಿ, ಹೋರಾಟದಿಂದ ಬಂದಿದೆ. ಜನರ ಪರವಾಗಿ ಕೆಲಸ ಮಾಡುತ್ತಾ ಬಂದಿದೆ. ಜನರಿಗೆ ಹಕ್ಕುಗಳನ್ನು ಕೊಡುತ್ತಾ ಬಂದಿದೆ ಎಂದು ಹೇಳಿದರು.

  ಬಿಜೆಪಿ ಜನ ವಿರೋಧಿ ನೀತಿಗಳನ್ನು ಜಾರಿ ತರುತ್ತಿದೆ. ನಮ್ಮ ಪಕ್ಷದ ನಾಯಕರು ಒಗ್ಗಟ್ಟಾಗಿ ಹೋರಾಟ ಮಾಡಿದರು. ಸಂಸತ್ ನಲ್ಲಿ ಹೋರಾಟ ಮಾಡಿದರು. ಜನರು ಕೂಡ ಹೋರಾಟ ಮಾಡಿದರು. ಎಲ್ಲವನ್ನೂ ಬಿಟ್ಟು ಹೋರಾಟ ಮಾಡಿದರು. ಈ ಹೋರಾಟದಲ್ಲಿ ಏಳು ನೂರಕ್ಕೂ ಅಧಿಕ ರೈತರು ಸಾವನ್ನಪ್ಪಿದರು. ಬೈ ಎಲೆಕ್ಷನ್ ನಲ್ಲಿ ಜನರು ಸಂದೇಶ ರವಾನಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಸಂದೇಶ ನೀಡಿದ್ದರು. ಆಗಲೇ ಬಿಜೆಪಿಗೆ ಅರ್ಥ ಆಗಿತ್ತು. ಈಗ ಐದು ರಾಜ್ಯಗಳ ಚುನಾವಣೆ ಬರ್ತಿರುವ ಹಿನ್ನಲೆಯಲ್ಲಿ ಮೂರು ಕೃಷಿ ಕಾನೂನು ವಾಪಸ್ ಪಡೆದಿದೆ. ಇದು ಈ ದೇಶದ ಜನರ ಮತ್ತು ಕಾಂಗ್ರೆಸ್ ಪಕ್ಷದ ಗೆಲುವು. ರಾಹುಲ್ ಗಾಂಧಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಿದ್ದರು. ತಡವಾಗಿ ಎಚ್ಚೆತ್ತುಕೊಂಡಿದ್ದಕ್ಕೆ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ  ಎಂದು ಡಿಕೆಶಿ ಹೇಳಿದರು.

  ಜನರು ದಂಗೆ ಏಳ್ತಿದ್ದಾರೆ, ನಾವು ಸೋಲ್ತೇವೆ ಎನ್ನುವ ಭಯದಲ್ಲಿ ಕೇಂದ್ರ ಸರ್ಕಾರ ಮೂರು ಕೃಷಿ ಕಾನೂನು ವಾಪಸ್ ಪಡೆದಿದೆ. ಬೈ ಎಲೆಕ್ಷನ್ ನಲ್ಲಿ ಸಂದೇಶ ನೀಡಲು ಮನವಿ ಮಾಡಿದ್ದೇವೆ. ಪ್ರತಿನಿತ್ಯ ಜನರ ಪಾಕೇಟ್ ಕಳ್ಳತನ ಮಾಡುತ್ತಿದ್ದರು. ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಹೆಚ್ಚಾಗಿತ್ತು. ಹೀಗಾಗಿ ಮತದ ಮೂಲಕ ಜನರು ಸಂದೇಶ ರವಾನಿದ್ದಾರೆ. ಇದರಿಂದ‌ ಕಾಂಗ್ರೆಸ್ ಗೆ ಹಿನ್ನಡೆ ಆಗುವುದಿಲ್ಲ. ಸಿಎಎ ಮತ್ತು ಎನ್‌ಆರ್‌ಸಿ ಬಗ್ಗೆ ಈಗ ಮಾತನಾಡುವುದಿಲ್ಲ. ಮೊದಲು ರೈತ, ಅನ್ನ, ಅನ್ನದಾತ ಆದ ಬಳಿಕ ಉಳಿದ ವಿಚಾರಗಳ ಬಗ್ಗೆ ಮಾತನಾಡ್ತಿವಿ. ಬೆಲೆ ಏರಿಕೆ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ಮುಂದುವರಿಸಲಿದ್ದೇವೆ ಎಂದು ಡಿಕೆಶಿ ಎಚ್ಚರಿಕೆ ನೀಡಿದರು.

  ಪರಿಷತ್ ಚುನಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಅಂತಿಮ ಚರ್ಚೆಗಳು ನಡೆಯುತ್ತಿದೆ. ಚರ್ಚೆಯ ಬಳಿಕ ಅಂತಿಮ ಪಟ್ಟಿ ಹೈಕಮಾಂಡ್ ಗೆ ಕಳಿಹಿಸಲಾಗುವುದು. ಯಾರಿಗೆ ಟಿಕೆಟ್ ನೀಡಬೇಕು ಗೊತ್ತಿದೆ. ಪಕ್ಷದ ಸೇವೆ ಮಾಡಿದವರಿಗೆ ಟಿಕೆಟ್ ನೀಡಲಾಗುವುದು. ಇಬ್ಬರು ಅಭ್ಯರ್ಥಿಗಳು ಇರುವ ಕ್ಷೇತ್ರದಲ್ಲಿ ಸ್ವಲ್ಪ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಗೊಂದಲ ಇದ ಎಂದರು. ಹಾಗೆಯೇ ವಿಧಾನಸಭೆಯಲ್ಲಿ 150 ಸ್ಥಾನ ಹಾಗೂ ವಿಧಾನ ಪರಿಷತ್​ನಲ್ಲಿ 25 ಸ್ಥಾನ ಬಿಜೆಪಿ ಗೆಲ್ಲಲಿದೆ ಎಂಬ ಬಿ.ಎಸ್ ಯಡಿಯೂರಪ್ಪ ಹೇಳಿಕೆಗೆ ಡಿಕೆಶಿ, 15 ಸ್ಥಾನ ಗೆಲ್ಲುವುದಾಗಿ ಹೇಳಿ ಎಂದು ಬಿಎಸ್‌ವೈ ಹೇಳಿಕೆಗೆ ವ್ಯಂಗ್ಯವಾಡಿದರು.

  ಇದನ್ನು ಓದಿ: ಶಂಖ ಊದಿದ್ರೆ ಎಲ್ಲವೂ ಸರಿಯಾಗುತ್ತಾ? ಶಂಖ ಊದುವುದೇ ಇವರಿಗೆ ಹೆಚ್ಚಾಯ್ತೇ?: ಜನ ಸ್ವರಾಜ್ ಯಾತ್ರೆಗೆ HD Kumaraswamy ಕಿಡಿ

  ಮೂರು ಕಾಯ್ದೆ ವಾಪಸ್ ಪಡೆದ ಕೇಂದ್ರ ಸರ್ಕಾರ

  ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿದ್ದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಕಳೆದ ಒಂದು ವರ್ಷದಿಂದ ತೀವ್ರ ಪ್ರತಿಭಟನೆ ನಡೆಸಿದ್ದರು. ರೈತರು ಬಿಗಿಪಟ್ಟು ಸಡಿಲಿಸದ ಕಾರಣ ರೈತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಇಂದು ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆದುಕೊಂಡಿದೆ.
  Published by:HR Ramesh
  First published: