• Home
  • »
  • News
  • »
  • state
  • »
  • Karnataka Tableau: ಗಣರಾಜ್ಯೋತ್ಸವದಲ್ಲಿ ಇರಲ್ಲ ಕರ್ನಾಟಕದ ಸ್ತಬ್ಧ ಚಿತ್ರ; ಅನುಮತಿ ನಿರಾಕರಿಸಿದ ಕೇಂದ್ರ

Karnataka Tableau: ಗಣರಾಜ್ಯೋತ್ಸವದಲ್ಲಿ ಇರಲ್ಲ ಕರ್ನಾಟಕದ ಸ್ತಬ್ಧ ಚಿತ್ರ; ಅನುಮತಿ ನಿರಾಕರಿಸಿದ ಕೇಂದ್ರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಳೆದ ಬಾರಿ ಎರಡನೇ ಸ್ಥಾನ ಪ್ರಶಸ್ತಿ ಪಡೆದುಕೊಂಡಿತ್ತು. ಈ ಬಾರಿ ಸ್ತಬ್ಧಚಿತ್ರವನ್ನು ಮಹಿಳಾ ಸಬಲೀಕರಣ (Woman Empowerment) ವಿಷಯದ ಕುರಿತು ಸಿದ್ಧಪಡಿಸಲಾಗುತ್ತಿತ್ತು.

  • News18 Kannada
  • 5-MIN READ
  • Last Updated :
  • Karnataka, India
  • Share this:

ಈ ಬಾರಿಯ ಗಣರಾಜ್ಯೋತ್ಸದ (Republic Day) ಪರೇಡ್​ನಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ (Karnataka Tableau) ಅನುಮತಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಕಳೆದ 13 ವರ್ಷಗಳಿಂದ ಗಣರಾಜ್ಯೋತ್ಸವದ ಪರೇಡ್​ನಲ್ಲಿ ಕರ್ನಾಟಕದ ಸ್ತಬ್ಧಚಿತ್ರ ಪ್ರದರ್ಶನವಾಗುತ್ತಿತ್ತು. ಬೇರೆ ರಾಜ್ಯಗಳಿಗೆ ಅವಕಾಶ ನೀಡುವ ಕಾರಣ ನೀಡಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಂತಿಮ ಹಂತದಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅನುಮತಿ ನಿರಾಕರಣೆ ಮಾಡಲಾಗಿದೆ.


ಕಳೆದ ಬಾರಿ ಎರಡನೇ ಸ್ಥಾನ ಪ್ರಶಸ್ತಿ ಪಡೆದುಕೊಂಡಿತ್ತು. ಈ ಬಾರಿ ಸ್ತಬ್ಧಚಿತ್ರವನ್ನು ಮಹಿಳಾ ಸಬಲೀಕರಣ (Woman Empowerment) ವಿಷಯದ ಕುರಿತು ಸಿದ್ಧಪಡಿಸಲಾಗುತ್ತಿತ್ತು.


ಮೊದಲ ಸುತ್ತಿನಲ್ಲಿ ಆಯ್ಕೆಯಾಗಿದ್ದ ಸ್ತಬ್ಧ ಚಿತ್ರ


ಕರ್ನಾಟಕ ಪ್ರತಿನಿಧಿಸಿದ್ದ ಮಹಿಳಾ ಸಬಲೀಕರಣ ವಿಷಯಾಧರಿತ ಸ್ತಬ್ಧಚಿತ್ರ ಆರಂಭದ ಕೆಲವು ಸುತ್ತಿನಲ್ಲಿ ಆಯ್ಕೆಯಾಗಿತ್ತು. ಸ್ತಬ್ಧಚಿತ್ರದ ವಿನ್ಯಾಸ ಮತ್ತು ಸಂಗೀತಕ್ಕೆ ತಜ್ಞರ ಸಮಿತಿ ಒಪ್ಪಿಗೆ ಸಹ ನೀಡಿತ್ತು. ಆದರೆ ಕೊನೆ ಸುತ್ತಿನಲ್ಲಿ ಕರ್ನಾಟಕದ ಸ್ಥಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಲಾಗಿದೆ.


ಕಳೆದ ಕೆಲವು ವರ್ಷಗಳಿಂದ ಕೆಲವೇ ರಾಜ್ಯಗಳಿಗೆ ಸ್ಥಬ್ಧಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡಲಾಗುತ್ತಿದೆ ಎಂಬ ಮಾತುಗಳ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಬಾರಿ ಕರ್ನಾಟಕಕ್ಕೆ ಅವಕಾಶ ನಿರಾಕರಿಸಲಾಗಿದೆ ಎಂದು ವರದಿಯಾಗಿದೆ. ಈ ಬಾರಿ 13 ಸ್ತಬ್ಧಚಿತ್ರಗಳು ಪ್ರದರ್ಶನಗೊಳ್ಳಲಿವೆ.


ಕಳೆದ ವರ್ಷಕ್ಕೆ ಕೇರಳಕ್ಕೆ ಅವಕಾಶ ತಪ್ಪಿತ್ತು


2022ರ ಗಣರಾಜ್ಯೋತ್ಸವದಲ್ಲಿ ಕೇರಳ ಸಲ್ಲಿಸಿದ್ದ ನಾರಾಯಣಗುರು ಸ್ಥಬ್ಧ ಚಿತ್ರಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಿರಲಿಲ್ಲ. ಈ ವರ್ಷ ಕರ್ನಾಟಕಕ್ಕೆ ಅವಕಾಶ ನೀಡಿಲ್ಲ.


ಕೇಂದ್ರದ ವಿರುದ್ಧ ವಿ.ಎಸ್​.ಉಗ್ರಪ್ಪ ಕಿಡಿ


ಈ ಕುರಿತು ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ವಿ.ಎಸ್.ಉಗ್ರಪ್ಪ, ಡಬಲ್ ಎಂಜಿನ್ ಸರ್ಕಾರ ರಾಜ್ಯದ ಜನತೆ ಅವಮಾನ ಮಾಡಿದೆ. ಕೇಂದ್ರದ ಮಲತಾಯಿ ಧೋರಣೆ ಮುಂದುವರಿದಿದ್ದಿ, ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.


ಅನುಮತಿ ನೀಡುವಂತೆ ಒತ್ತಾಯ


ಸ್ಥಬ್ಧಚಿತ್ರ ಅನ್ನೋದು ನಮ್ಮ ನಾಡು, ಸಂಸ್ಕೃತಿ, ಧಾರ್ಮಿಕ ವಿಷಯವನ್ನು ಒಳಗೊಂಡಿರುತ್ತದೆ. ಇದೆಲ್ಲವನ್ನು ಒಳಗೊಂಡಿರುವ ನಮ್ಮ ಸ್ಥಬ್ಧಚಿತ್ರ ಅನುಮತಿ ನಿರಾಕರಿಸಿರೋದು ಖಂಡನೀಯ. ಮಹದಾಯಿ, ಕಳಸಾ-ಬಂಡೂರಿ ಯೋಜನೆಗಳಲ್ಲಿಯೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಮೋಸ ಮಾಡಿದೆ. ರಾಜ್ಯ ಬಿಜೆಪಿ ನಾಯಕರು ಗಣರಾಜ್ಯೋತ್ಸವದಲ್ಲಿ ನಮ್ಮ ಸ್ಥಬ್ಧಚಿತ್ರ ಪ್ರದರ್ಶನವಾಗುವಂತೆ ನೋಡಿಕೊಳ್ಳಬೇಕು ಎಂದು ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.


ಕರ್ನಾಟಕ ಹೈಕೋರ್ಟ್​ ಮಹತ್ವದ ಆದೇಶ


ಖಾಸಗಿ ಅನುದಾನ ರಹಿತ ಶಾಲೆಗಳು ರಾಜ್ಯ ಸರ್ಕಾರ ನಿಗದಿ ಪಡಿಸಿದ ರೀತಿಯಲ್ಲಿ ಶುಲ್ಕ ಪಡೆಯುವುದನ್ನು ಕಡ್ಡಾಯಪಡಿಸುವ ಹಾಗೂ ಉಲ್ಲಂಘಿಸಿದರೆ ಶಿಕ್ಷೆ ವಿಧಿಸುವ ಕರ್ನಾಟಕ ಶಿಕ್ಷಣ ಕಾಯಿದೆ 1983ರ ಕೆಲ ಸೆಕ್ಷನ್ ಗಳನ್ನು ಹೈಕೋರ್ಟ್ ಅಸಂವಿಧಾನಿಕ ಎಂದು ಹೈಕೋರ್ಟ್ ಹೇಳಿದೆ.


ಇದನ್ನೂ ಓದಿ:  KGF Babu: ನಮ್ಮ ಪಕ್ಷಕ್ಕೆ ಬನ್ನಿ; ಕಾಂಗ್ರೆಸ್​​ನಿಂದ ಅಮಾನತ್ತಾದ ಕೆಜಿಎಫ್​ ಬಾಬು ಸೆಳೆಯಲು ಪ್ರಯತ್ನ


ನ್ಯಾ. ಇ.ಎಸ್.ಇಂದಿರೇಶ್ ಅವರ ಪೀಠದಲ್ಲಿ ಅರ್ಜಿ ವಿಚಾರಣೆ


ಶುಲ್ಕ ನಿಗಧಿ ಸಂಬಂಧ ಕರ್ನಾಟಕ ಖಾಸಗಿ ಶಾಲೆಗಳ ಸಮಿತಿ ಸೇರಿದಂತೆ ಹಲವು ಶಾಲಾ ಆಡಳಿತ ಮಂಡಳಿಗಳು ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದವು. ಈ ಎಲ್ಲಾ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಧೀಶ ಇ.ಎಸ್.ಇಂದಿರೇಶ್ ಅವರ ಪೀಠ ಮಹತ್ವದ ಆದೇಶ ಹೊರಡಿಸಿದೆ.


ಕರ್ನಾಟಕ ಹೈಕೋರ್ಟ್​ ಆದೇಶದ ಅನ್ವಯ ರಾಜ್ಯ ಸರ್ಕಾರಕ್ಕಿದ್ದ ಶುಲ್ಕ ನಿಗದಿ ಪಡಿಸುವ ಮತ್ತು ನಿಯಂತ್ರಿಸುವ ಅಧಿಕಾರ ರದ್ದುಗೊಳ್ಳಲಿದೆ. ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಗೆಲುವು ಸಿಕ್ಕಂತಾಗಿದೆ.

Published by:Mahmadrafik K
First published: