Sachin Pilot: ದೇಶದ ಅಭಿವೃದ್ಧಿ 50 ವರ್ಷ ಹಿಂದಕ್ಕೆ ಹೋಗಿದೆ; ಕೇಂದ್ರ ಸರ್ಕಾರದ ವಿರುದ್ಧ ಸಚಿನ್ ಪೈಲಟ್ ವಾಗ್ದಾಳಿ!

ರಾಜಸ್ತಾನ ಸಂಪುಟ ಪುನಾರಚನೆ ವಿಚಾರವಾಗಿ ಮಾತನಾಡಿದ ಸಚಿನ್ ಪೈಲಟ್, ಅದರ ಬಗ್ಗೆ ವರಿಷ್ಠರು ಗಮನ ಹರಿಸುತ್ತಾರೆ. ಅದಕ್ಕಾಗಿ ಈಗಾಗಲೇ ಕಮಿಟಿಯೊಂದನ್ನು ರಚಿಸಲಾಗಿದೆ. ಇದರ ಬಗ್ಗೆ ವರಿಷ್ಠರು ತೀರ್ಮಾನ ತೆಗೆದುಕೊಳ್ತಾರೆ. ಕಾರ್ಯಕರ್ತರು ಎಲ್ಲರೂ ಒಟ್ಟಾಗಿಯೇ ಕೆಲಸ ಮಾಡ್ತಿದ್ದೇವೆ ಎಂದರು.

ಸಚಿನ್ ಪೈಲಟ್

ಸಚಿನ್ ಪೈಲಟ್

 • Share this:
  ಬೆಂಗಳೂರು: (Bengaluru) ಕೇಂದ್ರ ಸರ್ಕಾರ  (Central Government)ಜಾರಿಗೆ ತರಲು ಉದ್ದೇಶಿಸಿರುವ ಎನ್​ಎಂಪಿ (National Monetisation  Pipeline)ವಿರುದ್ಧ ಕಾಂಗ್ರೆಸ್ (Congress)​ ದೇಶವ್ಯಾಪಿ ಆಂದೋಲನ ಆರಂಭಿಸಿದೆ. ಎನ್​ಎಂಪಿ ವಿರುದ್ಧ ದೇಶಾದ್ಯಂತ ಸುದ್ದಿಗೋಷ್ಠಿ ಆಯೋಜಿಸಲು ನಿರ್ಧರಿಸಿದೆ. ಅದರಂತೆ ಇಂದು ರಾಜಸ್ಥಾನ ಡಿಸಿಎಂ ಸಚಿನ್ ಪೈಲಟ್ (Rajastan Former DCM Sachin Pilot) ಅವರು ರಾಜ್ಯಕ್ಕೆ ಆಗಮಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ  ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (KPCC President DK Shivakumar) ಹಾಗೂ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಜೊತೆಗಿದ್ದರು.

  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿನ್ ಪೈಲಟ್ ಅವರು, ಕೇಂದ್ರ ಸರ್ಕಾರದ ವಿರುದ್ಧ ಪೈಲಟ್ ಆಕ್ರೋಶ ಹೊರಹಾಕಿದರು. ಪ್ರಸ್ತುತ ಕೇಂದ್ರ ಸರ್ಕಾರ ಎನ್​ಎಂಪಿ ಕಾಯ್ದೆಯನ್ನು  ತರುತ್ತಿದೆ. ಇದರ ವಿರುದ್ಧ ನಾವು ಧ್ವನಿ ಎತ್ತಿದ್ದೇವೆ. ಸಾರ್ವಜನಿಕ ಕ್ಷೇತ್ರಗಳನ್ನ ಖಾಸಗೀಕರಣ ಮಾಡುತ್ತಿದೆ. ಮೂಲಸೌಕರ್ಯಗಳಲ್ಲಿ 100 ಕೋಟಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಿದೆ. ಸಾರ್ವಜನಿಕ ವಲಯವನ್ನ ಖಾಸಗೀಕರಣ ಮಾಡುತ್ತಿದೆ. ಹಿಂದೆ ನಮ್ಮ ಸರ್ಕಾರದಲ್ಲಿ ಈಗಿರಲಿಲ್ಲ. ಆರ್ಥಿಕ ವ್ಯವಸ್ಥೆಗೆ ಹೆಚ್ಚಿನ ಉತ್ತೇಜನ ನೀಡಲಾಗಿತ್ತು. ಮನಮೋಹನ್ ಸಿಂಗ್ ಆರ್ಥ ಸಚಿವರಾಗಿದ್ದರು. ನರಸಿಂಹ ರಾವ್ ಪ್ರಧಾನಿಯಾಗಿದ್ದರು. ಆಗ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದರು. ರೈಲ್ವೆ, ಏರ್​ಪೋರ್ಟ್, ಗ್ಯಾಸ್ ಲೈನ್ ಎಲ್ಲವೂ ಪಬ್ಲಿಕ್ ಸೆಕ್ಟರ್ ನಲ್ಲಿತ್ತು. ಆದರೆ ಈಗ ಎಲ್ಲವೂ ಖಾಸಗೀಕರಣ ಮಾಡಲು ಹೊರಟಿದೆ ಎಂದು ಕೇಂದ್ರದ ವಿರುದ್ಧ ಸಚಿನ್ ಪೈಲಟ್ ವಾಗ್ದಾಳಿ ನಡೆಸಿದರು.

    ರೆವಿನ್ಯೂ ಜನರೇಟ್ ಮಾಡುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಆರ್ಥಿಕ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ. ಇವತ್ತು ಪೆಟ್ರೋಲ್, ಡಿಸೇಲ್ ಬೆಲೆ ಏರುತ್ತಲೇ ಇದೆ. ಅಡಿಗೆ ಅನಿಲದ ಬೆಲೆ ಹೆಚ್ಚಾಗಿದೆ. ಬೆಲೆ ಏರಿಕೆಯಿಂದ ಜನರ ಜೀವನ ಮಟ್ಟ ಕುಸಿದಿದೆ. ಸ್ಚಚ್ಛ ಭಾರತ್, ಮೇಕ್ ಇನ್ ಇಂಡಿಯಾ, ಗಂಗಾ ಕ್ಲೀನ್ ಯೋಜನೆ ಎಲ್ಲಿಗೆ ಬಂದಿವೆ. ಉದ್ಯೋಗ ಭದ್ರತೆ ಇಲ್ಲದಂತಾಗಿದೆ. ಸಾವಿರಾರು ಉದ್ಯೋಗ ಕಳೆದುಕೊಳ್ಳಲಾಗಿದೆ. ಇವತ್ತು ದೇಶದಲ್ಲಿ ಎಲ್ಲವೂ ಕುಸಿದು ಹೋಗಿದೆ. ಸರಿಯಾದ ಪಾಲಿಸಿಗಳನ್ನ ಜಾರಿಗೆ ತರುತ್ತಿಲ್ಲ. ಕೇಂದ್ರದ ಯೋಜನೆಗಳು ಜನಪರವಾಗಿಲ್ಲ. ಲಸಿಕೆ ವಿತರಣೆಯಲ್ಲೂ ಅವ್ಯವಹಾರವಾಗ್ತಿದೆ. ರಾಜ್ಯ ಹಾಗೂ ಕೇಂದ್ರದ ನಡುವೆ ಸಾಮರಸ್ಯವಿಲ್ಲ. ಲಸಿಕೆ ವಿತರಣೆ ಸರಿಯಾಗಿ ನಡೆದಿಲ್ಲ ಎಂದು ಗಂಭೀರ ಆರೋಪ ಮಾಡಿದರು.

  ದೇಶದ ಅಭಿವೃದ್ಧಿ 50 ವರ್ಷಗಳ ಹಿಂದಕ್ಕೆ ಹೋಗಿದೆ. ಸಂಸತ್ ನಲ್ಲಿ ಉತ್ತರ ಕೊಡಲು ಸರ್ಕಾರಕ್ಕೆ ಆಗ್ತಿಲ್ಲ. ಕಳೆದ ಸಂಸತ್ ಕಲಾಪವೂ ಹಾಳಾಯ್ತು. ಈ ಬಾರಿಯೂ ಚರ್ಚೆಗೆ ಅವಕಾಶವಿಲ್ಲದೆ ಕಲಾಪ ಹಾಳಾಯ್ತು. ಜನರ ಸಮಸ್ಯೆಗಳ ಚರ್ಚೆಗೆ ಅವಕಾಶವೇ ಇಲ್ಲ ಎಂದು ಕೇಂದ್ರದ ವಿರುದ್ಧ ಸಚಿನ್ ಪೈಲಟ್ ಆಕ್ರೋಶ ಹೊರ ಹಾಕಿದರು.

  ಇದನ್ನು ಓದಿ: LPG Gas Price Hike: ಗ್ರಾಹಕರಿಗೆ ಶಾಕಿಂಗ್ ನ್ಯೂಸ್; ಮತ್ತೆ ಎಲ್​​ಪಿಜಿ ಸಿಲಿಂಡರ್ ಬೆಲೆ ಏರಿಕೆ

  ರೈತ ವಿರೋಧಿ ಕಾನೂನುಗಳ ವಿರುದ್ಧ ಹೋರಾಟ ನಡೆದಿದೆ. ರೈತರ ಸಮಸ್ಯೆ ಆಲಿಸುವ ಕೆಲಸ ಮಾಡ್ತಿಲ್ಲ. ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತಂದಿದೆ. ಹರ್ಯಾಣ, ಪಂಜಾಬ್ ರೈತರು ಬೀದಿಗಿಳಿದಿದ್ದಾರೆ. ಕೇಂದ್ರದ ನೀತಿಗಳು ಎಲ್ಲವೂ ಜನರ ವಿರೋಧಿಯಾಗಿವೆ ಎಂದು ಕೇಂದ್ರದ ವಿರುದ್ಧ ಸಚಿನ್ ಪೈಲಟ್ ವಾಗ್ದಾಳಿ ನಡೆಸಿದರು.

  ಕಾಂಗ್ರೆಸ್ ಕೆಲವು ಕಡೆ ಪ್ರತಿಪಕ್ಷ ಸ್ಥಾನದಲ್ಲಿದೆ. ಕೆಲವು ಕಡೆಗಳಲ್ಲಿ ನಾವು ಅಧಿಕಾರದಲ್ಲಿದ್ದೇವೆ. ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಮತಗಳಿಲ್ಲ. ನಾಯಕರು, ಕಾರ್ಯಕರ್ತರ ನಡುವೆ ಹೊಂದಾಣಿಕೆಯಿದೆ. ಪಕ್ಷದ ಕಾರ್ಯಕರ್ತರು ಹೋರಾಟ ಮಾಡ್ತಿದ್ದಾರೆ. ರಾಜಸ್ತಾನದಲ್ಲೂ ಪ್ರತಿಭಟನೆ, ಹೋರಾಟ ಎಲ್ಲವನ್ನೂ‌ಮಾಡಿದ್ದೇವೆ. ಬಿಜೆಪಿ ವಿರುದ್ಧ ನಮ್ಮ‌ಹೋರಾಟ ಮುಂದುವರಿದಿದೆ. ನಾವೆಲ್ಲ ಒಟ್ಟಾಗಿರೋದ್ರಿಂದಲೇ ಇದು ಸಾಧ್ಯವಾಗಿರುವುದು. ಕೆಲವು ಸಣ್ಣ ಪುಟ್ಟ ಸಮಸ್ಯೆಗಳಿರಬಹುದು ಎಂದು ಹೇಳಿದರು.

  ರಾಜಸ್ತಾನ ಸಂಪುಟ ಪುನಾರಚನೆ ವಿಚಾರವಾಗಿ ಮಾತನಾಡಿದ ಸಚಿನ್ ಪೈಲಟ್, ಅದರ ಬಗ್ಗೆ ವರಿಷ್ಠರು ಗಮನ ಹರಿಸುತ್ತಾರೆ. ಅದಕ್ಕಾಗಿ ಈಗಾಗಲೇ ಕಮಿಟಿಯೊಂದನ್ನು ರಚಿಸಲಾಗಿದೆ. ಇದರ ಬಗ್ಗೆ ವರಿಷ್ಠರು ತೀರ್ಮಾನ ತೆಗೆದುಕೊಳ್ತಾರೆ. ಕಾರ್ಯಕರ್ತರು ಎಲ್ಲರೂ ಒಟ್ಟಾಗಿಯೇ ಕೆಲಸ ಮಾಡ್ತಿದ್ದೇವೆ ಎಂದರು.
  Published by:HR Ramesh
  First published: