High Court Judge: ಹೈಕೋರ್ಟ್ ನ್ಯಾಯಮೂರ್ತಿಯಾಗಿ ಸಿ.ಎಂ. ಪೂಣಚ್ಚ ನೇಮಕ

ಸಿ.ಎಂ. ಪೂಣಚ್ಚ

ಸಿ.ಎಂ. ಪೂಣಚ್ಚ

ಸಿ.ಎಂ.ಪೂಣಚ್ಚ(CM Poonach) ಅವರನ್ನು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ಬುಧವಾರ ನೇಮಿಸಲಾಗಿದೆ. ಅವರ ನೇಮಕವು ಎರಡು ವರ್ಷಗಳವರೆಗೆ ಇರುತ್ತದೆ.

  • Share this:

ಬೆಂಗಳೂರು(ಜೂನ್ 08): ವಕೀಲ ಸಿ.ಎಂ.ಪೂಣಚ್ಚ(CM Poonach) ಅವರನ್ನು ಹೈಕೋರ್ಟ್‌ನ (High court) ಹೆಚ್ಚುವರಿ ನ್ಯಾಯಾಧೀಶರಾಗಿ ಬುಧವಾರ ನೇಮಿಸಲಾಗಿದೆ. ಅವರ ನೇಮಕವು ಎರಡು ವರ್ಷಗಳವರೆಗೆ ಇರುತ್ತದೆ. ಅವರು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಜಾರಿಗೆ ಬಂದಂತೆ ಇದು ಅನ್ವಯಕ್ಕೆ ಬರಲಿದೆ. ಇದರೊಂದಿಗೆ, ಹೈಕೋರ್ಟ್‌ನಲ್ಲಿ ನ್ಯಾಯಾಧೀಶರ ಬಲವು ಮಂಜೂರಾದ 62. ಟಿಎನ್‌ಎನ್‌ಗೆ ವಿರುದ್ಧವಾಗಿ 44 ಕ್ಕೆ ಏರಿದೆ. ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ವಕೀಲ ಸಿ.ಎಂ.ಪೂಣಚ್ಚ ಅವರು ನೇಮಕಗೊಂಡಿದ್ದಾರೆ.ಈ ಕುರಿತಂತೆ ರಾಷ್ಟ್ರಪತಿಗಳ (President) ಆದೇಶದಂತೆ ಕಾನೂನು ಮತ್ತು ನ್ಯಾಯ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.


ಕೆಲವೇ ದಿನದಲ್ಲಿ ಪ್ರಮಾಣ ವಚನ


ಒಂದೆರಡು ದಿನಗಳಲ್ಲಿ ಅವರು ನೂತನ ನ್ಯಾಯಮೂರ್ತಿಗಳಾಗಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಎರಡು ವರ್ಷಗಳ ಅವಗೆ ಪೂಣಚ್ಚ ಅವರನ್ನು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿದೆ. ಎರಡು ವರ್ಷಗಳ ಪ್ರಬೇಷನರಿ ಅವಧಿ ನಂತರ ಅವರ ಸೇವೆ ಕಾಯಂ ಆಗಲಿದೆ.


45 ನ್ಯಾಯಮೂರ್ತಿಗಳು:


ಸದ್ಯ ಮುಖ್ಯ ನ್ಯಾಯಮೂರ್ತಿ ಸೇರಿ 44 ನ್ಯಾಯಮೂರ್ತಿಗಳು ಸೇವೆ ಸಲ್ಲಿಸುತ್ತಿದ್ದು, ಪೂಣಚ್ಚ ಅವರ ಸೇರ್ಪಡೆಯಿಂದ ನ್ಯಾಯಮೂರ್ತಿಗಳ ಸಂಖ್ಯೆ 45ಕ್ಕೆ ಏರಿಕೆಯಾಗಲಿದೆ. ಬೆಂಗಳೂರಿನ ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರಗಿ ಪೀಠಗಳಿಗೆ ಒಟ್ಟು 62 ನ್ಯಾಯಮೂರ್ತಿ ಹುದ್ದೆಗಳು ಮಂಜೂರಾಗಿವೆ. ಇನ್ನೂ 17 ಹುದ್ದೆಗಳು ಖಾಲಿ ಇವೆ.


ನ್ಯಾಯ ಸಚಿವಾಲಯ ಅಧಿಸೂಚನೆ


20 ವರ್ಷಕ್ಕೂ ಅಧಿಕ ಅನುಭವ


ಸುಮಾರು 20ವರ್ಷಕ್ಕೂ ಅಧಿಕ ವಕೀಲಿಕೆ ಅನುಭವ ಹೊಂದಿದ್ದಾರೆ. ಪೂಣಚ್ಚ ಅವರ ಹೆಸರನ್ನು ನ್ಯಾಯಮೂರ್ತಿ ಹುದ್ದೆಗೆ ಹಿಂದಿನ ಸಿಜೆ ಎ.ಎಸ್. ಓಕ್ ನೇತೃತ್ವದ ಕೊಲಿಜಿಯಂ ಶಿಫಾರಸು ಮಾಡಿ ಸುಪ್ರೀಂಕೋರ್ಟ್‌ಗೆ ಕಳುಹಿಸಿತ್ತು.


ಇದನ್ನೂ ಓದಿ: E-Hundis in Karnataka: ಕರ್ನಾಟಕದ ದೇವಸ್ಥಾನಗಳಲ್ಲಿ ಇನ್ಮುಂದೆ QR ಕೋಡ್ ಬಳಸಿ ಹುಂಡಿಗೆ ಹಣ ಹಾಕಬಹುದು!

top videos


    ನಂತರ ಸುಪ್ರೀಂಕೋರ್ಟ್‌ನ ಕೊಲಿಜಿಯಂ ಪೂಣಚ್ಚ ಅವರ ಹೆಸರನ್ನು ನ್ಯಾಯಮೂರ್ತಿ ಹುದ್ದೆಗೆ ಪರಿಗಣಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಇದೀಗ ಎಲ್ಲ ಪ್ರಕ್ರಿಯೆಗಳು ಮುಗಿದು ಅವರನ್ನು ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲಾಗಿದೆ.

    First published: