HOME » NEWS » State » CENTRAL GOVERNMENT JUST 1 CRORE RS SANCTIONED FOR SUBURBAN RAILWAY PROJECT RH

18 ಸಾವಿರ ಕೋಟಿಯ ಸಬ್​ಅರ್ಬನ್ ರೈಲು ಯೋಜನೆಗೆ ಕೇವಲ 1 ಕೋಟಿ ರೂ. ನಿಗದಿ ಮಾಡಿದ ಕೇಂದ್ರ ಸರ್ಕಾರ!

2020-21 ಸಾಲಿನ ಆಯ-ವ್ಯಯ ಎಷ್ಟು ಎಂಬುದನ್ನು ನಮೂದಿಸುವ ಪಿಂಕ್​ ಬುಕ್​ನಲ್ಲಿ ಸಬ್​ಅರ್ಬನ್​ ರೈಲಿಗೆ ಕೇವಲ ಒಂದು ಕೋಟಿ ಮೀಸಲಿರಿಸಿದೆ. ಹೀಗಾಗಿ ಈ ಯೋಜನೆಗೆ ಈ ವರ್ಷ ಮತ್ತೆ ಹಣವನ್ನು ನೀಡಲು ಬರುವುದಿಲ್ಲ.

HR Ramesh | news18-kannada
Updated:February 10, 2020, 6:52 PM IST
18 ಸಾವಿರ ಕೋಟಿಯ ಸಬ್​ಅರ್ಬನ್ ರೈಲು ಯೋಜನೆಗೆ ಕೇವಲ 1 ಕೋಟಿ ರೂ. ನಿಗದಿ ಮಾಡಿದ ಕೇಂದ್ರ ಸರ್ಕಾರ!
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು: 18618 ಕೋಟಿ ರೂ. ವೆಚ್ಚದಲ್ಲಿ ಸಬ್​ಅರ್ಬನ್​ ರೈಲು ಯೋಜನೆ ಅನುಷ್ಠಾನಗೊಳಿಸುವುದಾಗಿ ಪ್ರಸ್ತುತ ಬಜೆಟ್​ನಲ್ಲಿ ಪ್ರಕಟಿಸಿದ್ದ ಕೇಂದ್ರ ಸರ್ಕಾರ ಪಿಕ್​ ಬುಕ್​ನಲ್ಲಿ ಯೋಜನೆಗೆ ಕೇವಲ 1 ಕೋಟಿ ಮೊತ್ತವನ್ನು ನಿಗದಿಪಡಿಸಿದೆ.

ರೈಲ್ವೆ ಕಾಮಗಾರಿಗಳ ಕುರಿತ ಪಿಂಕ್​ಬುಕ್​ನಲ್ಲಿ ಈ ಯೋಜನೆಗೆ ಸಾಕಷ್ಟು ಅನುದಾನ ಒದಗಿಸದೇ ಇರುವುದರಿಂದ ಇದರ ಅನುಷ್ಠಾನ ಮತ್ತೆ ವಿಳಂಬವಾಗಲಿದೆ. ಕೇಂದ್ರ ಸರ್ಕಾರ ಮತ್ತೆ ಬೆಂಗಳೂರಿಗರಿಗೆ ನಿರಾಸೆ ಮೂಡಿಸಿದೆ ಎಂದು ಪ್ರಯಾಣಿಕರು ಅಸಮಾಧಾನ ಹೊರಹಾಕಿದ್ದಾರೆ.

ಉಪನಗರ ರೈಲು ಯೋಜನೆಯಲ್ಲಿ ತಲಾ ಶೇ.20ರಷ್ಟು ಪಾಲನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭರಿಸಲಿವೆ. ಶೇ.60ರಷ್ಟು ಮೊತ್ತ ಅನ್ಯಮೂಲಗಳಿಂದ ಸಂಗ್ರಹಿಸುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದಲ್ಲಿ ಹೇಳಿದ್ದರು.

2020-21 ಸಾಲಿನ ಆಯ-ವ್ಯಯ ಎಷ್ಟು ಎಂಬುದನ್ನು ನಮೂದಿಸುವ ಪಿಂಕ್​ ಬುಕ್​ನಲ್ಲಿ ಸಬ್​ಅರ್ಬನ್​ ರೈಲಿಗೆ ಕೇವಲ ಒಂದು ಕೋಟಿ ಮೀಸಲಿರಿಸಿದೆ. ಹೀಗಾಗಿ ಈ ಯೋಜನೆಗೆ ಈ ವರ್ಷ ಮತ್ತೆ ಹಣವನ್ನು ನೀಡಲು ಬರುವುದಿಲ್ಲ.

ಇದನ್ನು ಓದಿ: ಸಬ್​​ಅರ್ಬನ್​​ ಯೋಜನೆಗೆ ಕೇಂದ್ರ ಬಜೆಟ್​​ನಲ್ಲಿ ಅನುದಾನ; ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ಸಿಎಂ ಬಿಎಸ್​ವೈ

ಬೆಂಗಳೂರು ರೈಲು ಕಾಮಗಾರಿಗೆ ಪಿಂಕ್​ಬುಕ್​ನಲ್ಲಿ ನಮೂದಿಸಿರುವ ಮೊತ್ತ
  • ವೈಟ್​ಫೀಲ್ಡ್- ಬೆಂಗಳೂರು-ಕೆ.ಆರ್.ಪುರ ಮಾರ್ಗವನ್ನು (23.08ಕಿ.ಮೀ) ನಾಲ್ಕು ಹಳಿಗಳನ್ನಾಗಿ ಪರಿವರ್ತಿಸಲು – 100 ಕೋಟಿ ರೂ.

  • ಯಶವಂತಪುರ- ಚನ್ನಸಂದ್ರ (21.7 ಕಿ.ಮೀ.) ಮಾರ್ಗವನ್ನು ಜೋಡಿ ಹಳಿಯನ್ನಾಗಿ ಪರಿವರ್ತಿಸಲು – 5 ಕೋಟಿ ರೂ.

  • ಬೈಯಪ್ಪನಹಳ್ಳಿ- ಹೊಸೂರು (46 ಕಿ.ಮೀ.) ಮಾರ್ಗವನ್ನು ಜೋಡಿ ಹಳಿಯನ್ನಾಗಿ ಪರಿವರ್ತಿಸಲು – 5 ಕೋಟಿ ರೂ.

  • ಯಲಹಂಕ- ಚಿಕ್ಕಬಳ್ಳಾಪುರ-ಬಂಗಾರಪೇಟೆ ಮಾರ್ಗದ ವಿದ್ಯುದೀಕರಣ- 30 ಕೋಟಿ ರೂ.


First published: February 7, 2020, 3:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories